• Home  /  
  • Learn  /  
  • ಮೊದಲ ತ್ರೈಮಾಸಿಕದಲ್ಲಿ ಹೊಂದಿರಲೇಬೇಕಾದ ಐದು ಪೋಷಕಾಂಶಗಳು..
ಮೊದಲ ತ್ರೈಮಾಸಿಕದಲ್ಲಿ ಹೊಂದಿರಲೇಬೇಕಾದ  ಐದು ಪೋಷಕಾಂಶಗಳು..

ಮೊದಲ ತ್ರೈಮಾಸಿಕದಲ್ಲಿ ಹೊಂದಿರಲೇಬೇಕಾದ ಐದು ಪೋಷಕಾಂಶಗಳು..

29 Nov 2019 | 1 min Read

Sowmya Prithvi

Author | 14 Articles

ಮಹಿಳೆಯು ತನ್ನ ಗರ್ಭಧಾರಣೆಯ ಪರೀಕ್ಷಾ ಕಿಟ್ನಲ್ಲಿ ಎರಡು ಗುಲಾಬಿ ರೇಖೆಗಳನ್ನು ಕಂಡುಕೊಳ್ಳುವ ಮೊದಲೇ, ಆಕೆಯ ದೇಹವು ಬದಲಾವಣೆಗಳಿಗೆ ಒಳಗಾಗುತ್ತದೆ ಹಾಗು ಅದಕ್ಕಾಗಿ ಪೂರಕ ಚಿಹ್ನೆಗಳನ್ನು ನೀಡಲು ಪ್ರಾರಂಭಿಸುತ್ತದೆ

ನಮ್ಮ ಜೀವನಶೈಲಿಯಿಂದಾಗಿ, ಇಂದಿನ ಕಾಲದಲ್ಲಿ ನಮ್ಮ ದೇಹ 100% ದೇಹರಚನೆ ಹೊಂದಿರುವುದಿಲ್ಲ ಅಥವಾ ಜಗತ್ತಿಗೆ ಹೊಸ ಜೀವನವನ್ನು ತರಲು ಸಿದ್ಧವಾಗಿರುವುದಿಲ್ಲ, ಆದ್ದರಿಂದ ಮಹಿಳೆ ಗರ್ಭಿಣಿಯಾಗಿದ್ದಾಳೆಂದು ತಿಳಿದ ತಕ್ಷಣ, ಅವಳು ತನ್ನ ಆರೋಗ್ಯ ಮತ್ತು ಪೋಷಣೆಗೆ ಗಮನವನ್ನು ನೀಡುವುದು ಅತ್ಯಗತ್ಯ


ಗರ್ಭಧಾರಣೆಯ ಮೊದಲ ಮೂರು ತಿಂಗಳುಗಳು ಅತ್ಯಂತ ನಿರ್ಣಾಯಕ ತಿಂಗಳುಗಳು, ಇದನ್ನು ಮೊದಲ ತ್ರೈಮಾಸಿಕ ಎಂದೂ ಕರೆಯುತ್ತಾರೆ.

ಈ ಅವಧಿಯು ಭ್ರೂಣದ ನಿರ್ಣಾಯಕ ಬೆಳವಣಿಗೆ  ಹಾಗು ತಾಯಿಯ ದೇಹದಲ್ಲಿನ ಪ್ರಮುಖ ಹಾರ್ಮೋನುಗಳ ಮತ್ತು ದೈಹಿಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ.
ಆರೋಗ್ಯಕರ ಜೀವನವನ್ನು ಹೊಂದಲು ಈ ಬದಲಾವಣೆಗಳನ್ನು ಸರಿಯಾದ ಆಹಾರ ಮತ್ತು ಪೋಷಣೆಯೊಂದಿಗೆ ಬೆಂಬಲಿಸುವ ಅಗತ್ಯವಿದೆ.


