11 Nov 2021 | 1 min Read
Medically reviewed by
Author | Articles
ಪ್ರತಿ ತಂದೆ ತಾಯಿಗೆ ತನ್ನ ಮಗು ಓದಿ ಅಂಕವನ್ನು ಪಡೆಯಬೇಕು ಎಂಬ ಆಸೆ ಇರುತ್ತದೆ. ಬಹಳಷ್ಟು ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಡುತ್ತಾರೆ. ಮಕ್ಕಳನ್ನು ಉತ್ತಮ ಶಾಲೆಯಲ್ಲಿ ಸೇರಿಸಿ, ಶಕ್ತಿಮೀರಿ ಮಕ್ಕಳ ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ಮಾಡಬೇಕೆಂಬ ಮಹದಾಸೆಯನ್ನು ಹೊತ್ತು ಸೇರಿಸುತ್ತಾರೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ಮಕ್ಕಳನ್ನು ಉನ್ನತ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಸೇರಿಸುತ್ತಿದ್ದ ಪೋಷಕರು, ಇನ್ನು ಮಕ್ಕಳನ್ನು ಹಳ್ಳಿಯಿಂದ ಪಟ್ಟಣದವರಿಗೆ ಕರೆದುಕೊಂಡು ಹೋಗಿ ಶಾಲೆಯಲ್ಲಿ ಸೇರಿಸುತ್ತಾರೆ ಲಕ್ಷಗಟ್ಟಲೆ ಹಣವನ್ನು ಶಾಲೆಗೆ ಶುಲ್ಕವಾಗಿ ಕಟ್ಟಿ ಮಕ್ಕಳ ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ನಡೆಸಬೇಕೆಂಬ ಕನಸು ಕಾಣುತ್ತಾರೆ. ಅದೇ ರೀತಿ ಮಕ್ಕಳು ಕೂಡ ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಮನೆಯಲ್ಲಿ ತೋರಿಸುವುದು, ಗಳಿಸಿದ ಅಂಕವನ್ನು ತೋರಿಸಿ ತಂದೆತಾಯಿಯಿಂದ ಪ್ರೋತ್ಸಾಹ ಬಿಡಿಸಿಕೊಳ್ಳುವುದು ಸಾಮಾನ್ಯ ವಾಡಿಕೆ. ಎಲ್ಲಾ ಮಕ್ಕಳು ಒಂದು ಶಾಲೆಯಲ್ಲಿ ಓದುವಾಗ ಎಲ್ಲ ಮಕ್ಕಳ ಕಲಿಕೆಯ ಮಟ್ಟ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವರು ನಿಧಾನಗತಿಯಲ್ಲಿ ಕಲಿಕೆಯನ್ನು ರೂಡಿಸಿಕೊಂಡರೆ, ಕೆಲವು ಮಕ್ಕಳು ತುಂಬಾ ವೇಗವಾಗಿ ಕಲಿಕೆಯನ್ನು ಅರ್ಥಮಾಡಿಕೊಂಡು ರೂಢಿಸಿಕೊಳ್ಳುತ್ತಾರೆ. ಕೆಲವು ಮಕ್ಕಳಿಗೆ ಎಷ್ಟು ಹೇಳಿಕೊಟ್ಟರು, ಅಭ್ಯಾಸದ ಮೇಲೆ ಅಭ್ಯಾಸ ಮಾಡಿಸಿದರೂ ಕಲಿಕೆ ತಲೆಗೆ ಹೋಗುವುದಿಲ್ಲ. ಇದು ಅನುವಂಶೀಯ ಕಾರಣವಿರಬಹುದು. ಅಥವಾ ನರ ಯುದ್ಧಕ್ಕೆ ಸಂಬಂಧಪಟ್ಟ ಅಂಶ ಮೆದುಳಿನ ಕಾರ್ಯಕ್ಷಮತೆ ಸಂಪೂರ್ಣವಾಗಿ ನರವ್ಯೂಹ ವನ್ನು ಅವಲಂಬಿಸಿರುವುದರಿಂದ ಕಲಿಕೆಗೆ ಸಂಬಂಧಪಟ್ಟ ಒಂದು ಅಂಶ ಕಾರಣವಾಗಬಹುದು. ಕಲಿಕೆಗೆ ಸಂಬಂಧಿಸಿದಂತೆ ಓದುವಿಕೆ, ಬರೆಯುವಿಕೆ, ನಿರ್ವಹಣೆ, ಕಾರಣಗಳು, ಏಕಾಗ್ರತೆ, ದೀರ್ಘ ಅಥವಾ ತಾತ್ಕಾಲಿಕ ನೆನಪಿನ ಶಕ್ತಿಯಲ್ಲಿ ತೊಂದರೆ , ಈ ಎಲ್ಲಾ ಸಮಸ್ಯೆಗಳು ಕಲಿಕೆಯ ಜೊತೆಗೆ ಸೇರಿಕೊಂಡಿರುತ್ತವೆ. ಇದರಲ್ಲಿ ಯಾವುದಾದರೂ ತೊಂದರೆ ಮಗುವಿನ ಉಂಟಾದಾಗ ಮಗು ಕಲಿಕೆಯಲ್ಲಿ ಅಸಮರ್ಥತೆಯನ್ನು ಪ್ರದರ್ಶಿಸುತ್ತದೆ.
