ನವಜಾತ ಶಿಶುವಿನ ನಿರ್ವಹಣೆ

ನವಜಾತ ಶಿಶುವಿನ ನಿರ್ವಹಣೆ

8 Nov 2021 | 1 min Read

Medically reviewed by

Author | Articles

ಆಗತಾನೇ ಜನಿಸಿದ ಮಗುವಿನ ಬಗ್ಗೆ ಮನೆಯ ಸದಸ್ಯರು ಮತ್ತು ಮಗುವಿನ ತಾಯಿಯಲ್ಲಿ ತುಂಬಾ ಸೂಕ್ಷ್ಮವಾದ ಭಾವನೆ ಇರುತ್ತದೆ. ಏಕೆಂದರೆ ಮಗುವಿನ ಚರ್ಮ , ದೇಹ, ಮನಸು ತುಂಬಾ ಮೃದುವಾಗಿರುತ್ತದೆ. ನಾವು ಮಗುವನ್ನು ಸ್ಪರ್ಶಿಸಿದಾಗ, ನಮ್ಮ ಸ್ಪರ್ಶದಿಂದ ಮಗುವಿಗೆ ನೋವಾಗುತ್ತದೆ ಎಂಬ ಭಾವನೆ ನಮ್ಮೆಲ್ಲರಲ್ಲಿ ಮೂಡುವುದು ಸಹಜ. ನವಜಾತ ಶಿಶುವಿನ ಆರೈಕೆ ಅದರ ನಿರ್ವಹಣೆ ತುಂಬಾ ಸೂಕ್ಷ್ಮ ವಾಗಿರಬೇಕು. ಹೊಸದಾಗಿ ತಂದೆ-ತಾಯಿ ಅವರಿಗಂತೂ ಮಗುವಿನ ಬಗ್ಗೆ 24ಗಂಟೆಯೂ ಆಲೋಚನೆ ಇರುತ್ತದೆ. ಮಗು ಅಳುವಾಗ ಇವರು ಜಾಗೃತರಾಗುತ್ತಾರೆ. ಮಗು ಅಳುತ್ತಾ ಇದ್ದರೆ ಭಯಭೀತರಾಗುತ್ತಾರೆ. ಮಗು ಹುಟ್ಟಿದ ಕೆಲವು ತಿಂಗಳವರೆಗೆ ರಾತ್ರಿ ನಿದ್ರಿಸದೆ ಇರುವುದು ನೋಡಿ ಮಗುವಿನ ಪೋಷಕರು ಕಳವಳ ವ್ಯಕ್ತಪಡಿಸುತ್ತಾರೆ.

1. ಮೊದಲ ದಿನದ ನಿರ್ವಹಣೆ.

ಮಗುವಿನ ನಿರ್ವಹಣೆಯ ಪ್ರಮುಖ ಭಾಗ ಮಗುವನ್ನು ಸ್ವಚ್ಛಗೊಳಿಸುವುದು. ಆರಂಭದ ದಿನಗಳಲ್ಲಿ ಮಗುವನ್ನು ಸ್ನಾನ ಮಾಡಿಸುವುದು ನಿಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಸ್ಪಾಂಜ್ ಬಾತ್ ಸೂಕ್ತ. ನಂತರ ಮಗುವಿಗೆ ಎದೆ ಹಾಲು ಕುಡಿಸುವುದನ್ನು ಕಲಿಸಬೇಕಾಗುತ್ತದೆ. ಅದಕ್ಕಾಗಿ ತಾಯಿಯು ತನ್ನ ಸ್ತನದ ತೊಟ್ಟನ್ನು ಮಗುವಿನ ಬಾಯಿಗೆ ಇಡಬೇಕು.

2. ದಾರಿಯ ರಿಂದ ಮಾಹಿತಿ ಪಡೆಯಿರಿ.

