7 Nov 2021 | 1 min Read
Medically reviewed by
Author | Articles
ಮಕ್ಕಳ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವ್ಯಾಕ್ಸಿನೇಷನ್ ತುಂಬಾ ಮುಖ್ಯ. ಬಹಳಷ್ಟು ಸಾಹಿತ್ಯಿಕ ರೋಗದಿಂದ ಮಕ್ಕಳನ್ನು ರಕ್ಷಿಸಲು ಹಲವಾರು ವ್ಯಾಕ್ಸಿನೇಷನ್ ನೀಡಲಾಗುತ್ತದೆ. ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಕಡಿಮೆ ಮಾಡಲು ತುಂಬಾ ಮುಖ್ಯ.
ನವಜಾತ ಶಿಶುವಿನಿಂದ ಹಿಡಿದು ಐದು ವರ್ಷ ತುಂಬುವವರೆಗೂ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಈ ಜವಾಬ್ಧಾರಿಯನ್ನು ಪೋಷಕರು ವಹಿಸಬೇಕು. ಲಸಿಕೆ ನೀಡಿದರೆ ಪರಿಣಾಮವಾಗಿ ಶತಮಾನಗಳವರೆಗೆ ಕಾಡಿದ್ದ ದಡಾರ ಮಾಯವಾಗಿ ಎಷ್ಟೋ ವರ್ಷವಾಯಿತು. ಅದೇ ರೀತಿ ಪೋಲಿಯೋ ಕೂಡ ನಿರ್ಮೂಲನೆಯಾಗಿದೆ.
ಈ ಕೆಳಗಡೆ ನೀಡಲಾದ ಪಟ್ಟಿಯು ನವಜಾತ ಶಿಶುವಿನಿಂದ ಹಿಡಿದು ಐದು ವರ್ಷದಿಂದ ಮಕ್ಕಳಿಗೆ ಲಸಿಕೆ ಬಗ್ಗೆ ಮಾಹಿತಿಯನ್ನು ಕೊಡಲಾಗಿದೆ.
ಲಸಿಕೆ | ಅವಧಿ |
ಬಿಸಿಜಿ | ಜನನದ ಸಮಯ |
ಹಿಪಾಟಿಟೀಸ್ ಬಿ. | ಜನನದ ಸಮಯ |
ಓಪಿವಿ-ಓ | ಜನನದ ಸಮಯ |
ಓಪಿವಿ 1,2&3. |
6 ವಾರಗಳು, 10 ವಾರಗಳು , 14 ವಾರಗಳು |
ಪೆಂಟಾವೆಲೆಂಟ್. 1,2&,3 (ಡಯೇರಿಯಾ+. ಪರ್ಟುಸಿಸ್+ ಟೆಟಾನಸ್+ ಹಿಪಾಟಿಟೀಸ್ ಬಿ+ ಹೆಚ್ ಐ ಬಿ) |
6 ನೇ ವಾರದಲ್ಲಿ, 10 ವಾರಗಳು, 14 ವಾರಗಳು |
ಐಪಿವಿ. (ಪೊಲೀಯೋ ವ್ಯಾಕ್ಸಿನೇಷನ್ ) | 6 & 14 ವಾರಗಳು. |
ರೋಟಾವೈರಸ್ |
6 & 14 |
ಪಿಸಿವಿ |
6 & 14 |
ರುಬೆಲ್ಲ/ ಮೀಸಲ್ಸ್. 1ಸ್ಟ್ ಡೋಸ್ | 9 -12 ತಿಂಗಳ ಒಳಗೆ |
ಮಗುವಿಗೆ ಐದು ವರ್ಷದ ತನಕ ಲಸಿಕೆಯನ್ನು ನೀಡುವುದು ಮಾತ್ರವಲ್ಲ. ಶಾಲೆಗೆ ಸೇರಿದ ಬಳಿಕವೂ ಮಕ್ಕಳಿಗೂ ಲಸಿಕೆಯನ್ನು ನೀಡಲಾಗುತ್ತದೆ.
1 ನೇ ತರಗತಿ – ಮಿಸಲ್ಸ್ -ಮಮ್ಸ್ – ರುಬೆಲ್ಲಾ- ಚಿಕನ್ ಫಾಕ್ಸ್
2 ನೆ ತರಗತಿ – ಡಿದೀಪ್ತಿರಿಯ, ಟೆಟಾನಸ್- ನಾಯಿ ಕೆಮ್ಮು
3ನೆ ತರಗತಿ – ಇನ್ಫ್ಲುಯೆನ್ಸ ಲಸಿಕೆ
4 ನೇ ತರಗತಿ – ಇನ್ಫ್ಲುಯೆನ್ಸ ಲಸಿಕೆ
8ನೇ ತರಗತಿ – ಡಿಪ್ತೀರಿಯಾ – ಟೆಟಾನಸ್- ನಾಯಿ ಕೆಮ್ಮು
ಈ ಎಲ್ಲಾ ಲಸಿಕೆಗಳನ್ನು ನಿಗದಿತ ಅವಧಿಯಲ್ಲಿ ಮಕ್ಕಳಿಗೆ ನೀಡಬೇಕು. ಲಸಿಕೆಯ ನಿಯಮ ಕಟ್ಟಳೆಯನ್ನು ಸರಕಾರದ ಅಧಿನಿಯಮದಂತೆ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು. ಪೋಷಕರು ನಿಗದಿತ ವೇಳೆಯಲ್ಲಿ ಅಥವಾ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಕೊಡುವುದರ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಎಷ್ಟೋ ಶತಮಾನಗಳು ನಿರಂತರವಾಗಿ ಮಕ್ಕಳಿಗೆ ದಡಾರ ಮತ್ತು ಪೋಲಿಯೋ ಲಸಿಕೆ ಹಾಕಿದ್ದರಿಂದ ಇಂದು ನಮ್ಮ ದೇಶದಲ್ಲಿ ಪೋಲಿಯೋ ಮತ್ತು ದಡಾರ ನಿರ್ಮೂಲನೆಯಾಗಿದೆ. ನಮ್ಮ ಸಮಾಜ ಸ್ವಾಸ್ಥ್ಯ ಸಮಾಜವಾಗಬೇಕೆಂದರೆ ಇಂದಿನ ನಮ್ಮ ಮಕ್ಕಳ ಆರೋಗ್ಯವನ್ನು ನಾವು ಉತ್ತಮಪಡಿಸಬೇಕು. ಅದಕ್ಕಾಗಿ ನಾವು ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆಯ ಅಭಿಯಾನಕ್ಕೆ ಕೈ ಜೋಡಿಸಬೇಕು. ಭಾವಿ ಪ್ರಜೆಗಳ ಆರೋಗ್ಯವನ್ನು ಕಾಪಾಡಬೇಕು.
A