ಗೆಸ್ಟೇಶನಲ್ ಡಯಾಬಿಟೀಸ್

ಗೆಸ್ಟೇಶನಲ್ ಡಯಾಬಿಟೀಸ್

3 Nov 2021 | 1 min Read

Medically reviewed by

Author | Articles

ಗೆಸ್ಟೇಷನಲ್ ಡೈಯಾಬಿಟೀಸ್ ಯಾರಿಗೆ ಬರುತ್ತದೆ ?

ಇಂದಿನ ಧಾವಂತದ ಜೀವನದಲ್ಲಿ. ಬದಲಾದ ಜೀವನ ಶೈಲಿಯಿಂದ, ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ಈ ಸಮಸ್ಯೆ ಗರ್ಭಾವಸ್ಥೆಯ ಆರಂಭದ ದಿನದಿಂದಲು ಆರಂಭವಾಗಬಹುದು. ಇಲ್ಲವೇ ಗರ್ಭಾವಸ್ಥೆಯ ಎರಡನೇ ತ್ರೈಮಾಸಿಕದಲ್ಲಿ ಆರಂಭವಾಗಬಹುದು. ಏನು ಸಮಸ್ಯೆ ಇಲ್ಲ ಎಂದಾಗ ಪ್ರಸವದ ಸಮಯದಲ್ಲಿ ಕೆಲವೊಂದು ಸಂಕೀರ್ಣತೆಯನ್ನು ಕೆಲವರು ಎದುರಿಸಿರುತ್ತಾರೆ. ಇದಕ್ಕೆ ಮೂಲಕಾರಣ ಗರ್ಭಾವಸ್ಥೆಯ ಸಮಯದಲ್ಲಿ ಸರಿಯಾದ ದೈಹಿಕ ಚಟುವಟಿಕೆ ಇಲ್ಲದಿರುವುದು ಮತ್ತು ಆರೋಗ್ಯಕರ ಆಹಾರ ಪದ್ಧತಿ ಪಾಲಿಸದಿರುವುದು.

ನಗರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು , ಹೆಚ್ಚಿನ ಸಮಯವನ್ನು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಲಿಕ್ಕೆ ಸಾಧ್ಯವಾಗದಿರಬಹುದು. ದಿನದ 24 ಗಂಟೆಗಳು ತುಂಬಾ ಬ್ಯುಸಿಯಾಗಿರುವ ತಾಯಂದಿರು ಸರಿಯಾದ ಸಮಯಕ್ಕೆ ಆಹಾರ ತೆಗೆದುಕೊಳ್ಳದಿದ್ದರೆ, ಸರಿಯಾಗಿ ದೈಹಿಕ ಶ್ರಮ ಪಡದಿದ್ದರೆ, ಗರ್ಭಧಾರಣೆಯ ಸಮಯದಲ್ಲಿ ಹಲವಾರು ಸಂಕೀರ್ಣತೆಯನ್ನು ಎದುರಿಸಬೇಕಾಗುತ್ತದೆ. ಅಂಥ ಕೆಲವು ಸಮಸ್ಯೆಗಳಲ್ಲಿ ಗೆಸ್ಟೇಶನಲ್ ಡಯಾಬಿಟೀಸ್ ಕೂಡ ಒಂದು. ಇದು ಗರ್ಭಾವಸ್ಥೆಯ ಅವಧಿಯಲ್ಲಿ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ಮಧುಮೇಹದ ಪೂರ್ವ ಇತಿಹಾಸ ಇಲ್ಲದವರಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಪ್ರಸವದ ನಂತರ ಈ ಮಧುಮೇಹ ಕೆಲವರಲ್ಲಿ ಇಲ್ಲದೆಯೂ ಇರಬಹುದು ಅಥವಾ ಸ್ವಲ್ಪ ಸಮಯದ ನಂತರ ಮತ್ತೆ ಕಾಣಿಸಿಕೊಳ್ಳಬಹುದು. ಆದರೆ ಗರ್ಭಾವಸ್ಥೆಯ ಅವಧಿಯಲ್ಲಿ ಮಾತ್ರ ಕಾಣಿಸಿಕೊಳ್ಳುವ ಮಧುಮೇಹವನ್ನು ಗೆಸ್ಟೇಶನಲ್ ಡಯಾಬಿಟಿಸ್ ಎಂದು ಕರೆಯುತ್ತಾರೆ. ಸ್ಥೂಲಕಾಯ ಇರುವವರು, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸದೇ ಇರುವವರು, ಇದರಿಂದ ಬಾಧಿಸಲ್ಪಡುತ್ತಾರೆ. ಮೂವತ್ತರ ನಂತರದ ಗರ್ಭಿಣಿಯರಿಗೆ ಹೆಚ್ಚಾಗಿ ಕಂಡುಬರುತ್ತಿದ್ದ ಈ ಸಮಸ್ಯೆ ಇತ್ತೀಚಿನ ದಿನಗಳಲ್ಲಿ 20ರ ಹರೆಯದವರೆಗೂ ಕಾಣಿಸಿಕೊಂಡಿದೆ. ಪ್ರತಿವರ್ಷ ವಿಶ್ವದಾದ್ಯಂತ 20 ರಿಂದ 25 ಶೇಕಡವಾರುಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಗೆಸ್ಟೇಶನಲ್ ಡಯಾಬಿಟಿಸ್ ಕಾಣಿಸಿಕೊಳ್ಳುತ್ತಿದೆ. ನಮ್ಮ ಜೀವನಶೈಲಿಯ ಆರೋಗ್ಯಕರವಾಗಿದ್ದರೆ, ಆರೋಗ್ಯಪೂರ್ಣ ಪೌಷ್ಟಿಕ ಆಹಾರ ನಾವು ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

