ನಾನು ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು…

ನಾನು ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು…

11 Nov 2021 | 1 min Read

Medically reviewed by

Author | Articles

ಗರ್ಭಧಾರಣೆಯ ಆರಂಭದ ದಿನದಲ್ಲಿ ಪ್ರತೀಯೊಬ್ಬರಿಗೆ ಒಂದು ರೀತಿಯಲ್ಲಿ ಕನ್ಫ್ಯೂಸ್ ಇರುತ್ತದೆ. ನಾವು ಯಾವಾಗ ಪರೀಕ್ಷೆ ಮಾಡಿಕೊಳ್ಳಬೇಕು. ಯಾವಾಗ ಸ್ಕ್ಯಾನಿಂಗ್ ಮಾಡಬೇಕು ಎಂಬುದು. ಪ್ರತೀ ಮಹಿಳೆಯರನ್ನು ಕಾಡುತ್ತದೆ. ಗಾರ್ಧಾರಣೆಯ ಬಗ್ಗೆ ತಿಳಿಯಲು ಯಾವುದು ಸರಿಯಾದ ಸಮಯ ಅಥವಾ ಯಾವುದು ಅಲ್ಲ ಎಂಬುದಿಲ್ಲ. ನೀವು ಮೆಡಿಕಲ್ ಶಾಪ್ ನಲ್ಲಿ ಸಿಗುವ ಪ್ರೆಗ್ನನ್ಸಿ ಟೆಸ್ಟ್ ಕಿಟ್ ತಂದು ಮನೆಯಲ್ಲೇ ಮಾಡಬಹುದು. ಹೇಗೆ ಮಾಡುವುದು ಎಂಬುದಕ್ಕೆ ಅದರಲ್ಲಿ ಮಾಹಿತಿಯೂ ಕೊಟ್ಟಿರುತ್ತಾರೆ. ಮನೆಯಲ್ಲಿಯೇ ಐದೇ ನಿಮಿಷದಲ್ಲಿ ತಿಳಿಯಲು ಹೆಚ್ಚು ಸುರಕ್ಷಿತ. ಕೆಲವು ಸಲ ನಾವು ಮಾಡುವ ತಪ್ಪಿನಿಂದ ಅದರ ಫಲಿತಾಂಶ ಸರಿಯಾಗಿ ಬಾರದು. ಏನೇ ಪರೀಕ್ಷೆ ಮಾಡುವ ಮುನ್ನ ಸರಿಯಾಗಿ ಓದಿಕೊಂಡು ಅಥವಾ ಸ್ನೇಹಿತರು, ಮನೆಯ ಹಿರಿಯರುನ್ನು ಸಂಪರ್ಕಿಸಿ ಪರೀಕ್ಷೆ ಮಾಡಿರಿ.

ವೈದ್ಯರ ಬಳಿಗೆ ಮೊದಲ ತಪಾಸಣೆಗೆ ತೆರಳಿನ ನಂತರ , ನೀವು ಮನೆಯಲ್ಲಿ ವೈದ್ಯರು ಸೂಚಿಸಿ ಮಾತ್ರೆ, ಔಷಧಿ, ತೆಗೆದುಕೊಳ್ಳಿ. ಅದೇ ರೀತಿ ಅವರು ನೀಡಿರುವ ಸಲಹೆಯನ್ನು ಪಾಲಿಸಿರಿ. ಗರ್ಭ ಗಟ್ಟಿಯಾಗಿ ಬೇರೂರಲು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ಈ ಅವಧಿಯಲ್ಲಿ ಅಬಾರ್ಷನ್ ಆಗುವ ಸಾಧ್ಯತೆಗಳು ಹೆಚ್ಚು. ಆಗಾಗಿ ಭಾರದ ವಸ್ತು ತೆಗೆಯುವುದು, ಇಡುವುದು, ವಿಪರೀತ ದೈಹಿಕ ಶ್ರಮ ಪಡುವ ಕೆಲಸ ಮಾಡಬೇಡಿ. ಗರ್ಭ ನಿಂತಾಗ ಈ ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು.

