ಆಂಟೀರಿಯರ್ ಪ್ಲಾಸೆಂಟಾ ಬಗ್ಗೆ ಕಾಳಜಿ ವಹಿಸಬೇಕೇ?

cover-image
ಆಂಟೀರಿಯರ್ ಪ್ಲಾಸೆಂಟಾ ಬಗ್ಗೆ ಕಾಳಜಿ ವಹಿಸಬೇಕೇ?

ನಿಮ್ಮ ಮಗುವಿನ ಸಾಮಾನ್ಯ ಹೆರಿಗೆಯಲ್ಲಿ ಜರಾಯು ಸ್ಥಾನವು ಪ್ರಮುಖ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ.

 

ಜರಾಯು ಒಂದು ರೂಪುಗೊಳ್ಳುವ ಅಂಗವಾಗಿದೆ ಮತ್ತು ಗರ್ಭಧಾರಣೆಯ ಸಮಯದಲ್ಲಿ ಮಾತ್ರ ಇರುತ್ತದೆ. ಇದು ತಾಯಿ ಮತ್ತು ಮಗುವಿನ ನಡುವಿನ ಸಂಪರ್ಕದ ಕೊಂಡಿಯಾಗಿದೆ, ಮತ್ತು ಬೆಳೆಯುತ್ತಿರುವ ಮಗುವಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಒದಗಿಸುತ್ತದೆ. ಸಾಮಾನ್ಯ ಜರಾಯು ಸ್ಥಾನವು ಫುಂಡುಸ್ ಎಂದು ಕರೆಯಲ್ಪಡುವ ಗರ್ಭಕೋಶದ ಮೇಲಿನ ಭಾಗವಾಗಿದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಇದು ಮತ್ತೊಂದು ಸ್ಥಾನದಲ್ಲಿ ಇರಬಹುದು ಮತ್ತು ಇದು ಹೆರಿಗೆಗೆ ಕಷ್ಟವನ್ನು ಉಂಟುಮಾಡಬಹುದಾದ ಸ್ಥಾನದಲ್ಲಿರಬಹುದು. ಮುಂಭಾಗದಲ್ಲಿ ನೆಲೆಗೊಂಡ ಜರಾಯು ಅಂತಹ ಒಂದು ಕಷ್ಟದ ಸ್ಥಿತಿಯುಂಟು ಮಾಡುತ್ತದೆ. ಎಲ್ಲಾ ಮುಂಭಾಗದ ಜರಾಯು ಅಪಾಯಗಳ ಪೈಕಿ, ಪ್ಲಾಸೆಂಟಾ ಪ್ರೇವಿಯಾ ಸ್ಥಿತಿಯು ಅತ್ಯಂತ ದೊಡ್ಡದಾಗಿದೆ ಮತ್ತು ಸಿಸೇರಿಯನ್ಗೆ ಕಾರಣವಾಗುತ್ತದೆ .

 

'ಅಂಟ್ರೆಯೊರ್ ಜರಾಯು' ಎಂದರೇನು?

ಅಪರೂಪದ ಸಂದರ್ಭಗಳಲ್ಲಿ, ಜರಾಯುವು ಗರ್ಭಾಶಯದ ಮುಂಭಾಗದ (ಮುಂದೆ) ಗೋಡೆಗೆ ಅಂಟಿಕೊಳ್ಳಬಹುದು. ಈ ಸ್ಥಿತಿಯನ್ನು ಅಂಟ್ರೆಯೊರ್  ಜರಾಯು ಎಂದು ಕರೆಯಲಾಗುತ್ತದೆ.

ಅಂಟ್ರೆಯೊರ್  ಜರಾಯುವಿನ ರೋಗನಿರ್ಣಯವನ್ನು ಅಲ್ಟ್ರಾಸೌಂಡ್ ದೃಢಪಡಿಸುತ್ತದೆ. ಸಾಮಾನ್ಯವಾಗಿ ಅಂಟ್ರೆಯೊರ್ ಜರಾಯು ಅಲ್ಟ್ರಾಸೌಂಡ್ ಗರ್ಭಾವಸ್ಥೆಯ 18-22 ವಾರಗಳಲ್ಲಿ ನಡೆಯುತ್ತದೆ, ಏಕೆಂದರೆ ಅದು ಜರಾಯುವಿನ ಸ್ಥಾನವನ್ನು ದೃಢೀಕರಿಸುವ ಸೂಕ್ತ ಸಮಯವಾಗಿದೆ.

 

ಜರಾಯು ಮುಂಭಾಗಕ್ಕೆ ಹೊಂದಿರುವ ಬಗ್ಗೆ ಎಷ್ಟು ವಿಭಿನ್ನವಾಗಿದೆ?

