ಭ್ರೂಣದ ಬೆಳವಣಿಗೆ

ಭ್ರೂಣದ ಬೆಳವಣಿಗೆ

7 Nov 2021 | 1 min Read

Medically reviewed by

Author | Articles

ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ತಾಯಿಗೆ ಯಾವಾಗಲೂ ಕಾತುರತೆ ಇರುತ್ತದೆ. ತನ್ನ ಮಗುವಿನ ರೂಪವನ್ನು ಪ್ರತಿದಿನ ಊಹಿಸುತ್ತಲೇ ಇರುತ್ತಾಳೆ. ಸಾಮಾನ್ಯವಾಗಿ ಭ್ರೂಣವು ಗರ್ಭದಲ್ಲಿ ಸಂಪೂರ್ಣವಾಗಿ ಮಗುವಿನ ರೂಪ ಪಡೆಯಲು ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ಮೊಟ್ಟೆಯಲ್ಲಿ ಕೋಶದ ರೂಪವನ್ನು ಪಡೆದುಕೊಂಡು ಮಗುವಿನ ರೂಪ ಆರಂಭವಾಗಲು ಕೇವಲ 12 ವಾರಗಳು ಸಾಕು. ಭ್ರೂಣದ ಬೆಳವಣಿಗೆಯನ್ನು ವೈದ್ಯಕೀಯ ಪದ್ಧತಿಯಲ್ಲಿ ಮೂರು ವಿಭಾಗವಾಗಿ ಮಾಡಲಾಗಿದೆ. ಮೊದಲನೇ ತ್ರೈಮಾಸಿಕ, ಎರಡನೇ ತ್ರೈಮಾಸಿಕ ಮತ್ತು ಮೂರನೇ ತ್ರೈಮಾಸಿಕ. ಮೊದಲನೇ ತ್ರೈಮಾಸಿಕ ನಲ್ಲಿ ಒಂದನೇ ವಾರದಿಂದ ಹಿಡಿದು 12ನೇ ವಾರದವರೆಗಿನ ಅವಧಿಯನ್ನು ಸೇರಿಸಲಾಗಿದೆ.

 

ಮೊದಲನೇ ತಿಂಗಳು ( 1 ರಿಂದ 4ನೇ ವಾರಗಳು)

