ಕೂದಲು ಉದುರುವಿಕೆ

ಕೂದಲು ಉದುರುವಿಕೆ

6 Nov 2021 | 1 min Read

Medically reviewed by

Author | Articles

ಪ್ರಸವದ ನಂತರ ಬಹಳಷ್ಟು ಮಹಿಳೆಯರಲ್ಲಿ ಕಾಡುವ ಬಹುದೊಡ್ಡ ಸಮಸ್ಯೆ ಕೂದಲು ಉದುರುವಿಕೆ. ಕೇವಲ ಕೂದಲು ಉದುರುವಿಕೆ ಎಂದು ನಾವು ಮೂಗು ಮುರಿಯುತ್ತೇವೆ. ಆದರೆ ಕೂದಲು ಉದುರುವಿಕೆ ಎಷ್ಟು ದೊಡ್ಡ ಸಮಸ್ಯೆಯಾಗಿ ಮಾರ್ಪಾಡು ಆಗಬಲ್ಲದು ಎಂದರೆ ಕೆಲವರಿಗೆ ಬೊಕ್ಕತಲೆ ನಿರಂತರವಾಗಿರುತ್ತದೆ. ಕೂದಲಿಗೆ ಜೀವಂತ ಇಲ್ಲದೇ ಇದ್ದರೆ ಸದಾ ಕೂದಲು ಉದುರುತ್ತಿದ್ದರೆ ನಿಮ್ಮ ಮುಖದ ಸೌಂದರ್ಯ ಕೂಡ ಹಾಳಾಗುತ್ತದೆ. ಒಂದು ಹೆಣ್ಣಿನ ಸೌಂದರ್ಯ ಆಕೆಯ ಕೂದಲಿನಲ್ಲಿ ಇರುತ್ತದೆ ಎಂಬುದು ಜನ ವಾಡಿಕೆಯ ಮಾತಿನಲ್ಲಿದೆ. ಕೆಲವರಿಗೆ ಕೂದಲು ಉದುರುವಿಕೆ ಸಾಮಾನ್ಯ ಸಂಗತಿಯಾಗಿದೆ. ಆದರೆ ನೆನಪಿರಲಿ ನಿಧಾನವಾಗಿ ಕೂದಲು ಉದುರುವ ಕೊನೆಗೆ ಬೊಕ್ಕತಲೆ ಆಗಬಹುದು. ಇದು ಹೆಚ್ಚಾಗಿ ಪ್ರಸವದ ನಂತರ ಏಕೆ ಕಾಣಿಸಿಕೊಳ್ಳುತ್ತದೆ ಎಂಬುದು ಹಲವರ ಪ್ರಶ್ನೆ ಇರಬಹುದು. ಪ್ರಸವದ ಸಮಯದಲ್ಲಿ ಮತ್ತು ಪ್ರಸವಕ್ಕೆ ಮುಂಚೆ ದೇಹದಲ್ಲಿ ವ್ಯಯವಾಗುವ ಪೋಷಕಾಂಶದಿಂದಾಗಿ ಪ್ರಸವದ ನಂತರ ದೇಹಕ್ಕೆ ಪೋಷಕಾಂಶದ ಕೊರತೆ ಏರ್ಪಟ್ಟಾಗ ಪ್ರತಿಯೊಬ್ಬರಿಗೆ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಕೂದಲು ಉದರುವಿಕೆ ಕೇವಲ ಪ್ರಸವ ನಂತರದ ಮಹಿಳೆಯರಿಗೆ ಮಾತ್ರವಲ್ಲ ಕೂದಲು ಉದುರುವ ಸಮಸ್ಯೆ ಸಮಸ್ಯೆ ಎದುರಾಗಿದೆ.

