• Home  /  
  • Learn  /  
  • ಆರೋಗ್ಯಕರ ಭ್ರೂಣದ ತೂಕಕ್ಕಾಗಿ ನೀವು ಸೇವಿಸಲೇ ಬೇಕಾದ ಪೋಷಕಾಂಶ
ಆರೋಗ್ಯಕರ ಭ್ರೂಣದ ತೂಕಕ್ಕಾಗಿ ನೀವು ಸೇವಿಸಲೇ ಬೇಕಾದ ಪೋಷಕಾಂಶ

ಆರೋಗ್ಯಕರ ಭ್ರೂಣದ ತೂಕಕ್ಕಾಗಿ ನೀವು ಸೇವಿಸಲೇ ಬೇಕಾದ ಪೋಷಕಾಂಶ

9 Dec 2019 | 1 min Read

veena s

Author | 4 Articles

ವಾರ್ಷಿಕವಾಗಿ 30 ಮಿಲಿಯನ್ ಕಡಿಮೆ ತೂಕದಿಂದ ಜನಿಸಿದ ಶಿಶುಗಳು (ಎಲ್ಲಾ ಜನನಗಳಲ್ಲಿ 23.8% ರಷ್ಟು) ಅನೇಕವೇಳೆ ಮಧುಮೇಹ ಮತ್ತು ಹೃದಯರೋಗದಂತಹ ತೀವ್ರವಾದ ಅಲ್ಪ ಮತ್ತು ದೀರ್ಘಕಾಲೀನ ಆರೋಗ್ಯ ಪರಿಣಾಮಗಳನ್ನು ಎದುರಿಸುತ್ತಾರೆ. ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಮತ್ತು ಅಸಮರ್ಪಕ ಸೇವನೆಯ ಪರಿಣಾಮಗಳು ಮಹಿಳೆಯರ ಆರೋಗ್ಯವನ್ನು ನೇರವಾಗಿ ಪರಿಣಾಮ ಬೀರುವುದಲ್ಲದೆ, ಮಗುವಿನ ಜನನ ತೂಕ ಮತ್ತು ಆರಂಭಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ ತಾಯಿ ಆಗುವವರು(ಗರ್ಭಿಣಿ) ಗರ್ಭಾವಸ್ಥೆಯಲ್ಲಿ ಚೆನ್ನಾಗಿ ಸಮತೋಲಿತ ಪೌಷ್ಠಿಕಾಂಶವನ್ನು ಸೇವಿಸುವುದರಿಂದ ಜನನದ ಸಮಯದಲ್ಲಿ ಮತ್ತು ನಂತರ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಆರೋಗ್ಯಕರ ಮಗುವನ್ನು ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

 

ಗರ್ಭಧಾರಣೆಯ ಸಂಪೂರ್ಣ ಪ್ರಯಾಣದ ಸಮಯದಲ್ಲಿ ಪ್ರತಿ ತಿಂಗಳು ಭ್ರೂಣದ ತೂಕದ ಮೇಲೆ ತಾಯಿಯ ಪೌಷ್ಠಿಕ ಆಹಾರ ಸೇವನೆಯು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ತ್ವರಿತ ಒಳನೋಟ ಇಲ್ಲಿದೆ:

 

ತ್ರೈಮಾಸಿಕ 1

ತಿಂಗಳು 1 ಮತ್ತು 2:

 

ಗರ್ಭಧಾರಣೆಯ ಪ್ರಮುಖ ತಿಂಗಳುಗಳಲ್ಲಿ ಒಂದಾಗಿರುವುದರ ಜೊತೆಗೆ ಇದು ತಾಯಿಯು ತನ್ನ ಗರ್ಭಧಾರಣೆಯನ್ನು ಅರಿತುಕೊಳ್ಳಲು ಮತ್ತು ಅಂಗೀಕರಿಸಲು ಪ್ರಾರಂಭಿಸುವ ಸಮಯವು ಆಗಿದೆನೀವು ವಾಕರಿಕೆ ಹಾಗು ಬೆಳಗಿನ ಬೇನೆಯನ್ನು ಅನುಭವಿಸಬಹುದು ಮತ್ತು ಅದು ನಿಮ್ಮ ಆಹಾರ ಮತ್ತು ಪೋಷಣೆಗೆ ಅಡ್ಡಿಯಾಗಬಹುದು. ನೀವು ನಿಮ್ಮ ಪ್ರಸವಪೂರ್ವ ವಿಟಮಿನ್ ತೆಗೆದುಕೊಳ್ಳಲು ಪ್ರಾರಂಭಿಸಿ ಮತ್ತು ನಿಮ್ಮ ಫೋಲೇಟ್ ಸೇವನೆಯು ಅಧಿಕವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

