8 Nov 2021 | 1 min Read
Medically reviewed by
Author | Articles
ತಂದೆ ಮತ್ತು ತಾಯಿ ಒಂದು ಕುಟುಂಬದ ಆಧಾರಸ್ತಂಭವಿದ್ದಂತೆ. ತಾಯಿ ಹೇಗೆ ತನ್ನ ಮಗುವಿನ ಆಗಮನವನ್ನು ನವಮಾಸದಿಂದ ಜಾತಕಪಕ್ಷಿಯಂತೆ ಕಾಯುತ್ತಿರುತ್ತಾಳೋ, ಅದೇ ರೀತಿ ತಂದೆಯು ಕೂಡ ತನ್ನ ಮಗುವಿನ ಮುಖವನ್ನು ನೋಡಲು ಕಾಯುತ್ತಿರುತ್ತಾರೆ. ಮಗು ಹುಟ್ಟಿದ ಮೇಲೆ ಬಹಳಷ್ಟು ತಂದೆಯರು ಮಗುವಿನ ಆಗಮನದ ಸಂತೋಷದಿಂದ ಸಂಭ್ರಮಿಸುತ್ತಾರೆ. ಸದಾ ಬಿಜಿಯಾಗಿರುವ ತಂದೆ ಕಚೇರಿ ಕೆಲಸ ಮುಗಿಸಿ ಮನೆಗೆ ಬಂದ ಮೇಲೆ ಮುದ್ದು ಕಂದನ ಮುಖವನ್ನು ನೋಡಿ ಎಲ್ಲ ಕಷ್ಟವನ್ನು ದಿನದ ದಣಿವನ್ನು ನಿವಾರಿಸಿಕೊಳ್ಳುತ್ತಾನೆ. ಅಕ್ಷರಸ ತಂದೆಯು ಕೂಡ ಮಗುವಿನ ಮುಖವನ್ನು ನೋಡಲು 24ಗಂಟೆಯೂ ಕಾಯುತ್ತಿರುತ್ತಾನೆ. ಒಂದೇ ತರಹ ಭಾವನೆಯನ್ನು ಎಲ್ಲಾ ಗಂಡಸರು ಇರಬೇಕೆಂದೇನೂ ಇಲ್ಲ. ಕೆಲವರು ಮಗುವಿನ ಆಗಮನದಿಂದ ಸಂಭ್ರಮಿಸುತ್ತಿದ್ದರೆ ಮತ್ತು ಕೆಲವರು ಇದೇನು ಸಾಮಾನ್ಯ ವಿಷಯ ಎಂಬಂತೆ ತಮ್ಮ ವರ್ತನೆಯನ್ನು ತೋರ್ಪಡಿಸುತ್ತಾರೆ. ಪ್ರತಿ ತಂದೆ- ತಾಯಿಗೆ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿ ಬಗ್ಗೆ ಕಾಳಜಿ ಇರಬೇಕು. ಆರಂಭದಲ್ಲಿ ಮಕ್ಕಳು ಹಠ ಹಿಡಿಯುವುದು, ಅಶಿಸ್ತು ಪ್ರದರ್ಶನ ಮಾಡುತ್ತಾರೆ. ಹೊಸ ಜಗತ್ತಿಗೆ ಹೊಂದಿಕೊಳ್ಳದೆ ಇರುವಾಗ ಹಠ, ಮೌನವಾಗಿರುವುದು, ಇಲ್ಲವೇ ವಿಪರೀತ ಪ್ರಶ್ನೆಯನ್ನು ಕೇಳುವುದು, ಮಾತನಾಡುವುದು ಮಾಡುತ್ತಾರೆ. ಈ ಎಲ್ಲಾ ಗುಣಗಳು ಮಕ್ಕಳಲ್ಲಿ ಮನೆ ಮಾಡಿರುತ್ತದೆ.
