ಕೆಲಸ ಮತ್ತು ವೈಯುಕ್ತಿಕ ಬದುಕಿನ ಸಮತೋಲನ

ಕೆಲಸ ಮತ್ತು ವೈಯುಕ್ತಿಕ ಬದುಕಿನ ಸಮತೋಲನ

8 Nov 2021 | 1 min Read

Medically reviewed by

Author | Articles

ಪ್ರತಿಯೊಂದು ಮಹಿಳೆಯರಿಗೆ ತಾಯ್ತನ ಎಂಬುದು ಹರುಷ ತರುವ ವಿಚಾರ. ಬಹಳ ಕಾತುರತೆ, ನಿರೀಕ್ಷೆಯಿಂದ ದಿನದೂಡುವ ಮಹಿಳೆಯರಿಗೆ ಮನೆಯ ಕೆಲಸ ಮತ್ತು ಕಚೇರಿಯಲ್ಲಿ ಸಮಯ ಕಳೆಯಬೇಕೆಂದರೆ ಅದು ಸಾಹಸವೇ ಸರಿ. ಮನೆಕೆಲಸ ಅದರ ಜೊತೆಗೆ ಕಚೇರಿಯ ಕೆಲಸ ಎರಡರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಸರಿಯಾದ ನಿರ್ವಹಣೆಯ ಅಗತ್ಯವಿದೆ. ಬಹಳಷ್ಟು ಮಹಿಳೆಯರು ಇದರಲ್ಲಿ ಯಶಸ್ಸು ಕಂಡಿದ್ದಾರೆ. ನವ ಮಾಸದವರೆಗೂ ಕಚೇರಿಗೆ ತೆರಳಿ ಅಲ್ಲಿಯ ಕೆಲಸ ನಿರ್ವಹಿಸಿ, ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಗಮನಹರಿಸಿ ಕೊಂಡು, ಮನೆಯಲ್ಲಿಯೂ ಮನೆಯ ಸದಸ್ಯರನ್ನು ನೋಡಿಕೊಳ್ಳುವ ಕರ್ತವ್ಯವನ್ನು ನಿಭಾಯಿಸಿಕೊಂಡು ಬರುತ್ತಾರೆ. ಹಾಗಾದರೆ ಕಚೇರಿಯ ಕೆಲಸ ಮತ್ತು ಮನೆಯ ಕೆಲಸ ಜೊತೆಗೆ ವೈಯುಕ್ತಿಕ ಬದುಕಿನ ಅವಲೋಕನ ಹೇಗೆ ಮಾಡುತ್ತಾರೆ ಎಂಬುದನ್ನು ತಿಳಿಯೋಣ. ಇದು ಕೆಲವರಿಗೆ ಸಲಹೆಯೂ ಕೂಡ ಆಗಬಹುದು.

 

ಈ ಕೆಳಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ.

1. ಮೊದಲೇ ಯೋಜನೆಯನ್ನು ಹಾಕಿರಿ. ಮನೆಯಲ್ಲಿ ಎದ್ದು ಅಡಿಗೆ ತಯಾರಿಸಿ ನೀವು ಸಿದ್ಧರಾಗಿ ತೆರಳುವ ಸಮಯವನ್ನು ಮತ್ತು ಕಚೇರಿಗೆ ತಲುಪಬೇಕಾದ ಸಮಯವನ್ನು ನೋಡಿಕೊಂಡು ನಿಮ್ಮದೇ ಆದ ಟೈಮ್ ಟೇಬಲ್ ಅನ್ನು ರಚಿಸಿ.

2. ಪ್ರತಿದಿನದ ನಿಮ್ಮ ಚಟುವಟಿಕೆ ಮತ್ತು ಪ್ರಾಧ್ಯಾನತೆ ಯಾವುದಕ್ಕೆ ಕೊಡಬೇಕು ಎಂಬುದನ್ನು ಪಟ್ಟಿ ಮಾಡಿಕೊಳ್ಳಿ.

3. ಕೆಲಸದ ವಿಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಕಚೇರಿಯಲ್ಲಿಯೇ ಬಿಟ್ಟುಬಿಡಿ. ಅದೇ ರೀತಿ ಮನೆಯ ವಿಚಾರಗಳನ್ನು ಕಚೇರಿಗೆ ಕೊಂಡೊಯ್ಯಬೇಕು

4. ನಿಮ್ಮ ಮೇಲಾಧಿಕಾರಿಗಳ ನಡುವಿನ ಬಾಂಧವ್ಯ ಚೆನ್ನಾಗಿರಲಿ.

5. ನೀವು ಗರ್ಭವತಿ ಆಗಿರುವುದರಿಂದ, ನಿಮ್ಮ ತಪಾಸಣೆಗೆ ಮತ್ತು ಸ್ಕ್ಯಾನಿಂಗ್, ಚುಚ್ಚು ಮದುವೆಗೆ ಪದೇಪದೇ ಆಸ್ಪತ್ರೆಗೆ ಹೋಗ ಬೇಕಾಗುತ್ತದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ನಿಮ್ಮ ಮೇಲಾಧಿಕಾರಿಗಳಿಗೆ ಮೊದಲೇ ನೀಡಿರಿ.

