8 Nov 2021 | 1 min Read
Medically reviewed by
Author | Articles
ಗರ್ಭಾವಸ್ಥೆಯ ಸಮಯವೆಂದರೆ ಒಂದು ರೀತಿಯಲ್ಲಿ ಅತ್ತಕಡೆ ಹೆಚ್ಚು ಕೆಲಸವಿಲ್ಲದ ಇತ್ತ ಕಡೆ ಸರಿಯಾಗಿ ಯಾವುದೇ ಕೆಲಸದಲ್ಲಿ ಏಕಾಗ್ರತೆ ವಹಿಸಲು ಸಾಧ್ಯವಿಲ್ಲದ ಒಂದು ಕಾಲಘಟ್ಟ. ಕೆಲಸಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಉಳಿಯುವ ಕೆಲವು ಮಹಿಳೆಯರು ದಿನವನ್ನು ತಳ್ಳಲು ತುಂಬಾ ಹರಸಾಹಸ ಪಡುತ್ತಾರೆ. ನಿಮ್ಮ ಏಕಾಗ್ರತೆ, ದಿನದ ಚಟುವಟಿಕೆ, ಮನೆಯಲ್ಲಿಯೇ ಉಳಿಯುವಿಕೆಗೆ ನಾವು ಕೆಲವೊಂದು ಹವ್ಯಾಸಗಳನ್ನು ನಿಮ್ಮ ಮುಂದಿಡಲು ಬಯಸುತ್ತೇವೆ. ಇಂಥಾ ಹವ್ಯಾಸಗಳನ್ನು ನೀವು ರೂಢಿಸಿಕೊಂಡರೆ ಗರ್ಭಾವಸ್ಥೆಯ ಅವಧಿಯನ್ನು ಹೆಚ್ಚು ಲವಲವಿಕೆಯಿಂದ ಕೂಡುವಂತೆ ಮಾಡಬಹುದು.
ಬಹಳಷ್ಟು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತಿರುತ್ತವೆ. ದೇಹದಲ್ಲಿ ಆಗುವ ಹಾರ್ಮೋನಿನ ವ್ಯತ್ಯಯದಿಂದಾಗಿ ಮಾನಸಿಕ ಏರುಪೇರು ಶುರುವಾಗುತ್ತವೆ. ಮನಸ್ಸು ಏಕಾಗ್ರತೆಯಿಂದ ಇಲ್ಲದೇ ಇರುವುದು, ಮಾನಸಿಕ ಮತ್ತು ಭಾವನಾತ್ಮಕವಾಗಿ ಏರಿಳಿತ, ಕೆಲವರಿಗೆ ದೈಹಿಕ ಸುಸ್ತು ಆವರಿಸಿಕೊಳ್ಳುತ್ತದೆ. ಸೋಮಾರಿತನ, ಸುಸ್ತು, ಆಲಸ್ಯ ಗರ್ಭಿಣಿಯರಲ್ಲಿ ಮನೆಮಾಡಿರುತ್ತದೆ. ಖಿನ್ನತೆ, ಆವೇಶ, ಪ್ರಸವಕ್ಕೆ ಮೊದಲು ಮತ್ತು ಪ್ರಸವದ ನಂತರ ಕಾಡುವ ಖಿನ್ನತೆ, ಕೆಲವು ಪರನೋಯ ಸ್ಥಿತಿಗೆ ದೇಹದಲ್ಲಿ ಹಾರ್ಮೋನಿನ ಬದಲಾವಣೆಯೇ ಕಾರಣ. ಬಹಳಷ್ಟು ಮಹಿಳೆಯರು ಆಪ್ತಸಮಾಲೋಚಕರ ಬಳಿ ತೆರಳಿ ಇದರ ನಿಯಂತ್ರಣದ ಬಗ್ಗೆ ಚರ್ಚಿಸುತ್ತಾರೆ. ತಾವಾಗಿಯೇ ಕೆಲವು ಧ್ಯಾನ, ಕೆಲಸ ಮಾಡಬೇಕೆಂದರೆ ಆಲಸ್ಯ, ಸೋಮಾರಿತನ ಮನೆ ಮಾಡಿರುವುದರಿಂದ ಯಾವುದೇ ಕೆಲಸದಲ್ಲಿ ಭಾಗಿಯಾಗುವುದು ಕಷ್ಟ ಸಾಧ್ಯ. ಇಲ್ಲಿ ಮಾಡಬೇಕಾಗಿದ್ದು ಇಷ್ಟೇ, ನಿಮ್ಮ ಮನಸ್ಸಿಗೆ ಯಾವುದು ಖುಷಿ ಕೊಡುತ್ತದೋ, ಮನಸ್ಸಿನ ಭಾವೆಯ ಏರಿತವನ್ನು ಹತೋಟಿಗೆ ತರಬಲ್ಲ ಕೆಲವು ಹವ್ಯಾಸ ರೂಢಿಸಿಕೊಳ್ಳುವುದು. ಇದರಿಂದ ಖಂಡಿತವಾಗಿ ಆಲಸ್ಯ, ಸೋಮಾರಿತನ ಮಾಯವಾಗುತ್ತದೆ.
