ಅಸಹಜ ಮಗು ಮತ್ತು ಚಿಕಿತ್ಸೆ

ಅಸಹಜ ಮಗು ಮತ್ತು ಚಿಕಿತ್ಸೆ

10 Nov 2021 | 1 min Read

Medically reviewed by

Author | Articles

ಸಾಮಾನ್ಯವಾಗಿ ಅಪೌಷ್ಟಿಕತೆಯಿಂದ ಬಳಲುವ ತಾಯಂದಿರಲ್ಲಿ ಅಬ್ನೋರ್ಮಲ್ ಇರುವ ಶಿಶುವಿನ ಜನನವಾಗುತ್ತದೆ. ಆದರೆ ತಾಯಿ ಆರೋಗ್ಯವಾಗಿದ್ದು ಮಗು ಅಬ್ನೋರ್ಮಲ್ ಆಗಿ ಜನಿಸಿದಾಗ ತಾಯಿಯ ಮನಸ್ಥಿತಿ ಹೇಗಿರಬೇಡ? ನೂರರಲ್ಲಿ ಮೂರು ಮಕ್ಕಳಿಗೆ ಕೆಲವೊಂದು ರೋಗದ ಲಕ್ಷಣಗಳು, ಅಂಗವೈಕಲ್ಯತೆ ಕಾಣಿಸಿಕೊಳ್ಳುತ್ತದೆ. ಈ ಎಲ್ಲಾ ರೀತಿಯ ರೋಗಲಕ್ಷಣಗಳು ಅನುವಂಶಿಯವಾಗಿ ಬಂದಿರಲೂಬಹುದು. ಇದಕ್ಕೆ ಯಾರನ್ನು ದೂಷಣೆ ಮಾಡಿ ಪ್ರಯೋಜನವಿಲ್ಲ. ಕೆಲವೊಂದು ನ್ಯೂನ್ಯತೆಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ, ದೀರ್ಘ ಕಾಲಾವಧಿಯ ವರೆಗೆ ಔಷಧಿಯನ್ನು ನೀಡುವ ಮೂಲಕ ಗುಣಪಡಿಸಬಹುದು. ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ಸಕಾರಾತ್ಮಕ ಮನೋಭಾವದಿಂದ ಪರಿಸರವನ್ನು ಮಗುವಿಗೆ ಹೊಂದಾಣಿಕೆಯನ್ನು ಆಗಿ ಪರಿವರ್ತಿಸಿದರೆ ಮಗುವಿನಲ್ಲಿರುವ ನ್ಯೂನ್ಯತೆ ಶೇಕಡ 75 ರಷ್ಟು ಕಡಿಮೆ ಮಾಡಬಹುದು.

 

ಮೊದಲ ಹೆಜ್ಜೆ

ನಿಮ್ಮ ಮಗುವಿಗೆ ಜನನ ದಿಂದಲೇ ನ್ಯೂನ್ಯತೆ ಇದೆ ಎಂದು ತಿಳಿದಾಗ , ನುರಿತ ವೈದ್ಯರೊಡನೆ ಮಾತನಾಡಬಹುದು. ತದನಂತರ ಎರಡನೆಯ ಸಲಹೆಯನ್ನು ಇನ್ನೊಂದು ವೈದ್ಯರ ಬಳಿ ಕೇಳಬಹುದು.

 

ಹೃದಯದ ನ್ಯೂನ್ಯತೆ.

ಇದು ಮಗು ಜನಿಸಿದಲ್ಲಿ ಇಂದ ಆರಂಭವಾಗುವ ನ್ಯೂನ್ಯತೆಯಾಗಿದೆ. ನೂರರಲ್ಲಿ ಒಂದು ಮಗು ಈ ಸಮಸ್ಯೆಯಿಂದ ಬಾಧಿಸಲ್ಪಡುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ವಂಶೀಯ ವಾಗಿ ಬರುವ ನ್ಯೂನ್ಯತೆ ಅಥವಾ ಗರ್ಭದಲ್ಲಿ ಗುರುವಿನ ಬೆಳೆಯುವಾಗ ಆಗುವ ತೊಂದರೆಯಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವು ಮಕ್ಕಳಲ್ಲಿ ಕಡಿಮೆ ಪ್ರಮಾಣದ ತೊಂದರೆಯಿಂದ ಸ್ಕ್ಯಾನಿಂಗ್ ಮಾಡುವಾಗ ಗೋಚರಿಸದಿರಬಹುದು.

