ಮೂಡ್ ಸ್ವಿಂಗ್

ಮೂಡ್ ಸ್ವಿಂಗ್

6 Nov 2021 | 0 min Read

Medically reviewed by

Author | Articles

ನೀವು ಗರ್ಭ ಧರಿಸಿದ್ದರೆ ಅವಾಗವಾಗ ಮನಸ್ಸಿನ ಭಾವನೆ ಏರಿಳಿತವನ್ನು ಅನುಭವಿಸಿರುತ್ತೀರಿ. ಇದನ್ನೇ ಮೂಡ್ ಸ್ವಿಂಗ್ ಅಂತ ಕರೆಯುತ್ತಾರೆ. ಗರ್ಭಾವಸ್ಥೆಯಲ್ಲಿ ಇದು ಸಾಮಾನ್ಯ ಸಂಗತಿ. ಕೆಲವೊಮ್ಮೆ ವಿಪರೀತ ಒತ್ತಡಕ್ಕೆ ಸಿಲುಕಿದಂತೆ ಇರುತ್ತೀರಿ. ಇನ್ನು ಕೆಲವೊಮ್ಮೆ ತುಂಬಾ ಖಿನ್ನತೆಯಿಂದ ದುಃಖಭರಿತ ಭಾವದಲ್ಲಿ ಇರುತ್ತೀರಿ. ಇದೇ ಭಾವನೆ ನಿಮ್ಮನ್ನು ಬಹಳ ಹೊತ್ತು ಆಲೋಚನೆಗೆ ದೂಡುತ್ತದೆ. ಪದೇ ಪದೇ ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳುತ್ತೀರಿ. ನಾನು ಒಳ್ಳೆಯ ಅಮ್ಮ ಆಗುತ್ತೇನಾ, ಆಸ್ಪತ್ರೆ ಖರ್ಚು ಮನೆಯ ಕರ್ಚು ಮಗು ಪ್ರಸವದ ನಂತರ ಮಗುವಿನ ಕರ್ಚು ಇದನ್ನೆಲ್ಲ ನಮ್ಮ ಮನೆಯಲ್ಲಿ ಹೊಂದಾಣಿಕೆ ಮಾಡಲು ಸಾಧ್ಯವೇ? ಹುಟ್ಟುವ ಮಗು ಆರೋಗ್ಯವಾಗಿರುತ್ತದಯೇ? ಮಗುವಿನ ಆಗಮನಕ್ಕೆ ನಾನು ಸರಿಯಾದ ಸಿದ್ಧತೆ ಮಾಡಿಕೊಂಡಿದ್ದೇನೆಯೇ ಅಥವಾ ಕೆಲವೊಮ್ಮೆ ಆಸ್ಪತ್ರೆಗೆ ತಪಾಸಣೆಗೆ ಹೋಗುವಾಗ ವಿಪರೀತ ಹೆದರಿಕೆಯಾಗುವುದು , ವಿಪರೀತ ಬೆವರುವುದು, ಕೈ ಕಾಲು ನಡುಕ, ಮಾತನಾಡುವಾಗ ತೊದಲುವಿಕೆ ಎಲ್ಲ ರೀತಿಯ ಸಮಸ್ಯೆಗಳು ಕಾಡಬಹುದು. ಒಂದು ರೀತಿಯಲ್ಲಿ ಹೇಳಬೇಕೆಂದರೆ ನಾನೇನು ತಪ್ಪು ಮಾಡಿದ್ದೇನೆ ಎಂಬ ಭಾವನೆ ಆಗಾಗ ನಿಮ್ಮನ್ನು ಕಾಡುತ್ತದೆ. ಇದೇ ಭಾವನೆ ಮುಂದೆ ಬೆಳೆದು ಖಿನ್ನತೆಯಂತಹ ಸಮಸ್ಯೆಗೆ ಕಾರಣವಾಗಬಹುದು.