ಗರ್ಭಾವಸ್ಥೆಯಲ್ಲಿ ತಾಯಿಯ ಪೋಷಕಾಂಶಗಳ ಅಗತ್ಯತೆಗಳು ಮೊದಲಿಗಿಂತ 40-60% ಹೆಚ್ಚಾಗಿರುತ್ತದೆ. ಸಮತೋಲಿತ ಆಹಾರ ಜೊತೆಗೆ 25 ಪ್ರಮುಖ ಪೋಷಕಾಂಶಗಳು ಹಾಗು  ವಿಟಮಿನ್ ಎ ಮತ್ತು ಇ ನಂತಹ 50% (ಆರ್ ಡಿ ಎ) ಮತ್ತು ಮದರ್

 ಹಾರ್ಲಿಕ್ಸ್‌ನಂತಹ ಪೂರಕ ಆಹಾರ ಪೋಷಕಾಂಶಗಳ ಸಮೃದ್ಧವಾಗಿಸುವುದರಿಂದ, ತಾಯಿಯ ಆರೋಗ್ಯ ಮತ್ತು ಮಗುವಿನ ಬೆಳವಣಿಗೆಗೆ ಸರಿಯಾದ ಪೋಷಣೆಯನ್ನು ಖಾತ್ರಿಗೊಳಿಸುತ್ತದೆ.

ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ನಿಮ್ಮ ಆಹಾರದಲ್ಲಿ ನೀವು ಸೇರಿಸಿಕೊಳ್ಳಬೇಕಾದ ಟಾಪ್ 5 ಪೋಷಕಾಂಶಗಳು ಇಲ್ಲಿವೆ

ಫೋಲಿಕಾಸಿಡ್ 

ಮಗುವಿನ ನರ ಕೊಳವೆ, ಅಂದರೆ ಕೇಂದ್ರ ನರಮಂಡಲದ ಮೆದುಳು, ಬೆನ್ನುಹುರಿ ಮತ್ತು ಇತರ ನರ ಅಂಗಾಂಶಗಳು ಮೊದಲ ತ್ರೈಮಾಸಿಕದಲ್ಲಿ ಉತ್ತಮವಾಗಿ ರೂಪುಗೊಳ್ಳುತ್ತವೆ.
ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ ಫೋಲಿಕ್ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಮಗುವಿನ ನರ ಕೊಳವೆ, ಮೆದುಳು ಮತ್ತು ಬೆನ್ನುಹುರಿ ಬೆಳೆಯಲು ಸಹಾಯ ಮಾಡುತ್ತದೆ.

ಗರ್ಭಿಣಿಯಾಗುವ ಮೊದಲು ಕನಿಷ್ಠ ಒಂದು ವರ್ಷದವರೆಗೆ ಫೋಲಿಕಾಸಿಡ್ ತೆಗೆದುಕೊಳ್ಳುವ ಮಹಿಳೆಯರು, ಪೂರ್ವ ಜನನ ಸಾಧ್ಯತೆಯನ್ನು 50% ಅಥವಾ ಅದಕ್ಕಿಂತ ಹೆಚ್ಚು ಕಡಿತಗೊಳಿಸುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ. ಫೋಲಿಕಾಸಿಡ್ ಸೇವನೆಯು ಮಗುವಿನ ಮೆದುಳು ಮತ್ತು ಬೆನ್ನುಹುರಿಯ ಜನ್ಮ ದೋಷಗಳನ್ನು ತಡೆಯುತ್ತದೆ.

ದೈನಂದಿನ ಸೇವನೆ:

ಪ್ರತಿದಿನ 400 ಮಿ ಗ್ರಾಂ ಫೋಲಿಕಾಸಿಡ್, ಗರ್ಭಧಾರಣೆಯ ಮೊದಲು ಮತ್ತು ಮೊದಲ ತ್ರೈಮಾಸಿಕದಲ್ಲಿ.