ಗರ್ಭದಲ್ಲಿ ಬೆಳೆಯುತ್ತಿರುವ ಮುಟ್ಟೆಯ ಶುದ್ಧ ನೀರಿನ ಕವಚ ಆರಂಭವಾಗುತ್ತದೆ. ಇದನ್ನು ಅಮ್ನಿಯಾಟಿಕ್ ಬ್ಯಾಂಕ್ ಎಂದು ಕರೆಯುತ್ತಾರೆ. ಇದು ದಿಂಬಿನ ಆಕಾರದಲ್ಲಿ ಮೊಟ್ಟೆಗೆ ರಕ್ಷಣೆಯನ್ನು ನೀಡುತ್ತದೆ. ಈ ಸಮಯದಲ್ಲಿ ಪ್ಲೆಸೆಂಟಾ ಕೂಡ ಬೆಳೆಯುಲು ಆರಂಭಿಸುತ್ತದೆ. ಮೆಜೆಂಟಾ ಎಂಬುದು ವೃತ್ತಾಕಾರದ ಚಪ್ಪಟೆಯಾದ ಅಂಗವಾಗಿದ್ದು, ತಾಯಿಯಿಂದ ಮಗುವಿಗೆ ಪೋಷಕಾಂಶ ಸರಬರಾಜು ಮಾಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅದೇ ರೀತಿ ತ್ಯಾಜ್ಯವನ್ನು ಭ್ರೂಣದಿಂದ ಹೊರಗೆ ತೆಗೆದುಕೊಳ್ಳುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ನಿಮ್ಮ ವ್ಯವಸ್ಥೆಯ ಸಂಪೂರ್ಣ ಅವಧಿಯಲ್ಲಿ ಪ್ಲಾಸೆಂಟಾ ವು ಮಗುವಿಗೆ ಆಹಾರ ಸರಬರಾಜು ಮಾಡುತ್ತದೆ. ಮೊದಲ ನಾಲ್ಕು ವಾರಗಳಲ್ಲಿ ಮಗುವಿನ ತಲೆಯು ದೊಡ್ಡದಾಗಿದ್ದು, ಒಂದು ಚುಕ್ಕಿ ಆಕಾರದ ಕಣ್ಣು ಮತ್ತು ಅದರ ಸುತ್ತ ಕಪ್ಪು ವೃತ್ತಾಕಾರದ ಕಲೆ, ಬಾಯಿ, ದವಡೆ ಗಂಟಲು ಬೆಳವಣಿಗೆಯಾಗಿರುತ್ತದೆ. ರಕ್ತದ ಕೋಶಗಳು ಆಕಾರವನ್ನು ಪಡೆಯುತ್ತವೆ. ರಕ್ತ ಸಂಚಾರವು ಆರಂಭವಾಗುತ್ತದೆ. ಸೂಕ್ಷ್ಮ ಸಣ್ಣ ಕರದ ಹೃದಯ , ನಾಲ್ಕನೆಯ ವಾರದ ಕೊನೆಯ ವೇಳೆಗೆ 65 ಮಿಡಿತಗಳ ಆರಂಭವಾಗುತ್ತದೆ. ಅಂದರೆ ಭ್ರೂಣದ ಹೃದಯದ ಬಡಿತವನ್ನು ನಾವು ಈ. ವಾರದಲ್ಲಿ ಕೇಳಬಹುದು.

 

ಎರಡನೆಯ ತಿಂಗಳು ( 5 ರಿಂದ 8ನೇ ವಾರಗಳು)

ಮುಖದ ಚಹರೆಯ ಬೆಳವಣಿಗೆ ಮುಂದುವರಿಯುತ್ತದೆ. ಕಿವಿಯ ಮೇಲೆ ಸಣ್ಣ ಚರ್ಮದ ಪದರ ಬೆಳೆಯುತ್ತದೆ, ಜೊತೆಗೆ ಬೆರಳುಗಳು ಕೈಕಾಲು, ಕಣ್ಣು ರೂಪ ಪಡೆಯಲು ಆರಂಭಿಸುತ್ತದೆ. ಈ ಅವಧಿಯಲ್ಲಿ ನರವ್ಯೂಹ ಮಂಡಲ (ಸೆಂಟ್ರಲ್ ನರ್ವಸ್ ಸಿಸ್ಟಮ್), ಮಿದುಳಿನ ಬೆಳವಣಿಗೆ, ಸ್ಪೈನಲ್ ಕಾರ್ಡ್ ಮತ್ತು ಇತರ ನರದ ಟಿಶ್ಯು ಬೆಳವಣಿಗೆಯನ್ನು ಹೊಂದಿರುತ್ತದೆ. ಜೀರ್ಣಾಂಗ ವ್ಯವಸ್ಥೆ ಕೂಡ ಅಭಿವೃದ್ಧಿಯನ್ನು ಕಂಡಿರುತ್ತದೆ. 6ನೇ ವಾರದಲ್ಲಿ ಹೃದಯದ ಬಡಿತ ಸಾಮಾನ್ಯವಾಗಿ ಕೇಳಬಹುದು. ತಲೆಯ ಆಕರ ದೊಡ್ಡದಾಗಿದ್ದು ಇತರ ಅಂಗಗಳು ಸಣ್ಣದಾಗಿ ಗೋಚರಿಸುತ್ತದೆ. ಈ ಅವಧಿಯಲ್ಲಿ ಭ್ರೂಣವು ಒಂದು ಇಂಚು ಉದ್ದ ಬೆಳೆದಿರುತ್ತದೆ.ಶ

 