ಗರ್ಭಧಾರಣೆ ಎಂಬುವುದು ನಿಮ್ಮ ಜೀವನದ ಶೈಲಿಯನ್ನು ಬದಲಾಯಿಸುವ ಒಂದು ಪ್ರಮುಖ ಘಟ್ಟ. ಅದು ಮಾನಸಿಕವಾಗಿಯೂ ಬದಲಾವಣೆಯನ್ನು ಕಾಣಬಹುದು ಅಥವಾ ದೈಹಿಕವಾಗಿ ಬದಲಾವಣೆಯನ್ನು ಕಾಣಬಹುದು. ಅದಕ್ಕಾಗಿ ಗರ್ಭಧಾರಣೆಯ ಮುಂಚಿತವಾಗಿಯೇ ನೀವು ನಿಮ್ಮನ್ನು ಸಿದ್ಧಗೊಳಿಸಬೇಕಾಗುತ್ತದೆ. ದೇಹದಲ್ಲಿ ಆಗುವ ಬದಲಾವಣೆಗಳು ಸಿದ್ಧರಿದ್ದಾರೆ ಮಾನಸಿಕ ಬದಲಾವಣೆಯೂ ಕೂಡ ಸಕರಾತ್ಮಕವಾಗಿ ರೂಪುಗೊಳ್ಳುತ್ತದೆ. ಹೀಗಿದ್ದಾಗ ಯಾವುದೇ ಚಿಂತೆ ನಿಮ್ಮನ್ನು ಕಾಡುವುದಿಲ್ಲ.

ಗರ್ಭಾವಸ್ಥೆಯಲ್ಲಿ ಮೂಡ್ ಸ್ವಿಂಗ್ ಆದಾಗ ;

 • ತಲೆಸುತ್ತುವುದು
 • ವಿಪರೀತ ಕಿರಿಕಿರಿ ಆಗುವುದು
 • ಸುಮ್ಮನೆ ಕೋಪ ಬರುವುದು
 • ಯಾರು ಮಾತನಾಡಿಸಿದರೂ ಉಸಿರುಗಟ್ಟಿದ ಹಾಗೆ ಆಗುವುದು
 • ಒಂಟಿಯಾಗಿ ಇರಲು ಬಯಸುವುದು
 • ವಿಪರೀತ ಅಳುವುದು.
 • ಯಾರಾದರೂ ಮಾತನಾಡಿಸದೇ ಇದ್ದರೆ ಅವರ ಬಗ್ಗೆ ವಿಪರೀತ ಆವೇಶಕ್ಕೆ ಒಳಗಾಗಿ ಅವರ ಜೊತೆ ಜಗಳವಾಡುವುದು.
 • ಕೆಲವೊಮ್ಮೆ ಖಿನ್ನತೆ ವಿಪರೀತಕ್ಕೆ ಹೋಗಿ ಸಾಯಬೇಕು ಎನಿಸುವುದು. ಸಪ್ಪೆ ಮೋರೆ ಹಾಕಿ ಕೂರುವುದು.

ಮೂಡ್ ಸ್ವಿಂಗ್ ನ ಕಾರಣ :

ದೇಹದಲ್ಲಾಗುವ ಈಸ್ಟ್ರೋಜೆನ್ ಹಾರ್ಮೋನ್ ಮತ್ತು ಪ್ರೊಜೆಸ್ಟೆರೋನ್ ಹಾರ್ಮೋನಿನ ಏರಿಳಿತದಿಂದಾಗಿ ಮೂಡ್ ಸ್ವಿಂಗ್ ಆಗಬಹುದು. ಕೆಲವರಿಗೆ ದೇಹದಲ್ಲಾಗುವ ಬದಲಾವಣೆಯಿಂದ ಈ ರೀತಿ ಆಗಬಹುದು. ಹಾರ್ಮೋನಿನಲ್ಲಾಗುವ ಗಣನೀಯ ಏರಿಳಿತವು ನ್ಯೂರೋಟ್ರಾಮೀಟರ್ಸ್ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಿದುಳಿನ ಹಾರ್ಮೋನ್ ಡೋಪೋಮಿನ್ ಹಾರ್ಮೋನಿನ ಸ್ರವಿಕೆಯಲ್ಲೂ ಏರಿಳಿತಕ್ಕೆ ಕಾರಣವಾಗುತ್ತದೆ. ರಾಸಾಯನಿಕ ಮಟ್ಟವು ಮಿದುಳಿನಲ್ಲಿ ಹೆಚ್ಚು ಕಡಿಮೆಯಾದಾಗ ಮುಂದೆ ನಿಮ್ಮ ಭಾವನೆಯ ಏರಿಳಿತಕ್ಕೆ ಇದೇ ಕಾರಣವಾಗುತ್ತದೆ. ಹಾಗಾಗಿ ಮೂಡ್ ಸ್ವಿಂಗ್ ಅನುಭವ ನಿಮ್ಮ ಗಮನಕ್ಕೆ ಬಾರದೇ ಇದ್ದರೂ, ಇತರರಿಗೆ ನಿಮ್ಮಲ್ಲಾಗುತ್ತಿರುವ ಬದಲಾವಣೆ ಸಹಜವಾಗಿ ಗೋಚರವಾಗುತ್ತದೆ.

