3 Nov 2021 | 1 min Read
Medically reviewed by
Author | Articles
ಮಕ್ಕಳ ಮಿದುಳಿನ ಬೆಳವಣಿಗೆಯ ತಂತ್ರ ಸಂಗೀತ
ಮ್ಯೂಸಿಕ್ ಥೆರಪಿ.
ಇದು ವೈಜ್ಞಾನಿಕ ಯುಗ. ತಂತ್ರಜ್ಞಾನ ಬೆಳೆದಂತೆಲ್ಲ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಕಲಿಕೆಯನ್ನು ನಾವು ಮಕ್ಕಳ ಮೇಲೆ ಹೇರುತ್ತಿದ್ದೇವೆ. ಕಲಿಕೆಯನ್ನು ನಾವು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅವರ ತಲೆಗೆ ತುಂಬಿಸುವ ಧಾವಂತದಲ್ಲಿ ಇರುತ್ತೇವೆ. ಶಾಲೆಗೆ ಸೇರುವ ಮುನ್ನ ಮಕ್ಕಳು ಎಲ್ಲವನ್ನೂ ಕಲಿತಿರಬೇಕು ಎಂಬ ಉದ್ದೇಶದಿಂದ ಮನೆಯಲ್ಲಿಯೇ ಇಂದು ಶಾಲೆಯ ಅರ್ಧ ಕೆಲಸವಾಗುತ್ತಿದೆ. ಅದಕ್ಕಾಗಿ ಹೋಂ ಟ್ಯೂಟರ್ ರವರನ್ನು ಕೂಡ ಮನೆಗೆ ಕರೆಯಲಾಗುತ್ತದೆ. ಮಕ್ಕಳ ಕಲಿಕೆ ಪೋಷಕರಿಗೆ ಹೊರೆಯಾಗುತ್ತಿದೆ. ಪ್ರಿಕೆಜಿಗಳಿಗೆ ಮಕ್ಕಳನ್ನು ಸೇರಬಯಸುವ ಪೋಷಕರು, ಮಕ್ಕಳ ಹೋಮ್ ವರ್ಕ್ಗಳನ್ನು ತಾವೇ ಮಾಡುವ ಕಾಲಘಟ್ಟ ಎದುರಾಗಿದೆ. ಬೆಳೆಯುವ ಆಡಿ ನಲಿಯುವ ಮಕ್ಕಳಿಗೆ ಪುಸ್ತಕ ಹೊರೆಯಾಗಿ ಪರಿಣಮಿಸಿದೆ. ಇದೆಲ್ಲವನ್ನು ನಾವು ಕೂಲಂಕುಷವಾಗಿ ನೋಡಿ ಭಾವಿ ಭವಿಷ್ಯದ ಚಿಂತನೆ ಮಾಡಬೇಕಾಗುತ್ತದೆ. ಮಕ್ಕಳಿಗೆ ಕಲಿಕೆ ಎಂಬುದು ಮೋಜಿನ ಸಂಗತಿಯಾಗಿಯೂ, ಜ್ಞಾನಾರ್ಜನೆಗೆ ದಾರಿಯಾಗಿಯೂ ಪರಿಣಾಮಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣದ ಪದ್ದತಿ ಬದಲಾಗಬೇಕು ಎಂದು ಹೇಳುತ್ತಿಲ್ಲ. ಆದರೆ ಶಿಕ್ಷಣದ ಕಲಿಕೆಯ ಮಾರ್ಗವನ್ನು ಬದಲಿಸುವ ಹಾಗಾಗಬೇಕು. ಕೆಲವು ಶಾಲೆಗಳಲ್ಲಿ ಆರಂಭದ ದಿನಗಳಲ್ಲಿ ಮಕ್ಕಳನ್ನು ಶಾಲೆಯೆಡೆಗೆ ಆಕರ್ಷಿಸಲು ಬಹಳಷ್ಟು ಕಸರತ್ತುಗಳನ್ನು ನಡೆಸಲಾಗುವುದು. ಇಂದು ಬಹಳಷ್ಟು ಸರಕಾರಿ ಶಾಲೆಗಳಲ್ಲಿ ಶಾಲೆಗೆ ಆಗಮಿಸುವ ಮಕ್ಕಳಿಗೆ ಪೆನ್ನು, ರೋಜ್ ಹೂವು, ಶಿಕ್ಷಕರೇ ಅವರೆದುರು ನೃತ್ಯವನ್ನು ಮಾಡುತ್ತಾ ಆಹ್ವಾನಿಸುವ ಪರಿಯನ್ನು ನಾವು ಕಂಡಿದ್ದೇವೆ. ಮಕ್ಕಳು ಶಾಲೆಯಿಂದ ವಿಮುಖರಾಗದಿರಲು ಈ ರೀತಿಯಲ್ಲಿ ಯೋಜನೆಗಳನ್ನು ಸರಕಾರವೇ ರೂಪಿಸುತ್ತಿದೆ. ಕಲಿಕೆಯಯೆಡೆಗೆ ಮಕ್ಕಳು ಆಕರ್ಷಿತರಾಗಲು ಬಹಳಷ್ಟು ಮಾರ್ಗಗಳನ್ನು ಸರಕಾರ ರೂಪಿಸುತ್ತಿದೆ.