ಮೂರನೆಯ ತಿಂಗಳು ( 9ರಿಂದ 12 ವಾರಗಳು)

ಈ ವಾರದಲ್ಲಿ ಮಗುವಿನ ಬೆರಳುಗಳು ಕಾಲು ಮತ್ತು ಕಾಲಿನ ಪಾದ ಸಂಪೂರ್ಣವಾಗಿ ಬೆಳವಣಿಗೆ ಪಡೆದಿರುತ್ತದೆ. ಮಗು ಈ ಅವಧಿಯಲ್ಲಿ ನಿಧಾನಕ್ಕೆ ಬಾಯಿ ತೆರೆಯುತ್ತದೆ. ಕಾಲು ಮತ್ತು ಕೈಬೆರಳುಗಳಲ್ಲಿ ಉಗುರಿನ ರಚನೆಯಾಗುತ್ತದೆ. ಕಿವಿಯು ಚೆನ್ನಾಗಿ ರೂಪುಗೊಂಡಿರುತ್ತದೆ. ವಸಡಿನ ಕೆಳಭಾಗದಲ್ಲಿ ಹಲ್ಲುಗಳು ರೂಪುಗೊಳ್ಳಲು ಆರಂಭವಾಗುತ್ತದೆ. ಜನನಾಂಗದ ಬೆಳವಣಿಗೆ ಆರಂಭವಾಗುತ್ತದೆ. ಆದರೂ ಅಲ್ಟ್ರಾಸೌಂಡ್ ನಲ್ಲಿ ಮಗುವಿನ ಲಿಂಗವನ್ನು ಗುರುತಿಸಲು ಸಾಧ್ಯವಿಲ್ಲ. ಮೂರನೆಯ ತಿಂಗಳ ಕೊನೆಯ ಭಾಗದಲ್ಲಿ ಸಂಪೂರ್ಣವಾಗಿ ಬೆಳೆದಿರುತ್ತದೆ. ಆದರೆ ಪಕ್ಕೆಲುಬು ಶ್ವಾಸಕೋಶದ ಬೆಳವಣಿಗೆ ಇನ್ನೂ ಮುಂದುವರಿಯುತ್ತದೆ. ಕೊನೆಯ ವಾರದ ವೇಳೆಗೆ ಭ್ರೂಣದ ಎತ್ತರ ನಾಲ್ಕು ಇಂಚುಗಳು ಮತ್ತು ತೂಕ ಒಂದು ಔನ್ಸ್ ಇರುತ್ತದೆ.

 

ಎರಡನೆಯ ತ್ರೈಮಾಸಿಕ

ಈ ಅವಧಿಯು ಒಂದು ವಿಶೇಷ ಅನುಭವವನ್ನು ನಿಮಗೆ ನೀಡುತ್ತದೆ. ಬೆಳಗಿನ ಸಿಕ್ನೆಸ್ ಅಂದರೆ ತಲೆ ಸುತ್ತುವುದು ವಾಂತಿ ಬರುವುದು ಇಂಥ ಅನುಭವಗಳು ಆರಂಭವಾಗುತ್ತದೆ. ಭ್ರೂಣದ ಬೆಳವಣಿಗೆಯಾದಂತೆ, ಮಗುವಿನ ಚಲನೆಯು ನಿಮ್ಮ ಗಮನಕ್ಕೆ ಬರುತ್ತದೆ.

