11 Dec 2019 | 1 min Read
yashu
Author | 1 Articles
ಒಂದು ಶಿಶು ನೂರು ಬಿಲಿಯನ್ ನರಗಳಿಂದ ಕೂಡಿ ಒಂದಕ್ಕೊಂದು ಪೂರಕವಾಗಿ ಸಂವಹನ ಕೊಂಡಿಯನ್ನು ಸ್ಥಾಪಿಸುವ ಪರಿಯನ್ನು ವಿಜ್ಞಾನಿಗಳು ಜಗತ್ತಿನ ಅತ್ಯಂತ ಕ್ಲಿಷ್ಟಕರ ಜೈವಿಕ ಪ್ರಕ್ರಿಯೆ ಎಂದು ಪರಿಗಣಿಸಿದ್ದಾರೆ.
ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಮೆದುಳು ನೀವು ಊಹಿಸಲಾರದಷ್ಟು ಅತ್ಯಂತ ವೇಗವಾಗಿ ಬೆಳೆಯುತ್ತದೆ .
ಗರ್ಭಾವಸ್ಥೆಯ ಸಮಯದಲ್ಲಿ ತಾಯಿ ಸೇವಿಸುವ ನ್ಯೂಟ್ರಿಷನ್ ಯುಕ್ತ ಆಹಾರವು ಶಿಶುವಿನ ಮೆದುಳಿನ ಬೆಳವಣಿಗೆಗೆ ಅಂದರೆ ಅದು ನೆನಪಿನ ಶಕ್ತಿ ಆಗಿರಬಹುದು ಅಥವಾ ಕಲಿಯುವ ಸಾಮರ್ಥ್ಯ ಇರಬಹುದು ಅತಿ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿದೆ.
ಆದುದರಿಂದ ನ್ಯೂಟ್ರಿಷನ್ ಯುಕ್ತ ಆಹಾರವು ಮಗುವಿನ ಸಂಪೂರ್ಣ ಬೆಳವಣಿಗೆಗೆ ಎಷ್ಟು ಪ್ರಾಮುಖ್ಯವಾದುದು ಎಂದು ಅರಿತುಕೊಳ್ಳುವುದು ಅವಶ್ಯ
ಟ್ರಿಮೆಸ್ಟರ್ ೧ : ೧ & ೨ ತಿಂಗಳು
ಶಿಶುವಿನ ಮೆದುಳಿನ ಬೆಳವಣಿಗೆ ಗರ್ಭಾವಸ್ಥೆಯ ಮೂರನೇ ವಾರದಲ್ಲಿ ಆರಂಭವಾಗುತ್ತದೆ. ನಾಲ್ಕನೆಯ ವಾರದಲ್ಲಿ ಶಿಶುವಿನ ಮೆದುಳು ಕೇವಲ ಒಂದು ಉಪ್ಪಿನ ಧಾನ್ಯಕ್ಕಿಂತಲು ಹೆಚ್ಚಿರುವುದಿಲ್ಲ ,
ಏಳನೆಯ ವಾರದಲ್ಲಿ ಕಾಲು ಇಂಚಿನಷ್ಟು ಬೆಳೆದಿರುತ್ತದೆ. ಫೋಲೆಟ್ ನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಕೆಂಪು ರಕ್ತಕಣಗಳನ್ನು ಉತ್ಪತ್ತಿ ಮಾಡುತ್ತದೆ ಹಾಗೂ ಶಿಶುವಿನ ಮೆದುಳು ಮತ್ತು ಬೆನ್ನುಹುರಿಯಲ್ಲಿ ನರ ಕೊಳವೆ ಬೆಳವಣಿಗೆ ಹೊಂದಲು ಸಹಾಯ ಮಾಡುತ್ತದೆ.
