ನಿಮ್ಮ ಆಹಾರಕ್ರಮದಲ್ಲಿ ಈ ಪೋಷಕಾಂಶಗಳ ಸೇವನೆಯನ್ನು ತಪ್ಪಿಸಬೇಡಿ

cover-image
ನಿಮ್ಮ ಆಹಾರಕ್ರಮದಲ್ಲಿ ಈ ಪೋಷಕಾಂಶಗಳ ಸೇವನೆಯನ್ನು ತಪ್ಪಿಸಬೇಡಿ

ಗರ್ಭಾಧಾರಣೆಯು ಸುಮಾರು 40 ವಾರಗಳಷ್ಟು ಇರುತ್ತದೆ. 37ನೇ ವಾರದ ಕೊನೆಯಹೊತ್ತಿಗೆ ಮಗುವು ಪೂರ್ಣ ಅವಧಿಯದದ್ದೆಂದು ಪರಿಗಣಿಸಲಾಗುತ್ತದೆ ಮತ್ತು ಮಗು ಜನಿಸುವ ಮೊದಲು ಇದು ಕೇವಲ ಸಮಯದ ವಿಷಯವಾಗಿದೆ.

 

ಎರಡನೇ ತ್ರೈಮಾಸಿಕದ ಕೊನೆಯ ಹೊತ್ತಿಗೆ ತಾಯಿ ಆಗುತ್ತಿರುವ ಸ್ತ್ರೀಯರು ಹೆಚ್ಚು ಗರ್ಭಿಣಿಯಂತೆ ಕಾಣಿಸಲು ಮತ್ತು ಭಾವಿಸಲು ಪ್ರಾರಂಭಿಸುತ್ತಾರೆ. ಆದಾಗ್ಯೂ ಸಿಡಿತಗಳು ಮತ್ತು ನೋವುಗಳು ಈ ತ್ರೈಮಾಸಿಕದ ಕೆಲವು ಸಾಮಾನ್ಯ ತೊಂದರೆಗಳಾಗಿವೆ. ಮೂರನೇ ತ್ರೈಮಾಸಿಕ ಮಗುವಿನ ಅಂಗಾಂಗಗಳ ಬೆಳವಣಿಗೆ ಮತ್ತು ದೈಹಿಕ ಗೋಚರಿಸುವಿಕೆಗೆ ಸಂಬಂಧಿಸಿದಂತೆ, ಮಗುವಿನ ಬೆಳವಣಿಗೆ ಮತ್ತು ವಿಕಾಸದಲ್ಲಿ ಮಹತ್ತರವಾದ ಹೆಚ್ಚಳ ಉಂಟಾಗುವುದಕ್ಕೆ ಸಾಕ್ಷಿಯಾಗುತ್ತದೆ.

 

ಮೂರನೇ ತ್ರೈಮಾಸಿಕ ಗರ್ಭಿಣಿ ಸ್ತ್ರೀಯರಿಗೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಸವಾಲಿನದ್ದಾಗಿರುತ್ತದೆ. ಮೂರನೇ ತ್ರೈಮಾಸಿಕದಲ್ಲಿ, ಮಗುವಿನ ಮೂಳೆಗಳು ಸಂಪೂರ್ಣವಾಗಿ ರೂಪುಗೊಂಡಿರುತ್ತವೆ. ಈಗ ಮಗುವು ತನ್ನ ಕಣ್ಣುಗಳನ್ನು ತೆರೆಯಬಹುದು ಮತ್ತು ಮುಚ್ಚಬಹುದು ಮತ್ತು ಬೆಳಕನ್ನು ಗ್ರಹಿಸಬಹುದು. ಮಗುವಿನ ದೇಹವು ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ಆರೋಗ್ಯಕರ ಆಹಾರ ಸೇವಿಸುವುದನ್ನು ಮುಂದುವರಿಸುವುದು ತಾಯಿಯಾಗುವವರಿಗೆ ಮುಖ್ಯವಾದರೂ, ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಮತ್ತು ಹೆರಿಗೆ ಮತ್ತು ಪ್ರಸವಾನಂತರಕ್ಕೆ ಅವಳ ದೇಹವನ್ನು ಸಿದ್ಧಪಡಿಸುವುದಕ್ಕೆ ಕೆಲವು ಪ್ರಮುಖ ಪೋಷಕಾಂಶಗಳ ಸೇವನೆಯತ್ತ ಗಮನಹರಿಸುವುದು ಅತ್ಯಗತ್ಯ.

