• Home  /  
  • Learn  /  
  • ಅತ್ಯುತ್ತಮ ಮೋಟಾರ್ ಸ್ಕಿಲ್ಸ್ : ಅವುಗಳನ್ನು ಬೆಳಸುವ ವಿಧಾನಗಳು ಮತ್ತು ಪ್ರಾಮುಖ್ಯತೆ
ಅತ್ಯುತ್ತಮ ಮೋಟಾರ್ ಸ್ಕಿಲ್ಸ್ : ಅವುಗಳನ್ನು ಬೆಳಸುವ ವಿಧಾನಗಳು ಮತ್ತು ಪ್ರಾಮುಖ್ಯತೆ

ಅತ್ಯುತ್ತಮ ಮೋಟಾರ್ ಸ್ಕಿಲ್ಸ್ : ಅವುಗಳನ್ನು ಬೆಳಸುವ ವಿಧಾನಗಳು ಮತ್ತು ಪ್ರಾಮುಖ್ಯತೆ

3 Jul 2019 | 1 min Read

Medically reviewed by

Author | Articles

ಉತ್ತಮ ಚಲನಾ ಕೌಶಲ್ಯಗಳೆಂದರೇನು?

ಉತ್ತಮ ಚಲನಾ ಕೌಶಲ್ಯ ಚಟುವಟಿಕೆ ಎಂದರೆ ಕೈಗಳ ಸಣ್ಣ ಸ್ನಾಯುಗಳನ್ನು ಉಪಯೋಗಿಸಿ ಸಣ್ಣ ವಸ್ತುಗಳನ್ನು ಒಳಗೊಂಡ ಎಲ್ಲಾ ರೀತಿಯ ಚಟುವಟಿಕೆಯಲ್ಲಿ ಭಾಗಿಯಾಗುವುದು. ಎಲ್ಲಾ ಚಟುವಟಿಕೆಗಳ್ಳಲ್ಲಿ ಕೈಗಳನ್ನು ಉಪಯೋಗಿಸುವುದು, ಬೆರಳುಗಳು ಮತ್ತು ಮಣಿಕಟ್ಟನ್ನು ಉಪಯೋಗಿಸುವುದೆ ಉತ್ತಮ ಚಲನಾ ಕೌಶಲ್ಯ ಚಟುವಟಿಕೆ

 

ಉತ್ತಮ ಚಲನಾ ಕೌಶಲ್ಯದ ಚಟುವಟಿಕೆಯನ್ನು ಪ್ರಚಾರಿಸುವುದು

fine motor through drawing

ಹಲವಾರು ಚಟುವಟಿಕೆಗಳು ಉತ್ತಮ ಚಲನಾ ಕೌಶಲ್ಯವನ್ನು ಮಕ್ಕಳಲ್ಲಿ ಪ್ರಚಾರಿಸುತ್ತದೆ. ನಿಮ್ಮ ಪುಟ್ಟ ಮಕ್ಕಳು ಅವನು/ಅವಳು ಯಾವುದಾದರು ಕಾರ್ಯದಲ್ಲಿ ನಿರತರಾಗಿದ್ದರೆ ಅವರು ತಮ್ಮ ಮಣಿಕಟ್ಟು ಮತ್ತು ಬೆರಳುಗಳನ್ನು ಉಪಯೋಗಿಸುತ್ತಿದ್ದರೆ, ಅವರು ಉತ್ತಮ ಚಲನಾ ವ್ಯಾಯಾಮದಲ್ಲಿ ತೊಡಗಿದ್ದಾರೆ ಎಂದರ್ಥ. ಕೆಲವು ಸಾಮಾನ್ಯವಾದ ಉತ್ತಮ ಚಲನಾ ಕೌಶಲ್ಯವನ್ನು ಕೆಳಗೆ ನೀಡಲಾಗಿದೆ.

  • ಪೆನ್ಸಿಲ್ ಆಧಾರಿತ ಕೌಶಲ್ಯ ಯಾವುವೆಂದರೆ ಗೀಚುವುದು, ಬಣ್ಣ ಹಚ್ಚುವುದು, ಚಿತ್ರ ಬಿಡಿಸುವುದು ಮತ್ತು ಕುರುಕುವುದು.
  • ಕಾಗದ ಆಧಾರಿತ ಚಟುವಟಿಕೆಗಳು, ಅಂದರೆ ಕತ್ತರಿಸುವುದು, ಅಂಟಿಸುವುದು, ಹರಿಯುವುದು, ಮಡಚುವುದು ಮತ್ತು ಮುದುರುವುದು.
  • ಬಟ್ಟೆ ಧರಿಸುವ ಚಟುವಟಿಕೆ, ಅಂದರೆ ಬಟ್ಟೆ ಧರಿಸುವುದು, ಆಟಿಕೆಗಳಿಗೆ ಬಟ್ಟೆ ಧರಿಸುವುದು, ಶೂ ಲೇಸ್ ಕಟ್ಟುವುದು, ಬಟ್ಟೆಗಳ ಗುಂಡಿ ಹಾಕುವುದು, ಕೈಗಡಿಯಾರದ ಪಟ್ಟಿಯನ್ನು ತೆಗೆಯುವುದು, ಹಲ್ಲು ಉಜ್ಜುವುದು ಮತ್ತು ತಲೆ ಬಾಚುವುದು.
  • ಆಹಾರ ಚಟುವಟಿಕೆಗಳು ಅಂದರೆ ಬೆರಳುಗಳನ್ನು ಬಳಸಿ ತಿನ್ನುವುದು, ಚಮಚ, ಫೋರ್ಕ್, ಚಾಕು, ಚಾಪ್ ಸ್ಟಿಕ್ಸ್ ಉಪಯೋಗಿಸುವುದು ಮತ್ತು ಊಟದ ಡಬ್ಬವನ್ನು ತೆಗೆದು ಹಾಕುವುದು.
  • ಮರಳು, ಮಣ್ಣು, ಲೆಗೋ, ಡುಪ್ಲೋ, ಜೆಂಗಾ ಮತ್ತು ಮಿಕಾಡೊ ಬ್ಲಾಕ್ಸ್ ನಲ್ಲಿ ಆಟವಾಡುವುದು.