 

ಮುಂಜಾಗ್ರತೆ:- ತಾಯಿಯ ಗರ್ಭದಲ್ಲಿ ಭ್ರೂಣ ಬೆಳೆಯುವಾಗ ನಾಲ್ಕನೇ ವಾರದಲ್ಲಿ ಮಗುವಿನ ಹೃದಯದ ಬಡಿತವು ಅಸಮಾನ್ಯ ವಾಗಿದೆ ಎಂದು ತಿಳಿದ ತಕ್ಷಣ ಕ್ರಮವನ್ನು ಕೈಗೊಳ್ಳಬೇಕು.

ಲಕ್ಷಣಗಳು:-

  • ಅಸಮಾನ್ಯವಾದ ಹೃದಯದ ಬಡಿತ
  • ಉಸಿರಾಟದ ತೊಂದರೆ
  • ಹಾಲುಣಿಸಲು ತೊಂದರೆ ( ಮಗು ಸುಲಭವಾಗಿ ಹಾಲನ್ನು ಕುಡಿಯುವುದಿಲ್ಲ. ಮಗುವಿನ ತೂಕ ಏರಿಕೆಯಾಗುವುದಿಲ್ಲ)
  • ಕಣ್ಣು , ಶ್ವಾಸಕೋಶ, ಹೊಟ್ಟೆಯ ಭಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ.
  • ಮಗುವಿನ ಚರ್ಮ ನೀಲಿ ಬಣ್ಣಕ್ಕೆ ತಿರುಗುತ್ತದೆ.

 

ಕ್ಲಬ್ ಫುಟ್

ಸಾವಿರದಲ್ಲಿ ಒಂದು ಮಗುವಿಗೆ, ಹೆಣ್ಣು ಮಕ್ಕಳಿಗೆ ಹೋಲಿಸಿದರೆ ಗಂಡುಮಕ್ಕಳಲ್ಲಿ ಪ್ರಮಾಣದಲ್ಲಿ ಎರಡರಷ್ಟು ಕಂಡುಬರುವ ಸಮಸ್ಯೆ. ಈ ಸಮಸ್ಯೆಗೆ ಕಾರಣವೇನೆಂದು ತಿಳಿಯದಿದ್ದರೂ ಅನುವಂಶೀಯತೆ ಮತ್ತು ಪರಿಸರ ದಿಂದ ಉಂಟಾಗುವ ಕಾಯಿಲೆ ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಆರಂಭವಾಗುತ್ತದೆ. ಮಗುವಿನ ಪಾದ ಗಂಟು, ಸಂದುಗಳ ಅಸಮರ್ಪಕ ಸ್ಥಿತಿ. ಇದು ಎರಡು ಕಾಲುಗಳಿಗೆ ಸಂಭವಿಸುವುದು. ಮಗ ನಿಂತು ನಡೆಯುವವರೆಗೆ ಇದರ ನೋವು ತಿಳಿಯುವುದಿಲ್ಲ
. ಮಗು ನಡೆಯುವಾಗ ಸಂಧಿಗಳು ಸ್ಥಿರವಾಗಿ ಗದ್ದೆ ಡೊಂಕಾಗಿ ಇರುವುದು ಗೋಚರಿಸುತ್ತದೆ.

 

ಇದರ ಚಿಕಿತ್ಸೆ

ಮಗುವಿಗೆ ಇಂತಹ ಸಮಸ್ಯೆ ಕಾಡುತ್ತಿದೆ ಎಂದು ತಿಳಿದ ತಕ್ಷಣ ವೈದ್ಯರ ಸಹಾಯದಿಂದ ಆರಂಭದಲ್ಲಿ ಮಗುವಿನ ಸಂಧಿಯನ್ನು ಜೋಡಸಲಾಗುವುದು
. ಹೀಗಾದಾಗ ಮಾತ್ರ ಮಗುವಿಗೆ ಸಮರ್ಪಕ ರೀತಿಯಲ್ಲಿ ಕಾಲಿನ ಮತ್ತು ಕೈಯ ಸ್ಥಿರತೆ ಯುದ್ಧ ನಡೆಯಲು ಸಾಧ್ಯ. ಶಸ್ತ್ರಚಿಕಿತ್ಸೆಗಳ ಆದನಂತರ ಅರವಿಂದ ಒಂದು ವರ್ಷದವರೆಗೆ ವಿಶ್ರಾಂತಿ ಸಮರ್ಪಕವಾದ ವ್ಯಾಯಾಮ ಬೇಕಾಗುತ್ತದೆ.