 

ಕೋಲಿನ್, ಫೋಲಿಕ್ ಆಸಿಡ್ ಮತ್ತು ವಿಟಮಿನ್‌ಗಳಂತಹ ಪೌಷ್ಠಿಕಾಂಶದ ಅಗತ್ಯತೆಗಳನ್ನು ಪೂರೈಸಲು ತಾಯಿಯಾಗುತ್ತಿರುವ ಸ್ತ್ರೀ ತನ್ನ ಪ್ರಸವಪೂರ್ವ ಪೂರಕಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸುತ್ತಾರೆ, ಅದರ ಜೊತೆಗೆ ಮೂರನೇ ತ್ರೈಮಾಸಿಕಲ್ಲಿ 25 ಪ್ರಮುಖ ಪೋಷಕಾಂಶಗಳನ್ನು ಹೊಂದಿರುವ ಒಂದು ಲೋಟ ಮದರ್ ಸ್ ಹಾರ್ಲಿಕ್ಸ್‌ನ್ನು ಆಹಾರದಲ್ಲಿ ಸೇವಿಸುವುದು ಅವಳ ಹೆಚ್ಚುತ್ತಿರುವ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಪೂರೈಸುವ ಮತ್ತೊಂದು ಉತ್ತಮ ಮಾರ್ಗವಾಗಿದೆ.

 

ತಾಯಿಯಾಗುವ ಸ್ತ್ರೀ ತನ್ನ ಆಹಾರದ ಮೂಲಕ ಸೇವಿಸುವ ಪ್ರತಿಯೊಂದು ಪೋಷಕಾಂಶವು ಅವಳ ಆರೋಗ್ಯ ಮತ್ತು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗರ್ಭಧಾರಣೆಯ ಮೂರನೇ ತ್ರೈಮಾಸಿಕದಲ್ಲಿ ನಿಮ್ಮ ಆಹಾರದಲ್ಲಿ ನೀವು ಸೇರಿಸಿಕೊಳ್ಳಬೇಕಾದ ಟಾಪ್ 3 ಪೋಷಕಾಂಶಗಳ ಪರಿಶೀಲನಾಪಟ್ಟಿ ಇಲ್ಲಿದೆ.

 

ಒಮೆಗಾ 3- ಡಿಹೆಚ್ಎ

 

ಭ್ರೂಣದ ಮೆದುಳು ಮತ್ತು ರೆಟಿನಾದ ಬೆಳವಣಿಗೆಗೆ ಮೂರನೆಯ ತ್ರೈಮಾಸಿಕದಲ್ಲಿ ಮತ್ತು 18 ತಿಂಗಳ ಜೀವನದವರೆಗೆ ಡಿಹೆಚ್‌ಎ ವಿಶೇಷವಾಗಿ ಮುಖ್ಯವಾಗಿದೆ. ಒಮೆಗಾ 3 ಯಲ್ಲಿ ಸಮೃದ್ಧವಾಗಿರುವ ಆಹಾರವು ಮಗುವಿನ ಸಂವೇದನೆ, ಅರಿವಿನ ಮತ್ತು ಮೋಟಾರು ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಆಹಾರ ಮತ್ತು ಪೂರಕಗಳ ಮೂಲಕ ಡಿಹೆಚ್‌ಎ ಅನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ಪ್ರಸವಪೂರ್ವ ಹೆರಿಗೆ ಮತ್ತು ಪ್ರಸವಾನಂತರದ ಖಿನ್ನತೆಯ ಅಪಾಯಗಳು ಕಡಿಮೆಯಾಗುತ್ತವೆ. ಇದು ಪ್ರಿಕ್ಲಾಂಪ್ಸಿಯ ಮತ್ತು ಮಗುವಿನ ಜನನ ತೂಕ ಹೆಚ್ಚಳದ ಅಪಾಯಗಳನ್ನು ಕಡಿಮೆ ಮಾಡುತ್ತದೆ.