ಸಕಾರಾತ್ಮಕ ಗರ್ಭವಾಸ್ಥೆಯ ಅವಧಿಗೆ ಹತ್ತು ಹವ್ಯಾಸಗಳು
ಗರ್ಭವಾಸ್ಥೆಯಲ್ಲಿ ನಿಮ್ಮನ್ನು ಸದಾ ಚಟುವಟಿಕೆಯಿಂದ ಇರಿಸಲು ಕೆಲವೊಂದು ಕಸರತ್ತು ನೀವು ಮಾಡಲೇಬೇಕು. ಇದಕ್ಕಾಗಿ ಹೊರಗಡೆ ನಡೆದಾಡುತ್ತಲೇ ಇರಬೇಕು ಎಂದೇನಿಲ್ಲ. ಮನೆಯಲ್ಲಿಯೇ ನಿಮ್ಮ ಮೂಡ್ ಬದಲಾವಣೆಯನ್ನು ತರಬಲ್ಲ ನಿಮಗೆ ಇಷ್ಟದ ಕೆಲಸವನ್ನು ಮಾಡಿರಿ.
ನಿಟ್ಟಿಂಗ್
ಮನೆಯಲ್ಲಿಯೇ ಉಳಿದುಕೊಳ್ಳುವ ಮಹಿಳೆಯರು ರೂಢಿಸಿಕೊಳ್ಳುವ ಮೊದಲ ಹವ್ಯಾಸ ನಿಟ್ಟಿಂಗ್. ನಿಟ್ಟಿಂಗ್ ಮಾಡುವುದು ಒಂದು ರೀತಿಯಲ್ಲಿ ಒತ್ತಡ ಮುಕ್ತವಾಗುವ ತಂತ್ರ. ನಿಟ್ಟಿಂಗ್ ಮಾಡುವಾಗ ಸಾಕಷ್ಟು ಏಕಾಗ್ರತೆ ಇರಬೇಕಾಗುತ್ತದೆ. ಅದರ ಜೊತೆಗೆ ಕಲಾತ್ಮಕ ಆಲೋಚನೆ, ಬೆರಳುಗಳ ವೇಗವೂ ಇರಬೇಕಾಗುತ್ತದೆ. ಇದರ ಜೊತೆಗೆ ದೈಹಿಕವಾಗಿ ಸ್ವಲ್ಪ ಚಲನೆ ಇರಬೇಕಾಗುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾತಿ , ಸಮಾಧಾನ ಸಿಗುತ್ತದೆ. ಮಗುವಿಗಾಗಿ ಮಾಡುವ ಸ್ವೇಟರ್, ಕಾಲು ಚೀಲ ನಿಮ್ಮನ್ನು ಕಾತುರತೆಯಿಂದ, ತುಂಬಾ ಪ್ರೀತಿಯಿಂದ ಪ್ರೇರೇಪಿಸುತ್ತದೆ. ಇದರ ಪರಿಣಾಮ ನಿಮ್ಮ ಭಾವನೆಯನ್ನು ಒಂದೇ ಅಳತೆಯಲ್ಲಿ ಏರುಪೇರಾಗದೆ ಕಾಪಾಡುತ್ತದೆ. ಮೂಡ್ ಸ್ವಿಂಗ್ ಅನುಭವ ಇರುವವರಿಗೆ ಇದು ಒಳ್ಳೆಯ ಕಸರತ್ತು.
