8 Nov 2021 | 1 min Read
Medically reviewed by
Author | Articles
ಗರ್ಭಾವಸ್ಥೆಯ ಮಹಿಳೆಯರಲ್ಲಿ ತುಂಬಾ ಕಾಡುವ ಸಮಸ್ಯೆ ತೂಕದಲ್ಲಿ ಹೆಚ್ಚಳವಾಗುವುದು. ದೇಹದಲ್ಲಾಗುವ ಹಾರ್ಮೋನಿನ ಏರಿಳಿತದಿಂದಾಗಿ ದೇಹದ ಆಕಾರ ಹೆಚ್ಚುತ್ತ ಹೋಗುತ್ತದೆ. ಇದರ ಪರಿಣಾಮವಾಗಿ ದೇಹವು ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆ ಜೊತೆಗೆ ನಮ್ಮ ದೇಹವು ತೂಕವನ್ನು ಕಾಣುತ್ತದೆ.
ಬಹಳಷ್ಟು ಮಹಿಳೆಯರಲ್ಲಿ ಕಾಡುವ ಬಹುದೊಡ್ಡ ಸಮಸ್ಯೆಯೆಂದರೆ ತೂಕದ ಹೆಚ್ಚಳ. ಅದು ಗರ್ಭಾವಸ್ಥೆಯಲ್ಲಿ ಇರಬಹುದು, ಮೂವತ್ತರ ನಂತರ 40 ವರ್ಷದ ನಂತರ ಇರಬಹುದು. ಆಯಾ ವಯೋಮಿತಿಗೆ ಅನುಗುಣವಾಗಿ ದೇಹದ ಆಕಾರ ಬದಲಾಗುತ್ತ ಸಾಗುತ್ತದೆ. ದೇಹವು ದಿಡೀರನೆ ತೂಕ ಹೆಚ್ಚಳವಾಗಲು ಹಲವಾರು ಕಾರಣಗಳಿವೆ. ಯಾವುದೇ ವಯೋಮಿತಿಯಲ್ಲಿ ದಿಢೀರ್ ತೂಕ ಹೆಚ್ಚಾದರೆ ಅದಕ್ಕೆ ಮೂಲಕಾರಣವನ್ನು ಅನ್ವೇಷಿಸಿ. ಈ ಕೆಳಗೆ ಕೆಲವು ಉದಾಹರಣೆಯನ್ನು ನೀಡಲಾಗಿದೆ.
ನಿದ್ರಾಹೀನತೆ
ವಯಸ್ಸಾಗುತ್ತಾ ಬಂದಾಗ ನಿದ್ರೆಯ ಪ್ರಮಾಣ ಕಡಿಮೆಯಾಗುತ್ತದೆ. ಯಾವುದೇ ಕಾರಣವಿಲ್ಲದೆ ನಿಮ್ಮ ದೇಹ ದಿಡೀರನೆ ದಪ್ಪಗಾಗುತ್ತಿದೆ ಎಂದರೆ ನಿಮಗೆ ನಿದ್ದೆ ಸರಿಯಾಗಿ ಆಗುತ್ತಿಲ್ಲ ಎಂದು ಅರ್ಥ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರು, ಬಹಳ ಸಮಯ ನಿದ್ರೆ ಇಲ್ಲದೆ ಕೆಲಸ ಮಾಡುವವರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ನಿದ್ರಾಹೀನತೆ ಸಮಸ್ಯೆ ಬಹಳವಾಗಿ ಕಾಡುತ್ತದೆ. ಅದೇ ರೀತಿ ಮಿದುಳಿನ ನಿದ್ರೆಯ ವಿನ್ಯಾಸದಲ್ಲಿ, ಸುಪ್ತ ಮನಸ್ಸು ಸದಾ ಜಾಗೃತವಾಗಿದ್ದು ದಿನದಲ್ಲಿ ನಡೆದ ಘಟನಾವಳಿಗಳು ಪುನರಾವರ್ತನೆ ನಿದ್ರೆಯಲ್ಲಿ ಕನಸಿನಲ್ಲಿ ಆಗುತ್ತಿದ್ದರೆ ಅಂತವರಿಗೆ ನಿದ್ರೆ ಸರಿಯಾಗಿರುವುದಿಲ್ಲ. ಇಂಥವರಲ್ಲಿ ವಿಶೇಷವಾಗಿ ಗಣನೀಯ ಪ್ರಮಾಣದಲ್ಲಿ ತೂಕದ ಹೆಚ್ಚಳ ಇರುವವರಲ್ಲಿ ಕಾಣಿಸುತ್ತದೆ.