 

ಕಬ್ಬಿಣಾಂಶ

 

ಮೂರನೇ ತ್ರೈಮಾಸಿಕದ ಹೊತ್ತಿಗೆ, ಗರ್ಭದಲ್ಲಿರುವ ಮಗುವಿಗೆ ಮತ್ತು ಪ್ಲಾಸೆಂಟಾಗೆ ರಕ್ತ ಪೂರೈಕೆಯಲ್ಲಿ ಹೆಚ್ಚಳ ಆಗುತ್ತದೆ. ಇದರ ಅರ್ಥವೇನೆಂದರೆ, ಆ ಹೆಚ್ಚುವರಿ ರಕ್ತವನ್ನು ತಯಾರಿಸುವಲ್ಲಿ ಕಬ್ಬಿಣವು ಪ್ರಮುಖ ಪಾತ್ರ ವಹಿಸುವುದರಿಂದ, ತಾಯಿಗೆ ತನ್ನ ಕಬ್ಬಿಣದ ಅಂಶವನ್ನು ಹೆಚ್ಚಿಸುವ ಅಗತ್ಯವಿದೆ. ಇದು ಶ್ವಾಸಕೋಶದಿಂದ ಮಗುವಿಗೆ ಆಮ್ಲಜನಕವನ್ನು ಪೂರೈಸಲು ಸಹ ಸಹಾಯ ಮಾಡುತ್ತದೆ. ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು, ಇದು ಕಡಿಮೆ ತೂಕದ ಮಗುವಿಗೆ ಕಾರಣವಾಗಬಹುದು.

 

 

ಪ್ರೋಟೀನ್

 

ಮೂರನೇ ತ್ರೈಮಾಸಿಕದಲ್ಲಿ ಮಗು ಅತ್ಯಂತ ವೇಗವಾಗಿ ಬೆಳೆಯುತ್ತದೆ; ಆದ್ದರಿಂದ ಗರ್ಭಧಾರಣೆಯ ಕಡೆಯ ಹಂತದಲ್ಲಿ ಪ್ರೋಟೀನ್ ಸಮತೋಲನೆ ಅತ್ಯಗತ್ಯ. ಪ್ರೋಟೀನ್ ಅಮೈನೊ ಆಮ್ಲಗಳಿಂದ ಕೂಡಿದ್ದು ಅದು ಮಗುವಿನ ಮುದ್ದಾದ ಮುಖವನ್ನು ಮತ್ತು ಅದರ ಕೆಳಗಿನ ಪ್ರತಿಯೊಂದು ಕೋಶವನ್ನು ನಿರ್ಮಿಸುತ್ತದೆ. ಮೂರನೆಯ ತ್ರೈಮಾಸಿಕದಲ್ಲಿ, ಮಗುವಿನ ಮೆದುಳಿಗೆ, ನಿರ್ದಿಷ್ಟವಾಗಿ, ಮಗುವಿಗೆ ಉಸಿರಾಡಲು, ನಡೆಯಲು ಮತ್ತು ಮಾತನಾಡಲು ಸಹಾಯ ಮಾಡುವ ಅದ್ಭುತ ಅಂಗವಾಗಿ ರೂಪಾಂತರಗೊಳ್ಳಲು ಪ್ರೋಟೀನ್ಗಳು ಬೇಕಾಗುತ್ತವೆ.

