6 Nov 2021 | 1 min Read
Medically reviewed by
Author | Articles
ಮಗುವಿನ ಮನಸ್ಸು ಹಾಲು ಇದ್ದಂತೆ. ಯಾವುದೇ ಅಳುಕು, ಭಯ, ಇನ್ನೊಬ್ಬರ ಬಗ್ಗೆ ಕೆಟ್ಟ ಅಭಿಪ್ರಾಯ, ಇರುವುದಿಲ್ಲ. ಮಗುವಿನ ಮುಗ್ಧ ಮನಸನ್ನು ತಿದ್ದುವ ಜವಾಬ್ಧಾರಿ ಪ್ರತಿಯೊಬ್ಬರ ಕರ್ತವ್ಯ. ಈ ದೆಸೆಯಲ್ಲಿ ಮಗುವಿನ ಬೆಳವಣಿಗೆಯ ಪ್ರಮುಖ ಘಟ್ಟ ಮಗುವಿನ ಕಲಿಕೆ. ಮಗು ತಾನು ಈ ಪರಿಸರಕ್ಕೆ ಹೊಂದಿಕೊಳ್ಳುವ ಮೊದಲು ಪ್ರತೀಯೊಂದು ವಿಷಯಕ್ಕೂ ತಂದೆ ತಾಯಿಯನ್ನು ಅವಲಂಭಿಸಿರುತ್ತದೆ. ಯಾವುದು ತಪ್ಪು ಯಾವುದು ಸರಿ ಎಂಬುದು ಅದಕ್ಕೆ ತಿಳಿದಿರುವುದಿಲ್ಲ. ಏನಾದರೂ ತಪ್ಪು ಮಾಡಿದಾಗ ತನ್ನ ತಂದೆ ತಾಯಿಯ ಮುಖವನ್ನು ನೋಡುತ್ತದೆ. ಮಗುವಿಗೆ ಆಗ ನೀವು ದಂಡಿಸಿದಾಗ ಮತ್ತೆ ಅದೇ ತಪ್ಪು ಮಾಡುವುದಿಲ್ಲ. ಮಗುವಿಗೆ ಅರ್ಥ ಮಾಡಿಸುವ ವಿಧಾನ ಬೇರೆ ಬೇರೆ ಆಗಿರುತ್ತದೆ. ಆರಂಭದಲ್ಲಿ ದಂಡಿಸಿ ಹೇಳಿದರೆ ಮತ್ತೆ ತೋರಿಸಿ ತಿಳಿ ಹೇಳುವ ಮೂಲಕ , ಬೈಯ್ಯುವ ಮೂಲಕ ಹೇಳಬೇಕಾಗುತ್ತದೆ.
ಮಗುವಿನಲ್ಲಿ ಶಿಸ್ತು ಮೂಡಿಸುವ ಮಾರ್ಗ
ಮಕ್ಕಳು ಶಿಸ್ತು ಕಲಿಯಲು ನೀವು ಅನುಸರಿಸಬೇಕಾದ ಮಾರ್ಗ
ಕಟ್ಟಳೆಯನ್ನು ರೂಪಿಸಿ.
ಮಗು ಆಟವಾಡಲು, ಹೊರಗಿನಿಂದ ಆಟವಾಡಿ ಎಷ್ಟು ಸಮಯಕ್ಕೆ ಬರಬೇಕು ಎಂಬ ನಿಯಮ ರೂಪಿಸಿ. ದಿನಾ ಒಂದು ನಿಯಮಿತ ಸಮಯದಲ್ಲಿ ಸ್ನಾಕ್ಸ್ ಸೇವಿಸುವುದು, ಹೋಂವರ್ಕ್ ಮಾಡುವುದು, ಪ್ರಾರ್ಥನೆಗೆ ಕೂರುವುದು, ಟಿವಿ ವೀಕ್ಷಣೆ ಮಾಡುವುದು, ರಾತ್ರಿ ಊಟ ಮತ್ತು ನಿದ್ರೆಯ ಸಮಯ ಹೇಳುವುದು.
ಮಗುವಿಗೆ ಶಿಸ್ತಿನ ಉದ್ದೇಶವನ್ನು ತಿಳಿಸಿ.
ಮಗುವಿಗೆ ಈ ಎಲ್ಲಾ ನಿಯಮದ ಹಿಂದಿರುವ ಶಿಸ್ತಿನ ಬಗ್ಗೆ ಅದರ ಮಹತ್ವದ ಬಗ್ಗೆ ಹೇಳಿಕೊಡಿ. ಮೊದಲು ಹೋಂವರ್ಕ್ ಮಾಡಿದ ನಂತರ ಆಟಕ್ಕೆ ಹೆಚ್ಚಿನ ಸಮಯ ಕೊಡುವುದಾಗಿ ಹೇಳಿದರೆ ಮಕ್ಕಳು ಖಂಡಿತ ಕೇಳುತ್ತಾರೆ. ಆಯಾ ಸಮಯಕ್ಕೆ ಏನು ಮಾಡಬೇಕೆಂದು ಮಕ್ಕಳು ಕಲಿಯುತ್ತಾರೆ.
