ಸ್ಪೀಚ್  ಥೆರಪಿ

ಸ್ಪೀಚ್ ಥೆರಪಿ

5 Nov 2021 | 1 min Read

Medically reviewed by

Author | Articles

ಮಗುವಿನ ಬೆಳವಣಿಗೆಯ ಪ್ರಮುಖ ಘಟ್ಟ ಮಗುವಿನ ತೊದಲು ನುಡಿ. ಮಗು ಒಂದೊಂದೇ ಶಬ್ದ ಮಾತನಾಡಲು ಆರಂಭಿಸಿದಾಗ ಹಿರಿಯರನ್ನು ಅನುಕರಿಸುತ್ತದೆ. ಕೆಲವೊಂದು ಶಬ್ದಗಳು ತೊದಲುವಿಕೆ, ಕೆಲವೊಂದು ಶಬ್ದಗಳ ಸ್ಪಷ್ಟ ಉಚ್ಚಾರಣೆ, ಒಂದು ರೀತಿಯಲ್ಲಿ ಹೇಳಬೇಕೆಂದರೆ ಮಗು ಮೌಕಿಕ ಸಂವಹನ ನಡೆಸಲು ಆರಂಭಿಸುತ್ತದೆ. ಮಗುವಿನ ಸಂವಹನ ಅದು ಹುಟ್ಟಿದಾಗಿನಿಂದ ಆರಂಭವಾದರೂ, ಪದಬಳಕೆಯ ಸಂವಹನ ಮಗುವಿನ ಒಂದುವರೆ ವರ್ಷದಿಂದ ಎರಡೂವರೆ ಮೂರು ವರ್ಷದವರೆಗೆ ನಡೆಯುತ್ತದೆ. ಈ ಅವಧಿಯಲ್ಲಿ ಮಗುವು ಮಾತನಾಡಲು ಪ್ರಯತ್ನಿಸುತ್ತದೆ. ಕೆಲವು ತಂದೆ-ತಾಯಿಯರು ನನ್ನ ಮಗು ಮೂರು ವರ್ಷವಾದರೂ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಮನೆಯಲ್ಲಿಯೇ ಮಗುವಿನ ಮೊದಲ ಪಾಠಶಾಲೆ ಎಂಬಂತೆ, ಮಗು ಭಾಷೆಯ ಕಲಿಕೆಯ ಸಂವಹನ ನಡೆಸುವಾಗ, ಮನೆಯಲ್ಲಿರುವ ಸದಸ್ಯರ ಜೊತೆಗೆ ಮಾತನಾಡಲು ಪ್ರಯತ್ನಿಸುತ್ತದೆ. ಹಿಂದೆ ಅವಿಭಕ್ತ ಕುಟುಂಬ ಕಡೆ ಮಗು ಭಾಷೆಯನ್ನು ಕಲಿಯುವುದು ಆರಂಭಿಸುವಾಗ ಮನೆಯಲ್ಲಿರುವ ಸದಸ್ಯರೆಲ್ಲರೂ ಮಗುವಿನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದರು. ಇದರಿಂದ ಮಗು ಬಹುಬೇಗ ಮಾತನಾಡಲು ಕಲಿಯುತ್ತಿತ್ತು. ಆದರೆ ಇಂದು ಒಂಟಿ ಜೀವನ, ಕೇವಲ ಅಪ್ಪ-ಅಮ್ಮ ಮಗು ಇವರಿಗೆ ಮಾತ್ರ ಸೀಮಿತವಾದ ಕುಟುಂಬದಲ್ಲಿ ಮಗುವಿನೊಂದಿಗೆ ಮಾತನಾಡಲು ಸಮಯವೇ ಇರುವುದಿಲ್ಲ. ಇದಕ್ಕೆ ಧಾವಂತದ ಜೀವನ, ನಗರದ ಸಂದೇಶದಲ್ಲಿ ಒಗ್ಗಿಹೋದ ಜೀವನಶೈಲಿ ಕಾರಣ ತಂದೆ-ತಾಯಿ ಜೊತೆಗೆ ಸರಿಯಾದ ಸಂವಾದ ನಡೆಯದಿದ್ದರೆ, ಮಗುವು ಮಾತನಾಡಲು ವಿಳಂಬ ಮಾಡುತ್ತದೆ. ಕೆಲವೊಂದು ವೈದ್ಯಕೀಯ ಸಮಸ್ಯೆಯಿಂದಲೂ ಕೂಡ ಮಕ್ಕಳು ಮಾತನಾಡಲು ನಿಧಾನಿಸಬಹುದು.

ಸ್ಪೀಚ್ ಥೆರಪಿ ಎಂದರೇನು?

ಸ್ಪೀಚ್ ತೆರಪಿ ಎಂದರೆ ಮಾತು ಕಲಿಯದ ಮಕ್ಕಳಿಗೆ ಭಾಷೆಯ ಮುಖಾಂತರ ಮಾತನ್ನು ಕಲಿಸುವ ವಿಧಾನ ಅಥವಾ ತಂತ್ರ.

 

ಸ್ಪೀಚ್ ಡಿಸಾರ್ಡರ್ ವಿಧಗಳು

ಆರ್ಟಿಕ್ಯುಲೇಷನ್ ಡಿಸಾರ್ಡರ್:- ಮಗು ಮಾತನಾಡಿದರು ಶಬ್ದದ ಉಚ್ಚರಣೆ ಸರಿಯಾಗಿ ಮಾಡುವುದಿಲ್ಲ. ಆರಂಭಿಕವಾಗಿ ಕಲಿಕೆಯ ಸಮಯದಲ್ಲಿ ಇದು ತೊಂದರೆ ಎನಿಸುವುದಿಲ್ಲ. ಆದರೆ ಸರಿಯಾಗಿ ಮಾತನಾಡಲು ಕಲಿತ ಮಗುವಿನಲ್ಲಿ ಈ ಸಮಸ್ಯೆ ಎದುರಾದರೆ, ಕೇಳುವವರಿಗೆ ಯಾವ ಶಬ್ದದ ಉಚ್ಚಾರಣೆಯನ್ನು ಮನದಟ್ಟಾಗು ವುದಿಲ್ಲ. ಅದನ್ನು ಆರ್ಟಿಕ್ಯುಲೇಷನ್ ಡಿಸಾರ್ಡರ್ ಎಂದು ಹೇಳಬಹುದು.

ಫ್ಲುಎನ್ಸಿ ಡಿಸಾರ್ಡರ್:- ಮಗು ಮಾತನಾಡುವಾಗ ಮಾತಿನಲ್ಲಿ ನಿರಂತರತೆ ಇರುವುದಿಲ್ಲ. ಕೆಲವುಸಲ ಶಬ್ದದ ಆರಂಭದಲ್ಲಿ ಎರಡು ಮೂರು ಸಲ ಒಂದೇ ಶಬ್ದವನ್ನು ಪುನರಾವರ್ತಿಸಿ ಮುಂದುವರಿಸುವುದು. ಮಾತು ಆರಂಭ ಮಾಡುವಾಗಲೂ ತುಂಬಾ ಕಷ್ಟ ಪಡುವ ರೀತಿಯಲ್ಲಿ ಇರುತ್ತದೆ. ಇದನ್ನ ಫ್ಲುಎನ್ಸಿ ಡಿಸೈನರ್ಸ್ ಎಂದು ಕರೆಯುತ್ತಾರೆ.

ವಾಯ್ಸ್ ಡಿಸಾರ್ಡರ್:- ಕೆಲವು ಶಬ್ದಗಳು ಮಾತನಾಡುವಾಗ ನಂಬಿಕೊಂಡು ಮಾತನಾಡುತ್ತಾರೆ. ಅಂದರೆ ಶಬ್ದ ಅಪೂರ್ಣವಾಗಿ ಇರುತ್ತದೆ.

 

ಸ್ಪೀಚ್ ಥೆರಪಿ ಯಾರಿಗೆ ಬೇಕು?

 • ಕೆಲವು ಮಕ್ಕಳಿಗೆ ಸರಿಯಾಗಿ ಕೇಳಿಸಿಕೊಳ್ಳಲು ಸಾಧ್ಯವಿಲ್ಲ
 • ಶಬ್ದದ ಗ್ರಹಿಕೆಯ ಸಮಸ್ಯೆ ಇರುವ ಮಕ್ಕಳಿಗೆ , ಏಕಾಗ್ರತೆಯ ಸಮಸ್ಯೆ ಇರುತ್ತದೆ
 • ಮಾತನಾಡಲು ಸಂಬಂಧಪಟ್ಟ ಅಂಗಗಳು ಬಲಹೀನವಾಗಿರುತ್ತವೆ.
 • ಸೀಳು ತುಟಿ ಅಥವಾ ಕಿರುನಾಲಿಗೆ ಸಮಸ್ಯೆ ಇರುವವರಿಗೆ ಮಾತನಾಡಲು ಕಷ್ಟ
 • ನಿರರ್ಗಳವಾಗಿ ಮಾತನಾಡುವ ಸಮಸ್ಯೆ ಇರುವ ಮಕ್ಕಳಿಗೆ
 • ಶಬ್ದದ ಉಚ್ಚಾರಣೆ ಸರಿಯಾಗಿ ಮಾಡಲು ತಿಳಿಯದೆ ಇರುವವರಿಗೆ
 • ಉಸಿರಾಟದ ಸಮಸ್ಯೆ ಇರುವವರಿಗೆ
 • ಬುದ್ದಿಮಾಂದ್ಯ ಮಕ್ಕಳಿಗೆ
 • ಮೆದುಳಿನಲ್ಲಿ ಸಮಸ್ಯೆ ಇರುವ ಮಕ್ಕಳಿಗೆ
 • ಆಹಾರ ಸೇವಿಸುವುದನ್ನು ಅಗಿಯಲು ತಿಳಿಯಾದ ಮಕ್ಕಳಿಗೆ
 • ತೊದಲು ಮಾತನಾಡುವವರಿಗೆ.

