ಮಗುವನ್ನು ಹೆದರಿಸದಿರಿ

ಮಗುವನ್ನು ಹೆದರಿಸದಿರಿ

7 Nov 2021 | 1 min Read

Medically reviewed by

Author | Articles

ಮಕ್ಕಳ ಪಾಲನೆಯ ಸಂಪೂರ್ಣ ಜವಾಬ್ದಾರಿ ಪೋಷಕರ ಮೇಲಿರುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಶಿಸ್ತು ರೂಪಿಸುವುದು ಒಂದು ರೀತಿಯಲ್ಲಿ ಛಲಗಾರಿಕೆಯ ವಿಷಯವೇ ಸರಿ. ಮಕ್ಕಳ ಹಠ , ಕೋಪ , ಆವೇಶ, ಮತ್ತು ನಕಾರಾತ್ಮಕ ಗುಣಗಳನ್ನು ಹೋಗಲಾಡಿಸಬೇಕೆಂದರೆ, ಕೆಲವು ಪೋಷಕರು ಹಲವಾರು ರೀತಿಯ ತಂತ್ರವನ್ನು ಉಪಯೋಗಿಸುತ್ತಾರೆ. ಕೆಲವು ಪೋಷಕರು ಮಕ್ಕಳ ಮೇಲೆ ಮೃದುಧೋರಣೆ ಯನ್ನು ತೋರಿದರೆ, ಕೆಲವು ಪೋಷಕರು ಒರಟುತನವನ್ನು ಪ್ರದರ್ಶಿಸುತ್ತಾರೆ. ಈ ಎರಡೂ ಗುಣಗಳು ಮಕ್ಕಳನ್ನು ನಿಯಂತ್ರಣದಲ್ಲಿಡಲು ಇಂತಹ ಗುಣಗಳನ್ನು ಪ್ರದರ್ಶಿಸುತ್ತಾರೆ. ಮಕ್ಕಳಲ್ಲಿ ಶಿಸ್ತು ಮೂಡಿಸಲು ಈ ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡಬೇಕು ಎಂಬುದು ಸಾಮಾನ್ಯ ವಾಡಿಕೆ. ಆದರೆ ನೆನಪಿರಲಿ ನಿಮ್ಮ ಈ ಸಿಟ್ಟು ಆವೇಶ ಮೃದು ಧೋರಣೆಯಿಂದ ಮಕ್ಕಳು ಮತ್ತಷ್ಟು ಹಠದ ಸ್ವಭಾವವನ್ನು ರೂಢಿಸಿಕೊಳ್ಳಬಹುದು. ಮಕ್ಕಳು ಗಲಾಟೆ ಮಾಡುತ್ತಾರೆ, ಹಠ ಮಾಡುತ್ತಾರೆ, ಶಿಸ್ತು ಕಲಿಯುವುದಿಲ್ಲ ಎಂದು ನೀವು ಗಧರಿಸುವುದರಿಂದ ಮಕ್ಕಳ ಮನಸ್ಸಿನಲ್ಲಿ ಯಾವ ರೀತಿಯ ಭಾವನೆ ಉಂಟಾಗುತ್ತದೆ ಎಂಬುದರ ಅರಿವು ನಿಮಗಿದೆಯೇ.

 