ಮಕ್ಕಳಲ್ಲಿರುವ ಕಲಿಕೆಯ ಅಸಮರ್ಥತೆಯನ್ನು ಶಾಲೆಗೆ ಸೇರಿಸುವ ಮೊದಲು ತಿಳಿಯಲು ಸಾಧ್ಯವಿಲ್ಲ. ಈ ಕಲಿಕೆಯ ಅಸಮರ್ಥತೆಯನ್ನು ಶಾಲೆಗೆ ಸೇರಿಸಿದರು ನಂತರವೇ ಗುರುತಿಸಲು ಸಾಧ್ಯ. ಕೆಲವೊಮ್ಮೆ ಮಕ್ಕಳು ಆರಂಭದಲ್ಲಿ ಚೆನ್ನಾಗಿ ಕಲಿಯುತ್ತಿದ್ದರೆ, ಹೆಚ್ಚಿನ ತರಗತಿಗೆ ಹೋದಂತೆಲ್ಲ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಇದಕ್ಕೆ ಅನುವಂಶೀಯ ಕಾರಣವೇ ಇರಬಹುದು ಎಂದು ಹೇಳಲಾಗುವುದಿಲ್ಲ. ಕಲಿಕೆಗೆ ಆರಂಭಿಸಿದಾಗ ಮಕ್ಕಳಲ್ಲಿ ಮಾತನಾಡುವ ಅಸಮರ್ಥತೆ ವ್ಯಕ್ತವಾಗಬಹುದು, ತೊದಲುವುದು, ಶಬ್ದಗಳು ಸಿಗದೆ ಮಾತನಾಡುವುದು, ಮೊದಲು ಕೂತಾಗ ಅಕ್ಷರಗಳು ಕಣ್ಣಿಗೆ ಕಾಣದೆ ಮಂದವಾಗಿರುವುದು, ಸರಿಯಾಗಿ ಕೇಳಿಸಿಕೊಳ್ಳದೆ ಇರುವುದು, ಬುದ್ಧಿ ಸಾಮರ್ಥ್ಯದ ಅಸಮರ್ಥತೆ, ಭಾವನಾತ್ಮಕ ತೊಡಕುಗಳು, ಪರಿಸರ, ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ , ಈ ಎಲ್ಲಾ ಕಾರಣಗಳು ಮಗುವಿನ ಮೇಲೆ ಪ್ರಭಾವವನ್ನು ಬೀರುತ್ತವೆ.
ಕಲಿಕೆ ಅಶಕ್ತತೆಯ ವಿಧಗಳು
ಡಿಸ್ಕಾಲ್ಕ್ಯೂಲಿಯಾ:
ಈ ಸಮಸ್ಯೆಯಿಂದ ಬಳಲುತ್ತಿರುವ ಸಂಖ್ಯೆ ಮತ್ತು ಗಣಿತದ ಅಂಶಗಳನ್ನು ಕರೆಯಲು ಸಾಧ್ಯವಿಲ್ಲ. ಎಷ್ಟೇ ಹೇಳಿಕೊಟ್ಟರು ಗೊತ್ತಾಗುವುದಿಲ್ಲ.
ಡಿಸ್ ಗ್ರಾಫಿಯಾ:
ಕಲಿಕೆಯ ಮುಖ್ಯ ಅಸಮರ್ಥತೆ ಎಂದರೆ ಮಗುವಿಗೆ ಬರೆಯಲು ತಿಳಿಯುವುದಿಲ್ಲ. ಅಕ್ಷರದ ಜೋಡಣೆ ಯಾಗಲಿ, ಸ್ವಚ್ಛ ಬರವಣಿಗೆಯಲ್ಲಿ ಮಗುವಿಗೆ ಬರುವುದಿಲ್ಲ. ಪೆನ್ನು ಹೇಳಿದಾಗ ಕೈ ನಡುಗುತ್ತಿರುತ್ತದೆ.