ಗರ್ಭಾವಸ್ಥೆಯ ಸಮಯದಲ್ಲಿ ಪ್ರತಿದಿನವೂ ಒಂದು ರೀತಿಯಲ್ಲಿ ಆತಂಕ, ಕುತೂಹಲ, ಕಾತುರತೆ ಮನೆಮಾಡಿರುತ್ತದೆ. ದಿನಕಳೆದಂತೆ ಇದು ಮನೆಯವರಿಗೆ ಮಾತ್ರವಲ್ಲ ಗರ್ಭಿಣಿಯರಿಗೂ ಕೂಡ ಒಂದು ರೀತಿಯಲ್ಲಿ ಭಯ ಆವರಿಸುತ್ತದೆ. ಗರ್ಭಿಣಿಯರಲ್ಲಿ ಲಕ್ಷಣಗಳು ಪ್ರತಿ ತಿಂಗಳಿಗೆ ಕೆಲವರಲ್ಲಿ ಒಂದೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿ ಕಂಡುಬರುವ ಕೆಲವು ಲಕ್ಷಣಗಳನ್ನು ಬರೆದಿಟ್ಟುಕೊಂಡು, ಮಗುವಿನ ಚಲನೆ, ಎದೆಯುರಿ, ತಡೆಯಲು ಅಸಾಧ್ಯವಾದ ತಲೆನೋವು, ಸೊಂಟನೋವು ,ಬೆನ್ನುನೋವು , ಇವೇ ಮುಂತಾದ ಲಕ್ಷಣಗಳು ನಿಮ್ಮ ಗಮನಕ್ಕೆ ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿರಿ.

ಗರ್ಭಾವಸ್ಥೆಯ ಸಮಯದಲ್ಲಿ ನೀವು ಪಾಲಿಸಲೇ ಬೇಕಾದ ಅತಿ ಮುಂಜಾಗ್ರತೆಯ ಕ್ರಮಗಳ ಬಗ್ಗೆ ಬೇಬಿಚಕ್ರ ನಿಮಗೆ ಮಾಹಿತಿಯನ್ನು ನೀಡುತ್ತಿದೆ.

ಮೊದಲ ತಪಾಸಣೆ ತಡ ಮಾಡಬೇಡಿ :

 • ನಿಮ್ಮ ವೈದ್ಯಕೀಯ ಚಿಕಿತ್ಸೆಯ ಮಾಹಿತಿ:

ನೀವು ಪ್ರೆಗ್ನನ್ಸಿ ಟೆಸ್ಟ್ ಮಾಡುವುದಕ್ಕೆ ಆಸ್ಪತ್ರೆಗೆ ಹೋಗುವಾಗ ಅದಕ್ಕೂ ಮುಂಚೆ ಯಾವುದಾದರೂ ವೈದ್ಯಕೀಯ ಚಿಕಿತ್ಸೆಯ ಮಾಹಿತಿ ಇದ್ದರೇ ಅದನ್ನು ವೈದ್ಯರ ಬಳಿಗೆ ಕೊಂಡೊಯ್ಯಬೇಕು. ಅದೇ ರೀತಿ ನಿಮ್ಮ ಸಂಗಾತಿಯ ಮಾಹಿತಿ, ಕುಟುಂಬದಲ್ಲಿ ಯಾರಿಗಾದರೂ ಅನುವಂಶೀಯ ತೊಂದರೆಗಳು ಇದ್ದರೆ ಅದನ್ನು ಹೇಳಿರಿ.

 

 • ವೈದ್ಯರ ಬಳಿ ಕೇಳಬೇಕಾದ ಪ್ರಶ್ನೆಗಳನ್ನು ಬರೆದಿಟ್ಟುಕೊಳ್ಳಿ.

