ತಂದೆಯ ಜವಾಬ್ಧಾರಿ ಹೇಗಿದ್ದರೆ ಚೆನ್ನ ?

ತಂದೆಯ ಜವಾಬ್ಧಾರಿ ಹೇಗಿದ್ದರೆ ಚೆನ್ನ ?

2 Nov 2021 | 1 min Read

Medically reviewed by

Author | Articles

ಒಂದು ಕುಟುಂಬದ ಆಧಾರ ಸ್ತಂಭವಾಗಿ ತಂದೆ ಮತ್ತು ತಾಯಿ ನಿಲ್ಲುತ್ತಾರೆ. ಈ ಎರಡು ಪಿಲ್ಲರ್ ಗಳು ಗಟ್ಟಿಯಾಗಿ ನಿಂತರೆ ಮಾತ್ರ ತಳಪಾಯ ಮೇಲ್ಚಾವಣಿ ಸುಭದ್ರವಾಗಿರುತ್ತದೆ. ತಂದೆ ಎನ್ನುವ ಸ್ಥಾನವನ್ನು ಅಷ್ಟು ಸುಲಭವಾಗಿ ನಿಭಾಯಿಸಲು ಸಾಧ್ಯವಿಲ್ಲ. ತಂದೆನು ಆಸ್ಥಾನಕ್ಕೆ ಪೂರಕ ಬೆಂಬಲ, ಅದಕ್ಕಿರುವ ಶಕ್ತಿ ಸಾಮರ್ಥ್ಯದ ಅನುಭವ ಮುಖ್ಯ. ಏಕೆಂದರೆ ತಂದೆನು ವಸ್ಥಾನ ಕೇವಲ ಒಂದೇ ದಿನದಲ್ಲಿ ಮುಗಿದು ಹೋಗುವ ಜವಾಬ್ದಾರಿಯಲ್ಲ. ಮಗು ಬೆಳೆದು ದೊಡ್ಡವನಾಗಿ ಅವನ ಕಾಲ ಮೇಲೆ ಅವನು ನಿಂತು ಅವನದೇ ಸ್ವಂತ ಬದುಕು ಆರಂಭಗೊಳ್ಳುವವರೆಗೆ ತಂದೆಯ ಜವಾಬ್ದಾರಿ ಮುಂದುವರೆಯುತ್ತದೆ. ಇದು ಕೇವಲ ಹಾರಿಕೆಯ ಜವಾಬ್ದಾರಿ ಆಗಿರಬಾರದು. ಮಗುವಿನ ಸಂಪೂರ್ಣ ಬೆಳವಣಿಗೆಯ ಜವಾಬ್ದಾರಿಯುತ ಪಾಲನೆ ಬಹುಮುಖ್ಯ. ಬೆಳೆಯುವ ಮಗುವಿಗೆ ತನ್ನ ಎಲ್ಲ ಕೆಲಸಗಳು ತಂದೆಯಿಂದ ಪ್ರೋತ್ಸಾಹ ಸಿಗಬೇಕು ಎಂದು ಆಶಿಸುತ್ತದೆ.