ಡಿಸ್ಲೆಕ್ಸಿಯಾ:
ಈ ಕಲಿಕೆಯ ಅಸಮಾನತೆಯಲ್ಲಿ ಮಗುವಿಗೆ ಭಾಷಾ ಕಲಿಕೆಯ ಸಮಸ್ಯೆ ಮತ್ತು ಓದುವಿಕೆಯ ವಿಧಾನ ತಿಳಿಯುವುದಿಲ್ಲ. ಓದಿದ ಪುಟವನ್ನು ಮತ್ತೆ ಮತ್ತೆ ಓದುತ್ತಿದ್ದರೂ ಮುಂದಿನ ಪುಟಕ್ಕೆ ಹೋದಾಗ ಹಿಂದಿನದು ನೆನಪಿರುವುದಿಲ್ಲ. ಮತ್ತೆ ಹಿಂದಿನ ಪುಟಕ್ಕೆ ಮೊದಲು ಮನಸ್ಸು ಮಾಡುತ್ತಾರೆ.
ಮೌಖಿಕ ಕಲಿಕೆಯ ಅಸಮರ್ಥತೆ:
ಮಕ್ಕಳಿಗೆ ಭಾವನಾತ್ಮಕವಾಗಿ ಮುಖದ ಭಾವ ವ್ಯಕ್ತಪಡಿಸಲು ತಿಳಿಯುವುದಿಲ್ಲ. ಆಂಗಿಕ ಭಾಷೆ, ಬೇರೆಯವರೊಡನೆ ಕನಿಷ್ಠಮಟ್ಟದ ಸಂವಹನ ಇರುತ್ತದೆ. ಮಕ್ಕಳು ಸುಲಭವಾಗಿ ಬೆರೆಯುವುದಿಲ್ಲ.
ಎಡಿಹೆಚ್ ಡಿ :
ಹೈಪರ್ಯಾಕ್ಟಿವ್ ಮಕ್ಕಳಲ್ಲಿ ಇದು ಕಂಡುಬರುತ್ತದೆ. ಮಕ್ಕಳು ಒಂದೇ ಕಡೆ ಗಮನಹರಿಸುವುದು ಕಷ್ಟಕರ , ಕುಳಿತಲ್ಲಿ ಕೂರುವುದಿಲ್ಲ. ಪದೇ ಪದೇ ಬೇರೆ ಬೇರೆಕಡೆಗೆ ಸುತ್ತಾಡುವುದು, ಮತ್ತು ವರ್ತನೆಯನ್ನು ಹತೋಟಿಗೆ ತರಲಾಗದು. ವಿಪರೀತವಾಗಿ ಪ್ರಶ್ನೆಗಳನ್ನು ಕೇಳುವಿಕೆ, ವಿಪರೀತವಾಗಿ ಮಾತನಾಡುವುದು ಇಂತ ಗುಣಲಕ್ಷಣಗಳು ಇಂಥ ಮಕ್ಕಳಲ್ಲಿ ಕಂಡು ಬರುತ್ತದೆ.
ಡಿಸ್ಪ್ರಾಕ್ಸಿಯ:
ಮಾತನಾಡಲು ಮತ್ತು ಭಾಷೆಯ ತೊಡಕು, ನಡೆದಾಡಲು ಕಷ್ಟ. ವ್ಯವಹಾರ ನಡೆಸಲು ತಿಳಿಯುವುದೇ ಇರುವುದು.
ಮಕ್ಕಳಲ್ಲಿ ಕಲಿಕೆಯಲ್ಲಿ ಅಸಮರ್ಥತೆಗೆ ಕಾರಣಗಳೇನು?
ಕಲಿಕಾ ನ್ಯೂನತೆಗಳ ಬೆಳವಣಿಗೆಯಲ್ಲಿ ಸಾಮಾಜಿಕ ವಾತಾವರಣವು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಮನೆಯಲ್ಲಿ ಸಮಸ್ಯೆಗಳಿದ್ದರೆ ಅಥವಾ ಅವರ ಪೋಷಕರು ವಿಚ್ಚೇಧನ ಪಡೆದಿದ್ದರೆ ಅಥವಾ ಮಕ್ಕಳಿಗೆ ತಿಳಿದಿರುವ ಕೌಟುಂಬಿಕ ಅನೇಕ ಸಂಘರ್ಷಗಳನ್ನು ಹೊಂದಿದ್ದರೆ, ಇದು ಮಕ್ಕಳ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಹಪಾಠಿಗಳು ಬೆದರಿಸಿದಾಗ, ಶಾಲೆಯಲ್ಲಿ ಶಿಕ್ಷಕರು ಬೆದರಿಸಿದಾಗ ಮಕ್ಕಳು ಸಹ ಬಳಲುತ್ತಿದ್ದಾರೆ. ಕಲಿಕೆಯಲ್ಲಿ ಅಸಮರ್ಥತೆಯು ಆನುವಂಶಿಕ, ಆದರೆ ಮಾನಸಿಕ ಸಾಮಾಜಿಕ ಕಾರಣಗಳನ್ನು ಹೊಂದಿರಬಹುದು.