 

ಉತ್ತಮ ಚಲನಾ ಕೌಶಲ್ಯಗಳ ಪ್ರಾಮುಖ್ಯತೆಗಳು

ಉತ್ತಮ ಚಲನಾ ಕೌಶಲ್ಯವು ಮಕ್ಕಳನ್ನು ಸ್ವತಂತ್ರವಾಗಿ ತಮ್ಮ ನಿತ್ಯ ಕಾರ್ಯಗಳನ್ನು ಪ್ರದರ್ಶನ ಮಾಡುವುದು. ಮಕ್ಕಳು ಮೂಲಭೂತ ಚಟುವಟಿಗಳನ್ನು ಮಾಡಲು ಆಗದಿದ್ದಲ್ಲಿ ಅವರ ಸ್ವಾಭಿಮಾನ ಮತ್ತು ವಿಶ್ವಾಸ ಅಸಾಮರ್ಥ್ಯಗೊಳ್ಳುತ್ತದೆ. ಮಕ್ಕಳಿಗೆ ಸಾಮಾಜಿಕವಾಗಿ ಇದು ಪರಿಣಾಮವಾಗಿ, ತನ್ನ ಗೆಳೆಯರೊಂದಿಗೆ ಆಟವಾಡಲು ಕಷ್ಟವಾಗಬಹುದು ಮತ್ತು ಅವರು ಕೆರಳಿಸುವಂತೆ ಪರಿಣಮಿಸುತ್ತದೆ.

ಅಧ್ಯಯನಗಳು ಉತ್ತಮ ಚಲನಾ ಕೌಶಲ್ಯದ ಅಭಿವೃದ್ಧಿಯು ಶಾಲೆಯ ಮತ್ತು ಶಾಲೆಯಲ್ಲಿಯ ಪ್ರದರ್ಶನದ ತಯಾರಿಗಾಗಿ ಒಂದು ಪ್ರಮುಖ ಸೂಚಕ ಎಂದಿದ್ದಾರೆ. ನೀವು ನಿಮ್ಮ ಮಕ್ಕಳಲ್ಲಿ ಉತ್ತಮ ಚಲನಾ ಕೌಶಲ್ಯದ ಚಟುವಟಿಕೆಗಳ ಬಗ್ಗೆ ಕೊರತೆ ಕಂಡಲ್ಲಿ ನಿಮ್ಮ ಮಕ್ಕಳ ವೈದ್ಯರನ್ನು ಕಂಡು ವಿಷಯದ ಬಗ್ಗೆ ಮಾತನಾಡಿ. ನಿಮ್ಮ ಮಕ್ಕಳಿಗೆ ವಿವಿಧ ಉತ್ತಮ ಚಲನಾ ಕೌಶಲ್ಯದಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಿ. ಉತ್ತಮ ಚಲನಾ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ನಿಮ್ಮ ಮಕ್ಕಳ ವೈದ್ಯರು ಅದು ಒಂದು ಮಧ್ಯಸ್ಥಿಕೆಯ ಉಪಕ್ಕರಣ ಎಂದು ಬರೆದಿದ್ದಾರೆ ಮತ್ತು ಗಣಿತದ ಶಿಕ್ಷಣದಲ್ಲಿ ಮಕ್ಕಳಿಗೆ ತಿಳಿಸಲಾಗಿದೆ.