ವೈದ್ಯರ ಬಳಿ ಹೋದಾಗ ಯಾವ ಪ್ರಶ್ನೆ ಕೇಳಬೇಕು ಎಂಬುದು ನೆನಪಿಗೆ ಬರುವುದಿಲ್ಲ. ಹಾಗಾಗಿ ಮೊದಲೇ ನೀವು ಪ್ರಶ್ನೆಗಳನ್ನು ಬರೆದಿಟ್ಟುಕೊಳ್ಳಿ. ವೈದ್ಯರ ಬಳಿಗೆ ಹೋದಾಗ ಪ್ರಶ್ನೆಗಳನ್ನು ಕೇಳಬಹುದು.

 

 • ವಿಟಾಮಿನ್ ಮಾತ್ರೆಯನ್ನು ತೆಗೆದುಕೊಳ್ಳುವುದು

ನೀವು ಯಾವುದೇ ಮಾತ್ರೆ ತೆಗೆದುಕೊಳ್ಳುವುದಕ್ಕೆ ಮುಂಚಿತವಾಗಿ ವೈದ್ಯರ ತಪಾಸಣೆ ಮತ್ತು ಪರೀಕ್ಷೆಯ ನಂತರ ತೆಗೆದುಕೊಳ್ಳಿ.

 

 • ನಿಮ್ಮ ಬಗ್ಗೆ ಹೇಗೆ ಜಾಗ್ರತೆಯಾಗಿರಬೇಕು

ನಿಮ್ಮನ್ನು ನೀವು ಸದಾ ಹೈಡ್ರೇಟ್ ಆಗಿರಿ. ನೀರು ಹೆಚ್ಚಾಗಿ ಕುಡಿಯಿರಿ. ಹೊರಗೆ ಹೋಗುವಾಗ ನೀರಿನ ಬಾಟಲಿ ತೆಗೆದುಕೊಂಡು ಹೋಗಿರಿ.

 

 • ಮೊದಲ ತಿಂಗಳ ತಪಾಸಣೆಗೆ ರಕ್ತ ಪರೀಕ್ಷೆ

ಗರ್ಭಧಾರಣೆಯ ಆರಂಭದಲ್ಲಿ ಕೆಲವು ರಕ್ತ ಪರೀಕ್ಷೆಗಳನ್ನು ವೈದ್ಯರು ಹೇಳುತ್ತಾರೆ. ಅದಕ್ಕಾಗಿ ನೀವು ಹೆದರಬೇಕಿಲ್ಲ. ಅದರಲ್ಲಿ ಬಿಪಿ, ಶುಗರ್, ಥೈರಾಯಿಡ್ ಪರೀಕ್ಷೆ ಸೇರಿವೆ.

 

 • ಸ್ಕ್ಯಾನಿಂಗ್ ಮಾಡುವುದು

ಗರ್ಭದಲ್ಲಿರುವ ಭ್ರೂಣದ ಬೆಳವಣಿಗೆಯನ್ನು ತಿಳಿಯಲು ವೈದ್ಯರು ಸ್ಕ್ಯಾನಿಂಗ್ ಮಾಡಲು ಹೇಳುತ್ತಾರೆ. ಇದು ಆರು ವಾರಗಳ ನಂತರದ ತಪಾಸಣೆ. ಇದರಲ್ಲಿ ಮಗುವಿನ ಬೆಳವಣಿಗೆಯನ್ನು ಕಾಣಬಹುದು. ಹೆದರುವ ಅಗತ್ಯವಿಲ್ಲ.

ಗರ್ಭವಾಸ್ಥೆಯಲ್ಲಿ ಅಹಿತಕರ ಸನ್ನಿವೇಶ ಮತ್ತು ಮುಂಜಾಗ್ರತೆ :