 

ನಾಲ್ಕನೆಯ ತಿಂಗಳು (13ರಿಂದ 16 ವಾರಗಳು)

ಡೊಪ್ಲರ್ ಉಪಕರಣದ ಸಹಾಯದಿಂದ ಮಗುವಿನ ಹೃದಯದ ಬಡಿತವನ್ನು ಕೇಳಬಹುದು. ಕಣ್ಣುರೆಪ್ಪೆಗಳು ಕಣ್ಣಿನ ಗುಡ್ಡೆ, ಹುಬ್ಬು, ಕೂದಲು ಬೆಳೆದಿರುತ್ತದೆ. ಮೂಳೆಯು ಗಟ್ಟಿಯಾಗಲು ಆರಂಭವಾಗುತ್ತದೆ. ಭ್ರೂಣವು ಹೆಬ್ಬೆರಳನ್ನು ಚೀಪೋದು ಕೈಕಾಲನ್ನು ಆಡಿಸುವುದು ಇಂಥ ಚಟುವಟಿಕೆಯನ್ನು ಮಾಡುತ್ತದೆ. ನರವ್ಯೂಹ ಕೆಲಸವನ್ನು ಆರಂಭಿಸುತ್ತದೆ. ವೈದ್ಯರು ಭ್ರೂಣದ ಲಿಂಗವನ್ನು ಗುರುತಿಸುತ್ತಾರೆ. ಮಗು
ಆರು ಇಂಚು ಉದ್ದ ಮತ್ತು ನಾಲ್ಕು ಔನ್ಸ್ ಬೆಳೆದಿರುತ್ತದೆ.

 

5ನೇ ತಿಂಗಳು ( 17ರಿಂದ 20 ವಾರಗಳು)

ಈ ಅವಧಿಯಲ್ಲಿ ಮಗು ಚಲಿಸುವುದನ್ನು ನೀವು ಗುರುತಿಸಬಹುದು. ಮಾಂಸಖಂಡಗಳ ಬೆಳವಣಿಗೆಗೆ ಮತ್ತು ಮಗು ತಾನೇ ಕೈಗಳನ್ನು ಆಡಿಸುವುದು ಮಾಡುತ್ತದೆ. ಈ ಅವಧಿಯಲ್ಲಿ ನಿಮಗೆ ಅಲ್ಲಲ್ಲಿ ಹೊಟ್ಟೆ ಹಿಡಿದುಕೊಳ್ಳುವುದು ಅನುಭವವಾಗುತ್ತದೆ. ಮಗುವಿನ ಚರ್ಮದ ಮೇಲೆ ಬಿಳಿಯ ಪರದೆಯು ಆವೃತವಾಗಿದ್ದು ಇದನ್ನು ವರ್ನಿಕ್ಸ್ ಕ್ಯಾಸಿಯೋಸ ಎಂದು ಕರೆಯುತ್ತಾರೆ. ಮಗುವಿನ ಚರ್ಮ ದೀರ್ಘಕಾಲದವರೆಗೆ ಅಮ್ಯಾ ಟಿಕ್ ಫ್ಲೂಯಿಡ್ ನ ಸಂಪರ್ಕದಲ್ಲಿ ಇರುವುದರಿಂದ ಅದರ ಚರ್ಮದ ರಕ್ಷಣೆಯನ್ನು ಮಾಡುತ್ತದೆ. ಈ ಅವಧಿಯಲ್ಲಿ ಮಗುವಿನ ಉದ್ದ 10 ಇಂಚು ಮತ್ತು ತೂಕ 1 ಪೌಂಡ್ ವರೆಗೂ ಇರುತ್ತದೆ.

 

ಆರನೆಯ ತಿಂಗಳು (21 ರಿಂದ 24 ವಾರಗಳು)

ಈ ಅವಧಿಯಲ್ಲಿ ಮಗುವಿನ ಚರ್ಮವು ಪಾರದರ್ಶಕತೆ ಇನ್ನು ಹೊಂದಿದ್ದು, ಚರ್ಮ ಸುಕ್ಕಾಗಿ ಕೆಂಪು ಬಣ್ಣದಲ್ಲಿ ಕಾಣುತ್ತದೆ. ರಕ್ತದ ನಾಳಗಳು ಸರಿಯಾಗಿ ಗೋಚರವಾಗುತ್ತದೆ. ಮಗು ನಿಧಾನಕ್ಕೆ ಕಣ್ಣು ತೆರೆಯುವುದು ಮುಚ್ಚುವುದು ಮಾಡುತ್ತಿರುತ್ತದೆ. ಮಗು ಬಾಹ್ಯ ಪ್ರಪಂಚದ ಶಬ್ದಕ್ಕೆ ಪ್ರತಿಕ್ರಿಯಿಸುತ್ತದೆ. ತಾಯಿಯ ಸ್ವರವನ್ನು ಗುರುತಿಸುತ್ತದೆ. ಈ ಅವಧಿಯಲ್ಲಿ ಮಗು 12 ಇಂಚು ಉದ್ದ ಮತ್ತು ಎರಡು ಪೌಂಡ್ ತೂಕ ಇರುತ್ತದೆ.