 

ಒಮೆಗಾ –3 ಕೊಬ್ಬಿನಾಮ್ಲಗಳು-ಡಿಹೆಚ್ಎ ಮತ್ತು ಇಪಿಎ

ಮಗುವಿನ ನರಮಂಡಲದ ಬಹುಪಾಲು ಭಾಗ ಮೊದಲ ತ್ರೈಮಾಸಿಕದಲ್ಲಿ ಅಭಿವೃದ್ಧಿಯಾಗುವುದು. ಈ ಅವಧಿಯಲ್ಲಿ ಕಣ್ಣುಗಳು, ಮೂಗು, ಬಾಯಿ ಮತ್ತು ಕಿವಿಗಳು ಹೆಚ್ಚು ವಿಭಿನ್ನವಾಗುತ್ತವೆ.

ಇಪಿಎ, ಅತ್ಯಗತ್ಯ ಒಮೆಗಾ -3 ಹೃದಯ ಬೆಳೆಯಲು ಸಹಾಯ ಮಾಡುತ್ತದೆ,

ಮತ್ತು ಡಿಹೆಚ್ಎ ಮೆದುಳು, ಕಣ್ಣುಗಳು ಮತ್ತು ಕೇಂದ್ರ ನರಮಂಡಲವನ್ನು ಬೆಳೆಯಲು ಸಹಾಯ ಮಾಡುತ್ತದೆ. ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿ ಮಹಿಳೆಗೆ ಇವು ಅಗತ್ಯವಾದ ಪೋಷಕಾಂಶಗಳಾಗಿವೆಗರ್ಭಿಣಿ ಮಹಿಳೆಯರ ಆಹಾರದಲ್ಲಿ ಇಪಿಎ ಮತ್ತು ಡಿಹೆಚ್‌ಎ ಸೇರಿಸುವುದರಿಂದ ಮಗುವಿನ ಅರಿವಿನ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಶಿಫಾರಸು ಮಾಡಿದ ದೈನಂದಿನ ಸೇವನೆ:

300 ಮಿಗ್ರಾಂ ಡಿಎಚ್‌ಎ, ಮೊದಲ ತ್ರೈಮಾಸಿಕದಲ್ಲಿ ಆಹಾರ ಅಥವಾ ಪೂರಕಗಳ ಮೂಲಕ..

 

ಕೋಲೀನ್

ಗರ್ಭಾವಸ್ಥೆಯಲ್ಲಿ 95% ರಷ್ಟು ಗರ್ಭಿಣಿಯರು ಶಿಫಾರಸು ಮಾಡಿದಕ್ಕಿಂತ ಕಡಿಮೆ ಕೋಲೀನ್ ಸೇವಿಸುತ್ತಾರೆ ಎಂದು ಅಂದಾಜಿಸಲಾಗಿದೆ.

ಮೊದಲ ತ್ರೈಮಾಸಿಕದಲ್ಲಿ, ಭಾಗಶಃ ಹಾರ್ಮೋನುಗಳ ಕಾರಣದಿಂದಾಗಿ,

ಗರ್ಭಿಣಿ ಮಹಿಳೆ ವಾಕರಿಕೆ, ಕಿರಿಕಿರಿ ಮನಸ್ಥಿತಿ ಮತ್ತು ಇತರ ದೈಹಿಕ ಲಕ್ಷಣಗಳನ್ನು ಅನುಭವಿಸಬಹುದು, ಅದು ಪೂರ್ವ ಮುಟ್ಟಿನ ಲಕ್ಷಣಗಳಿಗೆ ಹೋಲುತ್ತದೆ.