 

ತಿಂಗಳು 3: 

ಗರ್ಭಧಾರಣೆಯ 3ನೇ ತಿಂಗಳು ಭ್ರೂಣ, ಪ್ಲಾಸೆಂಟಾ(ಮಾಸುಚೀಲ) ಮತ್ತು ಆಮ್ನಿಯೋಟಿಕ್ ಚೀಲದ ಬೆಳವಣಿಗೆಯನ್ನು ಗುರುತಿಸುತ್ತಿದೆ. ನಿಮಗೆ ಮತ್ತು ನಿಮ್ಮ ಮಗುವಿಗೆ ಸಾಕಷ್ಟು ತೂಕವನ್ನು ಹೆಚ್ಚಿಸಲು ಸಹಾಯ ಮಾಡಲು ಸಮತೋಲಿತ ಆಹಾರವನ್ನು ಒಳಗೊಂಡಿರುವ ಪ್ರತಿ ವಾರದ ಮೆನುವನ್ನು ಯೋಜಿಸಿ. ಬೆಳಗಿನ  ಬೇನೆಯಿಂದ ಉಂಟಾಗುವ ನಿರ್ಜಲೀಕರಣವು(ಡಿಹೈಡ್ರೇಶನ್) ನಿಮ್ಮ ಮತ್ತು ನಿಮ್ಮ ಮಗುವಿನ ತೂಕದ ಮೇಲೆ ಪರಿಣಾಮ ಬೀರುತ್ತದೆ ಇದನ್ನು ತಡೆಗಟ್ಟಲು ಚೆನ್ನಾಗಿ ನೀರು ಮತ್ತು ಆರೋಗ್ಯಕರ ಪಾನೀಯಗಳನ್ನು ಸೇವಿಸಿ.

 

 

ತ್ರೈಮಾಸಿಕ 2

 ತಿಂಗಳು 4: 

ಹಂತದಲ್ಲಿ ನಿಮ್ಮ ಮಗುವಿನ ಉತ್ತಮ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ನೀವು ಕಾಣಬಹುದು. ಗರ್ಭಧಾರಣೆಯ ಹಂತದಲ್ಲಿ ಮಗುವಿನ ನರಮಂಡಲವು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ನಿಮ್ಮ ಮಗು ಅವನ /ಅವಳ ಹೆಬ್ಬೆರಳು ಚೀಪುವುದು, ಆಕಳಿಕೆ, ಹಿಗ್ಗಿಸುವಿಕೆ ಮತ್ತು ಬೇರೆ ಬೇರೆ ರೀತಿಯ ಮುಖಗಳನ್ನು ಸಹ ಮಾಡಬಹುದು. ಬೀನ್ಸ್ ನಂತಹ ಸತು(zinc) ಸಮೃದ್ಧ ಆಹಾರವನ್ನು ಸೇವಿಸುವುದರಿಂದ  ದೀರ್ಘಕಾಲದ ಪ್ರಸವ ಮತ್ತು  ಕಡಿಮೆ ಜನನ  ತೂಕದಂತಹ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

ತಿಂಗಳು 5:  