ಮನೆಯಲ್ಲಿ ಅರ್ಧ ಕಲಿತು ಶಾಲೆಗೆ ಹೋಗುವ ಮಗು ಇನ್ನು ಅರ್ಧಭಾಗದ ಪಾಠವನ್ನು ಶಿಕ್ಷಕರಿಂದ ಕಲಿಯುತ್ತದೆ. ಕಲಿಕೆಯ ಕಡೆಗೆ ಮಗುವಿನ ಆಸಕ್ತಿಯ ವಿಷಯವಾಗಿ ರೂಪಿಸುವ ಮಾರ್ಗವಾಗಿ, ಇಂದು ಸಂಗೀತಕ್ಷೇತ್ರವನ್ನು ಬಹಳಷ್ಟು ಶಾಲೆಗಳು ಆಯ್ಕೆ ಮಾಡಿಕೊಂಡಿವೆ. ಉದಾಹರಣೆಗೆ ಹೇಳಬೇಕೆಂದರೆ ಮಕ್ಕಳು ನರ್ಸರಿ ಸ್ಕೂಲಿನಲ್ಲಿ ಕಲಿಯುವ ರೈಮ್ಸ್, ಸಂಗೀತ ನೃತ್ಯದ ಮೂಲಕ ಕಲಿಯುವ ಪಾಠಗಳು ಇವೆಲ್ಲಾ ಆಸಕ್ತಿದಾಯಕವಾಗಿ ಮಕ್ಕಳಿಗೆ ತೋರುತ್ತಿದೆ. ಇಲ್ಲಿ ಒಂದು ವೈಜ್ಞಾನಿಕ ಹಿನ್ನೆಲೆಯಿದೆ. ಮಕ್ಕಳಿಗೆ ಸಂಗೀತದ ಮೂಲಕ ಪಾಠವನ್ನು ಹೇಳಿಕೊಟ್ಟರೇ ಮಕ್ಕಳ ಜ್ಞಾನಾರ್ಜನೆಯ ಜೊತೆಗೆ ಮೆದುಳಿನ ಬೆಳವಣಿಗೆ ಸಕರಾತ್ಮಕವಾಗಿ ರೂಪುಗೊಳ್ಳುತ್ತದೆ.
ಸಂಗೀತದ ಮೂಲಕ ಕಲಿಕೆ:
ಶಾಲೆಯಲ್ಲಿ ಒಂದೇ ಸಮನೆ ಪಾಠ ಪುಸ್ತಕದ ವಿಷಯಗಳನ್ನು ಶಿಕ್ಷಕರು ಹೇಳುತ್ತಿದ್ದರೆ ಅದು ಮಕ್ಕಳಿಗೆ ಆಸಕ್ತಿಯ ವಿಷಯವಾಗಿ ಇರುವುದಿಲ್ಲ. ಕೆಲವು ಕಡೆ ಕಾಲೇಜುಗಳಲ್ಲಿ ಜೀವನ ಕೌಶಲ್ಯದ ಮೌಲ್ಯವನ್ನು ತಿಳಿಸಿಕೊಡುವ ತರಬೇತಿದಾರರು ಮೊದಲಿಗೆ ಸಂಗೀತವನ್ನು ಹೇಳಿಕೊಟ್ಟು ಅಥವಾ ಮಕ್ಕಳಿಂದಲೇ ಹಾಡನ್ನು ಹಾಡಿಸಿ ನಂತರ ತಮ್ಮ ತರಗತಿಯನ್ನು ಆರಂಭ ಮಾಡುತ್ತಾರೆ. ಈ ಬದಲಾದ ದೃಷ್ಟಿಕೋನ ಒಂದು ರೀತಿಯ ಸಕಾರಾತ್ಮಕ ಬೆಳವಣಿಗೆ. ನೀವು ನೋಡಬಹುದು ಏನೋ ಒಂದು ಚಿಂತೆಗೀಡಾಗಿ, ಅಥವಾ ಯಾವುದೋ ಒಂದು ಕೆಲಸದಲ್ಲಿ ನಿರತರಾಗಿ ಅದೇ ಗುಂಗಿನಲ್ಲಿ ನಾವಿದ್ದಾಗ ಒಂದು ಉತ್ತಮ ಸಂಗೀತವನ್ನು ಕೇಳಿದಾಗ ನಮ್ಮ ಭಾವನೆ ಬದಲಾಗುತ್ತದೆ. ಅದೇ ರೀತಿ ಬೆಳಗಿನ ಸಮಯದಲ್ಲಿ ನಾವು ಸಂಗೀತವನ್ನು ಕೇಳಿ ನಮ್ಮ ದಿನದ ಆರಂಭವನ್ನು ಮಾಡಿದಾಗ ದಿನಪೂರ್ತಿ ಉಲ್ಲಾಸದಾಯಕವಾಗಿರುತ್ತದೆ. ಅದೇ ರೀತಿ ಬೆಳೆಯುವ ಮಕ್ಕಳ ಭಾವನೆಯು ಸೂಕ್ತ ರೀತಿಯಲ್ಲಿ ಇರಬೇಕೆಂದರೆ ಇಂಥ ಆಸಕ್ತಿದಾಯಕ ವಿಷಯದತ್ತ ಮಗುವಿನ ಮನಸ್ಸನ್ನು ಕೇಂದ್ರೀಕರಿಸುವ ಒಂದು ಕ್ಷೇತ್ರವನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಶಾಲೆಗೆ ಹೋಗುವ ಮುನ್ನ ಮಗುವಿನ ಧ್ಯಾನ , ಏಕಾಗ್ರತೆಗೆ ಪ್ರಿ ಸ್ಕೂಲಿಂಗಲ್ಲಿ ಇದನ್ನು ಕಲಿಸಲಾಗುವುದು. ಕಲಿಕೆಯನ್ನು ಆರಂಭಿಸುವ ಮುನ್ನ ಮಕ್ಕಳಿಗೆ ,ಸಂಗೀತದ ಮೂಲಕ ಕಲಿಕೆಯನ್ನು ಹೇಳುವ ಪ್ರಾಧ್ಯಾನತೆಯ ಬಗ್ಗೆ ಬಹಳಷ್ಟು ಶಿಕ್ಷಕರು ತಮ್ಮ ಅನುಭವವನ್ನು ಹೇಳುತ್ತಾರೆ.
ಸಂಗೀತದಿಂದ ಆಗುವ ಲಾಭಗಳು
ಈ ಬಗ್ಗೆ ಬಹಳಷ್ಟು ದೇಶಗಳು ಹಲವಾರು ಸಂಶೋಧನೆಯನ್ನು ಕೈಗೊಂಡು ಅದರ ಸಕಾರಾತ್ಮಕ ಫಲಿತಾಂಶದಿಂದಾಗಿ ನರ್ಸರಿ ಮಕ್ಕಳಿಗೆ ಸಂಗೀತದ ಮೂಲಕ ಶಿಕ್ಷಣವನ್ನು ಹೇಳಿಕೊಡಲಾಗುತ್ತದೆ.
ಇದು ಕೇವಲ ಫ್ರೀ ನರ್ಸರಿ ಶಾಲೆಗೆ ಸಂಬಂಧಪಡುವ ವಿಷಯವಲ್ಲ. ಎಲ್ಲಾ ವಯೋಮಾನದ ಕಲಿಕೆಯನ್ನು ಮಾಡುವ ಮಕ್ಕಳಿಗೂ ಅನ್ವಯವಾಗುತ್ತದೆ. ಮನೆಯಲ್ಲಿ ಓದುತ್ತಿರುವ ಮಕ್ಕಳು ಐದು ನಿಮಿಷದ ರಿಲ್ಯಾಕ್ಸ್ ಟೈಮಲ್ಲಿ ಉತ್ತಮ ಸಂಗೀತದ ಆಲಿಕೆ ಮಾಡಿದರೆ ತಾವು ಕಲಿತ ವಿಷಯವನ್ನು ಸುಲಭವಾಗಿ ಮರೆಯುವುದಿಲ್ಲ. ಅದೇ ರೀತಿ ಕೋಪ ಆವೇಶ ಸುತ್ತು ಹೆಚ್ಚಾಗಿರುವ ಮಕ್ಕಳು ದಿನದಲ್ಲಿ ಅರ್ಧ ಗಂಟೆ ಸಂಗೀತದ ಆಲಿಕೆಯನ್ನು ಮಾಡಿದರೆ ಅವರ ವರ್ತನೆಯಲ್ಲಿ ಬದಲಾವಣೆಯನ್ನು ಕಾಣಬಹುದು. ಮಕ್ಕಳಲ್ಲಿ ಒಂದೇ ಕಡೆ ಏಕಾಗ್ರತೆ ನಿಲ್ಲಲು ಸಂಗೀತ ಒಂದು ಉತ್ತಮ ತಂತ್ರ. ಇದನ್ನು ಮಗುವಿನ ಪ್ರತೀ ಹಂತದ ಬೆಳವಣಿಗೆಯಲ್ಲಿ ಅಳವಡಿಸಿಕೊಂಡರೆ ಉತ್ತಮ.
A