ದೀಪಾವಳಿಯ ಸಂಭ್ರಮ

cover-image
ದೀಪಾವಳಿಯ ಸಂಭ್ರಮ

ದೀಪಾವಳಿ ಎಂದರೆ ಬೆಳಕಿನ ಹಬ್ಬ. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬ. ದೇಶದಾದ್ಯಂತ ಸಂಭ್ರಮ ಸಂತೋಷದಿಂದ ಆಚರಣೆ ಮಾಡುತ್ತಾರೆ. ಕೆಲವು ಕಡೆ ಒಂದೊಂದು ರೀತಿಯಲ್ಲಿ ವಿಶಿಷ್ಟ ಸಂಪ್ರದಾಯವಿದೆ. ಲಕ್ಷ್ಮಿಯ ಆರಾಧನೆ, ಗಣಪತಿಯ ಆರಾಧನೆ, ಗೋಮಾತೆಯ ಆರಾಧನೆ ಪ್ರಮುಖವಾಗಿದೆ. ನಿಮ್ಮ ಮನೆಯಲ್ಲೂ ಕೂಡ ದೀಪಾವಳಿಯ ಸಂಭ್ರಮ ಮನೆ ಮಾಡಿರಬಹುದು. ಹೊಸ ಮಗುವಿನ ನಿರೀಕ್ಷೆಯಲ್ಲಿರುವ ನಿಮಗೆ ಈ ದೀಪಾವಳಿ ತುಂಬಾ ವಿಶಿಷ್ಟವಾಗಿ ಇರಬಹುದು. ಮುಂದಿನ ವರ್ಷದ ದೀಪಾವಳಿಗೆ ನಿಮ್ಮ ಮಗು ಜೊತೆಗಿರುತ್ತದೆ ಎಂಬ ನಿರೀಕ್ಷೆಯಲ್ಲಿ ಈ ದೀಪಾವಳಿ ಸಂಭ್ರಮಾಚರಣೆ ನಿಮ್ಮಲ್ಲಿ ಮನೆ ಮಾಡಿದೆಯಲ್ಲವೇ ?

 

ದೀಪಾವಳಿಯ ಸಂಭ್ರಮಾಚರಣೆ ಎಂದರೆ ಹಾಗೇನೆ. ಮನೆಯವರು ನೆಂಟರಿಷ್ಟರು ಮಕ್ಕಳು ಬಂಧು-ಬಳಗದವರು ಎಲ್ಲಾ ಸೇರಿ ಸಂತೋಷವನ್ನು ಹಂಚಿಕೊಂಡು ನಗುನಗುತ ಮಾಡುವ ಹಬ್ಬ. ಆದರೆ ಈ ಸಂಭ್ರಮ ಆಚರಣೆಯಲ್ಲಿ ಒಂದು ಕೆಲವು ಮುಂಜಾಗ್ರತೆ ಮತ್ತು ಸುರಕ್ಷತಾ ಕ್ರಮವನ್ನು ಮರೆಯದಿರಿ. ದೀಪಾವಳಿ ಎಷ್ಟು ಸಂತೋಷದ ಸಂಭ್ರಮದ ಹಬ್ಬವು ಅದೇ ರೀತಿ ಪರಿಸರಮಾಲಿನ್ಯದ ಹಬ್ಬವು ಕೂಡ ಹೌದು. ಚಟಪಟ ಪಟಾಕಿ ಸಿಡಿಸುವುದರಿಂದ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯಕ್ಕೆ ನಾಂದಿಯಾಗುತ್ತದೆ.

 