 

ಸೀಳು ತುಟಿ ಅಥವಾ ಅಂಗುಳಿನ

ಸೀಳು ತುಟಿ ಅಥವಾ ಅಂಗುಳಿನ ಸಮಸ್ಯೆಯು ಹೆಚ್ಚಾಗಿ ತೊನ್ನು ಚರ್ಮದ ಮಕ್ಕಳಲ್ಲಿ ಕಂಡು ಬರುತ್ತದೆ. ತೊನ್ನು ಚರ್ಮದ ಅಲ್ಲದವರು ಕಂಡುಬರುವ ಸಾಧ್ಯತೆ ಇದ್ದರೂ 7 ಮಕ್ಕಳಲ್ಲಿ ಒಂದು ಮಗುವಿಗೆ ಇದರ ತೀವ್ರತೆ ಅಧಿಕವಾಗಿರುತ್ತದೆ. ಸೀಳುತುಟಿ ಯು ಮೇಲ್ ತುಟಿ , ಕೆಲವು ಕೆಲವರಲ್ಲಿ ಮೂಗಿನ ನ್ಯಾಸ ಮತ್ತು ತುಟಿ, ಮತ್ತು ಕೆಲವರಿಗೆ ಕಿರು ನಾಲಿಗೆಯ ಸಮಸ್ಯೆಯೊಂದಿಗೆ ಬೆಸೆದುಕೊಂಡಿರುತ್ತದೆ. ಈ ಸಮಸ್ಯೆಯಿಂದ ಬಳಲುವ ಮಕ್ಕಳಿಗೆ ಮಾತನಾಡಲು ಕಷ್ಟವಾಗುತ್ತದೆ. ಏಕೆಂದರೆ ಬಾಯಿಯ ರಚನೆ ಮೂಗು ತುಟಿಯ ರಚನೆಯು ಮಾತನಾಡಲು ನಾಲಿಗೆ ಹೊರಳದಂತೆ ತಡೆಯುತ್ತದೆ. ಆರಂಭದಿಂದಲೇ ಮಗುವಿಗೆ ಹಾಲು ಕುಡಿಯಲು ತುಂಬಾ ಕಷ್ಟಕರವಾಗಿರುತ್ತದೆ. ಇಂಥ ಮಕ್ಕಳಿಗೆ ಬಾಟಲ್ನಲ್ಲಿ ಹಾಲು ಕೊಡುವುದು ವೈದ್ಯರು ಸೂಚಿಸುತ್ತಾರೆ.

 

ಚಿಕಿತ್ಸೆ

ಮಗು ಹುಟ್ಟಿದ ಮೂರನೆಯ ತಿಂಗಳಿಗೆ ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ನಿವಾರಿಸಬಹುದು. ಮೂಗು ಮತ್ತು ಬಾಯಿಯ ನಡುವೆ ಇರುವ ನ್ಯಾಸವನ್ನು ಸರಿಹೊಂದಿಸಲಾಗುತ್ತದೆ. ಮೂಗು ಮತ್ತು ಬಾಯಿಯ ನಡುವೆ ಭಾಗವನ್ನು ಆರರಿಂದ 12 ತಿಂಗಳ ಅವಧಿಯಲ್ಲಿ ಮಾಡಬಹುದು. ಇದರಿಂದ ಮಗುವಿನ ಮುಖದ ಸಾಮಾನ್ಯ ಬೆಳವಣಿಗೆ ಮತ್ತು ರಚನೆಗೆ ಸಹಕಾರಿಯಾಗುತ್ತದೆ.