ಜರಾಯು ಮುಂಭಾಗಕ್ಕೆಇರುವುದರಿಂದ ಮೊದಲಿನಿಂದಲೂ ನಿಮ್ಮ ಮಗುವಿನ ಬೆಳವಣಿಗೆಗೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಜರಾಯು ಅದರ ಸ್ಥಿತಿಯನ್ನು ಲೆಕ್ಕಿಸದೆ, ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಹೇಗಾದರೂ, ಜರಾಯುವಿನ ಮುಂಭಾಗದ ಸ್ಥಾನ ನಿಮ್ಮ ಹೊಟ್ಟೆ ಮತ್ತು ನಿಮ್ಮ ಮಗುವಿನ ನಡುವೆ ಹೆಚ್ಚುವರಿ ಕುಶನ್ ಒದಗಿಸಬಹುದು. ಇದು ಕೆಳಗಿನವುಗಳಿಗೆ ಕಾರಣವಾಗಬಹುದು:

. ಹೆಚ್ಚುವರಿ ಕುಶನ್ ನಿಮ್ಮ ಮಗುವಿನ ಭ್ರೂಣದ ಚಲನೆಯನ್ನು ಅಥವಾ ನಿಮ್ಮ ಮಗುವಿನ ಒಡೆತವನ್ನು ಅನುಭವಿಸಲು ನಿಮಗೆ ಬಿಡುವುದಿಲ್ಲ .

  • ಮುಂಭಾಗದಲ್ಲಿ ಉಪಸ್ಥಿತಿಯಾದ ಜರಾಯುವಿನಿಂದ ನಿಮ್ಮ ಮಗುವಿನ ಹೃದಯದ ಶಬ್ದಗಳನ್ನು ಕೇಳಲು ಕಷ್ಟವಾಗುತ್ತದೆ, ನಿಮ್ಮ ಮಗುವಿಗೆ ಮತ್ತು ಸ್ಟೆತೊಸ್ಕೋಪ್ ನಡುವಿನ ಅಂತರವು ಹೆಚ್ಚಳವಾಗುವುದರಿಂದ ಈ ರೀತಿ ಆಗುತ್ತದೆ.
  • ನಿಮಗೆ ಹೊಟ್ಟೆ ಮ್ಯಾಪಿಂಗ್ ಕಷ್ಟವಾಗುತ್ತದೆ; ಹೊಟ್ಟೆ ಮ್ಯಾಪಿಂಗ್ ಎಂಬುದು ನಿಮ್ಮ ಮಗುವಿನೊಂದಿಗೆ ಒಂದು ಬಂಧವನ್ನು ಒಂದಾಲು ನಿಮಗೆ ಸಹಾಯ ಮಾಡುವ ಒಂದು ಸಾಧನವಾಗಿದ್ದು, ನಿಮ್ಮ ಮಗುವಿನ ಸ್ಥಿತಿಯನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ಕೆಲವೇ ಸುಲಭವಾದ ತಂತ್ರಗಳಿಂದ ನೀವು ನಿಮ್ಮ ಮಗುವಿನ ಸ್ಥಾನವನ್ನು ಬದಲಾಯಿಸಬಹುದು. ಮುಂಭಾಗದ ಜರಾಯು ಈ ಚಲನೆಯನ್ನು ಮೆತ್ತಿಸುತ್ತದೆ ಮತ್ತು ಅಂತಹ ಮ್ಯಾಪಿಂಗ್ ಅನ್ನು ಕಷ್ಟಕರಗೊಳಿಸುತ್ತದೆ.

 

ಮುಂಭಾಗದ ಜರಾಯುವಿನ ಕಾರಣದಿಂದಾಗಿ ಯಾವುದಾದರೂ ಅಪಾಯವಿದೆಯೇ?

ಗರ್ಭಾವಸ್ಥೆಯಲ್ಲಿ, ಮುಂಭಾಗದ ಜರಾಯು ಕಾಳಜಿಗೆ ಕಾರಣವಲ್ಲ. ಆದರೆ, ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿ ಇದು ಬೆಳೆಯುತ್ತದೆ ಅಥವಾ ಸ್ಥಾನ ಬದಲಾಯಿಸುತ್ತದೆ, ಅಂದರೆ ಗರ್ಭಕಂಠದ ಹತ್ತಿರ ಅದು ತಲುಪುತ್ತದೆ (ಗರ್ಭಕಂಠವು ಕಿರಿದಾದ ನಾಲವಾಗಿದ್ದು ಇದು ಗರ್ಭಾಶಯದ ಕೆಳ ಭಾಗವನ್ನು ರೂಪಿಸುತ್ತದೆ). ಇದು ಸಾಮಾನ್ಯವಾದ ಮುಂಭಾಗದ ಜರಾಯು ತೊಡಕುಗಳಲ್ಲಿ ಒಂದಾಗಬಹುದು ಅಂದರೆ ಪ್ಲಾಸೆಂಟಾ ಪ್ರೇವಿಯಾ, ಇದು ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು. ಈ ವಿಪರೀತ ರಕ್ತಸ್ರಾವವನ್ನು ತಡೆಗಟ್ಟಲು ಉತ್ತಮ ಸಾಧ್ಯತೆ ಎಂದರೆ ಸಿ-ಸೆಕ್ಷನ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಿಸೇರಿಯನ್  ಆಯ್ಕೆ ಮಾಡುವುದು.

