3 Jul 2019 | 1 min Read
Medically reviewed by
Author | Articles
5 ವರ್ಷ ವಯಸ್ಸಿನವರಲ್ಲಿ ಕೋಪೋದ್ರೇnಕಗಳೊಂದಿಗೆ ವ್ಯವಹರಿಸುವುದು
ಇದು ಬೇಸಿಗೆ ಚಂಡಮಾರುತದೊಂದಿಗೆ ವ್ಯವಹರಿಸುವಂತಿತ್ತು – ಹಠಾತ್ ಆರಂಭ ಮತ್ತು ಹಠಾತ್ ಅಂತ್ಯ. ಒಂದು ನಿಮಿಷ ಮಗು ತನ್ನ ಗೊಂಬೆಗಳೊಂದಿಗೆ ಆಡುತ್ತಿದ್ದಾನೆ, ಮತ್ತು ಮರು ಕ್ಷಣದಲ್ಲಿಯೇ ಅವನು ಬಿಕ್ಕುತ್ತಿದ್ದಾನೆ ಮತ್ತು ಶ್ವಾಸಕೋಶ ಬಿರುಕುವ ಹಾಗೆ ಕಿರುಚುತ್ತಿದ್ದಾನೆ .
ಅದೃಷ್ಟವಶಾತ್, 5 ವರ್ಷದವರ ಕೋಪೋದ್ರೇಕ ಎರಡನೇ ವಯಸ್ಸುನವರಿಗಿಂತ ಕಡಿಮೆ . ಹೇಗಾದರೂ ಆಗಲಿ, ಕೋಪೋದ್ರೇಕರು ಆದಾಗ ಅವರ ಜೊತೆ ವ್ಯವಹರಿಸುವುದು ಸವಾಲಾಗಿದೆ. ಅನುಭವಿ ಪೋಷಕರು ಅಂತಹ ಕೋಪೋದ್ರೇಕ ಅವರ ಆರಂಭಿಕ ಶಾಲಾ ವರ್ಷಗಳಲ್ಲಿ ಮುಂದುವರಿಯಬಹುದು ಎಂದು ಒತ್ತಿ ಹೇಳುತ್ತಾರೆ .
ನನ್ನ 5 ವಯಸ್ಸಿನವ/ವಳು ಏಕೆ ಕೋಪೋದ್ರೇಕಗೊಳ್ಳುತ್ತಾನೆ/ಳೆ ?
ಮಿತಿಮೀರಿದ ಭಾವನೆಗಳು ಸಾಮಾನ್ಯವಾಗಿ 5 ವರ್ಷ ವಯಸ್ಸಿನವರಲ್ಲಿ ಕೋಪೋದ್ರೇಕದ ಕಾರಣವಾಗಿದೆ. ಕ್ಷಣದಲ್ಲಿ ಅವರು ನಿಯಂತ್ರಣವನ್ನು ಕಳೆದುಕೊಳ್ಳದೇ ಇರಬಹುದು, ಆದರೆ ಅವರ ಭಾವನೆಗಳು ಮಿತಿಮೀರಿದ ಸಂದರ್ಭದಲ್ಲಿ ಅವರು ಕೋಪೋದ್ರೇಕ ಮನಸ್ಥಿತಿಗೆ ಜಾರಬಹುದು . ನಿಮ್ಮ ಮಗುವು ಕೋಪಗೊಳ್ಳಲು ಹಲವು ಕಾರಣಗಳಿವೆ.
ಕೆಲವು ಕಾರಣಗಳು ಕೆಳಗೆ ನಮೂದಿಸಿದೆ :
ನಿಮ್ಮ ಮಗು ಕೋಪಗೊಳ್ಳುತ್ತಿರುವುದು ಏಕೆ ಎಂದು ನಿಮಗೆ ಸ್ಪಷ್ಟವಾಗಿ ತಿಳಿಯದೆ ಇರಬಹುದು . ಅಂತಹ ಸಂದರ್ಭಗಳಲ್ಲಿ, ಅವರಿಗೆ ಕೋಪವನ್ನು ಉಂಟುಮಾಡುವ ನಿಖರವಾದ ಕಾರಣವನ್ನು ತಿಳಿಯಲು ನಿಮ್ಮ ಮಗುವಿನೊಡನೆ ಮಾತನಾಡುವುದು ಉತ್ತಮ.