 

ಅಂಗಗಳ ಅಪೂರ್ಣ ಬೆಳವಣಿಗೆ

ಈ ಸಮಸ್ಯೆ ಅಷ್ಟು ಸುಲಭವಾಗಿ ತಿಳಿಯೋದಿಲ್ಲ. ತಜ್ಞರ ಪ್ರಕಾರ ಗರ್ಭಿಣಿ ಸ್ತ್ರೀಯು ರಾಸಾಯನಿಕ ವಸ್ತುವಿನ ಪ್ರಭಾವಕ್ಕೆ ಒಳಗಾದರೇ, ಅಥವಾ ಗರ್ಭಾವಸ್ಥೆಯಲ್ಲಿ ವೈರಸ್ ದಾಳಿಯಿಟ್ಟಾಗ ಮಗುವಿನಲ್ಲಿ ನ್ಯೂನ್ಯತೆಗ ಕಾರಣವಾಗುತ್ತದೆ.

ಚಿಕಿತ್ಸೆ

ಇಂತಹ ನ್ಯೂನ್ಯತೆಗಳು ಎಲ್ಲಿ ಮಗು ಜನಿಸಿದಾಗ . ಮಗುವನ್ನು ನುರಿತ ಮೂಳೆ ತಜ್ಞರು ಮತ್ತು ದೈಹಿಕ ಥೆರಪಿ ತಜ್ಞರ ಬಳಿಗೆ ಕಳುಹಿಸುತ್ತಾರೆ. ನ್ಯೂನ್ಯತೆ ಇರುವ ಕೈಕಾಲು ಮತ್ತೆ ವೈದ್ಯರು ಆರ್ಟಿಫಿಶಿಯಲ್ ಕೈಜೋಡಿಸುತ್ತಾರೆ. ಆರಂಭಿಕ ಹಂತದಲ್ಲಿ ಇದನ್ನು ಮಾಡುವುದರಿಂದ ಬೆಳೆಯುತ್ತಾ ಮಗುವಿಗೆ ಯಾವುದೇ ರೀತಿಯ ತೊಡಕಾಗುವುದಿಲ್ಲ.

 

ಡೌನ್ ಸಿಂಡ್ರೋಮ್

ಸಾಮಾನ್ಯಬಾಗಿ ಮಕ್ಕಳಲ್ಲಿ ಕಂಡುಬರುವ ನ್ಯೂನ್ಯತೆ. ಹುಟ್ಟಿನಿಂದಲೇ ಬರುವ ಈ ಸಮಸ್ಯೆ ಡೌನ್ ಸಿಂಡ್ರೋಮ್ ಅಥವಾ ಎಕ್ಸ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದರಲ್ಲಿ ಮಾನಸಿಕ ಅಸಮತೋಲನ ಸಾಮಾನ್ಯ . ಇದನ್ನು ಮಗು ಹುಟ್ಟುವುದಕ್ಕೆ ಮೊದಲು ಕಂಡುಹಿಡಿಯಬಹುದು. ಮತ್ತು ಅದನ್ನು ಗರ್ಭದಲ್ಲಿಯೇ ವಾಸಿ ಮಾಡಬಹುದು. ಆರಂಭಿಕ ಹಂತದಲ್ಲಿ ಹುಟ್ಟಿದ ತಕ್ಷಣ ಕಂಡುಹಿಡಿದಾಗ ಚಿಕಿತ್ಸೆ ಬಹಳ ಸುಲಭ. ಪ್ರತಿ 800 ಮಕ್ಕಳಲ್ಲಿ ಒಬ್ಬರನ್ನು ಕಾಡುವ ಈ ಸಮಸ್ಯೆ ತಾಯಿಯ ಗರ್ಭದಲ್ಲಿ ಮಗುವಿಗೆ ವರ್ಗಾಯಿಸಲ್ಪಡುತ್ತದೆ.

 