ಟ್ರಿಮೆಸ್ಟರ್ ೧ : ೩ ತಿಂಗಳು
ಮೂರನೇ ತಿಂಗಳ ಕೊನೆಯಲ್ಲಿ ಅಂದರೆ ಮೊದಲನೆಯ ಟ್ರಿಮೆಸ್ಟರ ಕೊನೆಯಲ್ಲಿ ನಿಮ್ಮ ಶಿಶುವಿನ ಮೆದುಳು , ಬೆನ್ನುಹುರಿ ಹಾಗೂ ಸೆಂಟ್ರಲ್ ನರ್ವಸ್ ಸಿಸ್ಟಮ್ ನ ಇತರ ನರ ಅಂಗಾಂಶವು ಪೂರ್ಣವಾಗಿ ರೂಪಿತವಾಗಿರುತ್ತದೆ.
ಶಿಶುವಿನ ಬೆನ್ನುಹುರಿ ರೂಪಣೆ ಹಾಗು ತ್ವರಿತ ಗತಿಯಲ್ಲಿ ಮೆದುಳಿನ ಬೆಳವಣಿಗೆಗೆ ಕೋಲಿನ್ ಅತಿ ಪ್ರಮುಖ ಪಾತ್ರ ವಹಿಸುತ್ತದೆ
ಟ್ರಿಮೆಸ್ಟರ್ ೨: ೪ ನೇ ತಿಂಗಳು
ಎರಡನೆಯ ಟ್ರಿಮೆಸ್ಟರ್ ಅಂದರೆ ನೀವು ಗರ್ಭ ಧರಿಸಿದ ನಾಲ್ಕನೆಯ ತಿಂಗಳಲ್ಲಿ ಶಿಶುವಿನ ಮೆದುಳು ಡಯಾಫ್ರಮ್ ಸಂಕೋಚನವನ್ನು ನಿರ್ದೇಶಿಸುತ್ತದೇ ಗರ್ಭಾವಸ್ಥೆಯ ಸಮಯದಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದಷ್ಟು ವಿಶ್ರಮಿಸಿಕೊಂಡು ಹಾಗೆಯೇ ಒತ್ತಡದಿಂದ ದೂರವಿರಲು ಪ್ರಯತ್ನಿಸಿ
ವಿಟಮಿನ್ ಬೀ12 ಡೋಸ್ ಅನ್ನು ಸೇವಿಸುವುದನ್ನು ಮುಂದುವರೆಸಿ ಯಾಕೆಂದರೆ ಇದರಿಂದ ಸ್ಪೀನ ಬಿಫಿದ ಹಾಗೂ ಇತರ ಬೆನ್ನುಹುರಿ , ಸೆಂಟ್ರಲ್ ನರ್ವಸ್ ಸಿಸ್ಟಮ್ ನ ಹುಟ್ಟು ವೈಕಳ್ಯವನ್ನು ತಡೆಗಟ್ಟಲು ಹೆಚ್ಚಿನ ಸಹಕಾರಿಯಾಗಿದೆ
ಟ್ರೀಮೆಸ್ಟರ್ ೨ : ೫ನೇ ತಿಂಗಳು
ಪ್ರತಿ ನಿಮಿಷಕ್ಕೆ ೨೫೦೦೦೦ ನರಗಳು ಶಿಶುವಿನ ದೇಹದಲ್ಲಿ ಸೃಷ್ಟಿಯಾಗುತ್ತವೆ . ನರಗಳು ಮೆದುಳಿನ ವಿಧ ವಿಧವಾದ ಸ್ಥಳಗಳಿಗೆ ರವಾನೆಯಾಗುತ್ತದೆ.