ಮಗುವಿನ ಭಾವನೆ ಅದರ ಹೃದಯದಲ್ಲಿ ಉಳಿದಾಗ, ಯಾರು ಕೂಡ ಅದರ ಭಾವನೆ ಅರ್ಥ ಮಾಡದೆ ಇದ್ದಾಗ ಮಗು ಕೋಪಗೊಳ್ಳುವುದು, ಹಟಮಾರಿ ಸ್ವಭಾವವನ್ನು ಪ್ರದರ್ಶಿಸುವುದು ಮಾಡುತ್ತದೆ. ಸುಮ್ಮನೆ ಅಳುತ್ತಾ ಇರುವಾಗ ಮಗುವಿನ ತಂದೆ ಅಥವಾ ತಾಯಿ ರಾತ್ರಿ ಮಲಗುವ ಸಮಯದಲ್ಲಿ ಮಕ್ಕಳಿಗೆ ಕತೆಯನ್ನು ಹೇಳುವುದರ ಮೂಲಕ ಸಮಾಧಾನದಲ್ಲಿ ಮಕ್ಕಳ ಮನಸ್ಸನ್ನು ಬೇರೆ ಕಡೆಗೆ ಪಾಲಿಸಬೇಕು. ಇದೇ ಹವ್ಯಾಸ ಮುಂದೆ ಮಗು ಬೆಳೆಯುವವರೆಗೂ ಮುಂದುವರೆಯುತ್ತದೆ. ಆರಂಭದಿಂದಲೇ ಮಕ್ಕಳ ಮನಸ್ಸು ಶಾಂತವಾಗಿರುವಂತೆ ನೋಡಿಕೊಳ್ಳಬೇಕು.
ಜವಾಬ್ದಾರಿಯುತ ಪಾಲಕತ್ವವನ್ನು ಹೊಂದಿರುವ ಪ್ರತಿ ತಂದೆ-ತಾಯಿಯ ಆದ್ಯ ಕರ್ತವ್ಯ ಮಗುವಿನ ಸಂಪೂರ್ಣ ಬೆಳವಣಿಗೆಯ ಬಗ್ಗೆ ಕಾಳಜಿ ವಹಿಸುವುದು. ಮಗು ಆರಂಭದಲ್ಲಿ ತಾಯಿಯನ್ನು ಮಾತ್ರ ಅವಲಂಬಿಸಿರುತ್ತದೆ. ತದನಂತರ ತಂದೆಯನ್ನು ಅವಲಂಬಿಸುತ್ತದೆ. ತಂದೆ ಹೆಚ್ಚು ಮಗುವಿನೊಂದಿಗೆ ಸಮಯ ಕಳೆಯುವುದರಿಂದ ತಂದೆ ಮತ್ತು ಮಗುವಿನ ನಡುವೆ ಅವಿನಾಭಾವ ಸಂಬಂಧ ಏರ್ಪಡುತ್ತದೆ. ಇದು ನವಜಾತ ಶಿಶುವಿನಿಂದ ಹಿಡಿದು ಮಗುವಿನ ಬೆಳವಣಿಗೆಯ ಹಾದಿಯಲ್ಲಿ ಕೂಡ ತುಂಬಾ ಮುಖ್ಯ. ಏಕೆಂದರೆ ತಂದೆ-ತಾಯಿಯನ್ನು ಸಂಪೂರ್ಣವಾಗಿ ಅವಲಂಬಿಸಿರುವ ಮಗುವು ತಂದೆಯನ್ನು ಓರ್ವ ಹೀರೋವಿನ ಹಾಗೆ ಕಲ್ಪನೆ ಮಾಡಿಕೊಂಡಿರುತ್ತಾರೆ. ಮಕ್ಕಳು ಬಹಳಷ್ಟು ಪ್ರಶ್ನೆಗಳನ್ನು ತಂದೆಯ ಜೊತೆ ಕೇಳಿ ಉತ್ತರ ಪಡೆದುಕೊಳ್ಳುತ್ತಾರೆ. ತಂದೆಯ ಜೊತೆ ಹೊರಗಡೆ ಹೋದಾಗ ಮುಕ್ತವಾಗಿರಲು ಬಯಸುತ್ತಾರೆ. ಅವರು ಬೆಳೆಯುವ ಸಮಯದಲ್ಲಿ ತಂದೆ-ತಾಯಿಯರು ಅವರು ಮುಕ್ತವಾಗಿ ಮಾತನಾಡಿ ಕೊಳ್ಳುವುದಕ್ಕೆ ಅವಕಾಶವನ್ನು ಕೊಡಬೇಕು ಪ್ರತಿ ಪ್ರಶ್ನೆಗೆ ಉತ್ತರಿಸಲು ಒಂದು ವೇಳೆ ಮಕ್ಕಳ ಮುಗ್ದ ಮನಸ್ಸನ್ನು ನೀವು ಘಾಸಿಗೊಳಿಸಿ ಮಾತನಾಡಿದಂತೆ ಹೇಳಿದರೆ ಮುಂದೆ ಅವರು ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ಸಾಧ್ಯವಿಲ್ಲ.