 

ಗರ್ಭಾವಸ್ಥೆಯಲ್ಲಿ ಜರಾಯು ತನ್ನ ಸ್ಥಾನವನ್ನು ಬದಲಾಯಿಸಬಹುದೇ?

ಹೌದು, ಆದರೆ ಅಪರೂಪವಾಗಿ ಜರಾಯು ಬೆಳೆಯುತ್ತಿರುವ ಗರ್ಭಾಶಯದೊಂದಿಗೆ ಮೇಲಕ್ಕೆ ಹೋಗಬಹುದು. ಎರಡನೇ ಮತ್ತು ಮೂರನೇ  ತ್ರೈಮಾಸಿಕದಲ್ಲಿ ಬೆಳವಣಿಗೆಯ ಸಮಯದಲ್ಲಿ, ಗರ್ಭಾಶಯದ ಗಾತ್ರ ಹೆಚ್ಚಾಗುತ್ತದೆ. ಇದು ಜರಾಯುವಿನ ಸ್ಥಾನ ಸ್ವಲ್ಪ ಮೇಲಕ್ಕೆ ಬದಲಾಗುವಂತೆ ಮಾಡುತ್ತದೆ. ಹೀಗಾಗಿ, ಮುಂಭಾಗದಲ್ಲಿ ಉಳಿಯುವ ಬದಲು, ಅದು ಮೇಲ್ಮುಖವಾಗಿ ಮತ್ತು ಮುಂದಕ್ಕೆ ಸ್ಥಾನಕ್ಕೇರಬಹುದು. ಇದು ಸಾಮಾನ್ಯವಾಗಿ ಹೆರಿಗೆಯಯ ಸಮಯದಲ್ಲಿ ಮಗುವು ಬರುವ ಜಾಗಕ್ಕೆ ಅಡ್ಡಿಪಡಿಸುವುದಿಲ್ಲ. ಹೀಗಾಗಿ, ನೀವು ಮುಂಭಾಗದ ಜರಾಯುವನ್ನು ಹೊಂದಿದ್ದರೂ ಸಾಮಾನ್ಯ ಹೆರಿಗೆಯನ್ನು ಹೊಂದಲು ಸಾಧ್ಯವಿದೆ.

 

ಮುಂಭಾಗದ ಜರಾಯುವಿನ ಬಗ್ಗೆ ನೆನಪಿಡಬೇಕಾದ ಯಾವುದೇ ಎಚ್ಚರಿಕೆ ಚಿಹ್ನೆಗಳು ಅಥವಾ ಪ್ರಮುಖ ಆರೋಗ್ಯ ಕಾಳಜಿಗಳು ಇದೆಯೇ?

ಮುಂಭಾಗದಲ್ಲಿ ಇರಿಸಿದ ಜರಾಯು ಗರ್ಭಾವಸ್ಥೆಯಲ್ಲಿ ಎಂದಿಗೂ ಕಾಳಜಿಗೆ ಕಾರಣವಾಗದಿದ್ದರೂ, ನಿಮ್ಮ ಅಲ್ಟ್ರಾಸೌಂಡ್ ಒಂದನ್ನು ತೋರಿಸಿದರೆ ಅದು ಜಾಗರೂಕರಾಗಿರಬೇಕು. ನೀವು ಈ ಕೆಳಗಿನ ಯಾವುದಾದರೂ ರೋಗಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣ ನಿಮ್ಮ ಪ್ರಸೂತಿ ತಜ್ಞರನ್ನು ಭೇಟಿ ಮಾಡುವುದು ಉತ್ತಮ:

  • ಹೊಟ್ಟೆ ನೋವು
  • ತೀವ್ರ ಬೆನ್ನು ನೋವು
  • ಅಸಹಜ ಗರ್ಭಾಶಯದ ಕುಗ್ಗುವಿಕೆಗಳು
  • ಯೋನಿಯಲ್ಲಿ ರಕ್ತಸ್ರಾವ

ಮುಂಭಾಗದ ಜರಾಯುಗಳಿಗೆ ಸಿ-ಸೆಕ್ಷನ್ ಅಗತ್ಯವಿದೆಯೇ ಇಲ್ಲವೇ ಎಂದು  ನಿರ್ಧರಿಸಲು ನಿಮ್ಮ ಪ್ರಸೂತಿ ತಜ್ಞ ಉತ್ತಮ ವ್ಯಕ್ತಿ. ಮೇಲೆ ತಿಳಿಸಿದ ಯಾವುದೇ ರೋಗಲಕ್ಷಣಗಳನ್ನು ನೀವು ಅನುಭವಿಸಿದರೆ ನಿಮ್ಮ ಪ್ರಸೂತಿ ವೈದ್ಯರೊಂದಿಗೆ ಮಾತನಾಡಿ.

 

#babychakrakannada
logo

Select Language

down - arrow
Personalizing BabyChakra just for you!
This may take a moment!