ಹಬ್ಬದ ಅಡಿಗೆ:-

ದೂರದಿಂದ ಬಂದಿರುವ ಬಂಧುಗಳಿಗೆ ನೆಂಟರಿಷ್ಟರಿಗೆ ಹಬ್ಬದ ಅಡಿಗೆ ಮಾಡಿ ಪಡಿಸುವಲ್ಲಿ ನಿಮಗೆ ಕಷ್ಟಸಾಧ್ಯ. ಈ ಸಮಯದಲ್ಲಿ ನೀವು ನಿಮ್ಮ ಹತ್ತಿರದವರ ಸಹಾಯವನ್ನು ಪಡೆದುಕೊಳ್ಳಬೇಕಾಗುತ್ತದೆ. ಕರ್ನಾಟಕದದಲ್ಲಿ ಹಬ್ಬದ ಅಡುಗೆಯೆಂದರೆ, ವಿವಿಧ ಬಗೆಯ ಸಿಹಿ ತಿನಿಸುಗಳು, ಬಗೆಬಗೆಯ ಭಕ್ಷಣೆ ಇರುತ್ತದೆ. ಇದಕ್ಕಾಗಿ ನೀವು ಹೆಚ್ಚಿನ ಶ್ರಮ ಪಡಬೇಕಾಗಿಲ್ಲ.
ಇತರರ ಸಹಾಯದೊಂದಿಗೆ ಸಿಹಿ ತಿನಿಸುಗಳು, ಸಾಂಬಾರ್, ಪಲ್ಯ, ಇತರೆ ಅಡಿಗೆ ಖಾದ್ಯಗಳನ್ನು ತಯಾರಿಸಿ. ಅಡಿಗೆ ತಯಾರಿಸುವಾಗ ಕುಳಿತುಕೊಂಡು ಶ್ರಮ ಪಡದೆ ಮಾಡುವುದನ್ನು ರೂಢಿಸಿಕೊಳ್ಳಿ.

 

ಸುರಕ್ಷತೆ ಕ್ರಮ:-

 • ಹಬ್ಬದ ಉಡುಪು ಕಾಟನ್ ಬಟ್ಟೆಯನ್ನು ಧರಿಸಿ. ಅಡಿಗೆಮನೆಯಲ್ಲಿ ಬೆಂಕಿಯ ಮುಂದೆ ಹೆಚ್ಚು ಸಮಯ ಕಳೆಯಬೇಕಾಗಿರುವುದರಿಂದ ಕಾಟನ್ ಬಟ್ಟೆ ತುಂಬಾ ಒಳ್ಳೆಯದು. ಅದೇ ರೀತಿ ಪಟಾಕಿ ಸಿಡಿಯುವ ಗಳು ನೀವು ಹತ್ತಿರದಲ್ಲಿ ಇರದೇ ಸ್ವಲ್ಪ ದೂರದಲ್ಲಿ ನಿಂತು ನೋಡಿದರೆ ಒಳಿತು.
 • ಗರ್ಭದಲ್ಲಿರುವ ಮಗುವಿಗೆ ಪಟಾಕಿ ಸಿಡಿಸುವುದರಿಂದ ಯಾವುದೇ ತೊಂದರೆಯಾದರೂ, ಕಿಟಕಿಯ ಶಬ್ದವು ನಿಮ್ಮನ್ನು ಭಯಭೀತಿಗೊಳಿಸುತ್ತದೆ. ಗರ್ಭದಲ್ಲಿ ಮಗುವಿನ ಸುತ್ತ ರಕ್ಷಾ ಕವಚವಾಗಿ ಅಮ್ನಿಯಾಟಿಕ್ ಫ್ಲೂಯಿಡ್ ಇದೆ. ಮಗುವಿಗೆ ಯಾವುದೇ ಶಬ್ದದಿಂದ ಹಾನಿಯಾಗದಂತೆ ತಡೆಯುತ್ತದೆ. ಆದರೆ ಶಬ್ದದಿಂದ ಉಂಟಾಗುವ ತಾಯಿಯ ಭಾವನೆಯ ಏರಿಳಿತ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು.
 • ದೀಪಾವಳಿಯಲ್ಲಿ ಎಲ್ಲಾ ರೀತಿಯ ಪೂಜೆ ಮತ್ತು ಸಂಭ್ರಮಾಚರಣೆಯಲ್ಲಿ ಇರುವಾಗ ನೆಲದ ಮೇಲೆ ಎಣ್ಣೆ ಅಥವಾ ನೀರು ಬೀಳುವುದು ಸಹಜ. ನೀವು ನಡೆದಾಡುವಾಗ ನೆಲದ ಮೇಲೆ ಎಣ್ಣೆ, ನೀರು ಇದೆಯೇ ಎಂದು ಪರಿಶೀಲಿಸಿಕೊಂಡು ನಡೆದಾಡಿ.
 • ಪಟಾಕಿ ಬಡಿಸುವಾಗ ಪಕ್ಕದಲ್ಲಿ ನೀವು ನಿಲ್ಲಬೇಡಿ. ಪಟಾಣಿಯಿಂದ ಹೊರಬರುವ ಹೊಗೆಯಿಂದಾಗಿ ವಾತಾವರಣ ಕಲುಷಿತಗೊಳ್ಳುತ್ತದೆ ನೀವು ಕೂಡ ಹೊಗೆಯನ್ನು ಉಸಿರಾಡುತ್ತೀರಿ. ಪಟಾಕಿಗೆ ಬಳಸಲಾಗುವ ರಾಸಾಯನಿಕ ದಿಂದಾಗಿ ಅದರ ನೇರ ಪರಿಣಾಮ ನಿಮ್ಮ ಉಸಿರಾಟ ಪ್ರಕ್ರಿಯೆ ಮತ್ತು ಮಗುವಿನ ಆರೋಗ್ಯಕ್ಕೆ ತೀವ್ರ ದುಷ್ಪರಿಣಾಮವನ್ನುಂಟು ಮಾಡುತ್ತದೆ.