ಕಂಪ್ಯೂಟರ್ ಮೊಬೈಲ್ನಲ್ಲಿ ಮುಳುಗಿರುವುದು
ಮಕ್ಕಳು ಮೌನವಾಗಿರಲಿ ಎಂದು ನೀವು ಭಾವಿಸಿ ಮಕ್ಕಳಿಗೆ ಕಂಪ್ಯೂಟರ್ ಮತ್ತು ಮೊಬೈಲ್ ಗೇಮ್ಗಳು, ವಿಡಿಯೋ ಗೇಮ್ಗಳನ್ನು ನೋಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಮುಂದೆ ಮಕ್ಕಳು ನಿಮ್ಮೊಂದಿಗೆ ಮಾತನಾಡುವ ಬದಲು ಕಂಪ್ಯೂಟರ್ ಮತ್ತು ಮೊಬೈಲ್ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಇತ್ತೀಚೆಗೆ ಆನ್ಲೈನ್ ತರಗತಿಗಳು ಕೂಡ ಮಕ್ಕಳಿಗೆ ಆರಂಭವಾಗಿರುವುದರಿಂದ ಅವರ ಹೆಚ್ಚಿನ ಸಮಯ ಡಿಜಿಟಲ್ ಯುಗದಲ್ಲಿ ಕಳೆಯುವಂತಾಗಿದೆ. ಹೀಗಾದಾಗ ಮಗುವಿನೊಂದಿಗೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಮಗು ಕೂಡ ಮುಕ್ತತೆಯಿಂದ ನಿಮ್ಮ ಜೊತೆಗೆ ಬೆರೆಯುವುದಿಲ್ಲ. ಮಕ್ಕಳ ಜೊತೆ ಸಮಯ ಕಳೆಯಲು ಕೂಡ ಸಿಗುವುದಿಲ್ಲ. ಇದು ಮುಂದೆ ನಿಮ್ಮ ಮತ್ತು ಮಗುವಿನ ನಡುವಿನ ಅಂತರ ಹೆಚ್ಚುವುದು.
ಮಗು ಸುಳ್ಳು ಹೇಳುವುದು.
ಮಕ್ಕಳಿಗೆ ನೀವು ಸತ್ಯವನ್ನು ನುಡಿಸಲು ಪ್ರಯತ್ನಿಸಬೇಕು. ನೀವಾಗಿ ನಿಮ್ಮ ಮತ್ತು ಮಕ್ಕಳ ನಡುವಿನ ಅಂತರವನ್ನು ಕಾಯ್ದುಕೊಂಡರೆ ಮಕ್ಕಳು ಸುಳ್ಳು ಹೇಳಲು ಪ್ರಯತ್ನಿಸುತ್ತಾರೆ. ನೀವು ನೇರವಾಗಿ ಪ್ರಶ್ನೆಯನ್ನು ಕೇಳಿದೆ ವಿಧವಿಧ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಮಕ್ಕಳು ಸುಳ್ಳನ್ನು ಹೇಳುತ್ತಾರೆ. ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದರೆ ನಿಮ್ಮಿಂದ ಏನೋ ಮುಚ್ಚಿಡಲು ಪ್ರಯತ್ನ ಪಡುತ್ತಿದ್ದಾರೆ ಎಂದರ್ಥ. ಮಕ್ಕಳು ನಿಮ್ಮಿಂದ ವಿಷಯವನ್ನು ಏಕೆ ಮುಚ್ಚಿಡುತ್ತಿದ್ದಾರೆ ಎಂಬ ಕಾರಣವನ್ನು ಹುಡುಕಿರಿ.
ಮಕ್ಕಳ ಹವ್ಯಾಸವನ್ನು ಬದಲಿಸಿರಿ.
ನಿಮ್ಮ ಮಗು ವೀಡಿಯೋ ಗೇಮ್, ಅಶಿಸ್ತು, ಸದಾ ಕೋಪ ಸಿಡಿಮಿಡಿ, ಹಟ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದರೆ , ನೀವು ಪೋಷಕರು ಅವರನ್ನು ತಿದ್ದಬೇಕು. ಅದಕ್ಕಾಗಿ ಮಕ್ಕಳಿಗೆ ಸಮಯವನ್ನು ಮೀಸಲಿಡಿ. ಮಕ್ಕಳನ್ನು ಹೊರಗಡೆ ಸುತ್ತಾಡಿಸಿ. ಕೆಲವೊಂದು ಟಿಪ್ಸ್ ಗಳು ನಿಮಗಾಗಿ ನಾವು ನೀಡುತ್ತಿದ್ದೇವೆ.
A