ಮೆಟಾಬಲಿಸಮ್ ಕ್ರಿಯೆಯನ್ನು ನಿರ್ವಹಿಸಲು, ಮೆಮೊರಿಯ ನಿಯಂತ್ರಣ,

ಮನಸ್ಥಿತಿ, ಸ್ನಾಯು ನಿಯಂತ್ರಣ ಮತ್ತು ಗರ್ಭಿಣಿ ಮಹಿಳೆಯರಲ್ಲಿ ಇತರ ಮೆದುಳು ಮತ್ತು ನರಮಂಡಲದ ನಿಯಂತ್ರಣ ಕಾರ್ಯಗಳಿಗೆ ಕೋಲೀನ್ ಸಹಾಯ ಮಾಡುತ್ತದೆ. ಮಗುವಿನ ಸರಿಯಾದ ಬೆನ್ನುಹುರಿ ರಚನೆ ಮತ್ತು ಆರಂಭಿಕ ಮೆದುಳಿನ ಬೆಳವಣಿಗೆಯಲ್ಲಿ ಕೋಲೀನ್ ಪ್ರಮುಖ ಪಾತ್ರ ವಹಿಸುತ್ತದೆ.

ಶಿಫಾರಸು ಮಾಡಿದ ದೈನಂದಿನ ಸೇವನೆ: 450 ಮಿ ಗ್ರಾಂ ಕೋಲೀನ್ , ಮೊದಲ ತ್ರೈಮಾಸಿಕದಲ್ಲಿ.

 

ಕ್ಯಾಲ್ಸಿಯಂ


ಗರ್ಭಧಾರಣೆಯ 4 ವಾರಗಳ ಅಂತ್ಯದ ವೇಳೆಗೆ, ಮಗುವಿನ ಹೃದಯವು ಬಡಿಯಲು ಸಿದ್ಧವಾಗಿರುತ್ತದೆ. ದೇಹದ ಎಲ್ಲಾ ಪ್ರಮುಖ ವ್ಯವಸ್ಥೆಗಳು ರಕ್ತಪರಿಚಲನೆ, ನರ, ಜೀರ್ಣಕಾರಿ ಮತ್ತು ಮೂತ್ರದ ವ್ಯವಸ್ಥೆಗಳನ್ನು ಒಳಗೊಂಡಂತೆ ಅಭಿವೃದ್ಧಿ ಮತ್ತು ಕಾರ್ಯವನ್ನು ಮುಂದುವರಿಸುತ್ತವೆ.

ಮಗುವಿಗೆ ಆರೋಗ್ಯಕರ ಹೃದಯ, ನರಗಳು ಮತ್ತು ಸ್ನಾಯುಗಳನ್ನು ಬೆಳೆಸಲು ಸಹಾಯ ಮಾಡುವುದರ ಜೊತೆಗೆ ಸಾಮಾನ್ಯ ಹೃದಯ ಲಯ ಮತ್ತು ರಕ್ತದ ಸಾಮರ್ಥ್ಯವನ್ನು ಬೆಳೆಸುವಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರ ವಹಿಸುತ್ತದೆ.

ಗರ್ಭಾವಸ್ಥೆಯಲ್ಲಿ ಸಾಕಷ್ಟು ಕ್ಯಾಲ್ಸಿಯಂ ಪಡೆಯದಿದ್ದರೆ, ಮಗು ಅದನ್ನು ತಾಯಿಯ ಮೂಳೆಗಳಿಂದ ಸೆಳೆಯಲು ಒಲವು ತೋರುತ್ತದೆ, ಇದು ನಂತರದ ದಿನಗಳಲ್ಲಿ ತಾಯಿಯ ಆರೋಗ್ಯವನ್ನು ದುರ್ಬಲಗೊಳಿಸಬಹುದು.

ಶಿಫಾರಸು ಮಾಡಿದ ದೈನಂದಿನ ಸೇವನೆ:

ಪ್ರತಿದಿನ 1,000 ಮಿ ಗ್ರಾಂ ಕ್ಯಾಲ್ಸಿಯಂ, ಮೊದಲ ತ್ರೈಮಾಸಿಕದಲ್ಲಿ.