ತಲೆಯಲ್ಲಿ ಕೂದಲಿದ್ದರೆ ಆತ್ಮವಿಶ್ವಾಸ, ಸಕಾರಾತ್ಮಕ ಮನೋಭಾವ ಬೆಳೆಯುತ್ತದೆ. ನಿಮ್ಮ ನಿಲುವನ್ನು ಪ್ರತಿನಿಧಿಸುವುದು ಕೂದಲಿನ ಆಕರ್ಷಣೆ. ಒಂದು ವೇಳೆ ಕೂದಲು ಕಳೆದುಕೊಂಡರೆ, ಆತ್ಮವಿಶ್ವಾಸ ಕುಗ್ಗಿತ್ತದೆ. ಸ್ವಯಂ ಪ್ರೇರಣೆ, ಸಕರಾತ್ಮಕ ಆಲೋಚನೆ ಇದು ತೊಡಕಾಗುತ್ತದೆ. ಬನ್ನಿ ಇದರ ಬಗ್ಗೆ ಕುಲಂಕುಶವಾಗಿ ಅಧ್ಯಯನ ನಡೆಸೋಣ.

ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು

1. ಒತ್ತಡ- ನಿಮ್ಮ ಕೂದಲು ಉದುರುವಿಕೆಗೆ ಇದು ಒಂದು ಕಾರಣ ಆಗಬಲ್ಲದು ಎಂದು ಊಹಿಸಿದ್ದೀರ. ಒತ್ತಡದ ಕಾರಣದಿಂದಾಗಿ ಬಹಳಷ್ಟು ಸಮಸ್ಯೆಗಳು ಉದ್ಭವವಾಗುತ್ತದೆ. ಅದು ಆರೋಗ್ಯದ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಸಾಮಾಜಿಕ ಸಮಸ್ಯೆಯ ಮೂಲ ಕಾರಣವಾಗಿದೆ. ಒತ್ತಡವು ನಿಮ್ಮ ಕೂದಲು ಉದುರುವಿಕೆಗೆ ಮೂಲಕಾರಣ. ಆದರೆ ಒತ್ತಡ ಒಂದೇ ಕೂದಲುದುರುವಿಕೆಗೆ ಶಾಶ್ವತ ಕಾರಣವಲ್ಲ. ಒತ್ತಡದಿಂದಾಗುವ ಸಮಸ್ಯೆಯನ್ನು ಪರಿಹರಿಸಬಹುದು.

2. ಕೂದಲಿನ ಮೇಲೆ ವಿನ್ಯಾಸದ ಪ್ರಯೋಗ- ಇಂದು ಮಾರುಕಟ್ಟೆಯಲ್ಲಿ ಬಹಳಷ್ಟು ಕಂಪೆನಿಗಳ ಕೂದಲಿನ ಶಾಂಪುಗಳು ಲಭ್ಯವಿದೆ. ಅದರ ಜೊತೆಗೆ ಹೇರ್ ಸ್ಪ್ರೇ, ಜೆಲ್ , ಹೇರ್ ಆಯಿಲ್ , ಕಂಡಿಷ್ನರ್ ಸಿಗುತ್ತವೆ. ಕೆಲವರು ಪ್ರತಿ ತಿಂಗಳು ವಿಧವಿಧ ಬಗೆಯ ಕಂಪನಿಗಳ ಹೇರ್ ಶ್ಯಾಂಪೂಗಳು, ಕಂಡೀಶನರ್ ಗಳನ್ನು ಉಪಯೋಗಿಸುತ್ತಾರೆ. ಇದರ ನೇರವಾದ ಪರಿಣಾಮ ಕೂದಲಿನ ಮೇಲಾಗುತ್ತದೆ. ಬರಬರುತ್ತಾ ಕೂದಲು ಕಳೆಗುಂದಿದ್ದ ಹಾಗೆ, ಕೂದಲು ಉದುರುವಿಕೆ, ಕೂದಲಿನ ತುದಿಯಲ್ಲಿ ಸೀಳು, ಇವೇ ಮುಂತಾದ ಸಮಸ್ಯೆಗಳನ್ನು ಕಾಣಬಹುದು. ಕೂದಲಿನ ಬುಡದಲ್ಲಿ ಕೂದಲು ಗಟ್ಟಿಯಾಗಿ ನಿಲ್ಲದೆ ಅದರ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ವಿಪರೀತವಾದ ರಾಸಾಯನಿಕ ಬಳಕೆಯಿಂದಾಗಿ ಕೂದಲಿನ ಬುಡ ಘಾಸಿಗೊಳ್ಳುತ್ತದೆ.