ಬೆಳೆಯುವ ಮಕ್ಕಳಲ್ಲಿ ಶಿಸ್ತನ್ನು ಮೈಗೂಡಿಸಲು ಪೋಷಕರು ವಿವಿಧ ರೀತಿಯ ಮಾರ್ಗಗಳನ್ನು ಹಿಡಿಯುತ್ತಾರೆ. ಮಕ್ಕಳನ್ನು ಊಟ ಮಾಡಿಸಲು, ಅವರನ್ನು ಮಲಗಿಸಲು, ಶಿಸ್ತನ್ನು ರೂಡಿಸಿಕೊಳ್ಳಲು ಮಕ್ಕಳನ್ನು ಹೆದರಿಸುತ್ತಾರೆ. ಇದು ಯಾವುದೇ ರೀತಿಯ ಭಯಾನಕ ವ್ಯಕ್ತಿ ಚಿತ್ರಣ ಅಥವಾ ಸನ್ನಿವೇಶವೇ ಇರಬಹುದು. ದೆವ್ವದ ಕಥೆಗಳು , ಆತ್ಮದ ಕಥೆ ಅದರ ಜೊತೆಗೆ ದೆವ್ವದ ರೂಪದ ವರ್ಣನೆ ಇರಬಹುದು. ಎಲ್ಲಾ ರೀತಿಯ ಮಾರ್ಗವನ್ನು ಅನುಸರಿಸಿದರೆ ಮಕ್ಕಳು ಸುಲಭವಾಗಿ ಶಿಸ್ತು ಕಲಿಯುತ್ತಾರೆ ಎಂಬುದು ನಿಮ್ಮ ಊಹೆಯಾಗಿದೆ. ಈ ರೀತಿಯ ಕಲ್ಪನೆಯ ಕಥೆಗಳು ಮಕ್ಕಳ ಮನಸ್ಸನ್ನು ಮುದುಡುವಂತೆ ಮಾಡುತ್ತದೆ. ಮಕ್ಕಳಲ್ಲಿ ಒಳ್ಳೆಯ ಗುಣಗಳು ಮನೆ ಮಾಡಬಹುದು ಎಂಬುದು ನಿಮ್ಮ ಕಲ್ಪನೆಯಾದರೆ, ನಿಮ್ಮ ಕಲ್ಪಿತ ಕಥೆಗಳಿಂದ ಮಕ್ಕಳಲ್ಲಿ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂಬುದು ನೆನಪಿರಲಿ.
ಮಕ್ಕಳು ಮೂಲವಾಗಿ ತಂದೆ-ತಾಯಿಯನ್ನು ಅವಲಂಬಿಸಿರುವುದರಿಂದ, ಅಪ್ಪ-ಅಮ್ಮನ ಮಾತುಗಳನ್ನು ಮಕ್ಕಳು ನಂಬುತ್ತಾರೆ. ಯಾವುದು ಸರಿ ಅಥವಾ ಯಾವುದು ತಪ್ಪು ಎಂಬುದನ್ನು ಆಯ್ಕೆ ಮಾಡಲು ತಂದೆ ತಾಯಿಯ ಅಭಿಪ್ರಾಯವನ್ನು ನಂಬಿರುವಾಗ, ಇಲ್ಲ ಸಲ್ಲದಾದ್ ಸುಳ್ಳು ಕಲ್ಪನೆಗಳು ಅವರ ಮನಸ್ಸಿನಲ್ಲಿ ಸ್ಥಾನವನ್ನು ಆವರಿಸಲು ನೀವು ಸಹಾಯ ಮಾಡಿದಂತಾಗುತ್ತದೆ.

 

ಆತ್ಮವಿಶ್ವಾಸದ ಕೊರತೆ

ನಿರಂತರವಾಗಿ ಪೋಷಕರು ಮಕ್ಕಳನ್ನು ಹೆದರಿಸುತ್ತಿದ್ದರೆ ಅಂತ ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತದೆ. ಮಕ್ಕಳನ್ನು ಹೆದರಿಸದೆ ಇದ್ದರೆ ಶಿಸ್ತು ಮೂಡಿಸುವುದು ಹೇಗೆ ಎಂಬ ಅನುಮಾನ ನಿಮ್ಮನ್ನು ಕಾಡುತ್ತದೆ. ಮಕ್ಕಳಲ್ಲಿ ಶಿಸ್ತು ಮೂಡಿಸುವ ಕ್ರಮ ಎಂದರೆ ಸಕರಾತ್ಮಕವಾಗಿ ಅವರಲ್ಲಿ ಮೊದಲು ಬೆಳೆಸಬೇಕು. ಮಕ್ಕಳು ಒಳ್ಳೆಯ ಕಾರ್ಯ ಮಾಡಿದಾಗ ಅವರನ್ನು ಪ್ರೋತ್ಸಾಹಿಸಿ. ಆಗ ನಿಮ್ಮ ಮಾತಿಗೆ ಬೆಲೆಕೊಟ್ಟು ನೀವು ಹೇಳಿದನೆಲ್ಲ ಕೇಳುತ್ತಾರೆ. ಒಳ್ಳೆಯ ಅಭಿರುಚಿ ಇರುವ ಕಥೆ, ಪುರಾಣ ದಂತ ಕಥೆ, ಹಾಡುಗಳು, ಅದರ ಅರ್ಥ, ಕಥೆಯ ನೀತಿ ಪಾಠ ಮಕ್ಕಳಿಗೆ ನೀವು ಹೇಳಿಕೊಟ್ಟರೆ ಮಕ್ಕಳು ಸಕಾರಾತ್ಮಕವಾಗಿ ತಮ್ಮನ್ನು ರೂಪಿಸಿಕೊಳ್ಳುತ್ತಾರೆ.