ಚಿತ್ರಕಲೆ
ಯಾವುದೇ ವಯೋಮಾನದಲ್ಲಿ, ಯಾವುದೇ ಸಮಯದಲ್ಲಿ ಎಲ್ಲರ ಮನಸ್ಸಿನ ಭಾವನೆಯನ್ನು ಕಲಾತ್ಮಕವಾಗಿ ರೂಪಿಸುವ ಉತ್ತಮ ಹವ್ಯಾಸ. ಆರ್ಟ್ ಥೆರಪಿಯು ಖಿನ್ನತೆಯನ್ನು ಸರಿಪಡಿಸುವ ಒಂದು ತಂತ್ರ. ಸಮಾಧಾನದಲ್ಲಿ, ಮಿದುಳಿಕೆ ಕಸರತ್ತು ನೀಡಿ ನಿಮ್ಮನ್ನು ಸದಾ ಉಲ್ಲಾಸದಿಂದ ಇರಿಸಬಲ್ಲ ಒಂದು ಅದ್ಭುತವಾದ ಕಲೆ. ಈ ಹವ್ಯಾಸಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ನಿಮ್ಮ ಕಾತುರತೆ , ಉತ್ಸಾಹ ಚಿತ್ರಕ್ಕೆ ಬಣ್ಣ ಬಳಿದ ನಂತರ ಮೂಡುವ ಸೃಜನಶೀಲತೆಯನ್ನು ನೋಡಿ ನೀವು ಹಕ್ಕಿಯಂತೆ ಹಾರಾಡುತ್ತೀರಿ.
ಕಸೂತಿ ಕೆಲಸ
ಗರ್ಭವಾಸ್ಥೆಯ ಜೊತೆಯಲ್ಲಿ ಸಾಗುವ ಒಂದು ಉತ್ತಮ ಹವ್ಯಾಸ ಕಸೂತಿ ಕಲೆ. ಸೃಜನಾತ್ಮಕವಾಗಿ ಬಟ್ಟೆಯ ಮೇಲೆ ಮೂಡಿಸುವ ವಿವಿಧ ರೀತಿಯ ಕಲಾತ್ಮಕ ಕೆಲಸಗಳನ್ನು ಮಹಿಳೆಯರು ಮಾಡುತ್ತಾರೆ. ಇದು ತುಂಬಾ ಸುಲಭ ಮತ್ತು ಹೆಚ್ಚಿನ ಸಮಯವೂ ಬೇಕಾಗುವುದಿಲ್ಲ. ಒಮ್ಮೆ ಕಸೂತಿ ಕೆಲಸ ಮಾಡಿಟ್ಟರೆ ಜೀವನ ಪೂರ್ತಿ ಅದನ್ನು ನೋಡಿಕೊಂಡು ಇರಬಹುದು. ಬೇಕಾದಷ್ಟು ವಿನ್ಯಾಸಗಳನ್ನು ಮಾಡಬಹುದು. ಈ ಹವ್ಯಾಸದಲ್ಲಿ ಒಂದೇ ಕಡೆ ಮನಸ್ಸನ್ನು ಕೇಂದ್ರೀಕರಿಸಬೇಕಾಗುತ್ತದೆ. ಸೃಜನಾತ್ಮಕ ಕಲೆ ಆಗಿದ್ದು, ಮಹಿಳೆಯರನ್ನೂ ಕಾಡುವ ಮೂಡ್ ಸ್ವಿಂಗ್ ಮತ್ತು ಖಿನ್ನತೆಗೆ ಸರಿಯಾದ ಔಷಧಿ.
ಫೋಟೋಗ್ರಫಿ
ಛಾಯಾಚಿತ್ರಣ ತೆಗೆಯುವುದು ಮತ್ತೊಂದು ಒಳ್ಳೆಯ ಹವ್ಯಾಸ. ಜೀವನದ ಪ್ರತೀಯೊಂದು ಹಂತದಲ್ಲಿ ಫೋಟೋ ತೆಗೆದುಕೊಂಡರೆ, ಮುಂದೆ ಅದೊಂದು ಅದ್ಭುತ ನೆನಪಾಗಿ ಉಳಿಯಬಲ್ಲದು. ಫೋಟೋಗ್ರಫಿ ಕಲಿಯಲು ಕೆಲವು ಸಮಯ ಬೇಕಾಗುತ್ತದೆ. ಫೋಟೋಗ್ರಫಿ ಕಲಿಯುವುದು ಗರ್ಭವಾಸ್ಥೆಯಲ್ಲಿ ನಿಮ್ಮ ಸ್ನೇಹಿತನಿದ್ದಂತೆ. ನಿಮ್ಮ ಗಮನ, ಚಿತ್ರ ಸೆರೆಹಿಡಿಯುವುದು ಮಾತ್ರವಲ್ಲ.. ಇಷ್ಟದ ಚಿತ್ರ ಹೇಗೆ , ಯಾವ ಭಂಗಿಯಲ್ಲಿ ತೆಗೆದರೆ ಚೆನ್ನ ಮತ್ತು ಬ್ಯಾಕ್ಗ್ರೌಂಡ್ ಹೇಗಿರಬೇಕು, ಫೋಟೋ ಎಡ್ಜ್ ಹೇಗಿರಬೇಕು ಎಂಬುದಾಗಿ ಮನಸ್ಸಿಗೆ ಕೆಲಸವನ್ನು ಕೊಡುವ ಹವ್ಯಾಸ ಇದಾಗಿದೆ. ನಿಮ್ಮ ನೆನಪಿನ ಬುತ್ತಿಯನ್ನು ಅದ್ಭುತವಾಗಿ ಸೆರೆಹಿಡಿದು ನಿಲ್ಲಬಲ್ಲ ಹವ್ಯಾಸ ಫೋಟೋಗ್ರಫಿ.