3. ಪೋಷಕಾಂಶದ ಕೊರತೆ:- ನೀವು ಸೇವಿಸುವ ಆಹಾರದಲ್ಲಿ ಯು ಪೋಷಕಾಂಶದ ಕೊರತೆ ಉಂಟಾದಾಗ ಹೀಗಾಗುತ್ತದೆ. ಪ್ರೊಟೀನ್ ಯುಕ್ತ ಆಹಾರದ ಕೊರತೆ, ಆಹಾರದಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್ ಬಿ ಕಡಿಮೆಯಾದಾಗ ಕೂದಲು ಉದುರುತ್ತದೆ. ಏಕೆಂದರೆ ನಿಮ್ಮ ಕೂದಲಿಗೆ ಬೇಕಾಗುವ ಪೋಷಕಾಂಶ ಸಿಗದೇ ಇದ್ದಾಗ ಆರಂಭದಲ್ಲಿ ಕೂದಲು ತೆಳ್ಗಗಾಗುತ್ತದೆ. ಹೀಗಾಗಿ ಕೂದಲಿನ ಬುಡಕ್ಕೆ ಶಕ್ತಿ ಇಲ್ಲದೇ ಕೂದಲು ಸರಿಯಾಗಿ ಬೆಳೆಯುವುದಿಲ್ಲ. ಕೂದಲಿನ ಉದುರುವಿಕೆ ಸಮಸ್ಯೆಗೆ ಮೊದಲು ಕೂದಲಿನ ಬುಡವನ್ನು ಗಟ್ಟಿಗೊಳಿಸಬೇಕು. ಅದಕ್ಕಾಗಿ ಪೋಷಕಾಂಶ ಆಹಾರ ಸೇವನೆ ಮಾಡಿರಿ.

4. ವಯಸ್ಸಿನ ಕಾರಣ:- ಕೂದಲುದುರುವಿಕೆಗೆ ಮತ್ತೊಂದು ಮೂಲ ಕಾರಣ ದೇಹಕ್ಕೆ ವಯಸ್ಸಾಗುವುದು. ಕೂದಲಿನ ಬುಡದಲ್ಲಿ ಕೋಶಗಳಿಗೆ ವಯಸ್ಸಾಗುತ್ತಿದ್ದಂತೆ ಕೂದಲು ಬೆಳೆಯುವುದಿಲ್ಲ. ಇದರ ಪರಿಣಾಮವಾಗಿ ಕೂದಲು ಮೊಟಕಾಗುತ್ತದೆ . ಜೊತೆಗೆ ಕೂದಲು ತೆಳ್ಳಗಾಗುವುದು. ಕೂದಲು ಬೆಳ್ಳಗಾಗುವುದು ಕೂಡ ಇದೇ ಕಾರಣಕ್ಕೆ. ಕೂದಲು ಉದುರುವಿಕೆಯನ್ನು ತಡೆಗಟ್ಟಲು ಕೂದಲಿನ ನಾರಿನ ಅಂಶ ( ಕೆಟಜೆನ್) ವನ್ನು ಹೊಸ ಬೆಳವಣಿಗೆ ಹೊಂದುವ ಕೂದಲಿನ ಫಾಲಿಕಲ್ (ಅನಜೆನ್) ನಿಂದ ಮರು ಜೋಡಿಸಬೇಕು. ಕೂದಲಿನ ಮರುಜೋಡಣೆ ಯಿಂದ ಕೂದಲು ಉದುರುವಿಕೆಯನ್ನು ತಪ್ಪಿಸಬಹುದು. ಕೆಲವೊಂದು ಮನೆಮದ್ದಿನ ಮೂಲಕವೂ ಕೂದಲುದುರುವಿಕೆ ನಿವಾರಿಸಿ ಕೂದಲಿನ ಬೆಳವಣಿಗೆಯನ್ನು ಮಾಡಬಹುದು.