ನಿಮ್ಮ ಪ್ರಸವಪೂರ್ವ ವಿಟಮಿನ್ ತಿನ್ನಲು ಮರೆಯಬೇಡಿ. ಗರ್ಭಾವಸ್ಥೆಯಲ್ಲಿ ಭ್ರೂಣದ ತೂಕ ಹೆಚ್ಚಾಗಲು ವಿಟಮಿನ್‌ಗಳನ್ನು ಕ್ರಮವಾಗಿ ತೆಗೆದುಕೊಳ್ಳಿ. ಆರೋಗ್ಯಕರ ಆಹಾರ ಪದ್ಧತಿಯೊಂದಿಗೆ ಲಘು ವ್ಯಾಯಾಮವನ್ನು ಹೊಂದಿರುವುದು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬಹಳ ಉತ್ತಮ. ನಿಮ್ಮ ಮಗುವಿನ ತಲೆಯ ಮೇಲೆ ಕೂದಲು ಬೆಳೆಯಲು ಪ್ರಾರಂಭವಾಗುತ್ತದೆ, ಮತ್ತು ಲನುಗೊ ಅಂದರೆ ಸೂಕ್ಷ್ಮವಾದ ತೆಳುವಾದ ಕೂದಲು ಅವನ ಅಥವಾ ಅವಳ ಭುಜ, ಬೆನ್ನು ಮತ್ತು ಮುಖದ ಭಾಗದಲ್ಲಿ ಆವರಿಸುತ್ತದೆ.

 

ತಿಂಗಳು 6:  

ಆರನೇ ತಿಂಗಳ ಅಂತ್ಯದ ವೇಳೆಗೆ, ಮಗುವಿನ ಬೆರಳು ಮತ್ತು ಕಾಲ್ಬೆರಳುಗಳ ಮುದ್ರಣಗಳು ಕಾಣಬಹುದು . ಕಣ್ಣುರೆಪ್ಪೆಗಳು ತೆರೆಯಲು ಪ್ರಾರಂಭಿಸುತ್ತವೆ ಮತ್ತು ಕಣ್ಣುಗಳು ತೆರೆದುಕೊಳ್ಳುತ್ತವೆ. ನಿಮ್ಮ ಮೂಳೆ ಮತ್ತು ಹಲ್ಲುಗಳ ಆರೋಗ್ಯವನ್ನು ಉಳಿಸಿಕೊಳ್ಳುವುದರ ಜೊತೆಗೆ , ನಿಮ್ಮ ಆಹಾರದಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಸಿಯಂ ಸೇರಿಸುವುದರಿಂದ ಕಡಿಮೆ ಜನನ ತೂಕದ ಮಕ್ಕಳು ಮತ್ತು ಅವಧಿಪೂರ್ವ ಹೆರಿಗೆಯ ಸಾಧ್ಯತೆಗಳು ಕಡಿಮೆಯಾಗುತ್ತವೆ.

 

ತ್ರೈಮಾಸಿಕ 3

ತಿಂಗಳು 7: 

ನಿಮ್ಮ ಮಗುವಿನ ಅಂಗಗಳು ಬೆಳೆಯುತ್ತಲೇ ಇರುತ್ತದೆ ಮತ್ತು ದೇಹದಲ್ಲಿ ಕೊಬ್ಬು ಸಂಗ್ರಹಿಸಲು ಪ್ರಾರಂಭವಾಗುತ್ತದೆ . ಪ್ರತಿದಿನ 200-500ಮಿಲಿ ಹಾಲನ್ನು ಸೇವಿಸುವುದರಿಂದ ಭ್ರೂಣದ ತೂಕವನ್ನು  ಅದ್ಭುತವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ನೋವುಗಳು ಈಗ ಹೆಚ್ಚಾಗುತ್ತವೆಯಾದರೂ, ಸಮತೋಲಿತ ಆಹಾರದ ಜೊತೆಗೆ ಸರಿಯಾದ ಪ್ರಮಾಣದ ಪ್ರೋಟೀನ್ ಮತ್ತು ಕಬ್ಬಿಣಾಂಶವನ್ನು ತೆಗೆದುಕೊಳ್ಳುವ ಮೂಲಕ ನೀವು ಶಕ್ತಿಯುತವಾಗಿ ಇರಬಹುದು .