ಮೂಡ್ ಸ್ವಿಂಗ್ ತಡೆಗಟ್ಟುವುದು ಹೇಗೆ?

 • ಸರಿಯಾದ ಸಮಯಕ್ಕೆ ಮತ್ತು ಕನಿಷ್ಠ ಎಂಟು ಗಂಟೆಗಳು ನಿದ್ರಿಸಿರಿ.
 • ಕಚೇರಿಯ ಕೆಲಸ ಅಥವಾ ಮನೆಕೆಲಸದ ವೇಳೆ ವಿಶ್ರಾಂತಿ ತೆಗೆದುಕೊಳ್ಳಿ
 • ಧೈಹಿಕ ಚಟುವಟಿಕೆ ತೊಡಗಿರಿ ಮತ್ತು ಸದಾ ಉಲ್ಲಾಸದಾಯಕವಾಗಿರಿ
 • ಪೋಷಕಾಂಶದಿಂದ ಕೂಡಿದ ಆಹಾರ ಸೇವಿಸಿರಿ
 • ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯಿರಿ
 • ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಿ. ಉದಾಹರಣೆಗೆ ಫೋಟೋಗ್ರಫಿ, ಪೇಂಟಿಂಗ್ ಮುಂತಾದವು.
 • ವಾಕಿಂಗ್ ಹೋಗುವ ಅಭ್ಯಾಸ ಮಾಡಿಕೊಳ್ಳಿ.
 • ಒಳ್ಳೆಯ ಅಭಿರುಚಿಯ ಸಿನಿಮಾ ವೀಕ್ಷಣೆ ಮಾಡಿ. ನಿಮ್ಮ ಭಾವನೆಯನ್ನು ಕೆರಳಿಸುವ, ಭಯಾನಕ ಎನಿಸುವ ಸಿನಿಮಾ ವೀಕ್ಷಣೆ ಮಾಡಬೇಡಿ.
 • ಯಾವುದೇ ಕೆಲಸ, ಮಾತನಾಡುವಾಗ ಮೃಧುವಾಗಿ ಇರಿ.
 • ಯೋಗ, ಧ್ಯಾನ ಶಿಬಿರಗಳಿಗೆ ಹೋಗುವ ಅಭ್ಯಾಸ ಮಾಡಿಕೊಳ್ಳಿ.
 • ವಾರಕ್ಕೆ ಎರಡು ಸಲ ತೈಲ ಅಭ್ಯಂಜನ ಮಾಡಿರಿ.
 • ಒಳ್ಳೆಯ ಸಂಗೀತ ಕೇಳುವುದು, ಪುಸ್ತಕ ಓದುವ ಹವ್ಯಾಸ ಮಾಡಿಕೊಳ್ಳಿ.