 

ವಿಟಮಿನ್ ಬಿ 12

ಮಗುವಿನ ಮೆದುಳು ಮತ್ತು ಬೆನ್ನುಹುರಿಯ ಬೆಳವಣಿಗೆಯು ಮೊದಲ ತ್ರೈಮಾಸಿಕದ ಕೇಂದ್ರ ಬಿಂದುಗಳಲ್ಲಿ ಒಂದಾಗಿರುವುದರಿಂದ,

ಗರ್ಭಾವಸ್ಥೆಯಲ್ಲಿ ಫೋಲಿಕಾಸಿಡ್ದೊಂದಿಗೆ ಸಂಯೋಜಿಸಿದಾಗ ವಿಟಮಿನ್ ಬಿ 12 ಅಥವಾ ಕೋಬಾಲಾಮಿನ್, ಮಗುವಿನಲ್ಲಿ ಸ್ಪಿನಾ ಬೈಫಿಡಾ ಮತ್ತು ಇತರ ಬೆನ್ನು ಮತ್ತು ಕೇಂದ್ರ ನರಮಂಡಲದ ಜನ್ಮ ದೋಷಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಹೆಚ್ಚಿನ ಮಟ್ಟದ ಪ್ರೊಜೆಸ್ಟರಾನ್ ತಾಯಿಯ ಎದೆಯುರಿ, ಅಜೀರ್ಣ, ಮಲಬದ್ಧತೆ ಮತ್ತು ಅನಿಲದೊಂದಿಗೆ ಹೋರಾಡುತ್ತದೆ.

ವಿಟಮಿನ್ ಬಿ 12 ಕೊಬ್ಬುಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳ ಚಯಾಪಚಯಕ್ಕೆ ಸಹಾಯ ಮಾಡುವ ಮೂಲಕ ಶಕ್ತಿ, ಮನಸ್ಥಿತಿ ಮತ್ತು ಒತ್ತಡದ ಮಟ್ಟವನ್ನು ಸುಧಾರಿಸಿ, ಸರಾಗಗೊಳಿಸುವಲ್ಲಿ ಸಹಾಯ ಮಾಡುತ್ತದೆ.

ಶಿಫಾರಸು ಮಾಡಿದ ದೈನಂದಿನ ಸೇವನೆ: 2.6 ಎಂಸಿಜಿ ವಿಟಮಿನ್ ಬಿ12.

 

ಭ್ರೂಣದ ಬೆಳವಣಿಗೆಗೆ ಮೊದಲ ತ್ರೈಮಾಸಿಕವು ನಿರ್ಣಾಯಕವಾಗಿದೆ.

ಗರ್ಭಿಣಿ ತಾಯಿ ಹೊರಭಾಗದಲ್ಲಿ ಹೆಚ್ಚು ತೋರಿಸದಿರಬಹುದು, ಆದರೆ ಆಕೆಯ ದೇಹದೊಳಗೆ ಬಹಳಷ್ಟು ಬದಲಾವಣೆ ಆಗುತ್ತಿರುತ್ತದೆ. ಮೇಲಿನ ಪಟ್ಟಿಯ ಹೊರತಾಗಿ, ಕಬ್ಬಿಣ, ಪ್ರೋಟೀನ್ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಸಮತೋಲಿತ ಆಹಾರ, ಈ ಅವಧಿಯಲ್ಲಿ ಮಗುವಿನ ಬೆಳವಣಿಗೆಗೆ ಬಲವಾದ ಅಡಿಪಾಯ ಮತ್ತು ತಾಯಿಯ ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಅತ್ಯಗತ್ಯವಾಗಿರುತ್ತದೆ.

 

ಹಕ್ಕು ನಿರಾಕರಣೆ. ಸೇವಿಸುವ ಮೊದಲು ಪೌಷ್ಠಿಕಾಂಶದ ಪ್ರಮಾಣ ಮತ್ತು ವಿಷಯವನ್ನು ನಿರ್ಧರಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸುವುದು ಬಹಳ ಮುಖ್ಯ. ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಕೇವಲ ಲೇಖಕರದ್ದು ಮತ್ತು ಶೈಕ್ಷಣಿಕ ನೆರವಿನ ಉದ್ದೇಶವಾಗಿದೆ.

 

A

gallery
send-btn

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.