 

  

ತಿಂಗಳು 8: 

ತಿಂಗಳು ಮಗುವಿನ ಮೆದುಳಿನ ಬೆಳವಣಿಗೆಯು ಪ್ರಬುದ್ಧವಾಗಿ ಮತ್ತು ತ್ವರಿತವಾಗಿ ಮುಂದುವರೆಯುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಮೊಟ್ಟೆಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿ. ಮೊಟ್ಟೆಗಳು ಫೋಲಿಕ್ ಆಸಿಡ್ ಮತ್ತು ಕಬ್ಬಿಣಾಂಶವನ್ನು ಹೊಂದಿದ್ದು, ಆಮ್ನಿಯೋಟಿಕ್ ಚೀಲವನ್ನು ಬಲಪಡಿಸಲು, ಜನ್ಮ ದೋಷ ಮತ್ತು ಕಡಿಮೆಜನನತೂಕವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

 

ತಿಂಗಳು 9:  

ನಿಮ್ಮ ಹೆರಿಗೆಯ ದಿನಾಂಕ ಸಮೀಪ ಬಂದಂತೆ, ನೀವು ನಿಧಾನವಾಗಬಹುದು ಮತ್ತು ಹೆಚ್ಚು ಆತಂಕ ಮತ್ತು  ಚಡಪಡಿಕೆಯನ್ನು  ಅನುಭವಿಸಬಹುದು. ಮಗುವಿನ ಶ್ವಾಸಕೋಶದ ಬೆಳವಣಿಗೆಯು ತಿಂಗಳ ಪ್ರಮುಖ ಕೇಂದ್ರವಾಗಿರುತ್ತದೆಮಗು ಹೆರಿಗೆಗೆ ಸಿದ್ಧವಾಗುವುದರಿಂದ ಮಗುವಿನ ತೂಕವು ತಿಂಗಳ ಅಂತ್ಯದ ವೇಳೆಗೆ ಹೆಚ್ಚಾಗುವುದಿಲ್ಲ. ಸ್ತನ್ಯಪಾನ ಮತ್ತು ಪ್ರಸವಾನಂತರದ ಹಂತಕ್ಕೆ  ತಯಾರಾಗಲು ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದನ್ನು ಮುಂದುವರಿಸಿ.

 

 

ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಮತ್ತು ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳುವುದರ ಜೊತೆಗೆ  ನಿಮಗಾಗಿ ಮತ್ತು ನಿಮ್ಮ ಮಗುವಿಗೆ ಸರಿಯಾದ ಪ್ರಮಾಣದ ತೂಕವನ್ನು ಪಡೆಯಲು ಒತ್ತಡವನ್ನು ತಪ್ಪಿಸುವುದು, ಚೆನ್ನಾಗಿ ನಿದ್ರೆ ಮಾಡುವುದು ಮತ್ತು ಫಿಟ್ಟಾಗಿರುವುದು ಸಹ ಮುಖ್ಯ. ನೆನಪಿರಲಿ, ಆರೋಗ್ಯವಂತ ತಾಯಿ ಮಗುವನ್ನು ಆರೋಗ್ಯವಂತರಾಗಿ  ಮಾಡುತ್ತಾರೆ!

 

ಹಕ್ಕುತ್ಯಾಗ(ಡಿಸ್‌ಕ್ಲೈಮರ್): ಸೇವಿಸುವ ಮೊದಲು ಪೌಷ್ಠಿಕಾಂಶದ ಪ್ರಮಾಣ ಮತ್ತು ವಿಷಯವನ್ನು ನಿರ್ಧರಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸುವುದು ಬಹಳ ಮುಖ್ಯ.

 

 

ಲೇಖನದಲ್ಲಿ ವ್ಯಕ್ತಪಡಿಸಿದ ವೀಕ್ಷಣೆಗಳು, ಅಭಿಪ್ರಾಯಗಳು ಮತ್ತು ಶಿಫಾರಸುಗಳು ಕೇವಲ ಲೇಖಕರದ್ದು ಮತ್ತು ಶೈಕ್ಷಣಿಕ ನೆರವಿನ ಉದ್ದೇಶವಾಗಿದೆ

A

gallery
send-btn

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.