5 ವರ್ಷ ವಯಸ್ಸಿನ ತೊಂದರೆಕೊಡುವ ಮಕ್ಕಳ ಜೊತೆ ಹೇಗೆ ವ್ಯವಹರಿಸುವುದು ?
ಎಲ್ಲಾದಕ್ಕಿಂತ ಮೊದಲು . ಕೋಪೋದ್ರೇಕ ದಟ್ಟಗಾಲಿಡುವ ಶಿಶುವಿನ ನಿಯಮಿತ ವಿಷಯ . ಹೌದು, ಕೆಲವೊಮ್ಮೆ ಮಗುವಿನ ಅಳುವು ಮತ್ತು ಬಿಕ್ಕುವಿಕೆ ನಿರ್ವಹಿಸಲು ಕಷ್ಟವಾಗುತ್ತದೆ. ಆದರೆ ಇದು ನಿಮ್ಮ ಮಗುವಿನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಸಮಯ ಅಲ್ಲ. ಹೌದು, ನೀವು ನಿಮ್ಮ ಮಗುವಿನ ಜೊತೆಯಲ್ಲಿ ದೃಢವಾಗಿರಬೇಕು ಮತ್ತು ಯಾವುದು ಸ್ವೀಕಾರಾರ್ಹ ಮತ್ತು ಯಾವುದು ಅಲ್ಲ ಎಂಬುದರ ಬಗ್ಗೆ ಸ್ಪಷ್ಟವಾಗಿರಬೇಕು, ಮತ್ತು ನಿಮ್ಮ ಮಗುವು ಅವರ ಭಾವನೆಗಳ ಸುಳಿಗಳೊಂದಿಗೆ ವ್ಯವಹರಿಸುವಾಗ ನೀವು ಅವರ ಜೊತೆ ಇರುವುದು ಸಹ ಮುಖ್ಯವಾಗಿರುತ್ತದೆ.
ಜೊತೆಯಾಗಿ ಕೋಪವನ್ನು ನಿಭಾಯಿಸಿ: ನಿಮ್ಮ ಮಗು ಮತ್ತು ನೀವು ಒಂದು ತಂಡವಾಗಿ ಕೋಪವನ್ನು ನಿಭಾಯಿಸಬೇಕು. ಈ ರೀತಿ, ನೀವು ನಿಮ್ಮ ಮಗುವಿಗೆ ಅವರ ಕೋಪವು ಮುಖ್ಯ ಸಮಸ್ಯೆ ಅವರಲ್ಲ ಎಂದು ತಿಳಿಸಬಹುದು . ನೀವು ಸ್ವಲ್ಪ ಸೃಜನಶೀಲರಾಗಿರಬಹುದು ಮತ್ತು ಕೋಪಕ್ಕೆ ಹೆಸರು ಕೊಡಬಹುದು , ಉದಾ. ಸ್ಫೋಟಗೊಳ್ಳುವ ಜ್ವಾಲಾಮುಖಿ. ನೆನಪಿಡಿ, ಮಗುವು ಅವನ / ಅವಳ ಹೆತ್ತವರನ್ನು ಗಮನಿಸುತ್ತಿದ್ದಾರೆ. ಹಾಗಾಗಿ ನೀವು ನಿಮ್ಮ ಕೋಪಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ, ಅದು ನಿಮ್ಮ ಮಗುವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಪ್ರಭಾವಿಸುತ್ತದೆ. ಈ ರೀತಿಯಲ್ಲಿ ನೀವಿಬ್ಬರು ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಬಹುದು.