 

 

ಗರ್ಭಾಧಾರಣೆಯು ಸುಮಾರು 40 ವಾರಗಳಷ್ಟು ಇರುತ್ತದೆ. 37ನೇ ವಾರದ ಕೊನೆಯಹೊತ್ತಿಗೆ ಮಗುವು ಪೂರ್ಣ ಅವಧಿಯದದ್ದೆಂದು ಪರಿಗಣಿಸಲಾಗುತ್ತದೆ ಮತ್ತು ಮಗು ಜನಿಸುವ ಮೊದಲು ಇದು ಕೇವಲ ಸಮಯದ ವಿಷಯವಾಗಿದೆ.

 

 

ಮೇಲಿನ ಮೂರು ಪ್ರಮುಖ ಪೋಷಕಾಂಶಗಳನ್ನು ಹೊರತುಪಡಿಸಿ, ಮೂರನೆಯ ತ್ರೈಮಾಸಿಕದಲ್ಲಿ ನಿರ್ಲಕ್ಷಿಸಬಾರದಂತಹ ಇನ್ನೂ ಅನೇಕ ಪ್ರಮುಖ ಪೋಷಕಾಂಶಗಳಿವೆ, ಪ್ರತಿದಿನದ ಆಹಾರದ ಭಾಗವಾಗಿ ಮೂರನೇ ತ್ರೈಮಾಸಿಕದ ಸಮಯದಲ್ಲಿ.ಮೂರನೆಯ ತ್ರೈಮಾಸಿಕವು ಗರ್ಭಧಾರಣೆಯ ಕೊನೆಯ ಹಂತವನ್ನು ಸೂಚಿಸುತ್ತದೆ, ಇದರ ಅಂತ್ಯವು “ತಾಯಿ” ಎಂಬ ಹೊಸ ಪಾತ್ರಕ್ಕೆ ಬದಲಾಗುತ್ತದೆ. ಈ ಒಂಬತ್ತು ತಿಂಗಳಲ್ಲಿ ಗರ್ಭಿಣಿಯೊಬ್ಬಳು ತನ್ನನ್ನು ಮತ್ತು ತನ್ನ ಮಗುವನ್ನು ಉತ್ತಮವಾಗಿ ನೋಡಿಕೊಳ್ಳುವ ಮೂಲಕ ಈ ಪಾತ್ರಕ್ಕಾಗಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುವುದು ಅತ್ಯಗತ್ಯ. ಗರ್ಭಾವಸ್ಥೆಯಲ್ಲಿ ಉತ್ತಮ ಕಾಳಜಿ ಮತ್ತು ಪೋಷಣೆಯನ್ನು ತೆಗೆದುಕೊಳ್ಳುವುದು ಆರೋಗ್ಯಕರ ಮಗು ಮತ್ತು ಸಂತೋಷದ ಮಾತೃತ್ವವನ್ನು ಖಾತ್ರಿಗೊಳಿಸುತ್ತದೆ.

 

ಹಕ್ಕುತ್ಯಾಗ: ಸೇವಿಸುವ ಮೊದಲು ಪೌಷ್ಠಿಕಾಂಶದ ಪ್ರಮಾಣ ಮತ್ತು ವಿಷಯವನ್ನು ನಿರ್ಧರಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸುವುದು ಬಹಳ ಮುಖ್ಯ. 

 

ಈ ಲೇಖನದಲ್ಲಿ ವ್ಯಕ್ತಪಡಿಸಿದ ವೀಕ್ಷಣೆಗಳು, ಅಭಿಪ್ರಾಯಗಳು ಮತ್ತು ಶಿಫಾರಸುಗಳು ಕೇವಲ ಲೇಖಕರದ್ದು ಮತ್ತು ಶೈಕ್ಷಣಿಕ ನೆರವಿನ ಉದ್ದೇಶವಾಗಿದೆ

 

logo

Select Language

down - arrow
Personalizing BabyChakra just for you!
This may take a moment!