 

ಏಳನೆಯ ತಿಂಗಳು (25 ರಿಂದ 28 ವಾರಗಳು)

ಮಗುವಿನ ದೇಹದ ಮಾಂಸಖಂಡಗಳ ಬೆಳವಣಿಗೆ ಸಂಪೂರ್ಣ ಗೊಂಡಿರುತ್ತದೆ. ಮಗು ಅವಾಗವಾಗ ತನ್ನ ಚಲನೆಯನ್ನು ಮಾಡುತ್ತಿರುತ್ತದೆ. ಶಬ್ದ ಮತ್ತು ಬೆಳಕಿಗೆ ಪ್ರತಿಕ್ರಿಯೆ ನೀಡುತ್ತದೆ. ಮಗು ಸ್ಪಷ್ಟವಾಗಿ ಕೇಳಿಸಿಕೊಳ್ಳುತ್ತದೆ. ಹೆಚ್ಚು ಚಟುವಟಿಕೆಯಲ್ಲಿ ಇರುತ್ತದೆ. ತಾಯಿ ಮಾತನಾಡಿಸುವಾಗ ಪ್ರತಿಕ್ರಿಯೆ ನೀಡುತ್ತದೆ. ಅಮ್ನಿಯಾಟಿಕ್ ದ್ರವದ ಪ್ರಮಾಣವು ಕಡಿಮೆಯಾಗುತ್ತಾ ಬರುತ್ತದೆ. ಮಗು 14 ಇಂಚು ಉದ್ದ ಮತ್ತು ಎರಡರಿಂದ ನಾಲ್ಕು ಪೌಂಡ್ ತೂಕ ಇರುತ್ತದೆ.

 

ಮೂರನೇ ತ್ರೈಮಾಸಿಕ

ಮಗುವಿನ ಸಂಪೂರ್ಣ ಅವಧಿಯ ಬೆಳವಣಿಗೆಯಾಗಿದ್ದು. ಗರ್ಭಾವಸ್ಥೆಯ ಕೊನೆಯ ಅವಧಿ. ಇದರಿಂದ ನಿಮ್ಮ ಪ್ರಸವದ ದಿನವನ್ನು ಲೆಕ್ಕ ಹಾಕಬಹುದು. ಮಗುವು ಪ್ರಸವದ ಸಮಯಕ್ಕೆ ಸಿದ್ಧವಾಗಿರುತ್ತದೆ. ಗರ್ಭಾವಸ್ಥೆಯ ಸಂಪೂರ್ಣ ಅವಧಿ 40 ವಾರಗಳು ಆದರೂ, 37ರ ವಾರದ ನಂತರ ಯಾವಾಗ ಬೇಕಾದರೂ ಆಗಬಹುದು.