 

ಇನ್ಸೆಕ್ಯೂರಿಟಿ

ಪದೇಪದೇ ಮಕ್ಕಳನ್ನು ಹೆದರಿಸುತ್ತಿದ್ದರೆ, ಅವರಿಗೆ ಒಂದು ರೀತಿಯಲ್ಲಿ ಸುರಕ್ಷತಾ ಭಾವನೆ ಬೆಳೆಯುತ್ತದೆ. ಮನಸ್ಸಿನಲ್ಲಿ ಕೀಳರಿಮೆ ಶುರುವಾಗುತ್ತದೆ. ಸದಾ ಯಾರಾದರೊಬ್ಬರು ಜೊತೆಯಲ್ಲಿ ಇರಬೇಕು ಎಂದು ಭಾವಿಸುತ್ತಾರೆ. ಮಕ್ಕಳು ಸದಾ ತಂದೆ-ತಾಯಿಯನ್ನು ಅವಲಂಬಿಸಿರುತ್ತಾರೆ. ಅವರಲ್ಲಿ ಯಾರಾದರೂ ಜೊತೆಯಲ್ಲಿ ಇಲ್ಲ ಎಂದರೆ ವಿಪರೀತ ಭಯ ಅವರನ್ನೂ ಕಾಡುತ್ತದೆ. ಹೊಸಬರನ್ನು ನೋಡಿದರೆ ಭಯವಾಗುತ್ತದೆ, ಕತ್ತಲೆಯನ್ನು ಕಂಡರೆ ಭಯ, ಶಬ್ದ ಜೋರಾಗಿ ಬಂದರೆ ಭಯ, ಎಲ್ಲಾ ರೀತಿಯ ಭಯಗಳು ಮಕ್ಕಳನ್ನು ಆವರಿಸಿಕೊಳ್ಳುತ್ತದೆ. ಒಂಟಿಯಾಗಿರಲು ಒಂದು ರೀತಿಯಲ್ಲಿ ಅಂಜುತ್ತಾರೆ.

 

ದೀರ್ಘಕಾಲದ ಭಯ

ಮಕ್ಕಳ ಮನಸ್ಸು ತುಂಬಾ ಮುಗ್ಧ. ಅವರ ಮನಸ್ಸು ತುಂಬಾ ಸೂಕ್ಷ್ಮ. ಕೆಲವು ವೇಳೆ ಭಯ ಆವರಿಸಿಕೊಂಡು ಅದು ಮುಂದುವರೆದು ದೀರ್ಘಕಾಲದವರೆಗೆ ಕಾಣಿಸಿಕೊಳ್ಳುತ್ತದೆ. ಭಯ ಮಕ್ಕಳಲ್ಲಿ ಬೃಹದಾಕಾರವಾಗಿ ಬೆಳೆದರೆ ಮಕ್ಕಳ ಮನಸ್ಸು ಮುದುಡಿ ಹೋಗುತ್ತದೆ. ಇದರಿಂದ ಅವರ ಕಲಿಕೆಯ ಸಾಮರ್ಥ್ಯ ಕುಗ್ಗುತ್ತದೆ. ಏನೇ ಆತ್ಮ ವಿಶ್ವಾಸವಂತೂ ದೂರದ ಮಾತಾಗುತ್ತದೆ. ಮಗು ಬೇರೆಯವರೊಡನೆ ಬೆರೆಯಲು ಮನಸ್ಸು ಮಾಡುವುದಿಲ್ಲ. ಇದೇ ಪ್ರೌಢಾವಸ್ಥೆಗೆ ತಲುಪಿದಾಗ ಫೋಬಿಯಾ , ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ.

 

ಹಿರಿಯರ ಮಾತಿಗೆ ಅಗೌರವ

ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಬೆಳೆಯುವುದಲ್ಲದೇ ಮಕ್ಕಳು ಹಿರಿಯರನ್ನು ಅಗೌರವದಿಂದ ಕಾಣಲು ಶುರು ಮಾಡುತ್ತಾರೆ. ನೀವು ಹೇಳುವ ಮಾತಿಗೆ ಬೆಲೆ ಇರುವುದಿಲ್ಲ. ತೋಳ ಬಂತು ತೋಳ ಕಥೆಯ ರೀತಿಯಲ್ಲಿ ನಿಮ್ಮ ಮತ್ತು ಮಗುವಿನ ಜೀವನ ಸಾಗುತ್ತದೆ. ಆದ್ದರಿಂದದ್ ಅವರನ್ನು ಸಕರಾತ್ಮಕವಾಗಿ ಬೆಳೆಸಿರಿ

#parentinggyaan

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.