ಗರ್ಭಾವಸ್ಥೆಯಲ್ಲಿ ಫಿಟ್ನೆಸ್ ಮತ್ತು ವ್ಯಾಯಾಮದ ಬಗ್ಗೆ ತಪ್ಪು ಕಲ್ಪನೆಗಳು.

cover-image
ಗರ್ಭಾವಸ್ಥೆಯಲ್ಲಿ ಫಿಟ್ನೆಸ್ ಮತ್ತು ವ್ಯಾಯಾಮದ ಬಗ್ಗೆ ತಪ್ಪು ಕಲ್ಪನೆಗಳು.

ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದು ಸೆಲೆಬ್ರಿಟಿಯರು ಮಾತ್ರ ಎಂದು ಯಾರು ಹೇಳುತ್ತಾರೆ? ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವ ಬಗ್ಗೆ ಎಲ್ಲಾ ತಪ್ಪು ಕಲ್ಪನೆಯನ್ನು ನಂಬುವಂತ್ತಿದ್ದರು, ಸತ್ಯವೆಂದರೆ ಗರ್ಭಾವಸ್ಥೆಯಲ್ಲಿ ನಿಯಂತ್ರಿತ ಕ್ರಮದ ವ್ಯಾಯಾಮ ಅಥವಾ ಸಕ್ರಿಯವಾಗಿರುವುದರಿಂದ ನಿಮಗೆ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ  ತುಂಬ ಪ್ರಯೋಜನಗಳನ್ನು ನೀಡುತ್ತದೆ.ನಿಮ್ಮ ಗರ್ಭಧಾರಣೆಯ ಒಂಬತ್ತು ತಿಂಗಳುಗಳನ್ನು ಮಂಚದ ಮೇಲೆ ಕಳೆಯಲು ತಪ್ಪು ಕಲ್ಪನೆಗಳನ್ನು ನಿಮ್ಮ ನೆಪವಾಗಿ ಮಾಡಬೇಡಿ. ನಿಮ್ಮ ಜೀವನದಲ್ಲಿ ಫಿಟ್ನೆಸ್ ಅನ್ನು ಸಂಯೋಜಿಸಲು ಸಮತೋಲಿತ ಆಹಾರ ಮತ್ತು ವೈದ್ಯರ ಸಲಹೆಯೊಂದಿಗೆ ವಾಸ್ತವ  ಸಂಗತಿಗಳನ್ನು ಬಳಸಿ.

 

ತಪ್ಪು ಕಲ್ಪನೆ # 1: ವ್ಯಾಯಾಮವು ನಿಮ್ಮನ್ನು ಹೆಚ್ಚು ದಣಿದಂತೆ ಮಾಡುತ್ತದೆ.

ಸತ್ಯ: ಇದು ವಿಪರ್ಯಾಸದ ಸತ್ಯವೆಂದು ನಿಮಗೆ ಅನಿಸಬಹುದು, ಆದರೆ ಹೆಚ್ಚು ವಿಶ್ರಾಂತಿ ಪಡೆಯುವುದರಿಂದ ನೀವು ಹೆಚ್ಚು ಸುಸ್ತಾಗಿರುತ್ತೀರಿ, ಆದರೆ ಸ್ವಲ್ಪ ವ್ಯಾಯಾಮವು ನಿಮ್ಮ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತದೆ. ನಿಮ್ಮ ವ್ಯಾಯಾಮದ ನಂತರ ನೀವು ಚಿಕ್ಕನಿದ್ರೆಗಾಗಿ ಸಿದ್ಧರಾಗಿದ್ದರೆ, ನೀವು ತುಂಬಾ ಶ್ರಮವಹಿಸಿದ್ದೀರಿ ಎಂದರ್ಥ

ತಪ್ಪು ಕಲ್ಪನೆ # 2: ನಿಮಗೆ ಬೆಡ್ ರೆಸ್ಟ್ ಸಲಹೆ ನೀಡಿದ್ದರೇ,ನೀವು ವ್ಯಾಯಾಮ ಮಾಡುವಂತಿಲ್ಲ.