ಜಗದ್ವಿಖ್ಯಾತ ವ್ಯಕ್ತಿಗಳ ಕಥೆ
ಮಕ್ಕಳಿಗೆ ಪ್ರಖ್ಯಾತ ವ್ಯಕ್ತಿಗಳ ಆದರ್ಶಮಯ ಕಥೆಯನ್ನು ಹೇಳಿಕೊಡಿ. ಇದರಿಂದ ಮಕ್ಕಳ ಮನಸ್ಸು ಸಕಾರಾತ್ಮಕವಾಗಿ ರೂಪುಗೊಳ್ಳುವುದು. ಮಗು ನಿದ್ರಿಸುವ ಸಮಯದಲ್ಲಿ ಸಾಹಸಮಯ ಕಥೆ, ಪೌರಾಣಿಕ ಕಥೆ ಹೇಳಿ ಮಲಗಿಸಿ. ಮಗು ನಿದ್ರೆಯಲ್ಲಿ ಅದರ ಸುಪ್ತ ಮನಸ್ಸು ಕಥೆಯ ಸಾರವನ್ನು ಕಲೆ ಹಾಕುತ್ತದೆ.
ಮಗುವಿಗೆ ಜವಾಬ್ಧಾರಿ ವಹಿಸಿ
ಮಗು ತನ್ನ ಕೆಲಸವನ್ನು ತಾನೇ ಮಾಡುವಂತೆ ಜವಾಬ್ಧಾರಿ ವಹಿಸಿ. ಸ್ಕೂಲ್ ಬ್ಯಾಗ್, ಬಟ್ಟೆ, ಟಿಫನ್ ಬಾಕ್ಸ್, ಶಾಲೆಯ ಹೋಂವರ್ಕ್ ಮಾಡಲು ಬಿಡಿ. ಯಾವುದೇ ವಸ್ತು ತೆಗೆದುಕೊಂಡಾಗ ವಾಪಸ್ ಅದೇ ಸ್ಥಳದಲ್ಲಿ ಇಡುವಂತೆ ಮಗುವಿಗೆ ಕಲಿಸಿರಿ. ಆರಂಭದಲ್ಲಿ ಕಷ್ಟ ಆದರೂ ಮಗು ರೂಢಿಸಿ ಕೊಳ್ಳುತ್ತದೆ.
ಮಗುವಿಗೆ ಶಿಸ್ತಿನ ಮಹತ್ವ
ಮಗುವಿಗೆ ಶಿಸ್ತನ್ನು ಶಾಲೆಗೆ ಹೋದ ನಂತರ ರೂಪಿಸುವ ಬದಲು ಮನೆಯಲ್ಲಿಯೇ ಸಣ್ಣ ವಯಸ್ಸಿನಿಂದ ರೂಪಿಸಿ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಗಾದೆ ಮಾತು ಕೇಳಿಲ್ಲವೆ. ಅದೇ ರೀತಿ ಮನೆಯೇ ಮೊದಲ ಪಾಠ ಶಾಲೆ ಆಗಬೇಕು.
ಒಳ್ಳೆಯ ಗುಣವನ್ನು ಹೊಗಳಿರಿ
ಮಗು ಒಳ್ಳೆಯ ಕೆಲಸ ಮಾಡಿದಾಗ ಮಗುವನ್ನು ಹೊಗಳಿರಿ. ಮಗು ಸಂತೋಷಗೊಳ್ಳುತ್ತದೆ ಮತ್ತು ಪ್ರೋತ್ಸಾಹಗೊಳ್ಳುತ್ತದೆ. ಇದು ಒಂದು ರೀತಿಯ ಸಕಾರಾತ್ಮಕ ಗಮನ ಹರಿಸುವಿಕೆ. ಮಗುವಿಗೆ ನಿನ್ನ ಬಗ್ಗೆ ನಾನು ತುಂಬಾ ಅಭಿಮಾನ ಪಡುತ್ತಿದ್ದೇನೆ ಎಂದು ಹೇಳಿದರೆ ಇತರ ಮಕ್ಕಳು ಅದನ್ನು ನೋಡಿ ಕಲಿಯುತ್ತದೆ.
ಸಮಸ್ಯೆ ಬಂದಾಗ ಪರಿಹರಿಸುವ ವಿಧಾನ
ಗೆಳೆಯರ ಜೊತೆ ಮಗು ಜಗಳವಾಡಿದಾಗ , ಕಡಿಮೆ ಅಂಕ ತೆಗೆದುಕೊಂಡಾಗ ಅದಕ್ಕೆ ಕಾರಣವನ್ನು ವಿಚಾರಿಸಿ. ಮಕ್ಕಳಲ್ಲಿ ಅದನ್ನು ಪರಿಹರಿಸುವ ಮಾರ್ಗವನ್ನು ಹೇಳಿಕೊಡಿ. ಗೆಳೆಯರೊಂದಿಗೆ ಜಗಳವಾಡಿದರೂ ಹೊಂದಾಣಿಕೆ ಮಾಡಿಕೊಂಡಿ ರಲು ಹೇಳಿ.ಕ್ಷಮೆ ಕೇಳುವುದು ಬಹು ದೊಡ್ಡ ಗುಣವೆಂದು ತಿಳಿಸಿಕೊಡಿ.
ಮಕ್ಕಳು ಒಳ್ಳೆಯ ಹವ್ಯಾಸ ರೂಢಿಸಿಕೊಂಡಾಗ ಉಡುಗೊರೆಯನ್ನು ನೀಡಿರಿ. ಹೊರಗೆ ಕರೆದುಕೊಂಡು ಹೋಗಿ ಸುತ್ತಾಡಿಸಿ. ಮಕ್ಕಳ ಮನಸಲ್ಲಿ ಅಸಮಾನತೆ ಬಾರದ ರೀತಿಯಲ್ಲಿ ತಿಳಿಹೇಳಿ.
A