ಬರವಣಿಗೆ
ನಿಮ್ಮ ಅಭಿವ್ಯಕ್ತಿಯನ್ನು ಪ್ರತಿನಿಧಿಸುವ ಏಕೈಕ ಹವ್ಯಾಸ ಬರವಣಿಗೆ. ಇದರಲ್ಲಿ ನಿಮ್ಮ ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳಬಹುದು. ಇಂಥಾ ಹವ್ಯಾಸವನ್ನು ಗರ್ಭವಾಸ್ಥೆಯ ಸಮಯದಲ್ಲಿ ಆಯ್ಕೆ ಮಾಡಿಕೊಂಡರೆ ಉತ್ತಮೇ. ಆಲೋಚನೆ, ಮನಸ್ಸಿನ ಮತ್ತು ನಿಮ್ಮ ಅಭಿವ್ಯಕ್ತಿಯನ್ನು ಹೊರಬಿಂಬಿಸುವಾಗ ಮಿದುಳಿನಲ್ಲಿ ರಾಸಾಯನಿಕ ಕ್ರಿಯೆ ಆರಂಭವಾಗುತ್ತದೆ. ಇದು ಖಿನ್ನತೆ, ಆವೇಶ, ಒತ್ತಡದವನ್ನು ನಿಭಾಯಿಸುತ್ತದೆ. ಮಿದುಳಿನ ಕಸರತ್ತ್ತು ನಡೆಯುವುದರಿಂದ ದೇಹ ಸದಾ ಚಟುವಟಿಕೆಯಿಂದ ಕೂಡಿರುತ್ತದೆ.
ಗಾರ್ಡನಿಂಗ್
ನಿಮ್ಮ ಮನಸ್ಸಿಗೂ ದೇಹಕ್ಕೂ ಕಸರತ್ತು ನೀಡುವ ಉತ್ತಮ ಹವ್ಯಾಸ. ನೀವು ನೆಟ್ಟ ಗಿಡದ ಆರೈಕೆ, ಮಣ್ಣು ಸಮಪ್ರಮಾಣದಲ್ಲಿ ಬೆರೆಸಿ, ನೀರು ಉಣಿಸುವಾಗ ಒಂದು ಮಗುವನ್ನು ಪೋಷಿಸಿದ ರೀತಿ ನಿಮ್ಮ ಮನಸ್ಸಿನಲ್ಲಿ ಸಂತೋಷದ ಭಾವ ಉಂಟಾಗುತ್ತದೆ. ತರಕಾರಿ ಬೆಳೆಸುವುದು, ಹೂವಿನ ಗಿಡದ ನಿಭಾಸಿವಿಕೆ ಒಂದು ರೀತಿಯಲ್ಲಿ ನಿಮಗೆ ಕೈ ತುಂಬಾ ಕೆಲಸವನ್ನು ಕೊಡುತ್ತದೆ. ನೀವು ಇಷ್ಟ ಪಟ್ಟು ಬೆಳೆಸಿದ ಗಿಡ ಮತ್ತು ಕೈತೋಟದಲ್ಲಿ ಹಣ್ಣು, ತರಕಾರಿ , ಹೂ ಬಿಟ್ಟಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ಯಾವುದೇ ರಾಸಾಯನಿಕವನ್ನು ಬಳಸದೇ , ಸದಾ ಸಾವಯವ ಕೃಷಿಯನ್ನು ನೀವು ಮಾಡುವುದರಿಂದ ನಿಮ್ಮಲ್ಲಿ ಸಕಾರಾತ್ಮಕ ಮನೋಭಾವ ಬೆಳೆಯುತ್ತದೆ.
