8 Nov 2021 | 1 min Read
Medically reviewed by
Author | Articles
ಮಕ್ಕಳು ಅಂದರೆ ಇತ್ತೀಚಿನ ದಿನಗಳಲ್ಲಿ ಅವರ ಬೆಳವಣಿಗೆ ಸಾಮಾಜಿಕ ಜೀವನದ ಕಾಳಜಿ ಎಲ್ಲವೂ ಒಂದು ಜವಾಬ್ದಾರಿಯ ಕೆಲಸವಾಗಿದೆ. ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಆಫೀಸಿಗೆ ಹೋಗುವುದಾದರೆ, ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ಕೆಲಸಗಾರರನ್ನು ಇಡುತ್ತಾರೆ. ಹಳ್ಳಿ ಆದರೆ ಬಾಲವಾಡಿ ಅಂಗನವಾಡಿಗಳಲ್ಲಿ ಮಕ್ಕಳನ್ನು ಬಿಟ್ಟು ಕೆಲಸ ಕಾರ್ಯಕ್ಕೆ ತಂದೆ-ತಾಯಿ ತೆರಳುತ್ತಾರೆ. ಮಕ್ಕಳು ಎಂದರೆ ಹೆಚ್ಚಿನ ಸುರಕ್ಷತೆ ಇಂದಿನ ಕಾಲಘಟ್ಟದಲ್ಲಿ ಅವಶ್ಯಕ. ಅದು ಹೆಣ್ಣಾಗಲಿ ಗಂಡಾಗಲಿ , ಮಕ್ಕಳನ್ನು ನೋಡಿಕೊಳ್ಳುವುದು ಎಂದರೆ ಒಂದು ಕೆಲಸವೇ ಸರಿ. ಆಡುವ ಮಕ್ಕಳು ಸದಾ ಹೊರಗಡೆ ಆಟವಾಡುವಾಗ ಯಾವುದೇ ರೀತಿಯ ಸುರಕ್ಷತಾ ಕ್ರಮವನ್ನು ತೆಗೆದುಕೊಳ್ಳದೆ ಆಟವಾಡುತ್ತಾರೆ. ಮತ್ತೆ ಮಕ್ಕಳಿಗೆ ಸುರಕ್ಷತೆ ಬಗ್ಗೆ ಅರಿವು ಇರುವುದಿಲ್ಲ. ಹಿರಿಯರಾದ ತಂದೆ-ತಾಯಿ ಅಜ್ಜ-ಅಜ್ಜಿ ಅಥವಾ ಮಕ್ಕಳನ್ನು ಪೋಷಿಸುವ ಯಾರೇ ಆಗಲಿ ಮಕ್ಕಳ ಸುರಕ್ಷಿತೆಯ ಬಗ್ಗೆ ಗಮನಹರಿಸಬೇಕು. ಅದರಲ್ಲೂ ಒಂದು ಹೆಣ್ಣು ಮಗು ಇದ್ದರಂತೆ ಹೆಚ್ಚಿನ ಸುರಕ್ಷತೆ -ಗಮನ ವಹಿಸಬೇಕಾಗುತ್ತದೆ.
ಇಂದು ಬಹಳಷ್ಟು ವೃತ್ತಪತ್ರಿಕೆಯಲ್ಲಿ ಚೈಲ್ಡ್ ಹರಾಸ್ಮೆಂಟ್, ಚೈಲ್ಡ್ ಅಬ್ಯೂಸ್ ಪದ ಬಳಕೆ ನೋಡಿದ್ದೇವೆ. ಇದಕ್ಕೆ ಉತ್ತರ ನಮ್ಮ ಕಣ್ಣು ಮುಂದೆ ನಡೆಯುವ ಹಲವಾರು ಅಹಿತಕರ ಘಟನೆಗಳು. ಇಂದು ಮಕ್ಕಳು ಸುರಕ್ಷಿತವಾಗಿ ಹೊರಗಡೆ ಆಟವಾಡಲು ಸಾಧ್ಯವಿಲ್ಲ. ಅದರಲ್ಲೂ ಹೆಣ್ಣು ಮಕ್ಕಳನ್ನು ಆ ಸುರಕ್ಷಿತರಾಗಿರುತ್ತಾರೆ. ಸದಾ ಅವರ ಬೆನ್ನ ಹಿಂದೆ ಯಾರಾದರೂ ಹಿರಿಯರು ಇರಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೆಣ್ಣು ಮಗು ಮತ್ತು ಅದರ ಸುರಕ್ಷತೆ ಬಗ್ಗೆ ಮಾಹಿತಿಯನ್ನು ತಿಳಿಯೋಣ.
