4 Nov 2021 | 1 min Read
Medically reviewed by
Author | Articles
ದೀಪಾವಳಿಯ ಸಂಭ್ರಮ ಪ್ರತಿ ಮನೆ ಮನೆಯಲ್ಲಿ ಮನೆಮಾಡಿರುತ್ತದೆ. ಮಕ್ಕಳಿರುವ ಮನೆಯಂತೂ ನಂದನವನ ವಾಗಿರುತ್ತದೆ. ದೀಪಾವಳಿ ಹತ್ತಿರ ಬರುತ್ತಿದ್ದ ಹಾಗೆ ಮನೆಯಲ್ಲಿ ಕಿರಿಯರಿಂದ ಹಿಡಿದು ಹಿರಿಯರವರೆಗೆ ಆಚರಣೆಯ ರೂಪುರೇಷೆಗಳು ರೆಡಿಯಾಗಿರುತ್ತದೆ. ಒಂದು ಹೊಸ ಬಟ್ಟೆ ಇರಬಹುದು, ಪಟಾಕಿಗಳ ಸಿಡಿತ ಇರಬಹುದು, ಬೆಳಗುವ ದೀಪ ಹೇಗಿರಬಹುದು, ಹಬ್ಬದ ಸಿಹಿತಿನಿಸು ಹಬ್ಬದ ಭೋಜನ ಇರಬಹುದು. ಒಟ್ಟಾರೆಯಾಗಿ ಹೇಳಬೇಕೆಂದರೆ ನನ್ನ ಮನೆಯ ಹಿರಿಯರಿಂದ ಹಿಡಿದು ಹಿರಿಯರವರೆಗೆ ಹೆಂಗಸರು ಅಜ್ಜಿ ತಾತಂದಿರು ಸೇರಿ ಸಂಭ್ರಮದಿಂದ ಸಂತೋಷಪಡುವ ಹಬ್ಬ. ಇದಕ್ಕಾಗಿ ದೀಪಾವಳಿ ಶಾಪಿಂಗ್ ಗಳು ಭರ್ಜರಿಯಾಗಿ ನಡೆಯುತ್ತದೆ. ನಿಮ್ಮ ಮನೆಯಲ್ಲಿ ಬದ್ದು ಮಕ್ಕಳಿದ್ದರಂತೂ ಆಚರಣೆಗೆ ಎಲ್ಲಿಯೇ ಇರುವುದಿಲ್ಲ.
ಮಕ್ಕಳಿರುವ ಮನೆಯಲ್ಲಿ ಆಚರಣೆ ಹೇಗಿರಬೇಕು?
ದೀಪಾವಳಿಯ ಸಂದರ್ಭ ಮಕ್ಕಳಿರುವ ಮನೆಗಳಲ್ಲಿ ಬಹಳಷ್ಟು ಮುಂಜಾಗ್ರತೆ ಅಗತ್ಯ. ಕೆಲವು ವರ್ಷಗಳಿಂದ ನಾವು ವೃತ್ತಪತ್ರಿಕೆಯಲ್ಲಿ ದೀಪಾವಳಿಯ ಮರುದಿನ ಪಟಾಕಿ ಸಿಡಿತದಿಂದ ಹಾನಿಗೊಳಗಾದ ಮಕ್ಕಳು ಅವರ ಕಣ್ಣು ಕಳೆದುಕೊಂಡ ಮಕ್ಕಳು ಎಂಬ ಶೀರ್ಷಿಕೆಯನ್ನು ಓದಿರುತ್ತೇವೆ. ಕಣ್ಣು ಅಮೂಲ್ಯವಾದ ಭಾಗ . ಕೇವಲ ಒಂದು ದಿನದ ಸಂಭ್ರಮಾಚರಣೆಗೆ ಜೀವನಪೂರ್ತಿ ದುಃಖ ಅನುಭವಿಸುವ ಪರಿಸ್ಥಿತಿ ನಮ್ಮದು ಮತ್ತು ನಮ್ಮ ಮಕ್ಕಳದು ಆಗಬಾರದಲ್ಲವೇ? ಅದಕ್ಕಾಗಿ ಪೋಷಕರಾದ ನೀವು ಕೆಲವು ಮುಂಜಾಗ್ರತೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಬ್ಬದ ಸಂಭ್ರಮಕ್ಕೆ ಮಕ್ಕಳಿಗೆ ಹೊಸ ಬಟ್ಟೆ, ಮನೆಯಲ್ಲಿ ಸಿಹಿ ತಿನಿಸುಗಳು, ಹಬ್ಬದ ಖಾದ್ಯವನ್ನು ತಯಾರಿಸಿ. ಹಬ್ಬದ ಸಂಭ್ರಮಾಚರಣೆಗೆ ಮಕ್ಕಳಿಗಾಗಿ ಕಿಟಕಿಯನ್ನು ಖರೀದಿಸುವಾಗ ಹೆಚ್ಚಿನ ಜಾಗೃತಿ ವಹಿಸಬೇಕು.
ದೀಪಾಳಿಯ ಸಂಭ್ರಮದ ಜೊತೆಗೆ ಆಗುವ ಅನಾಹುತಗಳೇ ಹೆಚ್ಚು. ದೀಪಾವಳಿ ಪ್ರತೀಯೊಬ್ಬರಿಗೆ ಬೆಳಕು ತರುವಂತಿರಬೇಕು. ಕೆಲವರಿಗೆ ಕತ್ತಲೆಯನ್ನು ತಂದಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಈ ದೀಪಾವಳಿಯ ಆಚರಣೆ ಮಾಡಿರಿ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.