ಸತ್ಯ: ನಿಮ್ಮ ಶಕ್ತಿ ಮತ್ತು ನಮ್ಯತೆಯನ್ನು ಕಾಪಾಡಿಕೊಳ್ಳಲು ಬೆಡ್ರೆಸ್ಟ್ನಲ್ಲಿರುವಾಗ ನಿಮ್ಮ ಸ್ನಾಯುಗಳನ್ನು ಸಕ್ರಿಯವಾಗಿರಿಸುವುದು ಬಹಳ ಮುಖ್ಯ. ದೈನಂದಿನ ವ್ಯಾಯಾಮದ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ, ಕಡಿಮೆ ತೂಕ ಎತ್ತುವುದು ಮತ್ತು ಸ್ಟ್ರೆಚಿಂಗ್ ಒಳಗೊಂಡಿರುವ ತೋಳಿನ ವ್ಯಾಯಾಮಗಳನ್ನು  ಮಾಡುವುದರಿಂದ ಸಕ್ರಿಯವಾಗಬಹುದು.

 

ತಪ್ಪು ಕಲ್ಪನೆ # 3: ಗರ್ಭಾವಸ್ಥೆಯಲ್ಲಿ ನಾನು ಹೆಚ್ಚು ವ್ಯಾಯಾಮ ಮಾಡಿದರೆ, ನಾನು ನನ್ನ ಮಗುವಿನಿಂದ ಪೋಷಕಾಂಶಗಳನ್ನು ತೆಗೆದುಕೊಳ್ಳುತ್ತೇನೆ ಆದ್ದರಿಂದ ಅವನು / ಅವಳು ಸರಿಯಾಗಿ ಬೆಳೆಯುವುದಿಲ್ಲ.

ಸತ್ಯ: ವಾಸ್ತವವೆಂದರೆ ನಿಮ್ಮ ಮಗುವಿಗೆ  ಬೇಕಾದುದನ್ನು ಅದು ನಿಮ್ಮಿಂದ ಪಡೆಯಲಿದೆ. ಇಲ್ಲಿ ನಿಮ್ಮ ಪೋಷಕಾಂಶಗಳು ಮಾತ್ರ ಕಡಿತಗೊಳ್ಳುತ್ತದೆ. ನಿಮಗೆ ಯಾವುದೇ ರೀತಿಯ ಸಮಸ್ಯೆಗಳನ್ನು ತಪ್ಪಿಸುವ ಮಾರ್ಗವೆಂದರೆ ಆರೋಗ್ಯಕರ, ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುವುದು. ಪ್ರಸವಪೂರ್ವ ಜೀವಸತ್ವಗಳ(ವಿಟಮಿನ್ಸ್) ಜೊತೆಗೆ ಸಣ್ಣ ಮತ್ತು ನಿಯಮಿತ  ಆಹಾರವನ್ನು ಸೇವಿಸುವುದರಿಂದ ನಿಮ್ಮ ಪೋಷಕಾಂಶಗಳನ್ನು ಪುನಃ ಪೂರ್ಣಗೊಳ್ಳಲು ಸಹಾಯ ಮಾಡುತ್ತದೆ.

 


 

ತಪ್ಪು ಕಲ್ಪನೆ # 4: ಪ್ರಸವಪೂರ್ವ ವ್ಯಾಯಾಮ ತರಗತಿಗಳು ಮಾತ್ರ ಗರ್ಭಿಣಿಯರಿಗೆ ಸುರಕ್ಷಿತವಾಗಿದೆ.