ಒತ್ತಡ
ನಮ್ಮ ಮನಸ್ಸು ಶಾಂತರೀತಿಯಲ್ಲಿ ಇದ್ದು ದಿನದ ಕೆಲಸ ಅದರ ಪಾಡಿಗೆ ಅದು ನಡೆದುಕೊಂಡು ಹೋಗುತ್ತಿದ್ದರೆ ಅದರ ನಡುವೆ ದಿಡೀರನೆ ಒತ್ತಡ ವಕ್ರಿಸಿಕೊಂಡುಬಿಟ್ಟರೆ ನಮ್ಮ ಮನಸ್ಸು ನಮ್ಮ ಸೀಮಿತ ನಲ್ಲಿ ಇರುವುದಿಲ್ಲ. ಸದಾ ಏನಾದರೊಂದು ಆವೇಶ ಉದ್ವೇಗ ಕಿರಿಕಿರಿಯ ಮನೋಭಾವದಲ್ಲಿ ನಾವು ಇರುತ್ತೇವೆ. ಸರಿಯಾದ ಸಮಯಕ್ಕೆ ಊಟ ಸೇರದೇ, ಸರಿಯಾಗಿ ನಿದ್ರೆಯೂ ಬಾರದೆ ಮನಸ್ಸು ಮತ್ತು ದೇಹ ವಿಲವಿಲ ಎಂದು ಒದ್ದಾಡುತ್ತದೆ. ಈ ಒತ್ತಡದ ಕಾರಣದಿಂದಾಗಿ ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನ್ ರವಿಕೆ ಹೆಚ್ಚಾಗುತ್ತದೆ. ಇದರಿಂದಾಗಿ ಹೆಚ್ಚು ಕ್ಯಾಲೋರಿಯ ಆಹಾರವನ್ನು ನೀವು ಸೇವಿಸಬಹುದು. ಸೇವಿಸುವ ಆಹಾರದ ಪ್ರಮಾಣ ನಮ್ಮ ಗಮನಕ್ಕೆ ಬಾರದಿರಬಹುದು. ಇದರಿಂದ ದೇಹ ವಿಪರೀತ ದಪ್ಪಗಾಗುತ್ತದೆ.
ಔಷಧಿಗಳಿಂದ
ಕೆಲವು ಸಂದರ್ಭದಲ್ಲಿ ಕೆಲವರಿಗೆ ಖಿನ್ನತೆಗೆ ಸಂಬಂಧಿಸಿದ ಮಾತ್ರೆಗಳನ್ನು ಸೇವಿಸುತ್ತಿದ್ದರೆ, ನಿದ್ರೆಯ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅಂತವರಿಗೆ ಔಷಧಿಯ ಕಾರಣದಿಂದಾಗಿ ದೇಹವು ದಪ್ಪಗಾಗುತ್ತದೆ. ಅಂದರೆ ತೂಕ ಹೆಚ್ಚಾಗುತ್ತದೆ. ಸ್ಟಿರಾಯ್ಡ್ ಗಳ ಬಳಕೆಯಿಂದಲೂ ತೂಕ ಹೆಚ್ಚಾಗುತ್ತದೆ. ಮುಖದ ಭಾಗ, ಹೊಟ್ಟೆ, ಕತ್ತಿನ ಭಾಗ ದಪ್ಪಗಾಗುತ್ತದೆ. ಮಾನಸಿಕ ತೊಂದರೇನು ಅನುಭವಿಸುವ ಕೆಲವು ರೋಗಿಗಳಲ್ಲಿ ಅಂದರೆ ಸೀಜೋಪ್ರೇಮಿಯ , ಬೈಪೋಲಾರ್ ಡಿಸೀಸ್ , ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿರುವವರ ಔಷಧಿಯಿಂದ ತೂಕ ಹೆಚ್ಚಳವಾಗುತ್ತದೆ.