5. ಔಷಧೀಯ ಬಳಕೆ:- ಕೆಲವು ಅಲೋಪತಿ ಔಷಧಿಯನ್ನು ಬಳಸಿದ ನಂತರ ಕೆಲವರಿಗೆ ಕೂದಲು ಉದುರುವುದು ಕಾಣಿಸಿಕೊಳ್ಳುತ್ತದೆ. ಔಷಧೀಯ ಪರಿಣಾಮ ಶಾಶ್ವತವಲ್ಲ. ಇದನ್ನು ನಿವಾರಿಸಬಹುದು. ಹೇರ್ ಫಾಲಿಕಲ್ ಮಲಗುವ ಸಮಸ್ಯೆಯಿಂದಾಗಿ ಕೂದಲು ಉದರಕ್ಕೆ ಹೇರಳ ಪ್ರಮಾಣದಲ್ಲಿ ಆಗುತ್ತದೆ. ಇಲ್ಲಿ ಹೇರ್ ಪೋಲಿಕಲ್ಲನ್ನು ಬೆಳೆಸುವುದು ಸ್ವಲ್ಪ ಸಮಯ ಹಿಡಿಸಬಹುದು.

6. ಡ್ಯಾಂಡ್ರಫ್ ಸಮಸ್ಯೆ:- ಕೂದಲುದುರುವಿಕೆಗೆ ಮತ್ತೊಂದು ಮುಖ್ಯ ಕಾರಣ ತಲೆಯಲ್ಲಿ ಹೊಟ್ಟು ಸೇರಿಕೊಳ್ಳುವುದು. ಕೆಲವರಿಗೆ ದೂಳಿನ ಸಂಪರ್ಕಕ್ಕೆ ಬಂದಾಗ ತಲೆಹೊಟ್ಟಿನ ಸಮಸ್ಯೆ ಆರಂಭವಾಗುತ್ತದೆ. ಕರೆ ಹುಟ್ಟುವುದು ಕತ್ತಿನ ಭಾಗ ಮುಖದಲ್ಲಿ ಸಣ್ಣ ಸಣ್ಣ ಅಲರ್ಜಿಯಂತ ನವೆಗಳಾಗುತ್ತವೆ.

ಕೂದಲು ಉದುರುವಿಕೆಯನ್ನು ತಡೆಗಟ್ಟುವುದು.

1. ಕೂದಲಿಗೆ ಎಣ್ಣೆಯಿಂದ ಮಸಾಜ್ – ವಾರಕ್ಕೆ ಎರಡು ಬಾರಿ ಕೂದಲಿನ ಬುಡಕ್ಕೆ ಎಣ್ಣೆಯನ್ನು ಲೇಪಿಸಿ. ಇದರಿಂದ ಕೂದಲು ಕಂಡೀಶನರ್ ಆಗಿ ಇರುವುದಲ್ಲದೆ ಕೂದಲು ಉದುರುವುದು ನಿಲ್ಲುತ್ತದೆ. ಕೊಬ್ಬರಿ ಎಣ್ಣೆ ಸ್ವಲ್ಪ ಜಿಗುಟು ಇರುತ್ತದೆ. ಆದ್ದರಿಂದ ಎಳ್ಳೆಣ್ಣೆ , ಆಲಿವ್ ಆಯಿಲ್ ಬಳಸಬಹುದು.

2. ಕೂದಲಿಗೆ ಶಾಂಪೂ – ಮನೆಯಲ್ಲಿಯೇ ತಯಾರಿಸಿದ ಅಥವಾ ಕೆಲವು ರಾಸಾಯನಿಕ ಮುಕ್ತ ಶಾಂಪೂ ಬಳಸಿರಿ. ದಾಸವಾಳದ ಸೊಪ್ಪು, ಭೃಂಗರಾಜ, ಗುಲಾಬಿಯ ಹೂವು, ಕರಿಬೇವಿನ ಸೊಪ್ಪು ಸೀಗೆಕಾಯಿ, ಅಂಟುವಾಳ ಕಾಯಿ ಬಳಸಿ ಶಾಂಪೂ ಮನೆಯಲ್ಲಿಯೇ ತಯಾರಿಸಿ ಕೂದಲಿಗೆ ಹಚ್ಚಬಹುದು.