ನಿಮ್ಮ ಮಗುವನ್ನು ಅವರ ಕೋಪದ ಕಾರಣವನ್ನು ಗುರುತಿಸಲು ಹೇಳಿಕೊಡಿ : ನೀವು ನಿಮ್ಮ ಮಗುವಿಗೆ ಯಾವಾಗ ಕೋಪಗೊಳ್ಳುತ್ತಾರೆ ಮತ್ತೆ ಕೋಪೋದ್ರೇಕವಾಗುತ್ತಾರೆ ಗುರುತಿಸಲು ಕಲಿಸಲು ಸಾಧ್ಯವಿದ್ದರೆ, ಭವಿಷ್ಯದಲ್ಲಿ ಅವರು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಹೆಚ್ಚು ಧನಾತ್ಮಕ ನಿರ್ಧಾರಗಳನ್ನು ಮಾಡಬಹುದು. ಅವರು ಕೋಪಗೊಳ್ಳುವಾಗ ಅವರಿಗೆ ಏನಾಗುತ್ತದೆ ಎಂಬುದರ ಕುರಿತು ನಿಮ್ಮ ಮಗುವಿನೊಡನೆ ಮಾತನಾಡಿ. ಅವರು ಕೆಲವು ಬದಲಾವಣೆಗಳನ್ನು ಗಮನಿಸಬಹುದು:
ಅತಿಯಾದ ಒತ್ತಡದ ಚಿಹ್ನೆಗಳಿಗಾಗಿ ಗಮನಿಸಿ : ಕೋಪೋದ್ರೇಕವು ಶಾಲೆದಿನಗಳ ಭಾಗವಾಗಿದ್ದರೂ ಸಹ, ನೀವು ಅವರನ್ನು ಬೆಳೆಯುತ್ತಿರುವ ಒಳಗಿನ ಸಮಸ್ಯೆಗಳಿಗಾಗಿ ಗಮನವಿರಬೇಕಾಗುತ್ತದೆ. ನಿಮ್ಮ ಮಗುವು ಹಿಂಸೆಗೆ ಒಳಗಾಗುತ್ತಿದೆಯೇ? ಕುಟುಂಬದಲ್ಲಿ ಯಾವುದೇ ಒತ್ತಡವಿದೆಯೇ? ನೀವು ಇತ್ತೀಚೆಗೆ ನಿರತರಾಗಿದ್ದೀರಾ? ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಕೆಲವು ಮಾರ್ಪಾಡು ಇದೆಯೇ? ಅಂತಹ ಸಂದರ್ಭಗಳಲ್ಲಿ ಕೋಪೋದ್ರೇಕ ಪ್ರೇರೇಪಿಸಬಹುದು. ನಿಮ್ಮ ಮಗುವಿನ ಕೋಪೋದ್ರೇಕವು ಹೆಚ್ಚಾಗುತ್ತಿದ್ದರೆ, ನಿಮ್ಮ ಶಿಶುವೈದ್ಯರು ಅಥವಾ ಮನೋವಿಜ್ಞಾನಿಗಳ ಹತ್ತಿರ ಮಾತನಾಡಿ ಅವರ ಪ್ರಕೋಪಗಳಿಗೆ ಹಿಂದಿರುವ ಕಾರಣವನ್ನು ಕಂಡುಕೊಳ್ಳುವುದು ಉತ್ತಮವಾಗಿದೆ.
ಹಕ್ಕುತ್ಯಾಗ: ಲೇಖನದಲ್ಲಿನ ಮಾಹಿತಿಯು ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗಾಗಿ ಪರ್ಯಾಯವಾಗಿ ಉದ್ದೇಶಿಸಿಲ್ಲ ಅಥವಾ ಸೂಚಿಸಲ್ಪಟ್ಟಿಲ್ಲ. ನಿಮ್ಮ ವೈದ್ಯರ ಸಲಹೆಯನ್ನು ಯಾವಾಗಲೂ ಪಡೆಯಿರಿ.
A