ನವಜಾತ ಶಿಶುವಿನ ಕೊಠಡಿ ಹೇಗಿರಬೇಕು

ನವಜಾತ ಶಿಶುವಿನ ಕೊಠಡಿ ಹೇಗಿರಬೇಕು

4 Nov 2021 | 1 min Read

Medically reviewed by

Author | Articles

ಮಗುವಿನ ಆಗಮನ ಮನೆಯ ಸದಸ್ಯರಿಗೆ ಸಂಭ್ರಮದ ವಿಷಯ. ಮನೆಗೆ ಒಂದು ಹೊಸ ಸದಸ್ಯನ ಆಗಮನಕ್ಕೆ ಮನೆ ಮಂದಿ ಎಲ್ಲಾ ಹಬ್ಬದ ಆಚರಣೆಯನ್ನು ಸಂಭ್ರಮಪಡುತ್ತಾರೆ. ನವಜಾತ ಶಿಶುವಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಇರುವವರು ಎಲ್ಲಾ ಸೌಕರ್ಯವನ್ನು ಸಿದ್ಧಪಡಿಸುತ್ತಾರೆ. ನಗರದಲ್ಲಿ ವಾಸಿಸುವವರಿಗೆ, ಮನೆಯೊಳಗೆ ಎಲ್ಲಾ ರೀತಿಯ ಸೌಲಭ್ಯಗಳು ಇರುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಹೇಳುವ ಮಟ್ಟಿಗೆ ಸೌಕರ್ಯಗಳು ಇಲ್ಲದಿದ್ದರೂ, ಇರುವ ಸೌಕರ್ಯಕ್ಕೆ ತಮ್ಮನ್ನು ಒಗ್ಗಿಸಿಕೊಂಡಿರುತ್ತಾರೆ. ನವಜಾತ ಮಗುವಿನ ಕೊಠಡಿಯನ್ನು ಶುದ್ಧವಾಗಿರಬೇಕು. ಯಾವುದೇ ರೀತಿಯ ಅಡೆತಡೆಗಳು ಕೊಠಡಿಯಲ್ಲಿ ಇರಬಾರದು.

ಇಂದಿಗೂ ಕೂಡ ಹಳ್ಳಿಗಳಲ್ಲಿ ನವಜಾತ ಶಿಶುವಿನ ಗಡಿಯನ್ನು ಹಸುವಿನ ಸಗಣಿಯಿಂದ ಶುದ್ಧ ಮಾಡಲಾಗುವುದು. ನಂತರ ಮಗುವಿನ ಕೊಠಡಿಯನ್ನು ತುಪ್ಪ ಹಾಕಿ ಕ್ರಿಮಿಕೀಟ ಇದ್ದರೆ ಹೋಗಲಾಡಿಸುವ ವ್ಯವಸ್ಥೆ ಮಾಡಲಾಗುವುದು. ಸಾಮಾನ್ಯವಾಗಿ ಮಗುವಿನ ಕೊಠಡಿಯು ಯಾವುದೇ ಹೋಗುವುದಾಗಲಿ ಧೂಳಿನಿಂದಾಗಿ ಕೂಡಿರಬಾರದು. ಮಗುವಿನ ಕೊಠಡಿಗೆ ಶುದ್ಧವಾದ ಗಾಳಿ ಬೆಳಕು ಬರುವಂತಿರಬೇಕು. ನವಜಾತ ಶಿಶುವಿನ ಆಗಮನಕ್ಕೆ ಕೊಠಡಿಯನ್ನು ಇತ್ತೀಚಿನ ದಿನಗಳಲ್ಲಿ ಒಂದು ವಿಶಿಷ್ಟ ರೀತಿಯಲ್ಲಿ ಸಿದ್ಧಪಡಿಸಲಾಗುವುದು. ಬೆಲೂನು ಮತ್ತು ಬಣ್ಣ ಬಣ್ಣದ ಕಾಗದದಿಂದ ಅಲಂಕರಿಸಲಾಗುವುದು.

ಮಗುವಿನ ಕೊಠಡಿ ಹೇಗಿರಬೇಕು

1. ಶುದ್ಧವಾದ ಗಾಳಿ ಬರುವಂತಿರಬೇಕು. ಹಾಗೆಂದು ಕಿಟಕಿಯನ್ನು ಸಂಪೂರ್ಣವಾಗಿ ತೆರೆದಿಟ್ಟು ವಿಪರೀತವಾದ ಗಾಳಿ ಬರಬಾರದು.