 

ಗೆಸ್ಟೇಶನಲ್ ಡಯಾಬಿಟಿಸ್ ಎಂದರೇನು?

ಗರ್ಭಧಾರಣೆಯ ಅವಧಿಯಲ್ಲಿ ಸರಿಯಾಗಿ ಇನ್ಸುಲಿನ್ ಪ್ರಮಾಣ ಪೂರೈಕೆಯಾಗದೇ ಇರುವ ಸ್ಥಿತಿಗೆ ತಲುಪಿದಾಗ ಈ ಸಮಸ್ಯೆ ಕಾಡುತ್ತದೆ. ಇನ್ಸುಲಿನ್ ಎಂಬುದು ಮೇದೋಜೀರಕಾಂಗದ ಒಂದು ಹಾರ್ಮೋನ್. ದೇಹದ ಪ್ರತಿ ಕೋಶಕ್ಕೆ ಇನ್ಸುಲಿನ್ ಅನ್ನು ತಲುಪಿಸದೆ ಇರುವ ಸ್ಥಿತಿಗೆ ದೇಹ ತಲುಪಿದಾಗ ಶಕ್ತಿಯ ಬದಲಾಗಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಏರುತ್ತಾ ಹೋಗುತ್ತದೆ.

ಗರ್ಭಾವಸ್ಥೆಯ ಸಮಯದಲ್ಲಿ ದೇಹದ ಹಾರ್ಮೋನಿನ ಸ್ರವಿಕೆಯಲ್ಲಾಗುವ ವ್ಯತ್ಯಾಸದ ಪರಿಣಾಮವಾಗಿ ದೇಹದ ತೂಕ ಹೆಚ್ಚುತ್ತದೆ. ಇದರ ಪರಿಣಾಮವಾಗಿ ದೇಹದ ಕೋಶಗಳು ಕಡಿಮೆ ಇನ್ಸುಲಿನ್ ಪ್ರಮಾಣವನ್ನು ಬಳಸಿಕೊಳ್ಳುತ್ತವೆ. ಇನ್ಸುಲಿನ್ ನ ಈ ಸ್ಥಿತಿಯನ್ನು ಪ್ರತಿರೋಧಕ ಸ್ಥಿತಿಯೆಂದು ಇದನ್ನು ಕರೆಯುತ್ತಾರೆ. ದೇಹದ ಇನ್ಸುಲಿನ್ ಪ್ರತಿರೋಧ ಸ್ಥಿತಿಯಿಂದಾಗಿ ಇನ್ಸುಲಿನ್ ಪ್ರಮಾಣದ ಬೇಡಿಕೆ ಹೆಚ್ಚುತ್ತದೆ. ಆದರೆ ಮೇದೋಜೀರಕಾಂಗದಲ್ಲಿ ದೇಹಕ್ಕೆ ಪೂರೈಕೆಯಾಗುವ ಪ್ರಮಾಣದಲ್ಲಿ ಇನ್ಸುಲಿನ್ ಸ್ರವಿಕೆ ಆಗುವುದಿಲ್ಲ. ಗೆಸ್ಟೇಶನಲ್ ಡಯಾಬಿಟಿಸ್ ನಲ್ಲಿ ಯಾವುದೇ ರೀತಿಯ ಲಕ್ಷಣಗಳು ಕಾಣದೇ ಇದ್ದರೂ, ನಿಮ್ಮ ವೈದ್ಯರೊಂದಿಗೆ ಇದರ ಬಗ್ಗೆ ಸಮಾಲೋಚನೆ ಚರ್ಚೆ ನಡೆಸುವುದು ಉತ್ತಮ. ಸರಿಯಾದ ಸಮಯದಲ್ಲಿ ಸೂಕ್ತ ರಕ್ತ ಪರೀಕ್ಷೆ ಮಾಡುತ್ತಿರಬೇಕು.