ಪಾಟ್ ವಿನ್ಯಾಸ
ಪಾಟ್ ವಿನ್ಯಾಸ ಮಾಡುವುದು ಒಂದು ರೀತಿಯಲ್ಲಿ ನಿಮ್ಮ ಮನಸ್ಸನ್ನು ಏಕಾಗ್ರತೆಯಲ್ಲಿ ಇಡಲು ಸಹಾಯಕ. ಗಾರ್ಡೆನಿಂಗ್, ಚಿತ್ರ ಬಿಡಿಸುವುದು, ಮತ್ತು ನಿಟ್ಟಿಂಗ್ ಮಾಡಿದಾಗ ದೇಹ ಮತ್ತು ಮನಸ್ಸಿಗೆ ಸಿಗುವ ಫಲಿತಾಂಶ ಇದರಲ್ಲಿ ಸಿಗುತ್ತದೆ. ಪಾಟ್, ಪಿಂಗಾಣಿ ಪಾತ್ರೆಯಾ ಮೇಲೆ ನಿಮಗೆ ಇಷ್ಟದ ಚಿತ್ರ ಬಿಡಿಸುವುದು ಒಂದು ರೀತಿಯಲ್ಲಿ ಶ್ರೀಮಂತಿಕೆಯ ಕಲೆಯೇ ಸರಿ. ನಿಮ್ಮ ಮಿದುಳನ್ನು ಸಂಪೂರ್ಣವಾಗಿ ಅದರಲ್ಲೇ ತೊಡಗಿಸಿ ಒಂದು ವಿನ್ಯಾಸ ರೂಪಿಸಿವುದು ಒಂದು ರೀತಿಯಲ್ಲಿ ಸಾಹಸಮಯ ಕೆಲಸ. ಮನಸ್ಸಿನ ಭಾವನೆಗೆ ವಿಶ್ರಾಂತಿ ದೊರಕಿದಂತೆ. ಗರ್ಭಾವಸ್ಥೆಯಿಂದ ಒಂದು ವೇಳೆ ನೀವು ಒತ್ತಡಕ್ಕೆ ಒಳಗಾಗಿದ್ದರೆ , ಈ ಹವ್ಯಾಸವು ನಿಮ್ಮನ್ನು ಒತ್ತಡಮುಕ್ತರಾಗಿ ಮಾಡಬಲ್ಲದು. ನಿಮ್ಮ ಕಲಾತ್ಮಕ ವಿನ್ಯಾಸವನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿ ಅವರಿಂದ ನೀವು ಹೊಗಳಿಕೆ ಮತ್ತು ಪ್ರೋತ್ಸಾಹ ಗಳಿಸಿಕೊಂಡರೆ ಅದಕ್ಕಿಂದ ಸಂತೋಷ ಬೇರೊಂದಿಲ್ಲ. ಈ ಹವ್ಯಾಸ ಇತ್ತೀಚೆಗೆ ಬಹಳ ಪ್ರಸಿದ್ದಿಯನ್ನು ಪಡೆದಿದೆ.
ಇನ್ಸ್ಟ್ರುಮೆಂಟ್ ಕಲಿಕೆ
ನಿಮ್ಮ ಭಾವನೆಯ ಏರಿಳಿತವನ್ನು ನಿಯಂತ್ರಿಸುವ ಉತ್ತಮ ಮಾತ್ರಿಕ ಶಕ್ತಿ ಸಂಗೀತಕ್ಕೆ ಇದೆ. ಸಂಗೀತವು ನಿಮ್ಮ ಮನಸ್ಸನ್ನು ಶಾಂತವಾಗಿ ಇರಿಸುವುದು ಮಾತ್ರವಲ್ಲದೇ , ಸದಾ ಉಲ್ಲಾಸದಿಂದ ಇರುತ್ತೀರಿ. ಸಂಗೀತದ ಹವ್ಯಾಸ ನೀವು ಗರ್ಭವಾಸ್ಥೆಯಲ್ಲಿ ಬೆಳೆಸುವುದರಿಂದ ನಿಮ್ಮ ಮಗುವಿನ ಬೆಳವಣಿಗೆ ಸಕಾರಾತ್ಮವಾಗಿ ರೂಪುಗೊಳ್ಳುತ್ತದೆ. ನಿಮ್ಮ ಮತ್ತು ನಿಮ್ಮ ಮಗುವಿನ ಸಂಬಂಧ ಗಟ್ಟಿಯಾಗುತ್ತದೆ. ಒಂದು ರೀತಿಯಲ್ಲಿ ಅನನ್ಯ ಭಾಂಧವ್ಯ ಏರ್ಪಡುತ್ತದೆ. ಮಗುವಿನ ಮಿದುಳಿನ ಸಂಗೀತ ಚಿಕಿತ್ಸೆಯನ್ನು ಕೆಲವು ಕಡೆ ನೀಡಲಾಗುವುದು. ಮಗುವಿನ ಮಿದುಳಿನ ಚಟುವಟಿಕೆಯನ್ನು ಅರಿಯಲು ಒಂದು ಉತ್ತಮ ರೀತಿಯ ಹವ್ಯಾಸ ಇದಾಗಿದೆ. ವಿಶ್ರಾಂತಿ ಪಡೆಯಲು ಸಂಗೀತವನ್ನು ಕೇಳಿರಿ. ಕಲಿಕೆಯು ಕೂಡ ಉತ್ತಮ.