3. ಕೂದಲಿಗೆ ಪ್ಯಾಕ್ – ಮನೆಯಲ್ಲಿಯೇ ಅಡಿಗೆ ಮನೆಯಲ್ಲಿ ದೊರಕುವ ಸಾಮಗ್ರಿಯಿಂದ ಕೂದಲಿಗೆ ಪ್ಯಾಕ್ ತಯಾರಿಸಿ ಕೂದಲಿಗೆ ಹಚ್ಚಬಹುದು. ಇದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

4. ಕೂದಲಿಗೆ ಬಿಸಿನೀರು ಬಳಸದಿರಿ- ಹೆಚ್ಚು ಬಿಸಿ ಅಲ್ಲದ, ತಂಪು ಅಲ್ಲದ ನೀರನ್ನು ಕೂದಲಿಗೆ ಬಳಸಿರಿ. ಹೀಟರ್ ನಿಂದ ಕಾದ ನೀರಿಗೆ ಕೂದಲು ತುಂಬಾ ಉದುರುತ್ತದೆ. ಸ್ನಾನದ ನಂತರ ಹೇರ್ ಡ್ರೈಯರ್ ಬಳಸಿ ಕೂದಲನ್ನು ಒಣಗಿಸುವು ದನ್ನು ನಿಲ್ಲಿಸಿರಿ.

5. ಸೊಪ್ಪಿನ ಸೇವನೆ – ಆಹಾರದಲ್ಲಿ ಹೆಚ್ಚಾಗಿ ಸೊಪ್ಪು ಇರುವಂತೆ ನೋಡಿಕೊಳ್ಳಿ. ಹೆಚ್ಚಿನ ಪೋಷಕಾಂಶ ಸೊಪ್ಪಿನಲ್ಲಿ ಸಿಗುತ್ತದೆ. ಇದರಲ್ಲಿ ಕೂದಲಿಗೆ ಬೇಕಾಗುವ ಕಬ್ಬಿಣ, ಪ್ರೋಟಿನ್, ಸತು ಹೇರಳ ಪ್ರಮಾಣದಲ್ಲಿ ಸಿಗುತ್ತದೆ.

6. ಅಮೈನೋ ಆಸಿಡ್- ಕಾಳುಗಳಲ್ಲಿ, ಹಾಲಿನ ಉತ್ಪನ್ನ, ಮಾಂಸ ದಲ್ಲಿ ಸಿಗುತ್ತದೆ. ಇದನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.

7. ಮೊಟ್ಟೆ – ಪ್ರೋಟಿನ್ ಹೇರಳ ಪ್ರಮಾಣದಲ್ಲಿ ಮೊಟ್ಟೆಯಲ್ಲಿ ಇರುತ್ತದೆ. ಘಾಸಿಗೊಂಡ ಕೂದಲನ್ನು ಸರಿಪಡಿಸುವ ಸಾಮರ್ಥ್ಯ ಮೊಟ್ಟೆಗಿದೆ.

ಬಳಸಬೇಡಿ

  • ಅಮೈನೋ ಆಸಿಡ್ ಇರುವ ಹೇರ್ ಡೈ ಬಳಸಬೇಡಿ
  • ವಿವಿಧ ಶ್ಯಾಂಪೂ ಬಳಕೆ ಮಾಡಬೇಡಿ
  • ಒತ್ತೊತ್ತಾಗಿ ಇರುವ ಮತ್ತು ಗಟ್ಟಿಯಾಗಿರುವ ಬಾಚಣಿಗೆ ಉಪಯೋಗಿಸಬೇಡಿ.

#haircare

A

gallery
send-btn

Related Topics for you