 

ಗೆಸ್ಟೇಶನಲ್ ಡಯಾಬಿಟಿಸ್ ನಿಂದಾಗುವ ಆರೋಗ್ಯ ಸಮಸ್ಯೆ

  • ಹತೋಟಿಯಲ್ಲಿ ಇಲ್ಲದ ಮಧುಮೇಹದ ತೊಂದರೆಯಿಂದಾಗಿ ಬಿಪಿಯ ಸಮಸ್ಯೆ ಕಾಣಿಸಿಕೊಳ್ಳಬಹುದು.
  • ಇದರಿಂದಾಗಿ ನಾರ್ಮಲ್ ಪ್ರಸವಕ್ಕೆ ಅಡಚಣೆಯಾಗುತ್ತದೆ.
  • ಮ್ಯಾಕ್ರೋಸೋಮಿಕ್ (ಸ್ಥೂಲಕಾಯದ ಮಗು) ಮಗುವಿನ ಜನನ ಆಗುತ್ತದೆ.
  • ಡಯಾಬಿಟಿಸ್ 2 ಕ್ಕೆ ಇದು ಪರಿವರ್ತನೆಯಾಗಬಹುದು.

 

ಗೆಸ್ಟೇಶನಲ್ ಡಯಾಬಿಟಿಸ್ ಪರೀಕ್ಷಿಸುವುದು

ನಿಮ್ಮ ಗರ್ಭಧಾರಣೆಯ ನಾಲ್ಕನೆಯ ವಾರದಿಂದ ಹಿಡಿದು 28 ವಾರದ ಒಳಗೆ ಇದನ್ನು ಪ್ರಸ್ತ ಪರೀಕ್ಷೆಯ ಮೂಲಕ ದೃಢಪಡಿಸುತ್ತಾರೆ. ಒಂದು ವೇಳೆ ನೀವು ಸ್ಥೂಲಕಾಯ ಇತರೆ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದರೆ , ಗರ್ಭಧಾರಣೆಯ ಆರಂಭದಲ್ಲಿ ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆಯನ್ನು ಮಾಡಲಾಗುವುದು.

 

ಮುನ್ಸೂಚನಾ ಕ್ರಮ

  • ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು
  • ನಿತ್ಯ ವ್ಯಾಯಾಮ ಯೋಗ ನಡಿಗೆಯನ್ನು ಮಾಡುವುದು.
  • ಆಹಾರದಲ್ಲಿ ಹೆಚ್ಚು ಹಸಿರು ತರಕಾರಿ ಸೂಪ್ಪನ್ನು ಬಳಸುವುದು.
  • ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಅವಾಗವಾಗ ಪರಿಶೀಲಿಸುತ್ತಾ ಇರಬೇಕು.
  • ದೈಹಿಕವಾಗಿ ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವುದು. ದೈಹಿಕ ಶ್ರಮ ಸ್ವಲ್ಪ ವಿಶ್ರಾಂತಿ ಮತ್ತು ಮನೆಕೆಲಸ ವಿಶ್ರಾಂತಿ ಹೀಗೆ ನೋಡಿಕೊಂಡರೆ ದೇಹವು ಸದಾ ಚಟುವಟಿಕೆಯಲ್ಲಿ ಇರುತ್ತದೆ.
  • ಮಗುವಿನ ಬೆಳವಣಿಗೆ ,ಮಗುವಿನ ತೂಕ ಮತ್ತು ನಿಮ್ಮ ತೂಕದ ಬಗ್ಗೆ ಸದಾ ನಿಗಾ ವಹಿಸಿ.
  • ವೈದ್ಯರ ಬಳಿ ನಿಮ್ಮ ಆರೋಗ್ಯ ತಪಾಸಣೆ ಮಾಡುತ್ತಿರಬೇಕು.

#gestationaldiabetes

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.