ತಂದೆ ಮಗುವಿನ ಸಂಬಂಧ ಮಾನಸಿಕವಾಗಿ ಅವಿನಾಭಾವ ಆಗಿರುವಂಥದ್ದು. ಕೆಲವೊಮ್ಮೆ ತಾಯಿಯ ಸ್ಥಾನದಲ್ಲಿ ನಿಂತು ತಂದೆ ತನ್ನ ಕಾರ್ಯವನ್ನು ಮಕ್ಕಳಿಗೆ ಮಾಡುತ್ತಾರೆ. ತಾಯಿಯ ಜೊತೆಗೆ ಪ್ರೀತಿ ಬಾಂಧವ್ಯ ದೊಂದಿಗೆ ಸಂಬಂಧ ಬೆಳೆಸಿಕೊಂಡರೆ, ತಂದೆಯ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುತ್ತದೆ. ಎಲ್ಲ ಮಕ್ಕಳಿಗೂ ತಂದೆಗೆ ನಾವೆಂದರೆ ಹೆಮ್ಮೆ ಎನಿಸುವಂತೆ ಇರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಏನಾದರೂ ಒಂದು ಸಾಹಸ ಪ್ರವೃತ್ತಿಗೆ ತೊಡಗುವಂತೆ ಅವರ ಮನಸ್ಸು ಸದಾ ಸೆಳೆಯುತ್ತಿರುತ್ತದೆ. ಮಕ್ಕಳ ದೃಷ್ಟಿಯಲ್ಲಿ ತಂದೆ ಭಾವನಾತ್ಮಕವಾಗಿಯೂ ಮತ್ತು ದೈಹಿಕವಾಗಿಯೂ ಸುರಕ್ಷತೆಯನ್ನು ನೀಡುವ ವ್ಯಕ್ತಿಯಾಗಿ ಆರಂಭದಿಂದಲೂ ಗೋಚರಿಸುತ್ತಾನೆ. ತಂದೆಯವರಿಗೆ ಹೆಚ್ಚು ಸುರಕ್ಷಿತವಾಗಿ ಬೆಂಬಲವಾಗಿ ನಿಂತರು ಆದಷ್ಟು ಅವರ ಮನೋಭಾವ ಸಕರಾತ್ಮಕವಾಗಿ ಬೆಳೆಯುತ್ತದೆ. ತಂದೆ ಮತ್ತು ಮಕ್ಕಳ ಬಾಂಧವ್ಯ ಸಕಾರಾತ್ಮಕವಾಗಿ ರೂಪುಗೊಂಡರೆ ಮಕ್ಕಳು ಸಾಮಾಜಿಕವಾಗಿ ಉತ್ತಮ ರೀತಿಯ ಬೆಳವಣಿಗೆಯನ್ನು ಕಾಣುತ್ತಾರೆ. ತಂದೆ ಮಕ್ಕಳ ಸಂಬಂಧ ಅವಿನಾಭಾವ ಸಂಬಂಧದಿಂದ ಮಕ್ಕಳು ಹೆಚ್ಚು ಸುಶಿಕ್ಷಿತರು ಮತ್ತು ಶಿಸ್ತಿನಿಂದ ರೂಪುಗೊಳ್ಳುತ್ತಾರೆ. ಬೆಳೆಯುವ ಮಕ್ಕಳು ಹೆಚ್ಚಾಗಿ ತಂದೆ-ತಾಯಿಯನ್ನು ಅನುಕರಣೆ ಮಾಡುವುದರಿಂದ, ಸಾಮಾಜಿಕ ಜೀವನದಲ್ಲಿ ತಂದೆಗೆ ಇರುವ ಸ್ಥಾನಮಾನವನ್ನು ಬಹಳ ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಇತರರೊಡನೆ ತಂದೆಗೆ ಇರುವ ಸಂಬಂಧ ಬಾಂಧವ್ಯವನ್ನು ಮೆಲುಕು ಹಾಕುತ್ತಾರೆ. ತಂದೆಯ ಹಾವಭಾವ ಅವರ ನಡವಳಿಕೆ ಎಲ್ಲವೂ ಮಕ್ಕಳನ್ನು ಮಕ್ಕಳ ಮೇಲೆ ಪ್ರಭಾವವನ್ನು ಉಂಟುಮಾಡುತ್ತದೆ.

ಮಗು ಹೆಣ್ಣಾಗಲಿ ಗಂಡಾಗಲಿ ಪ್ರತಿ ಮಗುವಿಗೆ ತನ್ನ ತಂದೆಯನ್ನು ಭಾವನಾತ್ಮಕವಾಗಿ ಅವಲಂಬಿಸಿರುತ್ತದೆ. ಬೆಳೆಯುತ್ತ ಹೋದಂತೆ ಮಕ್ಕಳು ತಂದೆಯನ್ನು ಒಂದು ಪ್ರಭಾವಿ ಶಕ್ತಿಯಾಗಿ ಪ್ರಭಾವಿ ಮುಖಂಡನಾಗಿ ನಾಯಕನಾಗಿ ಕಾಣುತ್ತಾರೆ. ಮಗುವಿನ ವಿಷಯದಲ್ಲಿ ನಿಮ್ಮ ಜವಾಬ್ದಾರಿಗಳು ಹೀಗಿವೆ :

 