 • ಕಿಬ್ಬೊಟ್ಟೆಯಲ್ಲಿ ಸಹಿಸಲು ಅಸಾಧ್ಯವಾದ ನೋವು ಬರುತ್ತಿದ್ದು, ರಕ್ತಸ್ರಾವವಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
 • ಕಿಬ್ಬೊಟ್ಟೆಯ ಅತಿಯಾದ ನೋವು ಆರಂಭದಲ್ಲಿ ಕಡಿಮೆ ಇದ್ದು ನಂತರ ಹೊಟ್ಟೆಯ ಮಧ್ಯಭಾಗಕ್ಕೆ ಮುಂದುವರೆದರೆ, ಯಾವುದೇ ರೀತಿಯಲ್ಲಿ ರಕ್ತಸ್ರಾವವಾಗುತ್ತಿದ್ದರೆ ಕೂಡ ನೀವು ವೈದ್ಯರನ್ನು ಸಂಪರ್ಕಿಸಬೇಕು.
 • ದಿನಪೂರ್ತಿ ಮೂತ್ರವಿಸರ್ಜನೆ ಮಾಡದೇ ಇದ್ದು, ಅಥವಾ ಮೂತ್ರ ವಿಸರ್ಜನೆ ಕಡಿಮೆ ಪ್ರಮಾಣದಲ್ಲಿದ್ದು ಒಮ್ಮಿಂದೊಮ್ಮೆಲೆ ಬಳಕೆಯಾಗುತ್ತಿದ್ದರೆ
 • ಮೂತ್ರ ವಿಸರ್ಜನೆ ಮಾಡುವಾಗ ನೋವು ತುಂಬಿದ್ದರೆ ಮತ್ತು ಉರಿಯಾಗುತ್ತಿದ್ದರೆ, ಇದರ ಜೊತೆಗೆ ವಿಪರೀತ ಚಳಿ ಮತ್ತು ಜ್ವರ ಬಂದಿದ್ದರೆ ತಕ್ಷಣ ವೈದ್ಯರನ್ನು ಬೇಟಿ ಮಾಡಿ.
 • ರಕ್ತ ಭೇದಿಯಾಗುತ್ತಿದ್ದರೆ.
 • 101 ಡಿಗ್ರಿ ಫ್ಯಾರನ್ಹೀಟ್ ಗಳಷ್ಟು ಜ್ವರ ಕಾಣಿಸುತ್ತಿದ್ದರೆ.
 • ಇದ್ದಕ್ಕಿದ್ದಾಗೆ ಕೈಕಾಲುಗಳಲ್ಲಿ ಮುಖ ಮತ್ತು ಕಣ್ಣಿನ ಸುತ್ತ ಊತ ಬಂದಾಗ, ಇದರ ಜೊತೆಗೆ ತಲೆನೋವು, ಕಣ್ಣು ಮಂಜಾಗುವುದು, ಒಮ್ಮಿಂದೊಮ್ಮೆಲೆ ತೂಕ ಏರಿಕೆಯಾಗಿರುವುದು, ದೇಹ ಬೆವರುತ್ತಿದ್ದರೆ ತಕ್ಷಣವೇ ವೈದ್ಯರನ್ನು ಕಾಣಬೇಕು.
 • ದೃಷ್ಟಿ ದೋಷ. ಇದ್ದಕ್ಕಿದ್ದ ಹಾಗೆ ಕಣ್ಣು ಮಂಜಾಗುವುದು, ದೃಷ್ಟಿಯಲ್ಲಿ ಮಂದತೆ, ಒಂದೇ ಚಿತ್ರ 2 ಚಿತ್ರದಂತೆ ಕಾಣದಿದ್ದರೆ ವೈದ್ಯರನ್ನು ಭೇಟಿಯಾಗಬೇಕು.
 • ವಿಪರೀತವಾದ ತಲೆನೋವು ದಿನಪೂರ್ತಿ ಆವರಿಸಿದ್ದರೆ
 • ಮಗುವಿನ ಚಲನೆಯಲ್ಲಿ ವ್ಯತ್ಯಾಸವಿದ್ದರೆ. 28 ವಾರಗಳ ಬಳಿಕ ಮಗುವಿನ ಚಲನೆಯು ಕಡಿಮೆಯಾಗಿದ್ದರೂ ವೈದ್ಯರನ್ನು ಭೇಟಿ ಮಾಡಿರಿ.