ಹೊಸ ಖಾದ್ಯ ತಯಾರಿಸಿ.
ಮಾಡುವುದನ್ನು ತುಂಬಾ ಇಷ್ಟ ಪಡುತ್ತಾರೆ. ಹೊಸ ಹೊಸ ರೀತಿಯ ಭಕ್ಷಣೆಯನ್ನು ತಯಾರಿಸುತ್ತಾರೆ. ನೀವೇ ಇಷ್ಟ ಪಟ್ಟು ಅದನ್ನು ಮಾಡಿ, ನಿಮಗೆ ಇಷ್ಟದವರಿಗೆ ಅದನ್ನು ತಿನ್ನಲು ಬಡಿಸಿದರೆ ಅದಕ್ಕಿಂತ ಸಂತೋಷದ ಸಂಗತಿ ಬೇರೊಂದಿಲ್ಲ. ಹೊಸ ರೀತಿಯ ಅನ್ವೇಷಣೆ ನಿಮ್ಮನ್ನು ಶಾಂತ, ಸೃಜನಾತ್ಮಕ ಮತ್ತು ಕೇಂದ್ರೀಕರಿಸುವಂತೆ ಮಾಡುತ್ತದೆ. ಉತ್ತಮ ರೀತಿಯ ಆಹಾರ ಸೇವನೆ ಒಂದು ರೀತಿಯ ಸಕಾರಾತ್ಮಕ ಭಾವನೆಯನ್ನು ಸಹಾಯವಾಗುತ್ತದೆ.
ಕಸದಿಂದ ರಸ
ಹಳೇಯ ನೀರಿನ ಉಪಯೋಗಿಸಿ ಪೆನ್ ಪಾಟ್ , ಹೂ ಗಿಡ ಇಡಲು ಬಳಸುವುದು, ನಿಮ್ಮನ್ನು ಶಾಂತ ಮತ್ತು ಸದಾ ಚಟುವಟಿಕೆ ಮತ್ತು ಯಾವುದಾದರೂ ಒಂದು ಸೃಜನಾತ್ಮಕ ಆಲೋಚನೆಯಲ್ಲಿ ಇರುವಂತೆ ಮಾಡುತ್ತದೆ. ಮಿದುಳು ಸದಾ ಒತ್ತಡ, ಖಿನ್ನತೆಗೆ ಆಸ್ಪದ ಇರುವುದಿಲ್ಲ. ಮಕ್ಕಳಲ್ಲಿಯೂ ಕೂಡ ವಸ್ತುವನ್ನು ನಿರುಪಯೋಗ ಎಂದು ಬಿಸಾಡುವ ಬದಲು ಇದರಿಂದ ಸೃಜನಾತ್ಮಕವಾಗಿ ಏನನ್ನು ತಯಾರಿಸಬಹುದು ಎಂದು ಆಲೋಚಿಸುವಂತೆ ಮಾಡುತ್ತದೆ.
ಹವ್ಯಾಸಗಳು ನಿಮ್ಮನ್ನು ಹೆಚ್ಚು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ನಿಮ್ಮ ಖಿನ್ನತೆ, ಒತ್ತಡ, ಆವೇಶ ದ ಭಾವನೆಯನ್ನು . ಬೋರ್ ಅನ್ನುವ ಮಾತಿಗೆ ತಿಲಾಂಜಲಿ ಇಡುತ್ತದೆ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.