6. ಒಂದು ವೇಳೆ ನಿಮ್ಮ ದೇಹಕ್ಕೆ ಮಗುವಿನ ಬೆಳವಣಿಗೆಗೆ ಮಾರಕವಾಗುವ ಯಾವುದೇ ಕೆಲಸಕ್ಕೆ ತೊಡಗಿದ್ದರೆ (ಅಂದರೆ ಪ್ರಯೋಗಾಲಯ, ಎಕ್ಸರೇ ವಿಭಾಗ, ರಾಸಾಯನಿಕ ತಯಾರಿಕೆಯ ಘಟಕ ಮುಂತಾದವು) ನಿಮ್ಮ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ವಿಭಾಗವನ್ನು ಬದಲಾಯಿಸಿಕೊಳ್ಳಿ.

7. ಕೋರೋನ ಕಾರಣದಿಂದಾಗಿ ಬಹಳಷ್ಟು ಕಂಪನಿಗಳಿಂದ ಮನೆಯಲ್ಲಿಯೇ ಕೆಲಸ ಮಾಡುವ ಆಯ್ಕೆ ನೀಡಲಾಗುತ್ತದೆ. ನೀವು ಕೂಡ ನಿಮ್ಮ ಮೇಲಾಧಿಕಾರಿಗಳಿಗೆ ಮಾತನಾಡಿ ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ವಿಚಾರಿಸಿ ನೋಡಿ.

8. ಕೆಲಸ ಇಲ್ಲದೆ ಮನೆಯಲ್ಲಿರುವವರು. ಮನೆಯ ಕೆಲಸದ ಜೊತೆಗೆ ಪಾರ್ಟ್ ಟೈಮ್ ಕೆಲಸಗಳನ್ನು ಮಾಡಬಹುದು. ಒಂದು ಸಣ್ಣ ಆರ್ಥಿಕ ಬೆಂಬಲ ನಿಮಗೆ ಸಿಕ್ಕಿದಂತಾಗುತ್ತದೆ. ಬೇಕಾದಷ್ಟು ಕಂಪನಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್, ಅನುವಾದಕರು, ವಿಷಯ ತಜ್ಞರು, ಆನ್ಲೈನ್ನಲ್ಲಿ ಟ್ಯೂಷನ್, ಮಾನಿಟರ್ ಬೇಕಾಗಿದ್ದಾರೆ ಎಂಬ ಬಹಳಷ್ಟು ಜಾಹಿರಾತು ನೀಡುತ್ತಿದ್ದಾರೆ. ಇದನ್ನು ಕೂಡ ನೀವು ಪ್ರಯತ್ನಿಸಬಹುದು.

9. ಓವರ್ ಟೈಮ್ ಕೆಲಸ ಇದ್ದಾಗ ಮನೆಯಲ್ಲಿಯೇ ಕುಳಿತು ಮಾಡುವುದಾದರೆ ಮನೆಗೆ ತೆಗೆದುಕೊಂಡು ಹೋಗಲು ಅನುಮತಿ ಪಡೆಯಿರಿ.

10. ಎರಡು ಕಡೆ ಕೆಲಸವನ್ನು ನಿಭಾಯಿಸುವಾಗ ಸಾಕಷ್ಟು ತಾಳ್ಮೆ ನಿಮ್ಮಲ್ಲಿ ಇರಬೇಕಾಗುತ್ತದೆ. ಅದಕ್ಕಾಗಿ ಕೆಲವೊಂದು ಉತ್ತಮವಾದ ಸಂಗೀತವನ್ನು ಕೆಲಸದ ನಡುವೆಯೂ ಕೇಳಿರಿ.

11. ಕಚೇರಿಯಲ್ಲಿ ನೀವು ಶಕ್ತಿಮೀರಿ ಕೆಲಸ ಮಾಡುವ ಬಗ್ಗೆ ನಿಮ್ಮ ಮೇಲಾಧಿಕಾರಿ ಯೊಂದಿಗೆ ಒಪ್ಪಿಕೊಳ್ಳದಿರಿ. ಅದೇ ರೀತಿ ನಿಮ್ಮ ಮನೆಯಲ್ಲಿ ನಿರ್ವಹಿಸುವ ಕೆಲಸದಲ್ಲಿ ಕೂಡ ನಿಮ್ಮ ಸಂಗಾತಿಗೆ ತೆಗೆದುಕೊಳ್ಳುವಂತೆ ಹೇಳಿರಿ.

12. ಮೆಟರ್ನಿಟಿ ಲೀವ್ ಬಗ್ಗೆ ನಿಮ್ಮ ಅಧಿಕಾರಿಗೆ ಮೊದಲೇ ತಿಳಿಸಿರಿ.

#careerduringpregnancy

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.