ಈ ಮೇಲಿನ ಯಾವುದೇ ಲಕ್ಷಣಗಳು ನಿಮ್ಮನ್ನು ಕಾಡಿದರೆ ತಕ್ಷಣ ನೀವು ಏನು ಮಾಡಬೇಕು:

 • ತಕ್ಷಣ ವೈದ್ಯರನ್ನು ಸಂಪರ್ಕಿಸಿ.
 • ಮೊದಲೇ ವೈಧ್ಯರ ವೈಯುಕ್ತಿಕ ಮೊಬೈಲ್ ಸಂಖ್ಯೆಯನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಳ್ಳಿ.
 • ಅವರು ಒಂದು ವೇಳೆ ನಿಮ್ಮ ಕಾಲ್ ಗೆ ಸಿಗದೇ ಇದ್ದರೆ ತಕ್ಷಣ ಒಂದು ವಾಯ್ಸ್ ಮೆಸ್ಸೇಜ್ ಅನ್ನು ಅವರ
 • ಮೊಬೈಲ್ ಗೆ ಕಳುಹಿಸಿ ಮತ್ತು ಬೇರೆ ಹತ್ತಿರದ ವೈದ್ಯರನ್ನು ಸಂಪರ್ಕಿಸಿರಿ. ನಿಮಗೆ ಕಾಣಿಸಿಕೊಂಡಿರುವ ಲಕ್ಷಣಗಳನ್ನು ಅವರಿಗೆ ತಿಳಿಸಿರಿ.
 • ಹತ್ತಿರದ ಆಸ್ಪತ್ರೆಗೆ ತೆರೆಳಿ ಅಲ್ಲಿಯ ನರ್ಸ್ ಹತ್ತಿರ ನಿಮಗಾಗುತ್ತಿರುವ ತೊಂದರೆಯ ಬಗ್ಗೆ
 • ಮಾಹಿತಿಯನ್ನು ನೀಡಿರಿ.
 • ಎಮರ್ಜೆನ್ಸಿ ಎಂದು ಡಾಕ್ಟರ್ ಹತ್ತಿರ ನರ್ಸ್ ಹೇಳುತ್ತಾರೆ.

ವೈದ್ಯರ ಬಳಿ ತೆರಳಬೇಕಾದರೆ ಹೀಗಿರಲಿ ನಿಮ್ಮ ಸಿದ್ಧತೆ

 • ಕೂದಲಿಗೆ ಬಣ್ಣ ಹಚ್ಚಬಹುದು. ಆದರೆ ನಿಮ್ಮ ಕಣ್ಣು,ಬಾಯಿಯ ಸ್ಥಳದ ಬಗ್ಗೆ ಜಾಗ್ರತೆ ಇರಲಿ.
 • ವೈಧ್ಯರ ಪ್ರಿಸ್ಕ್ರಿಪ್ಷನ್
 • ಸ್ಕ್ಯಾನಿಂಗ್ ರಿಪೋರ್ಟ್
 • ಬ್ಲಡ್ ಟೆಸ್ಟ್ ರಿಪೋರ್ಟ್
 • ನಿಮ್ಮ ಬಿಪಿ ಮಾನಿಟರ್ ಟೇಬಲ್
 • ನಿಮ್ಮ ಡಯಾಬಿಟಿಸ್ ಮಾನಿಟರ್ ಟೇಬಲ್

ಗರ್ಭಾವಸ್ಥೆಯ ಸಮಯದಲ್ಲಿ ಎಷ್ಟು ಜಾಗ್ರತೆ ಇದ್ದರೂ ಸಾಲದು. ಸದಾ ಮೈಯೆಲ್ಲಾ ಕಣ್ಣಾಗಿರಬೇಕು. ಈ ಲೇಖನ ಓದುವಿಕೆಗೆ ಖುಷಿಕೊಟ್ಟಿದೆ ಎಂದರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡುವುದರ ಮೂಲಕ ಬೆಂಬಲ ಸೂಚಿಸಿ.

#delivery #labour

A

gallery
send-btn

Related Topics for you