ಸತ್ಯ: ಉದ್ದೇಶಿಸಲಾದ ಜಾಗದಲ್ಲಿ, ತರಬೇತುದಾರರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಪ್ರಸವಪೂರ್ವ ಫಿಟ್ನೆಸ್ತರಬೇತಿ ತೆಗೆದುಕೊಳ್ಳುವುದು ಉತ್ತಮವಾದರೂ, ಹೆಚ್ಚಿನ ಮಹಿಳೆಯರಿಗೆ ವಿಶೇಷ ಪ್ರಸವಪೂರ್ವ ಫಿಟ್ನೆಸ್ ತರಗತಿಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ನೆನಪಿರಲಿ, ನಿಮ್ಮ ಫಿಟ್ನೆಸ್ ತರಬೇತುದಾರರಿಗೆ ನೀವು ತರಗತಿಗೆ ಮುಂಚಿತವಾಗಿ ಗರ್ಭಿಣಿಯಾಗಿದ್ದೀರಿ ಎಂದು ತಿಳಿಸಿ.   ನಿಮ್ಮ  ತರಬೇತುದಾರರು ಸೂಚನೆ ನೀಡಿದ್ದರು ಸಹ ನಿಮಗೆ ಅನಾನುಕೂಲವನ್ನುಂಟುಮಾಡುವಂತಹ ವ್ಯಾಯಾಮವನ್ನು ಎಂದಿಗೂ ಮಾಡಬಾರದು.

ತಪ್ಪು ಕಲ್ಪನೆ # 5: ನೀವು ಸಾಮಾನ್ಯವಾಗಿ ವ್ಯಾಯಾಮ ಮಾಡದಿದ್ದರೆ, ನೀವು ಗರ್ಭಾವಸ್ಥೆಯಲ್ಲಿ ಪ್ರಾರಂಭಿಸಬಾರದು.

ಸತ್ಯ: ಇದು ಗರ್ಭಧಾರಣೆಯ ಅತ್ಯಂತ ಪ್ರಸಿದ್ಧ ತಪ್ಪು ಕಲ್ಪನೆಗಳಲ್ಲಿ ಒಂದಾಗಿದೆ. ನೀವು ಮೊದಲು ಎಂದಿಗೂ ವ್ಯಾಯಾಮ ಮಾಡದಿದ್ದರೂ ಸಹ ಗರ್ಭಧಾರಣೆಯ ಸಮಯದಲ್ಲಿ ವ್ಯಾಯಾಮ ಕಾರ್ಯಕ್ರಮವನ್ನು ಪ್ರಾರಂಭಿಸುವುದು ಸೂಕ್ತವಾಗಿದೆ . ಗರ್ಭಿಣಿ ಮಹಿಳೆಯರಿಗೆ ದಿನಕ್ಕೆ ಸುಮಾರು 30 ನಿಮಿಷಗಳು, ವಾರದಲ್ಲಿ 5 ದಿನಗಳು ಮಿತವಾದ ವ್ಯಾಯಾಮ ಅಥವಾ ಚಟುವಟಿಕೆಯನ್ನು ಶಿಫಾರಸು ಮಾಡಲಾಗುತ್ತದೆ. ವಾಕಿಂಗ್, ಈಜು ಅಥವಾ ಮಿತವಾಗಿ ಯೋಗವು ಗರ್ಭಾವಸ್ಥೆಯಲ್ಲಿ ಶಿಫಾರಸು ಮಾಡಲಾದ ಒಂದೆರಡು ವ್ಯಾಯಾಮಗಳಾಗಿವೆ.

ತಪ್ಪು ಕಲ್ಪನೆ # 6: ಗರ್ಭಾವಸ್ಥೆಯಲ್ಲಿ ಕೆಲವು ಫಿಟ್ನೆಸ್ ಗಾಯಗಳಿಗೆ ನೀವು ಹೆಚ್ಚು ಒಳಗಾಗಬಹುದು.