ಆಪ್ತಸಮಾಲೋಚರೊಂದಿಗೆ ಚರ್ಚಿಸಿ

ಭಾವನೆ ಏರಿಳಿತವಾಗುತ್ತಿದೆ, ನನ್ನಿಂದ ಅದನ್ನು ಹತೋಟಿಗೆ ತರಲು ಸಾಧ್ಯವಿಲ್ಲ ಎಂದಾದಾಗ ನೀವು ನುರಿತ ತಜ್ಞರ ಸಹಾಯದಿಂದ ಆಪ್ತಸಮಾಲೋಚರನ್ನು ಸಂಪರ್ಕಿಸಿ. ಇದು ನಿಮ್ಮ ಆರೋಗ್ಯದ ದೃಷ್ಟಿಯಲ್ಲಿ ಉತ್ತಮ ಬೆಳವಣಿಗೆ. ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರು ಖಿನ್ನತೆಗೆ ಒಳಗಾಗುವುದು ಸಹಜ. ಇದನ್ನು ಸುಧಾರಿಸಲು ಆರಂಭದ ಹಂತದಲ್ಲಿಯೇ ಸರಿಪಡಿಸಬೇಕು. ಕೆಲವರಿಗೆ ಪ್ರಶ್ನೆಗಳು ಏಳಬಹುದು. ನನಗೆ ಖಿನ್ನತೆ ಬಂದಿದೆ ಎಂಬುದನ್ನು ಹೇಗೆ ಗುರುತಿಸುವುದು ಎಂಬುದು.

ಈ ಕೆಳಕಂಡ ಮಾಹಿತಿಯನ್ನು ಪರಿಶೀಲಿಸಿರಿ:

 • ಯಾವುದೇ ವಿಷಯಕ್ಕೆ ಹೆಚ್ಚು ಆವೇಶಕ್ಕೆ ಒಳಗಾಗುವುದು ಮತ್ತು ಪ್ರತೀ ವಿಷಯಕ್ಕೆ ಕಿರಿಕಿರಿಯ ಮನೋಪ್ರವೃತ್ತಿ ತೋರ್ಪಡಿಸುವುದು.
 • ನಿದ್ರೆಯ ಸಮಸ್ಯೆ. ಆಗಾಗ ಎದ್ದು ನಡೆಯುವುದು. ನಿದ್ರೆ ಬಾರದೇ ಇದ್ದಾಗ ಮೊಬೈಲ್ ನೋಡುವುದು, ಟಿವಿ ನೋಡುವುದು,
 • ಊಟ ಸೇರದೇ ಇರುವುದು.
 • ಯಾವುದೇ ವಿಷಯದಲ್ಲಿ ಏಕಾಗ್ರತೆ ಇರಿಸಲು ಸಾಧ್ಯವಿಲ್ಲದೇ ಇರುವುದು.
 • ಕೆಲವೊಮ್ಮೆ ನೆನಪಿನ ಶಕ್ತಿ ಇಲ್ಲದಿರುವುದು.
 • ಮಾತನಾಡುವಾಗ ಒಂದೇ ಕಡೆ ಮಾತು ನಿಲ್ಲದೆ ಬೇರೆ ಕಡೆ ಹೋಗುವುದು
 • ಹತ್ತಿರದವರ ಸಾವು, ನೋವು ವಿಪರೀತ ದುಃಖ ಕೊಡುವುದು . ಅದನ್ನೇ ಆಲೋಚಿಸುತ್ತಾ ಒಂದೇ ಕಡೆ ಕೂರುವುದು.

ಈ ಮೇಲಿನ ಎಲ್ಲಾ ವಿಷಯವನ್ನು ಪರಿಗಣಿಸಿ, ಮುಂದೆ ನೀವು ಏನು ಕ್ರಮ ಕೈಕೊಳ್ಳಬಹುದು ಎಂಬುದನ್ನು ಅವಲೋಕಿಸಿರಿ. ನಿಮ್ಮ ಸಂಗಾತಿ, ಪೋಷಕರ ಜೊತೆಯಲ್ಲಿ ವಿಷಯವನ್ನು ಚರ್ಚಿಸಿರಿ. ಮುಖದಲ್ಲಿನ ಮಂದಹಾಸ ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸುತ್ತದೆ. ಸದಾ ಮಂದಹಾಸ ನಿಮ್ಮ ಮುಖದಲ್ಲಿ ಇರಲಿ.

A

gallery
send-btn