ಈ ಮೇಲಿನ ಎಲ್ಲಾ ಸಮಸ್ಯೆ ಇರುವವರಿಗೆ ಸ್ಪೀಚ್ ಥೆರಪಿಯನ್ನು ನೀಡಲಾಗುವುದು.

 

ಪೋಷಕರ ಪಾತ್ರ

ಮಗುವಿನಲ್ಲಿ ಮಾತನಾಡಲು ಸಮಸ್ಯೆ ಇರುವಾಗ ಪೋಷಕರು ಅದರ ಬಗ್ಗೆ ನಿಗಾ ವಹಿಸಬೇಕು. ಮಗು ಯಾವಾಗ ಮಾತನಾಡಲು ತಡಕಾಡುವುದು, ಮೊದಲು ಮಾತನಾಡುತ್ತಲೇ ಇರುವುದು, ಸರಿಯಾಗಿ ಕೇಳಿಸಿಕೊಳ್ಳದೆ ಇರುವುದು, ಮಾತನಾಡುವಾಗ ಶಬ್ದಕ್ಕೆ ತಡಕಾಡುವುದು ಈ ಎಲ್ಲಾ ಸಮಸ್ಯೆಯನ್ನು ಗಮನಿಸಬೇಕಾಗುತ್ತದೆ. ಸರಿಯಾದ ವಯಸ್ಸಿನಲ್ಲಿ ಮಗು ಮಾತನಾಡಲು ಆರಂಭಿಸಲು ಇದ್ದಾಗಲೂ ಪೋಷಕರು ಮಗುವನ್ನು ತೆರಪಿಸ್ಟ್ ಬಳಿಗೆ ಕರೆದುಕೊಂಡು ಹೋಗಬೇಕು. ಕೆಲವು ತಿಂಗಳುಗಳ ತರಬೇತಿ ನಂತರ ಮಗು ಮಾತನಾಡಲು ಚೆನ್ನಾಗಿ ಕಲಿಯುತ್ತದೆ. ಮಗುವನ್ನು ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ, ಅವರ ಚಟುವಟಿಕೆ ತಮ್ಮ ಮಗುವಿನ ಚಟುವಟಿಕೆಗೆ ನೋಡಿದಾಗ ಪೋಷಕರಿಗೆ ಇದು ಗಮನಕ್ಕೆ ಬರುತ್ತದೆ. ಆಗ ತಕ್ಷಣ ನುರಿತ ತಜ್ಞರನ್ನು ಭೇಟಿ ಮಾಡಿರಿ.

 

ತಜ್ಞರಿಂದ ತರಬೇತಿ

ನಿಮ್ಮ ಮಗುವನ್ನು ನೀವು ನುರಿತ ತಜ್ಞರೊಂದಿಗೆ ಭೇಟಿ ಮಾಡಿಸಿ ಮಗುವಿನ ಸಮಸ್ಯೆಯನ್ನು ಹೇಳಿಕೊಂಡರೆ , ತಜ್ಞರು ಮಗುವಿಗೆ ಸಮರ್ಪಕವಾದ ತರಬೇತಿ ನೀಡಲು ಮುಂದಾಗುತ್ತಾರೆ. ಅದಕ್ಕಾಗಿ ಅವರ ಬಳಿ ಹಲವು ರೀತಿಯ ಹಂತಗಳ ತಂತ್ರಜ್ಞಾನಗಳಿವೆ. ಮಗುವಿಗೆ ಮಾತು ಬರಲಿಲ್ಲ ಅಥವಾ ಮಾತನಾಡಲು ಕಷ್ಟವಾಗುತ್ತಿದೆ ಎಂಬ ಕಳವಳ ಪಡಬೇಡಿ. ಥೆರಪಿಸ್ಟ್ ಮಾಡುವ ವಿಧಾನ ಈ ಕೆಳಗಿನಂತಿದೆ.