 

ದುಷ್ಪರಿಣಾಮಗಳು

 • ಪಿಟಾಕಿಯ ಹೊಗೆಯಲ್ಲಿ ನೀವು ತುಂಬಾ ಹೊತ್ತು ಇದ್ದಾಗ ನಿಮಗೆ ಉಸಿರಾಟದ ತೊಂದರೆ ಕಾಣಿಸಬಹುದು.
 • ಅಲರ್ಜಿಯಂತಹ ಸಮಸ್ಯೆಗಳು ಎದುರಾಗಬಹುದು
 • ಹೊಗೆಯಿಂದ ನಿಮ್ಮ ಮಗುವಿನ ಬೆಳವಣಿಗೆಗೆ ಮಾರಕವಾಗಬಹುದು. ಮಗುವಿನ ಮಿದುಳಿನ ಬೆಳವಣಿಗೆಗೆ ಪೆಟ್ಟಾಗಿ ಬುದ್ಧಿಮಾಂದ್ಯ ದಂತ ಸಮಸ್ಯೆ ಎದುರಾಗಬಹುದು.
 • ಪ್ರಸವದ ಸಮಸ್ಯೆ ಎದುರಾಬಹುದು
 • ಕಡಿಮೆ ತೂಕದ ಮಗುವಿನ ಜನನವಾಗಬಹುದು
 • ಅವಧಿ ಮಗುವಿನ ಜನನ ಆಗದಿರಬಹುದು
 • ಪಟಾಕಿಯಲ್ಲಿ ಸಿಡಿಸುವ ಶಬ್ದ 110 ಡೆಸಿಬೆಲ್ ಗಿಂತ ಹೆಚ್ಚಿದ್ದರೆ ನಿಮಗೆ ಕಿವುಡುತನ ಬರಬಹುದು. 85 ಡೆಸಿಬಲ್ ಗಿಂತ ಅಧಿಕ ಇದ್ದರೆ ಮಗುವಿನ ಕಾರಣವಾಗಬಹುದು.

 

ಮುಂಜಾಗೃತಾ ಕ್ರಮ

 • ನೀವು ಧರಿಸುವ ಉಡುಪು ನಿಮಗೆ ಸರಿಹೊಂದುತ್ತಿರಲಿ. ಕಾಟನ್ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಿ.
 • ಪಿಟಾಕಿಯನ್ನು ಬಳಸುವ ಬದಲು, ದೀಪವನ್ನು ಹೊತ್ತಿಸಿ ಮನೆಯೂ ನಂದಾದೀಪದಂತೆ ಇರಲಿ.
 • ಹಿರಿಯರ ಕಾಲಿಗೆ ಬಗ್ಗಿ ನಮಸ್ಕಾರ ಮಾಡುವ ಬದಲು, ಕೈಯಲ್ಲಿ ನಮಸ್ಕರಿಸಿ.
 • ಸದಾ ನಿಮ್ಮೊಂದಿಗೆ ಯಾರಾದರೂ ಜೊತೆಗಿರಲಿ.
 • ತುಂಬಾ ವೇಗವಾಗಿ ನಡೆಯುವ ಬದಲು ನಿಧಾನವಾಗಿ ನಡೆದಾಡಿ.
 • ನೆಲದಲ್ಲಿ ನೀರು ಅಥವಾ ಎಣ್ಣೆ ಚೆಲ್ಲಿದೆ ಎಂದು ಸ್ವತಹ ನೀವೇ ಪರಿಶೀಲಿಸಿಕೊಳ್ಳಿ.
#diwali
logo

Select Language

down - arrow
Personalizing BabyChakra just for you!
This may take a moment!