ಸೇಫ್ ಮತ್ತು ಅನ್ಸೇಫ್ ಟಚ್
ಹೆಣ್ಣು ಮಗು ಹೊರಗಡೆ ಆಟವಾಡುತ್ತಿರುವಾಗ ಪಕ್ಕದಲ್ಲಿ ಮಗುವಿನ ಬಳಿ ಯಾರು ಇದ್ದಾರೆ ಎಂಬುದನ್ನು ಗಮನಿಸಿ ನೋಡಿ. ಮಗು ಮನೆಯಲ್ಲಿ ನಿಮ್ಮ ಜೊತೆಯಲ್ಲಿ ಏನಾದರೊಂದು ಹೇಳಿಕೊಳ್ಳಲು ಕಷ್ಟಪಟ್ಟು ತಡಕಾಡುತ್ತಿದ್ದರೆ ಆಗುವ ಮನಸನ್ನು ಮುಕ್ತವಾಗಿ ಬೆರೆಯಲು ಅವಕಾಶ ಮಾಡಿಕೊಡಿ. ಮನೆಯಿಂದ ಹೊರಗಡೆ ಆಟವಾಡಲು ಹೋಗುವಾಗ ಚಾಕಲೇಟ್ ಕೊಟ್ಟರೆ ತೆಗೆದುಕೊಳ್ಳಬಾರದು ಎಂಬುದನ್ನು ತಿಳಿಹೇಳಿ. ಇದರ ಜೊತೆಗೆ ಟಚ್ ಬಗ್ಗೆ ಮಗುವಿಗೆ ಹೇಳಿ ಕೊಡಿ. ಅಸಹಜವಾಗಿ ಮಗುವಿನ ಬೆನ್ನಹಿಂದೆ ವೃತ್ತಾಕಾರವಾಗಿ ಕೈಯಾಡಿಸಿದರೆ, ತುಟಿಯನ್ನು ಸ್ಪರ್ಶಿಸಿದರೆ, ಕೈಯನ್ನು ಹಿಡಿದುಕೊಂಡು ವೃತ್ತಾಕಾರವಾಗಿ ಸ್ಪರ್ಶಿಸುತ್ತಾ ಭುಜದವರೆಗೆ ಕೈಯನ್ನು ತಂದರೆ, ಅಂತ ಸ್ಪರ್ಶವನ್ನು ಮನೆಯಲ್ಲಿ ಹೇಳಬೇಕು ಎಂಬುದಾಗಿ ತಿಳಿಹೇಳಿ. ಮಗು ಇದ್ದಕ್ಕಿದ್ದ ಹಾಗೆ ನಿಮಗೆ ಪರಿಚಿತ ಇರುವ ಯಾವುದಾದರೂ ವ್ಯಕ್ತಿಯನ್ನು ಕಂಡರೆ ತುಂಬಾ ನಾಚಿಕೊಂಡರೆ, ದಯವಿಟ್ಟು ಅಂಥ ವ್ಯಕ್ತಿಗಳ ಮೇಲೆ ತುಂಬಾ ನಿಗಾವಹಿಸಿ. ಈಗ ಬಹಳಷ್ಟು ಚೈಲ್ಡ್ ಅಬ್ಯೂಸ್ ವಿಷಯಗಳು ಹೊರಬರುತ್ತಿವೆ. ನಿಮ್ಮ ಮಕ್ಕಳ ಬಗ್ಗೆ ನೀವು ಜಾಗೃತೆ ವಹಿಸಬೇಕು ಹೊರತು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಹೆಣ್ಣುಮಗು ಮನೆಯಲ್ಲಿದ್ದರೆ ಅದರ ಸುರಕ್ಷತೆಯನ್ನು ಯೋಚಿಸಿ.
ಮಗುವಿನ ಆರೋಗ್ಯ ಮತ್ತು ಜೀವನ ಶೈಲಿ
ಇತ್ತೀಚೆಗೆ ಹೆಣ್ಣು ಮಗುವಿನ ಭ್ರೂಣಹತ್ಯೆ ಬಹು ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ, ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ಗಂಡುಮಕ್ಕಳ ಬಗೆಗಿನ ವ್ಯಾಮೋಹ ಹೆಣ್ಣು ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಹೇಳಬಹುದು.
ಮಗುವಿಗೆ ಸನ್ನೆಯ ಕಲಿಕೆ
ಅಪರಿಚಿತ ವ್ಯಕ್ತಿಗಳು ಮಗುವಿನ ಹತ್ತಿರದಲ್ಲಿದ್ದಾಗ. ಅಸಂಬದ್ಧ ವರ್ತನೆ ತೋರಿದಾಗ, ಮಗುವಿಗೆ ಏನು ಹೇಳೋದು ಯಾರನ್ನು ಕರೆಯುವುದು ತಿಳಿಯದಾದಾಗ. ಅವಳಿಗೆ ಏನೋ ನನ್ನ ಸುತ್ತ ನಡೆಯುತ್ತಿದೆ ಎಂದು ಗೊತ್ತಾದ ತಕ್ಷಣ “ನೋ” ಎಂದು ಕಿರುಚಲು ಹೇಳಿ.
ಸೈಬರ್ ಕ್ರೈಮ್.
ಮಗು ಶಾಲೆಯಾಗಲಿ, ಟ್ಯೂಷನ್ ಗೆ ಹೋಗಿದ್ದಾಗಲಿ, ಎಲ್ಲೇ ಇರಲಿ ಇಂದು ಮಕ್ಕಳಿಗೆ ಮೂಲಕ ಹಲವಾರು ರೀತಿಯಲ್ಲಿ ಮಕ್ಕಳ ಸುರಕ್ಷತೆಗೆ ಕಾರ್ಯಯೋಜನೆ ಜಾರಿಯಲ್ಲಿವೆ. ಹೆಣ್ಣುಮಕ್ಕಳ ಜೊತೆಯಲ್ಲಿ ಒಂದು ಮೊಬೈಲ್ ಯಾವಾಗಲೂ ಜೊತೆಯಲ್ಲಿರಲಿ. ಸ್ವಲ್ಪ ದೊಡ್ಡ ಮಕ್ಕಳಾದರೆ, ಇಂಟರ್ನೆಟ್, ದೂರವಾಣಿ ಸಂಖ್ಯೆಯನ್ನು ತಿಳಿದಿದ್ದರೆ ಎಲ್ಲಿ ಒಂದು ಘಟನೆ ನಡೆಯುತ್ತದೆ ಎಂದು ತಿಳಿದ ತಕ್ಷಣ, ನಿರ್ಭಯ ಸಂಖ್ಯೆಯನ್ನು ಸರಿಯಾಗಿ ಕೋರಬಹುದು.
ಆತ್ಮರಕ್ಷಣೆ
ಅಹಿತಕರ ಘಟನೆಯ ನಡೆದಾಗ ಯಾವ ರೀತಿಯಲ್ಲಿ ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ಮಕ್ಕಳಿಗೆ ಮೊದಲೇ ತಿಳಿಸಬೇಕು. ಇದಕ್ಕಾಗಿ ಹಲವಾರು ಟ್ರೈನಿಂಗ್ ನಡೆಯುತ್ತಿವೆ. ಅಂತ ಟ್ರೈನಿಂಗ್ ಸೆಂಟರ್ ನಲ್ಲಿ ನಿಮ್ಮ ಮಗುವಿಗೆ ಆತ್ಮರಕ್ಷಣೆಯ ಕುಶಲತೆಯನ್ನು ಕಲಿಯಲು ಬಿಡಿ. ಇದರ ಜೊತೆಗೆ ಮಗುವಿನ ಜೊತೆಯಲ್ಲಿ ಸದಾ ಪೇಪ್ಪರ್ ಸ್ಪ್ರೇ ಆತ್ಮರಕ್ಷಣೆಗೆ ಜೊತೆಗಿರಲಿ.
ಇಂದು ನಾವು ಹೆಣ್ಣು ಮಗುವಿನ ಸುರಕ್ಷತೆಯ ಬಗ್ಗೆ ಅತಿಯಾಗಿ ಯೋಚಿಸುವ ಹಾಗಾಗಿದೆ. ಅದು ಒಂದು ವರ್ಷ ಮಗುವಿನಿಂದ ಹಿಡಿದು ಕಾಲೇಜಿಗೆ ಹೋಗುವ ಮಗುವಿನ ವರೆಗೆ ಸದಾ ಅವರ ಸುರಕ್ಷತೆಯ ಬಗ್ಗೆ ಯೋಚಿಸುವಂತಾಗಿದೆ. ಹೆಣ್ಣುಮಕ್ಕಳ ಜನನ ಅಂಕಿಅಂಶದ ಪ್ರಮಾಣದಲ್ಲಿ, ಗಣನೀಯವಾದ ಇಳಿಕೆ, ಸಮಾಜದಲ್ಲಿ ಅವರಿಗಿರುವ ಸ್ಥಾನಮಾನವನ್ನು ನೆನೆಯುತ್ತ ಹೆಣ್ಣುಮಕ್ಕಳ ರಕ್ಷಣೆಗೆ ನಾವೆಲ್ಲರೂ ಒಂದಾಗಬೇಕಾಗಿದೆ.
A