ಡಿಎಚ್ಎ ಬ್ರೈನ್ ಸೆಲ್ ಮೆಂಬ್ರೇನ್ ಅಲ್ಲಿ ಕಂಡುಬರುತ್ತದೆ. ಆದುದರಿಂದ ನೂರಾರು ರೀತಿಯಲ್ಲಿ ಮೆದುಳಿನ ಚಟುವಟಿಕೆಗೆ ಪೂರಕವಾಗುವಂತೆ ಇನ್ಫ್ಲುಎನ್ಸ್ ಮಾಡಲಾಗುತ್ತದೆ . ಆದುದರಿಂದ ದಿನನಿತ್ಯದ ಜೀವನದಲ್ಲಿ ಡಿಎಚ್ಎ ಅಂಶವಿರುವ ಆಹಾರವನ್ನು ಸೇವಿಸುವುದನ್ನು ರೂಡಿ ಮಾಡಿಕೊಳ್ಳಿ
ಟ್ರಿಮೆಸ್ಟರ್ ೨ : ೬ ನೇ ತಿಂಗಳು
ಟ್ರಿಮೆಸ್ಟರ್ ಎರಡನೆಯ ಕೊನೆ ತಿಂಗಳಲ್ಲಿ ಮೆದುಳು ಸಂಪೂರ್ಣ ಬೆಳವಣಿಗೆ ಹೊಂದಿದ್ದು ಎದೆ ಬಡಿತ ಉಸಿರಾಟ ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ .
ಈ ಹಂತದಲ್ಲಿ ಶಿಶುವಿನ ಮೆದುಳು ನುಂಗುವುದು ಮಿಟುಕಿಸುವುದು ಹಾಗೂ ರುಚಿಯನ್ನು ಕಂಡುಹಿಡಿಯಲು ಪ್ರಜ್ಞೆಯನ್ನು ಹೊಂದುತ್ತದೆ
ಐರನ್ ಯುಕ್ತ ಆಹಾರವನ್ನು ಸೇವಿಸುವುದರಿಂದ ಶಿಶುವಿನ ಮೆದುಳಿಗೆ ಹಾಗೂ ಉಳಿದ ಅಂಗಾಂಗಗಳಿಗೆ ಆಕ್ಸಿಜನ್ ಅನ್ನು ಪೂರೈಸುತ್ತಾ ಹೆರಿಗೆಯ ಸಮಯದಲ್ಲಿ ಸಹಾಯ ಮಾಡುತ್ತದೆ
ಟ್ರಿಮೆಸ್ಟರ್ ೩ : ೭ ನೇ ತಿಂಗಳು
ಮೂರನೇ ಹಂತದಲ್ಲಿ ಶಿಶುವಿನಲ್ಲಿ ಮೂರು ಪಟ್ಟು ಹೆಚ್ಚಾಗಿ ಮೆದುಳಿನ ಬಳವಣಿಗೆ ಆಗುತ್ತದೆ
ಈ ತಿಂಗಳಲ್ಲಿ ಶಿಶುವಿನ ಮೆದುಳಿನ ತೂಕ ಕನಿಷ್ಟ ೩೦೦ ಗ್ರಾಂ ಆಗಿರುತ್ತದೆ. ಆದದರಿಂದ ಪ್ರೊಟೀನ್ ಯುಕ್ತ ಆಹಾರವನ್ನು ಸೇವಿಸಬೇಕು.
ಸಮೃದ್ಧ ಆಹಾರದಲ್ಲಿ ಪ್ರೊಟೀನ್ ಯುಕ್ತ ಆಹಾರವನ್ನು ಸೇವಿಸುವುದನ್ನು ಹೀಗೆ ಮುಂದುವರೆಸುವದರಿಂದ ಶಿಶು ಉಸಿರಾಡಲು, ಮಾತಾಡಲು, ನಡೆದಾಡಲು ಸಹಕಾರಿಯಾಗುವಂತೆ ಶಿಶುವಿನ ಮೆದುಳಿಗೆ ಪ್ರೊಟೀನ್ ನ ಅವಶ್ಯಕತೆ ಇದೆ
ಟ್ರಿಮೆಸ್ಟರ್ ೩: ೮ ನೇ ತಿಂಗಳು
ಎಂಟನೇ ತಿಂಗಳಲ್ಲಿ ಶಿಶುವಿನ ಆಡಿಟರಿ ಕಾರ್ಟೆಕ್ಸ್ , ವಿಷುಯಲ್ ಕಾರ್ಟೆಕ್ಸ್ ಸೇರಿ ಬೆಳವಣಿಗೆಯ ಹಂತದಲ್ಲಿರುವ ಶಿಶುವಿಗೆ ದೃಷ್ಟಿ, ಶಬ್ದ ಮತ್ತು ಭಾಷೆಗಳ ನಡುವಿನ ವ್ಯತ್ಯಾಸದ ಅರಿವು ಮೂಡಿಸಲು ಸಾಮರ್ಥ್ಯ ಹೊಂದುವ ಕಾರ್ಯ ನಿರ್ವಹಿಸಲು ಆರಂಭಿಸುತ್ತದೆ.