 

ಎಂಟನೇ ತಿಂಗಳು ( 29ರಿಂದ 32 ವಾರಗಳು)

ಮಗುವಿನ ಬೆಳವಣಿಗೆ ಮುಂದುವರಿಯುತ್ತಲೇ ಇರುತ್ತದೆ. ಮೆದುಳಿನ ಬೆಳವಣಿಗೆಯ ಪೂರ್ಣಗೊಂಡಿದ್ದು ಮಗು ಈಗ ಸ್ಪಷ್ಟವಾಗಿ ಕೇಳಿಸಿಕೊಳ್ಳುತ್ತದೆ ಮತ್ತು ನೋಡುತ್ತದೆ. ಎಲ್ಲ ಅಂಗಗಳ ಬೆಳವಣಿಗೆ ಯಾಗಿದ್ದರು, ಶ್ವಾಸಕೋಶದ ಬೆಳವಣಿಗೆ ಅಪೂರ್ಣಗೊಂಡಿರುತ್ತದೆ. ಈ ಅವಧಿಯಲ್ಲಿ 17 ರಿಂದ 18 ಇಂಚು ಉದ್ದ ಮತ್ತು ಐದು ಪೌಂಡುಗಳು ತೂಕ ಇರುತ್ತದೆ.

 

ಒಂಬತ್ತನೆಯ ತಿಂಗಳು (33 ರಿಂದ 36 ವಾರಗಳು)

ಮಗು ಸಂಪೂರ್ಣವಾಗಿ ಬೆಳೆದಿರುತ್ತದೆ. ಶ್ವಾಸಕೋಶಗಳು ಸಂಪೂರ್ಣವಾಗಿ ಬೆಳೆದಿರುತ್ತದೆ. ಹೊರಜಗತ್ತಿನೊಂದಿಗೆ ಸಂಪೂರ್ಣವಾಗಿ ಪ್ರತಿಕ್ರಿಯೆಯನ್ನು ನೀಡುತ್ತದೆ. ಹೊರಗೆ ಮಾತನಾಡುತ್ತಿರುವವರು ಶಬ್ದವನ್ನು ಗ್ರಹಿಸುತ್ತದೆ. ಟಾರ್ಚ್ ಬೆಳಕನ್ನು ಹೊಟ್ಟೆಯ ಮೇಲೆ ಬಿಟ್ಟಾಗ ಮಗು ಚಲನೆಯನ್ನು ನೀಡುತ್ತದೆ.

 

10ನೇ ತಿಂಗಳು (37 ರಿಂದ 40 ವಾರಗಳು)

ಇದು ಕೊನೆಯ ತಿಂಗಳು. ಈ ಸಮಯದಲ್ಲಿ ಯಾವಾಗಬೇಕಾದರೂ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಮಗುವಿನ ಚಲನೆ ನಿಮ್ಮ ಗಮನಕ್ಕೆ ಬಾರದಿರಬಹುದು. ಏಕೆಂದರೆ ಸಂಪೂರ್ಣವಾದ ದಿಯ ಬೆಳೆದ ಮಗುವಿಗೆ ಸ್ಥಳಾವಕಾಶ ಕಡಿಮೆ ಇರುತ್ತದೆ. ಮಗುವಿನ ತಲೆಯು ಯೋನಿದ್ವಾರಕ್ಕೆ ಫಿಕ್ಸ್ ಆಗಿದ್ದು ಯಾವಾಗ ಬೇಕಾದರೂ ಪ್ರಸವ ವಾಗಬಹುದು. ಅಸಹಜತೆ ನಿಮ್ಮಲ್ಲಿ ಮನೆ ಮಾಡಿರುತ್ತದೆ. ನಡೆದಾಡಲು ಕಷ್ಟವಾಗುತ್ತಿರುತ್ತದೆ. ಪೆಲ್ವಿಕ್ ಬೋನ್ ಸಡಿಲ ಗೊಂಡಿರುತ್ತದೆ. ಸಂಪೂರ್ಣವಾಗಿ ಬೆಳವಣಿಗೆಯನ್ನು ಹೊಂದಿದ ಮಗುವಿನ ಉದ್ದ 18ರಿಂದ 20 ಇಂಚುಗಳು ಇರುತ್ತದೆ. ಮಗುವಿನ ತೂಕ ಏಳು ಪೌಂಡುಗಳು ಇರುತ್ತದೆ.

#babygrowth #pregnancymilestones

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.