ಸತ್ಯ: ಗರ್ಭಾವಸ್ಥೆಯಲ್ಲಿ, ನಿಮ್ಮ ದೇಹವು ರಿಲ್ಯಾಕ್ಸಿನ್ ಎಂಬ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ. ಇದು ಕೀಲು/ ಜಂಟಿಗಳನ್ನು ನಯಗೊಳಿಸಲು ಸಹಾಯ ಮಾಡುತ್ತದೆ ಮತ್ತು ಅದರಿಂದಾಗಿ ಹೆರಿಗೆ ಸುಲಭವಾಗುತ್ತದೆ. ಕೀಲು/ಜಂಟಿಗಳು ತುಂಬಾ ಕಾರ್ಯನಿರ್ವಹಿಸದಿದ್ದಾಗ, ನೀವು ಗಾಯಗೊಳ್ಳುವ ಅಪಾಯ ಹೆಚ್ಚು. ತೀವ್ರವಾದ ಲಂಜಸ್ ಅಥವಾ ಸ್ಕ್ವಾಟ್ಗಳಂತಹ ಜಂಟಿ ಚಲನೆಯನ್ನು ಅಥವಾ ಸ್ನಾಯು ವ್ಯಾಯಾಮವನ್ನು ಒಳಗೊಂಡ ಚಟುವಟಿಕೆಗಳನ್ನು ನೀವು ತಪ್ಪಿಸಬೇಕು.

ತಪ್ಪು ಕಲ್ಪನೆ # 7: ವ್ಯಾಯಾಮ ಮಾಡುವಾಗ ನಿಮ್ಮ ಹೃದಯ ಬಡಿತವನ್ನು 130 ಕ್ಕಿಂತ ಕಡಿಮೆ ಇರಿಸಿ.

ಸತ್ಯ: ಯಾವುದೇ ಮಹಿಳೆಗೆ ನಿರ್ದಿಷ್ಟ ಹೃದಯ ಬಡಿತದ ಗುರಿ ಇಲ್ಲ. ನೀವು ವ್ಯಾಯಾಮ ಮಾಡುವಾಗ ಮಾತನಾಡಲು ಸಾಧ್ಯವಾದರೆ, ನಿಮ್ಮ ಹೃದಯ ಬಡಿತ ಸರಿಯಾಗಿದೆ.

 

ತಪ್ಪು ಕಲ್ಪನೆ # 8: ವ್ಯಾಯಾಮವು ಅಪಾಯಕಾರಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.

ಸತ್ಯ: ಅತಿಯಾಗಿ ದೇಹದ ಉಷ್ಣತೆ ನಿಮ್ಮ ಮಗುವಿನ ಬೆಳವಣಿಗೆಗೆ ಅಪಾಯಕಾರಿ ಎಂಬುದು ನಿಜ, ಏಕೆಂದರೆ ಮೊದಲ ತ್ರೈಮಾಸಿಕದಲ್ಲಿ, ಅತಿಯಾದ ಉಷ್ಣತೆ ನರ ಮಂಡಳಿಯ ದೋಷಗಳೊಂದಿಗೆ ಸಂಬಂಧಿಸಿದೆ - ಆದರೆ ವ್ಯಾಯಾಮ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು. ವ್ಯಾಯಾಮದ ಮೊದಲು, ಮಾಡುವಾಗ ಮತ್ತು ನಂತರ ಸಾಕಷ್ಟು ನೀರು ಕುಡಿಯುವ ಮೂಲಕ ನಿಮ್ಮ ದೇಹವನ್ನು ತಂಪಾಗಿಸಿಕೊಳ್ಳಬಹುದು. ಸಡಿಲವಾದ, ಉಸಿರಾಡುವ ಮತ್ತು ವಿಸ್ತರಿಸಬಹುದಾದ ಬಟ್ಟೆಗಳನ್ನು ಧರಿಸುವ ಮೂಲಕ ನಿಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಿ.

ತಪ್ಪು ಕಲ್ಪನೆ # 9: ಗರ್ಭಾವಸ್ಥೆಯಲ್ಲಿ ವ್ಯಾಯಾಮದ ಏಕೈಕ ಪ್ರಯೋಜನವೆಂದರೆ ನಿಮ್ಮ ಮಗು ಜನಿಸಿದ ನಂತರ ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಸಹಾಯ ಮಾಡುವುದು.