ವಿಟಮಿನ್ ಎ ಮತ್ತು ವಿಟಮಿನ್ ಇ ಅಂಶವಿರುವ ಸಮೃದ್ಧ ಆಹಾರ ಸೇವಿಸುವ ಮುಖಾಂತರ ಮೆದುಳಿನ ಅಂಗಾಂಶ ಹಾಳಾಗುವುದನ್ನು ತಡೆದು ಮೆದುಳನ್ನು ರಕ್ಷಿಸುತ್ತದೆ
ಟ್ರಿಮೆಸ್ಟರ್ ೩: ೯ ನೇ ತಿಂಗಳು
ಟ್ರಿಮೆಸ್ಟರ್ ಮೂರನೆಯ ಕೊನೆಯ ಹಂತದಲ್ಲಿ
ಶಿಶುವಿನ ಮೆದುಳು ಸಂಪೂರ್ಣ ಬೆಳವಣಿಗೆ ಹೊಂದಿ ಸಾಮಾನ್ಯ ಅರಿವು ಮೂಡಲು ಆರಂಭಿಸುತ್ತದೆ. ಶಿಶುವಿನ ಬೆಳವಣಿಗೆಯ ಪ್ರಗತಿಯಲ್ಲಿ ರೂಪಣೆಗೊಂಡ ನರಗಳು ತಮ್ಮ ನೆಟ್ವರ್ಕ್ ಅನ್ನು ಹರಡಲು ಮತ್ತು ಮೆದುಳಿನ ಸೆಲ್ಸ್ ಗಳನ್ನು ಬಲಪಡಿಸಲು ಹೆಚ್ಚು ಸಹಕಾರ ಬೇಕಾಗುತ್ತದೆ.
ಗರ್ಭಾವಸ್ಥೆಯಲ್ಲಿ ಸೇವಿಸಲು ಸೂಚಿಸಿದ ಸಮೃದ್ಧಿಯಾದ ಅಹಾರವನ್ನು ಸೇವಿಸುವ ಹೊರತಾಗಿಯೂ ನೀವು ಸಾಧ್ಯವಾದಷ್ಟು ಹೆಚ್ಚು ಐಯೋಡಿನ್ ಪ್ರಮಾಣವನ್ನು ನಿಮ್ಮ ಊಟದಲ್ಲಿ ಸೇರಿಸುವುದರ ಮುಖಾಂತರ ಅಕಾಲಿಕ ಹೆರಿಗೆ ಹಾಗು ಯೋಚನಾಶಕ್ತಿ ಜೊತೆಗೆ ನೆನಪಿನ ಶಕ್ತಿಯ ಕೊರತೆಯನ್ನು ತಡೆಗಟ್ಟುತ್ತದೆ.
ಗರ್ಭಾವಸ್ಥೆಯ ಸಮಯದಲ್ಲಿ ಶಿಶುವಿನ ಆರೋಗ್ಯಕರ ಮೆದುಳಿನ ಬೆಳವಣಿಗೆ ಆರೋಗ್ಯಕರ ಜೀವನಕ್ಕೆ ಮುನ್ನುಡಿಯಾಗಿದೆ.
A