ಹೈಪೋಥೈರಾಯಿಡಿಸಂ.
ಗಂಟಲಿನ ಭಾಗದಲ್ಲಿರುವ ಥೈರಾಯಿಡ್ ಎಂಬ ಗ್ರಂಥಿಯಿಂದ ಥೈರಾಯಿಡ್ ಹಾರ್ಮೋನ್ ಸ್ರವಿಕೆಯಾಗುತ್ತದೆ. ಈ ಕಾರಣದಿಂದ ವಿಪರೀತ ತೂಕ, ದೇಹದ ಕೆಲಸದ್ ಆಗಿರುವ ಹಣೆಯಲ್ಲಿ ಹೆಚ್ಚು ಕಡಿಮೆ ಯಾಗುವುದು, ಕೂದಲು ಉದುರುವಿಕೆ ಆ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಮೆನೊಪಾಸ್
ಬಹಳಷ್ಟು ಮಹಿಳೆಯರು ಮೆನೋಪಾಸ್ ಸ್ಟೇಜ್ ತಲುಪಿದಾಗ ತೂಕ ಹೆಚ್ಚಳ ಕಂಡುಬರುತ್ತದೆ. 45 ರಿಂದ 55 ವಯಸ್ಸಿನ ವಯೋಮಿತಿಯ ಹೆಂಗಸರಲ್ಲಿ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ. ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ನಿಯಮಿತವಾದ ಮಾಸಿಕ ಋತುಸ್ರಾವ ದಿಂದಾಗಿ ಸ್ಥೂಲಕಾಯರಾಗುತ್ತಾರೆ. ಇದು ಪ್ರೊಜೆಸ್ಟ್ರಾನ್ ಮತ್ತು ಇಸ್ಟ್ರೋಜನ್ ಹಾರ್ಮೋನಿನ ಏರುಪೇರಿನಿಂದಾಗಿ ಆಗುವ ಬದಲಾವಣೆ. ಗರ್ಭಾಶಯದಲ್ಲಿ ಪ್ರತಿತಿಂಗಳು ಮಾಸಿಕ ಚಕ್ರದ ನಂತರ ಬಿಡುಗಡೆಯಾಗುವ ಮೊಟ್ಟೆಯು ಬಿಡುಗಡೆಯಾಗದೇ ಇದ್ದರೆ ಸ್ಥೂಲಕಾಯರಾಗುತ್ತಾರೆ.
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ( ಪಿಸಿಒಎಸ್)
ಪಿಸಿಓಎಸ್ ಸಾಮಾನ್ಯ ಹಾರ್ಮೋನಿನ ಸಮಸ್ಯೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಮಾಸಿಕ ಚಕ್ರದಲ್ಲಿ ಏರುಪೇರಾಗುತ್ತದೆ. ಇವರಿಗೆ ಇನ್ಸುಲಿನ್ ಸ್ರವಿಸುವಿಕೆ ಸಾಮರ್ಥ್ಯ ಇರುವುದಿಲ್ಲ. ಈ ಸಮಸ್ಯೆ ಬಳಲುತ್ತಿರುವವರು ಬಿಪಿ ಮತ್ತು ಮಧುಮೇಹದಿಂದ ಬಳಲುತ್ತಾರೆ. ಈ ಹಾರ್ಮೋನಿನ ಸಮಸ್ಯೆಯಿಂದಾಗಿ ದೇಹದಲ್ಲಿ ಕೂದಲು ಹೆಚ್ಚಾಗಿ ಬೆಳೆಯುತ್ತದೆ. ಗಂಡಸರಿಗೆ ಇರುವಂತೆ ಮೀಸೆ ಮತ್ತು ಗಡ್ಡದ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತದೆ
ತೂಕದ ನಿಯಂತ್ರಣ
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.