ಹೆರಿಗೆಯ ನಂತರ ಕನಿಷ್ಠ ಮೂರರಿಂದ ನಾಲ್ಕು ದಿವಸ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ. ನಿಮ್ಮ ಜೊತೆ ಹಿರಿಯರು ಇದ್ದರೆ ಮಗುವನ್ನು ಎತ್ತಿಕೊಳ್ಳುವುದು ಹಾಲು ಕುಡಿಸುವ ಬಗ್ಗೆ ತೋರಿಸಿಕೊಳ್ಳುತ್ತಾರೆ. ಆದರೆ ಕೆಲವೊಂದು ಆಸ್ಪತ್ರೆಯಲ್ಲಿ ಮಗುವಿನ ತಂದೆ-ತಾಯಿ ಬಿಟ್ಟರೆ ಬೇರೆ ಯಾರಿಗೂ ಪ್ರವೇಶ ಇರುವುದಿಲ್ಲ. ಅಂಥ ಸಂದರ್ಭದಲ್ಲಿ ಹಾಸ್ಪಿಟಲ್ ದಾದಿಯರ ಸಹಾಯವನ್ನು ನೀವು ಕೇಳಬಹುದು. ಮಗುವಿನ ನಿರ್ವಹಣೆಯ ಬಗ್ಗೆ ಅವರಿಗೆ ಸಂಪೂರ್ಣ ಜ್ಞಾನ ಇರುವುದರಿಂದ, ಮಗುವಿಗೆ ಹಾಲು ಕುಡಿಸುವುದು, ಸೂಕ್ಷ್ಮ ಶರೀರವನ್ನು ಎತ್ತಿಕೊಳ್ಳುವುದು, ಹಾಲು ಕುಡಿಸಿದ ನಂತರ ಮಗುವಿಗೆ ಬರ್ಬ್ ಮಾಡಿಸುವುದು, ಮಗುವಿನ ಬಟ್ಟೆಯ ನಿರ್ವಹಣೆ, ಮಲವಿಸರ್ಜನೆ, ಮಗುವನ್ನು ಸ್ವಚ್ಛಗೊಳಿಸುವುದರ ಬಗ್ಗೆ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳಿ.

3. ಮನೆಗೆ ಮಗುವಿನ ಆಗಮನ.

ಮಗು ಮನೆಗೆ ಆಗಮಿಸಿದ ತಕ್ಷಣ ಮಗುವನ್ನು ಎಲ್ಲರೂ ಮುದ್ದಿಸುತ್ತಾ ರೆ. ಎತ್ತಿಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವು ಕಡೆ ಮಗು ಬಂದ ತಕ್ಷಣ ಮನೆಗೆ ಧೂಪ ಹಾಕುವುದು ಮಾಡುತ್ತಾರೆ. ಮನೆಗೆ ಒಂದು ರೀತಿಯಲ್ಲಿ ಹೊಗೆ ತುಂಬಿಕೊಂಡಿರುತ್ತದೆ. ಅದೇ ರೀತಿ ಮಗುವಿನ ದೃಷ್ಟಿ ತೆಗೆಯಲು ಕಸಬರಿಕೆಯಿಂದ ನಿವಾಳಿಸಿ ತೆಗೆಯುತ್ತಾರೆ. ಅದರಲ್ಲಿ ತುಂಬಿರುವ ಹೂಳು ಸೂಕ್ಷ್ಮ ಶರೀರಕ್ಕೆ ತಗುಲಿದಾಗ ಅಲರ್ಜಿಗೆ ಕಾರಣವಾಗಬಹುದು. ಹೊಗೆಯಿಂದ ಮಗುವಿಗೆ ಉಸಿರುಗಟ್ಟುವ ವಾತಾವರಣ ವಾಗಬಹುದು. ಅದೇ ರೀತಿ ಕೈಯಿಂದ ಕೈಗೆ ಮಗುವನ್ನು ಎತ್ತಿ ಆಡಿಸಿದರೆ ಮೂಲಕ ಮಗುವಿನ ದೇಹಕ್ಕೆ ನೋವಾಗಬಹುದು. ಇದೆಲ್ಲದರ ಗಮನದಲ್ಲಿ ಇಟ್ಟುಕೊಂಡು ಮಗುವಿನ ತಾಯಿ ಮಗುವನ್ನು ಕೆಲವು ದಿನಗಳವರೆಗೆ ಮನೆಯ ಸದಸ್ಯರ ಹೊರತಾಗಿ ಬೇರೆ ಯಾರಿಗೂ ಮಗುವನ್ನು ಕೊಡಬೇಡಿ.