 

ಮಕ್ಕಳಲ್ಲಿ ಉತ್ತಮ ಚಲನಾ ಕೌಶಲ್ಯಗಳ ಅಭಿವೃದ್ಧಿ

ಚಿಕ್ಕ ಮಕ್ಕಳು ಸಾಮಾನ್ಯವಾಗಿ ತಮ್ಮ ಉತ್ತಮ ಚಲನಾ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ದಾರಿಗಳನ್ನು ಹುಡುಕುತ್ತಾರೆ. ಆಟವಾಡುವುದು ಮತ್ತು ಊಟವನ್ನು ಗಲೀಜು ಮಾಡುವುದು ಬಹುಶಃ ಇವೇ ಚಿಕ್ಕ ಮಕ್ಕಳ ಮೊದಲ ಉತ್ತಮ ಚಲನಾ ಕೌಶಲ್ಯಗಳ ದಾರಿಯಾಗಿರುತ್ತದೆ. ಸಣ್ಣ ತುಂಡುಗಳ ಊಟವನ್ನು ಎತ್ತಿ ಬಾಯಿಗೆ ಇಟ್ಟುಕೊಳ್ಳುವುದು ಒಂದು ಸಮನ್ವಯ ಮತ್ತು ಪರಿಣತಿಯಾಗಿರುತ್ತದೆ. ಸುಮ್ಮನೆ ಊಟವನ್ನು ಎಳೆಯುವುದು, ಹಿಸುಕುವುದು ಮತ್ತು ತಟ್ಟೆಯ ಮೇಲಿನ ಊಟವನ್ನು ಹರಡುವುದು ಹಾಗೂ ತನ್ನ ಮುಖ ಮತ್ತು ದೇಹಕ್ಕೆಲ್ಲಾ ಅದನ್ನು ಮೆತ್ತುಕೊಳ್ಳುವುದು ಇವೆಲ್ಲಾ ಉತ್ತಮ ಚಲನಾ ಕೌಶಲ್ಯದ ಅಭಿವೃದ್ಧಿಯ ವ್ಯಾಯಾಮ.

 

ಸುಧಾರಣೆಯಾಗುತ್ತಿರುವ ಉತ್ತಮ ಚಲನ ಕೌಶಲ್ಯ ಮತ್ತು ಬುದ್ಧಿವಂತಿಕೆಯ ಮಧ್ಯೆ ಇರುವ ಸಂಬಂಧ

ಅರಿವಿನ ಅಭಿವೃದ್ಧಿಯ ಬಗ್ಗೆ ಹೊಸ ಸಂಶೋಧನೆ ಅಧ್ಯಯನಗಳುಆಲೋಚಿಸುವ ಸಾಮರ್ಥ್ಯ, ಕಾರಣ ಮತ್ತು ನೆನಪಿನ ಶಕ್ತಿ, ಇವು ಮೆದುಳಿನ ಒಂದೇ ನರವ್ಯೂಹದ ಮೂಲಭೂತ ಅರಿವಿನ ಕಲಿಕೆಯು ಚಲನಾ ಕೌಶಲ್ಯದ ಅಭಿವೃದ್ಧಿಗಾಗಿ ಮಕ್ಕಳಿಗೆ ನಿರ್ಮಿಸಲಾಗಿದೆ ಎಂದು ತೋರಿಸಿಕೊಡಲಾಗಿದೆ. ಸಂಶೋಧನಕಾರರು ವೈವಿಧ್ಯಮಯ ಮತ್ತು ಸವಾಲಿನ ಚಲನಾ ಚಟುವಟಿಕೆಗಳು ಮಕ್ಕಳಲ್ಲಿ ಅರಿವಿನ ಸಾಮರ್ಥ್ಯ ಹೊಂದುತ್ತದೆ ಎಂದು ತಿಳಿಸಿದ್ದಾರೆ. ನಿಮ್ಮ ಮಕ್ಕಳಿಗೆ ವಿವಿಧ ಉತ್ತಮ ಚಲನಾ ಕೌಶಲ್ಯದ ಆಟಿಕೆಗಳು ಮತ್ತು ಅವನ/ಅವಳ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸಲು ಸಹಾಯಾವಾಗುವ ಆಟವನ್ನು ಆಡಿಸಬೇಕು.

ನಿಮ್ಮ ಮಕ್ಕಳನ್ನು ಒಳ್ಳೆಯ ಆಟಿಕೆಯ ಮತ್ತು ನೆರೆಹೊರೆಯ ಪುಸ್ತಕದ ಲೈಬ್ರರಿ ಮತ್ತು ಅವರನ್ನು ಆಟವಾಡುವುದನ್ನು  ನೋಡಿ ಖುಷಿ ಪಡುವುದು, ಓದು ಮತ್ತು ಅವರ ಪ್ರತಿಭೆಯನ್ನು ಬೆಳೆಯಲು ಕಲಿಕಾ ಶಾಲೆಗೆ ಸೇರಿಸಿ.

ಹಕ್ಕುತ್ಯಾಗ: ಲೇಖನದ ಮಾಹಿತಿಯು ಯಾವುದೇ ಉದ್ದೇಶವನ್ನು  ಹೊಂದಿಲ್ಲ ಅಥವಾ ಪರೋಕ್ಷವಾಗಿ ಅಥವಾ ಪರ್ಯಾಯವಾಗಿ ವೃತ್ತಿಪರ ವೈದ್ಯಕೀಯ ಸಲಹೆ, ರೋಗ ಅಥವಾ ಚಿಕಿತ್ಸೆಯನ್ನು ಉದ್ದೇಶಿಸಿಲ್ಲ. ಯಾವಾಗಲೂ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.