ಭಾಷೆಯ ಕಲಿಕೆ:- ತರಬೇತಿಯ ಪರಿಣಿತರು ಮಗುವಿನೊಂದಿಗೆ ಮಾತನಾಡುವ ಮೂಲಕ ಮಗುವನ್ನು ಮಾತನಾಡಲು ಪ್ರೇರೇಪಿಸುತ್ತಾರೆ. ಮಗುವಿನೊಂದಿಗೆ ಆಟವಾಡುತ್ತಾ ಕೆಲವು ಪ್ರಶ್ನೆಗಳನ್ನು ಕೇಳುತ್ತಾ ಮಗುವನ್ನು ಸಂವಹನಕ್ಕೆ ಎಳೆಯುತ್ತಾರೆ. ಕೆಲವು ಚಿತ್ರಗಳು, ಪುಸ್ತಕಗಳು, ವಸ್ತುಗಳು ಅಥವಾ ಟಿವಿ ಯನ್ನು ತೋರಿಸಿ ಅದನ್ನು ಮಾಡುವ ವಿಡಿಯೋವನ್ನು ತೋರಿಸಿ ಮುಕ್ತವಾಗಿ ಮಾತನಾಡಲು ಪ್ರೇರೇಪಿಸುತ್ತಾರೆ.

ಆಟ್ರಿಕ್ಯುಲೇಷನ್ ಥೆರಪಿ:- ಶಬ್ದವನ್ನು ಮಾತನಾಡಲು ಶಬ್ದದ ಉತ್ಪತ್ತಿ ಹೇಗೆ ಎಂಬುದನ್ನು ಪರಿಣಿತರು ಮಗುವಿಗೆ ತಿಳಿಸಿಕೊಳ್ಳುತ್ತಾರೆ. ಪಠ್ಯದ ಮೂಲಕ ಮಗುವಿಗೆ ಪಾಠ ಹೇಳಿಕೊಡುತ್ತಾ, ಹೊರಗಡೆ ಆಟವಾಡುತ್ತಾ ಮಗುವಿಗೆ ಶಬ್ದದ ಗ್ರಹಿಕೆ ಮತ್ತು ಶಬ್ದವನ್ನು ಉಚ್ಚರಿಸುವ ರೀತಿಯನ್ನು ಹೇಳಿಕೊಡಲಾಗುವುದು.

ಬಾಯಿಗೆ ವ್ಯಾಯಾಮ:- ಮಗು ಮಾತನಾಡಲು ಸಂಬಂಧಪಟ್ಟ ಬಾಯಿಯ ಅವಯವಗಳನ್ನು ವಿವಿಧ ರೀತಿಯ ವ್ಯಾಯಾಮದ ಮೂಲಕ ಬಲಪಡಿಸಲಾಗುವುದು. ಇದಕ್ಕೆ ತರಬೇತಿದಾರರು ಮಗುವಿಗೆ ಮೊದಲು ಊಟ ಮಾಡುವುದು ಆಹಾರವನ್ನು ಜಗಿಯುವ ಕ್ರಮವನ್ನು ಹೇಳಿಕೊಡುತ್ತಾರೆ. ಬಿಸಿ ಆಹಾರ ತಣ್ಣಗಿನ ಆಹಾರ ನೀರನ್ನು ಕುಡಿಯುವುದು ಇದೇ ರೀತಿ ಹಲವಾರು ರೀತಿಯ ವಿವಿಧ ಬಗೆಯ ಆಹಾರಗಳನ್ನು ಹೇಗೆ ಬಾಯಿಯಲ್ಲಿ ಜಗಿಯುವುದು ಮತ್ತು ಸೇವಿಸುವುದು ಎಂಬುದನ್ನು ಅರಿವು ಮೂಡಿಸಲಾಗುವುದು.

ಇವೇ ಮುಂತಾದ ತೆರಪಿಯ ಮೂಲಕ ಮಕ್ಕಳಲ್ಲಿ ಮೌಖಿಕ ಸಂವಹನವನ್ನು ಉತ್ತೇಜನ ನೀಡಲಾಗುತ್ತದೆ. ಇದರಿಂದ ಮಗುವು ಮಾತನಾಡುವುದು ಮಾತ್ರವಲ್ಲ ಶಿಸ್ತು ಮತ್ತು ಸಮರ್ಪಕವಾದ ಗ್ರಹಿಕೆ ಮತ್ತು ಏಕಾಗ್ರತೆಯನ್ನು ಕಲಿಯುತ್ತದೆ.

#parentinggyaan #childbehaviour

A

gallery
send-btn

Related Topics for you