4.ಮಗುವಿಗೆ ತಾಪಮಾನ

ತಾಯಿಯ ಗರ್ಭದಲ್ಲಿ ನವಮಾಸ ಕಳೆಯುವ ಮಗುವಿಗೆ ಹೊರಗೆ ಬಂದ ತಕ್ಷಣ ಹೊರಗಿನ ವಾತಾವರಣ ಸರಿಹೊಂದುವುದಿಲ್ಲ. ಆದಷ್ಟು ಮಗುವನ್ನು ಬೆಚ್ಚಗಿಡಲು ಪ್ರಯತ್ನಿಸಬೇಕು. ಕೊಠಡಿಯ ತಾಪಮಾನ ಅಥವಾ ಮಗುವನ್ನು ಮಲಗಿಸುವ ಹಾಸಿಗೆಯನ್ನು ಸ್ವಲ್ಪ ಬಿಸಿ ದಲ್ಲಿ ಇರುವಂತೆ ನೋಡಿಕೊಳ್ಳಿ. ಕಿಟಕಿಯನ್ನು ತುಂಬಾ ತೆರೆದು ತಂಪಾದ ಗಾಳಿ ಬೀಸುವ ಹಾಗೆ ಮಾಡಬೇಡಿ ಅಥವಾ ಫ್ಯಾನ್ ಅನ್ನು ಆನ್ ಮಾಡಿ ಮಗುವಿಗೆ ತುಂಬಾ ರಭಸವಾಗಿ ಗಾಳಿ ತಗುಲುವಂತೆ ಬಿಡಬೇಡಿ. ಮಗುವನ್ನು ಸಾಧ್ಯವಾದಷ್ಟು ಕಿವಿ ದೇಹ ಉತ್ತಮ ಉಣ್ಣೆಯ ಬಟ್ಟೆಗಳನ್ನು ಧರಿಸಿ ಬೆಚ್ಚಗಿಡಿ.

5. ಮಗುವಿಗೆ ನಿದ್ರೆ

ಆರಂಭದ ಕೆಲವು ವಾರಗಳ ತನಕ ಮಗುವಿಗೆ ನಿದ್ರೆಯು 18ರಿಂದ 20 ಗಂಟೆ ಗಳು ಇರುತ್ತವೆ. ತಾಯಿ ಅಥವಾ ಮಗುವನ್ನು ನೋಡಿಕೊಳ್ಳುವವರು ಮಗುವಿಗೆ ಪ್ರತಿ ಎರಡು ಮೂರು ಗಂಟೆಗೊಮ್ಮೆ ಹಾಲು ಕುಡಿಸಬೇಕು. ಮಗುವಿನ ನಿದ್ರೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ಮಗುವು ಹಗಲಿನ ವೇಳೆ ನಿದ್ರೆ ಮಾಡಿ ರಾತ್ರಿಯ ವೇಳೆ ಹೆಚ್ಚು ಚಟುವಟಿಕೆಯಿಂದ ಇರುತ್ತದೆ. ಹಾಗಾಗಿ ಮಗು ರಾತ್ರಿ ಇದ್ದಾಗ ತಾಯಿಯು ಸ್ವಲ್ಪ ಹೊತ್ತು ಮಗುವಿನ ಜೊತೆಗೆ ಸಮಯ ಕಳೆದು ಅದನ್ನು ನಿದ್ರಿಸುವಂತೆ ನೋಡಿಕೊಳ್ಳಬೇಕು..

6. ಮಗುವಿನ ಜೊತೆ ಆಟ

ಮಗುವು ಚಟುವಟಿಕೆ ಸಮಯದಲ್ಲಿ ಮಗುವಿಗೆ ಕಣ್ಣಿನ ವ್ಯಾಯಾಮ ಗಾಗಿ ವಿವಿಧ ಬಣ್ಣದ ಕಾಗದವನ್ನು ಕಣ್ಣಮುಂದೆ ಹಿಡಿಯಿರಿ. ಮಗುವಿನ ಕೇಳಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ವಿವಿಧ ಬಗೆಯ ಶಬ್ದಮಾಡುವ ಆಟಿಕೆಯನ್ನು ಉಪಯೋಗಿಸಿರಿ.

7. ಸಲಹೆಗಳನ್ನು ಆಲಿಸುವಿಕೆ.

ನವಜಾತ ಶಿಶು ನಿಮ್ಮ ಮನೆಗೆ ಬಂದರೆ ಬಂಧುಮಿತ್ರರ ಆಗಮನ ಹೆಚ್ಚಾಗುತ್ತದೆ. ಬಂದವರೆಲ್ಲ ನಿಮಗೆ ಮಗುವಿನ ಬಗ್ಗೆ ಸಲಹೆ ಸೂಚನೆಯನ್ನು ಕೊಡುತ್ತಲೇ ಇರುತ್ತಾರೆ. ನಿಮ್ಮ ಮನಸ್ಸಿಗೆ ಸರಿಯಾದದ್ದು ಮತ್ತು ನಿಮ್ಮ ವೈದ್ಯರ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಹಿರಿಯರ ನಿರ್ದೇಶನದಂತೆ ಸಲಹೆಯನ್ನು ಪಾಲಿಸಿ. ಅನಗತ್ಯವಾದ ಹೆಚ್ಚಿನ ಸಲಹೆಯನ್ನು ಪಾಲಿಸದಿರಿ. ಅದೇ ರೀತಿ ಬೇರೆಯವರ ಸಲಹೆಯಂತೆ ಮಗುವಿನ ಮೇಲೆ ಪ್ರಯೋಗವನ್ನು ಮಾಡಬೇಡಿ.

#babycareandhygiene

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.