 ಸತ್ಯ: ಪ್ರಸವಾನಂತರದ ತೂಕ ನಷ್ಟಕ್ಕೆ ವ್ಯಾಯಾಮವು ಹೆಚ್ಚಿನ ಕೊಡುಗೆ ನೀಡಿದರೆ, ವ್ಯಾಯಾಮದ ನಿಜವಾದ ಮೌಲ್ಯವು ಗರ್ಭಾವಸ್ಥೆಯಲ್ಲಿ ಮತ್ತು ನಂತರದಲ್ಲಿ ಚಯಾಪಚಯ(ಮೆಟಾಬಲಿಸಮ್) ಸುಧಾರಣೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ನಂಬಲಾಗದ ಆರೋಗ್ಯಕರ ಪ್ರಯೋಜನಗಳಾಗಿವೆ. ಗರ್ಭಧಾರಣೆಯ ನಂತರ ನೀವು ತಕ್ಷಣದ ತೂಕ ನಷ್ಟವನ್ನು ನೋಡದಿದ್ದರೂ ಸಹ, ನೀವು ಯಾವಾಗಲೂ ವ್ಯಾಯಾಮವನ್ನು ಮುಂದುವರಿಸಬೇಕು ಏಕೆಂದರೆ ನಿಮ್ಮ ದೇಹವು ಆಂತರಿಕವಾಗಿ ಪ್ರಯೋಜನ ಪಡೆಯುತ್ತಿದೆ.

 

 ವ್ಯಾಯಾಮವು ನಿಮಗೆ ಉತ್ತಮವಾಗಿ ಭಾವಿಸಲು, ಉತ್ತಮವಾಗಿ ಕಾಣಲು ಮತ್ತು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವನ್ನು ಜನನಕ್ಕೆ ಸಿದ್ಧಪಡಿಸುವ ಮತ್ತು ನಿಮ್ಮ ಗರ್ಭಧಾರಣೆಯ ಪೂರ್ವದ ದೇಹವನ್ನು ತ್ವರಿತವಾಗಿ ಮರಳಿ ಪಡೆಯಲು ಸಹಾಯ ಮಾಡುವ ಸಾಧನವಾಗಿದೆ. ನಿಯಮಿತವಾದ ವ್ಯಾಯಾಮ, ನಿಮ್ಮ ವೈದ್ಯರ ಅನುಮತೀಯೊಂದಿಗೆ, ಗರ್ಭಧಾರಣೆಯ ಸಮಯದಲ್ಲಿ ಆಗುವ ದೈಹಿಕ ಅಸ್ವಸ್ಥತೆಗಳನ್ನು ಕಡಿಮೆ ಮಾಡಲು ಮತ್ತು ಜನ್ಮ ನೀಡಿದ ನಂತರ ನಿಮ್ಮ ಚೇತರಿಕೆಗೆ ವೇಗವನ್ನು ನೀಡುತ್ತದೆ.

ಹಕ್ಕುತ್ಯಾಗ: ಸೇವಿಸುವ ಮೊದಲು ಪೌಷ್ಠಿಕಾಂಶದ ಪ್ರಮಾಣ ಮತ್ತು ವಿಷಯವನ್ನು ನಿರ್ಧರಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸುವುದು ಬಹಳ ಮುಖ್ಯ.

ಲೇಖನದಲ್ಲಿ ವ್ಯಕ್ತಪಡಿಸಿದ ವೀಕ್ಷಣೆಗಳು, ಅಭಿಪ್ರಾಯಗಳು ಮತ್ತು ಶಿಫಾರಸುಗಳು ಕೇವಲ ಲೇಖಕರದ್ದು ಮತ್ತು ಶೈಕ್ಷಣಿಕ ನೆರವಿನ ಉದ್ದೇಶವಾಗಿದೆ

 

#babychakrakannada
logo

Select Language

down - arrow
Personalizing BabyChakra just for you!
This may take a moment!