2. ಸೂರ್ಯನ ಬೆಳಕು ಯಥೇಚ್ಛವಾಗಿ ಕೊಠಡಿಗೆ ಬರುವಂತಿರಬೇಕು. ಏಕೆಂದರೆ ಮಗುವಿಗೆ ಮುಖ್ಯವಾಗಿ ಬೇಕಿರುವ ವಿಟಮಿನ್-ಡಿಯು ಸಮೃದ್ಧವಾಗಿ ಸೂರ್ಯನ ಕಿರಣದಿಂದ ಸಿಗುತ್ತದೆ. ಹಾಗಾಗಿ ಬೆಳಗಿನ ಅಥವಾ ಸಂಜೆಯ ಎಳೆಬಿಸಿಲಿಗೆ ಮಗುವನ್ನು ಸೂರ್ಯನ ಕಿರಣಕ್ಕೆ ತೋರಿಸುವುದು ಒಳ್ಳೆಯದು. ಇದರಿಂದ ಸಕಾರಾತ್ಮಕ ಶಕ್ತಿಯು ಮಗುವಿನ ಕೊಠಡಿಗೆ ಬಂದಂತಾಗುತ್ತದೆ. ಅದು ಅಲ್ಲದೆ ಕ್ರಿಮಿಕೀಟಗಳಿಗೆ ಕಾಣದ ಬ್ಯಾಕ್ಟೀರಿಯಗಳು ಇದ್ದರೆ ಸೂರ್ಯನ ಕಿರಣಕ್ಕೆ ನಾಶವಾಗುತ್ತದೆ.

3. ಮಗುವಿಗೆ ಶುದ್ಧವಾದ ಆಕ್ಸಿಜನ್ ಸಿಗದೇ ಇದ್ದರೆ ಮಗುವಿನ ತುಟಿಯ ಭಾಗ ಅಥವಾ ಕಣ್ಣಿನ ಕೆಳಗಡೆ ಕಪ್ಪಗೆ ಆಗಿರುವುದನ್ನು ನಾವು ಗಮನಿಸಬಹುದು. ಹೀಗಾದಾಗ ಮಗುವಿನ ಕೊಠಡಿಯ ಕಿಟಕಿಯನ್ನು ಶುದ್ಧಗಾಳಿ ಬರುವಂತೆ ತೆರೆದಿಡಿ.

4. ಮಗುವಿಗೆ ಬಳಸುವ ತೊಟ್ಟಿಲು ಎರಡರಿಂದ ಮೂರು ಫೀಟ್ ಎತ್ತರ ಇರಲಿ. ಮಗುವಿನ ತಲೆಯು ಪೂರ್ವದಿಕ್ಕಿಗೆ ಬರುವಂತೆ ತೊಟ್ಟಿಲನ್ನು ಇಡಬೇಕು.

5. ಮಗುವಿಗೆ ಹಾಸುವ ಬೆಡ್ ಶಟ್ ಗಳು ನಿತ್ಯ ಬದಲಾಯಿಸುತ್ತಿರಿ.

6. ಮಗುವಿನ ಕೊಠಡಿಯಲ್ಲಿ ಯಾವುದೇ ರೀತಿಯ ಹಳೆಯ ವಸ್ತುಗಳು ಮುರಿದ ವಸ್ತುಗಳು, ಒಡೆದ ಕನ್ನಡಿ, ಫೋಟೋಗಳು, ಇಡಬೇಡಿ.

7. ಮಗುವಿಗೆ ಬಳಸುವ ಬಟ್ಟೆ , ನ್ಯಾಪಿ, ಬೆಡ್ ಶೀಟ್, ರಬ್ಬರ್ ಶೀಟ್ ಬಿಸಿಲಲ್ಲಿ ಒಣಗಿಸಿ.

8. ಮಗು ಸಕರಾತ್ಮಕ ಬೆಳವಣಿಗೆಯನ್ನು ಪಡೆಯಲು ಕೊಠಡಿಯನ್ನು ಶುಭ್ರ ಬಿಳಿ ಬಣ್ಣದಿಂದ ಗೋಡೆಯನ್ನು ಪೇಯಿಂಟ್ ಮಾಡಿರಿ.

9. ಮಗುವಿನ ಕೊಠಡಿಯಲ್ಲಿ ಆಟಿಕೆಯ ವಸ್ತುಗಳು, ಶಬ್ದವನ್ನು ಗ್ರಹಿಸಲು ಆಟಿಕೆ, ಕಣ್ಣಿನ ವ್ಯಾಯಾಮಕ್ಕೆ ಬಣ್ಣಬಣ್ಣದ ಆಟಿಕೆಗಳು ಇರಲಿ.

10. ಮಗು ನಿದ್ರಿಸುವಾಗ ಯಾವುದೇ ರೀತಿಯ ಶಬ್ದಗಳು ಕೊಠಡಿಗೆ ಬರದಂತೆ ನೋಡಿಕೊಳ್ಳಿ.

11. ಮಗು ಬೆಚ್ಚನೆ ಮಲಗುವಂತೆ ಕೊಠಡಿಯ ತಾಪಮಾನ ಸಮರ್ಪಕವಾಗಿರಲಿ.

#babycare #parentinggyaan #childsafety

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.