  • ಮಗುವಿನ ಮೇಲೆ ಪ್ರೀತಿಯ ಹೊಳೆಯನ್ನೇ ಹರಿಸಿರಿ. ಅದೇ ಸಮಯದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಮಗುವಿಗೆ ತಿಳಿಸಿಕೊಡಿ- ಮಗುವಿಗೆ ನೀವು ಪ್ರೀತಿ ತೋರಿಸುವುದರಿಂದ ಮಗುವಿಗೆ ಪ್ರೀತಿಯಲ್ಲೇ ಯಾವುದು ಸರಿ ಯಾವುದು ತಪ್ಪ್ಯ್ ಎಂಬುದನ್ನು ಹೇಳಿದರೆ ಕೇಳುವುದು.
  • ಮಗುವಿಗೆ ನೀವು ಒಬ್ಬ ಸುರಕ್ಷಿತವಾಗಿ ನೋಡಿಕೊಳ್ಳುವ ಹೀರೊ ಇದ್ದಂತೆ. ಹಾಗಾಗಿ ಮಗುವಿನ ಪ್ರತೀ ಹೆಜ್ಜೆಯ ಬಗ್ಗೆ ತುಂಬಾ ಗಮನವಿಡಿ- ಮಗು ನಿಮ್ಮ ಮಾತನ್ನು ಸಂಪೂರ್ಣ ಕೇಳುವುದರಿಂದ ನಿಮ್ಮ ಯಾವುದೇ ಕೆಟ್ಟ ಹವ್ಯಾಸಗಳು ಮಗುವಿಗೆ ಬಾಧಕವಾಗದಿರಲಿ. ಇದರ ಬಗ್ಗೆ ಗಮನ ಹರಿಸಿರಿ.
  • ಸಮಯ ಸಿಕ್ಕಾಗಲೆಲ್ಲಾ ಮಗುವನ್ನು ಹೊರಗೆ ಕರೆದುಕೊಂಡು ಹೋಗಿ ಸುತ್ತಾಡಿಸಿ. – ಮಗುವನ್ನು ಹೊರಗೆ ಸುತ್ತಾಡಿಸುವುದು, ಮಗುವಿನೊಂದಿಗೆ ಆಟವಾಡುವುದು, ಪರಿಸರ ಬದಲಾಯಿಸಿ ಮಗುವಿಗೆ ತೋರಿಸುವುದರಿಂದ ಮಗು ತುಂಬಾ ಇಷ್ಟ ಪಡುತ್ತದೆ.
  • ನಿಮ್ಮ ಸಂಗಾತಿಯ ಮೇಲೆ ನಿಮಗೆಷ್ಟು ಗೌರವ ಮತ್ತು ಪ್ರೀತಿ ಇದೆ ಎಂಬುದನ್ನು ಮಗುವಿಗೆ ತೋರಿಸಿರಿ. ಮಗುವಿಗೆ ತಂದೆ -ತಾಯಿ ಇಬ್ಬರ ಬಾಂಧವ್ಯದಿಂದ ಇದ್ದರೆ , ಮಾನಸಿಕವಾಗಿ ಮಗು ತುಂಬಾ ಸಂತೋಷದಿಂದ ಇರುತ್ತದೆ.
  • ಮಗುವಿನ ಜೊತೆ ಕಳೆಯುವ ಸಮಯ ಸಮರ್ಪಕವಾಗಿರಲಿ. – ನೀವು ಕಳೆಯುವ ಸಮಯ ಸುಮ್ಮನೆ ವ್ಯರ್ಥವಾಗುವುದು ಬೇಡ.
  • ಮಗುವಿಗೆ ಶಿಸ್ತು ಕಲಿಸುವುದು – ಹೊರಗೆ ನಿಮ್ಮ ಸ್ನೇಹಿತರ ಮನೆಗೆ ಕರೆದುಕೊಂಡು ಅಲ್ಲಿ ಹೇಗಿರಬೇಕು ಎಂಬುದನ್ನು ಮಗುವಿಗೆ ಹೇಳಿಕೊಟ್ಟಾಗ ಮುಜುಗರ ಪಡುವ ಸಂಧರ್ಭ ಬರುವುದಿಲ್ಲ.
  • ಮಗು ಓದುವಾಗ , ಅವನ ಅಥವಾ ಅವಳ ಜೊತೆ ನೀವು ಕೂಡ ಜೊತೆಗಿರಿ. – ಮಕ್ಕಳು ಓದುವಾಗ ನಿಮ್ಮ ಸಮಯ ಅವರಿಗೆ ಮೀಸಲಿಟ್ಟಾಗ ಅವರ ವಿದ್ಯಾಭ್ಯಾಸಾದ ಕುರಿತು ಮತ್ತಷ್ಟು ಆಸಕ್ತಿಯನ್ನುವಹಿಸುತ್ತಾರೆ.
  • ಮಗು ಹೇಗೆ ಜವಾಬ್ಧಾರಿಯುತವಾಗಿ ಇರಬೇಕು ಎಂಬುದನ್ನು ಕಲಿಸಿರಿ. – ಮಗುವು ಸ್ವತಂತ್ರವಾಗಿ ಬೆಳೆಯಲು ಪ್ರೇರೇಪಿಸಿ.

ಮಗುವಿಗೆ ತಂದೆಯ ಬಗ್ಗೆ ವಿಶೇಷವಾದ ಒಲವು ಇರುತ್ತದೆ. ಅಪ್ಪ ಎಂದರೆ ಎಲ್ಲವನ್ನು ಕೊಡಿಸುವ , ಎಲ್ಲಿ ಬೇಕಾದರೆ ಕರೆದುಕೊಂಡು ಹೋಗುವ , ತನ್ನ ಜೊತೆಯಲ್ಲಿ ಸದಾ ಕಾಲ ಇರುವ ಸ್ನೇಹಿತ, ಹೀರೊವಿನಂತೆ ಭಾವಿಸಿರುತ್ತದೆ. ಅಪ್ಪನ ಬೆಚ್ಚನೆಯ ಆರೈಕೆ ಪ್ರತೀ ಮಗುವಿಗೆ ತುಂಬಾ ಮುಖ್ಯ. ಇದಕ್ಕಾಗಿ ಮಗು ಪರಿತಪಿಸುತ್ತಿರುತ್ತದೆ. ಹಾಗಾಗಿ ಪ್ರತೀ ಮಗುವಿಗೆ ತಂದೆ ಎಂದರೆ ತುಂಬಾ ಸೆಕ್ಯೂರ್ ಫೀಲ್ ಆಗುತ್ತಾರೆ. ಹಾಗಾಗಿ ತಂದೆ ಮಗುವಿಗೆ ಸಾಧ್ಯವಾದಷ್ಟು ಸಮಯ ಕೊಡುವುದು ಒಳ್ಳೆಯದು.

#familyandrelationship #daddylove

A

gallery
send-btn

Related Topics for you