ಲಕ್ಷಣಗಳು

ಡೌನ್ ಸಿಂಡ್ರೋಮ್ ಅನುಭವಿಸುವ ಮಕ್ಕಳಲ್ಲಿ ದೈಹಿಕ ಗುಣಲಕ್ಷಣಗಳು, ಮೇಲುಗಣ್ಣು, ಸಣ್ಣ ಕಿವಿ ಅದು ಬಳಸಿಕೊಂಡಿರುವುದು, ಸಣ್ಣ ಬಾಯಿ ಮತ್ತು ನಾಲಗೆ ತುಂಬಾ ದೊಡ್ಡದಾಗಿರುತ್ತದೆ. ಮೂಗು ಕೂಡ ಸಣ್ಣದಾಗಿದ್ದು ಚಪ್ಪಟೆಯಾಗಿರುತ್ತದೆ. ಕತ್ತಿನ ಉದ್ದ ಕಡಿಮೆ ಇರುತ್ತದೆ ಸಣ್ಣ ಕೈಗಳು ಇವರ ಗುಣಲಕ್ಷಣ. ಶೇಕಡ 50ರಷ್ಟು ಮಕ್ಕಳಲ್ಲಿ ಶ್ರವಣ ದೋಷ ಮತ್ತು ಮಾತನಾಡಲು ಕಷ್ಟ ಇರುತ್ತದೆ. ಕಿವಿಯ ಸೋಂಕು, ಹೃದಯ ನ್ಯೂನ್ಯತೆ, ಕರುಳಿನ ತೊಂದರೆ ಸಾಮಾನ್ಯವಾಗಿರುತ್ತದೆ.

ಇಂಥ ಮಕ್ಕಳಿಗೆ ಕೆಲವು ತರಗತಿಗಳನ್ನು ಇತ್ತೀಚಿನ ದಿನಗಳಲ್ಲಿ ಕೆಲವು ಶಾಲೆಗಳು ತೆಗೆದುಕೊಳ್ಳಲಾಗುತ್ತಿದೆ. ಮಲಮೂತ್ರ ವಿಸರ್ಜನೆ, ಕಲಾತ್ಮಕ ತರಗತಿಗಳು, ವ್ಯಾಯಾಮ ಇವೇ ಮುಂತಾದ ಚಟುವಟಿಕೆಗಳನ್ನು ಇಂಥ ಮಕ್ಕಳಿಗೆ ನೀಡಿ ಹೆಚ್ಚು ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ.

 

ಎಕ್ಸ್ ಸಿಂಡ್ರೋಮ್

ಇದು ಜನನ ವೈಕಲ್ಯ ವಾಗಿದ್ದು. ವರ್ಣತಂತುವಿನ ನ್ಯೂನ್ಯತೆಯಿಂದ ಜನಿಸುವ ಮಕ್ಕಳಲ್ಲಿ ಇದು ಕಂಡುಬರುತ್ತದೆ. ಸಾವಿರದ ಐನೂರು ಮಕ್ಕಳಲ್ಲಿ ಒಂದು ಮಗುವಿಗೆ ಈ ಸಮಸ್ಯೆ ಕಾಡುತ್ತದೆ.

 

ಲಕ್ಷಣಗಳು

ದೊಡ್ಡದಾದ ಕಿವಿಗಳು, ಉದ್ದನೆಯ ಮುಖ, ಸಮತಟ್ಟಾದ ಪಾದಗಳು, ಒತ್ತುತ್ತಾ ಗಿರುವ ಹಲ್ಲುಗಳು, ಹೃದಯ ಸಮಸ್ಯೆ, ಕನಿಷ್ಠ ಸಾಮರ್ಥ್ಯದ ಮಾಂಸಖಂಡದ ರಚನೆ ಇರುತ್ತದೆ. ಜನನ ಕಾಲದಲ್ಲಿ ಮಕ್ಕಳು ಸಾಮಾನ್ಯರಂತೆ ಗೋಚರಿಸುತ್ತಿದ್ದು, 18 ತಿಂಗಳಿನವರೆಗೆ ಮಗುವಿಗೆ ಇಂಥ ನ್ಯೂನ್ಯತೆ ಇದೆ ಎಂಬುದು ತಿಳಿಯುವುದಿಲ್ಲ.

 

ಚಿಕಿತ್ಸೆ

ಡೌನ್ ಸಿಂಡ್ರೋಮಿನಂತೆ ಇಂಥ ಮಕ್ಕಳಿಗೂ ಕೆಲವೊಂದು ಶಾಲೆಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಇಂಥ ಸಮಸ್ಯೆ ಬೆಳಕಿಗೆ ಬಂದರೆ ತಕ್ಷಣ ವೈದ್ಯರು ಗರ್ಭದಲ್ಲಿಯೇ ಸರಿಪಡಿಸುತ್ತಾರೆ.

#growthanddevelopment #specialneeds

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.