ಕಲಿಕಾ ನ್ಯೂನತೆಯನ್ನು ಹೇಗೆ ಪರೀಕ್ಷಿಸಲಾಗುತ್ತದೆ?
ಕಲಿಕೆಯ ಬಗೆಗಿನ ನ್ಯೂನ್ಯತೆಗಳ್ಳನ್ನು ಕಂಡುಹಿಡಿಯಲು ಹಲವಾರು ವಿಧಾನಗಳಿವೆ. ಮಕ್ಕಳ ಐಕ್ಯೂ ಪರೀಕ್ಷೆ ಮಾಡಬಹುದು, ಕಾಗುಣಿತ ಸಾಮರ್ಥ್ಯವನ್ನು WRT, DRT ಅಥವಾ HSP ಯೊಂದಿಗೆ ಪರೀಕ್ಷಿಸಬಹುದು, ಆದರೆ ಓದುವ ಸಾಮರ್ಥ್ಯವನ್ನು ZLT-II ಅಥವಾ SLRT-II ಪರೀಕ್ಷೆಯೊಂದಿಗೆ ಪರೀಕ್ಷಿಸಬಹುದು.
ಮಕ್ಕಳಿಗೆ ಸೂಕ್ತವಾದ ಪರೀಕ್ಷೆಗಳಾದ ಡಿಟಿಕೆ, ಎಎಫ್‌ಎಸ್ ಮತ್ತು “ಪ್ರಾಣಿಗಳಲ್ಲಿರುವ ಚಿತ್ರಗಳು” ಯೊಂದಿಗೆ ಮಾನಸಿಕ ಯೋಗಕ್ಷೇಮವನ್ನು ಪರೀಕ್ಷಿಸಲಾಗುತ್ತದೆ. ಮಕ್ಕಳ ಗಮನ ಮತ್ತು ಏಕಾಗ್ರತೆಯ ಸಾಮರ್ಥ್ಯವನ್ನು ಟಿಎಪಿ ಪರೀಕ್ಷೆ ಮತ್ತು ಮಗು ಮತ್ತು ಪೋಷಕರೊಂದಿಗೆ ಸಂಪೂರ್ಣ ಸಂಭಾಷಣೆಯೊಂದಿಗೆ ವಿಶ್ಲೇಷಿಸಲಾಗುತ್ತದೆ. ಮೇಲೆ ತಿಳಿಸಿದ ಪರೀಕ್ಷೆಗಳು ಮಗುವಿನಲ್ಲಿ ನಿರ್ದಿಷ್ಟ ಕಲಿಕೆಯ ದೌರ್ಬಲ್ಯಗಳನ್ನು ಕಂಡುಹಿಡಿಯಲು ಅಥವಾ ಹೊರಗಿಡಲು ಪರೀಕ್ಷಕರಿಗೆ ಅನುವು ಮಾಡಿಕೊಡುತ್ತದೆ. ಕಲಿಕೆಯಲ್ಲಿ ಅಸಮರ್ಥತೆಗಳು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಬಹಳ ಭಿನ್ನವಾಗಿರುತ್ತದೆ. ಲಿಕೆಯ ಅಂಗವೈಕಲ್ಯದ ಜೊತೆಗಿನ ಲಕ್ಷಣಗಳು ಇವು!
ಮಕ್ಕಳ ಈ ಎಲ್ಲಾ ಲಕ್ಷಣಗಳು ಕೆಲವು ಪೋಷಕರಿಗೆ ತಿಳಿಯುವುದಿಲ್ಲ. ಮಕ್ಕಳು ಕಲಿಕೆಯಲ್ಲಿ ಹಿಂದೆ ಇದ್ದಾರೆ, ಅವರಿಗೆ ಕೇಳುವಿಕೆಯ ಸಾಮರ್ಥ್ಯ ಇಲ್ಲ , ಅವರ ಧ್ಯಾನ ಕೇಂದ್ರೀಕರಿಸಲು ಸಾಧ್ಯವಿಲ್ಲ ಎಂಬ ಅಂಶ ಕೆಲವು ಪೋಷಕರಿಗೆ ಮೊದಲೇ ತಿಳಿದಿರುತ್ತದೆ ಯಾದರೂ ಇದರ ಸಂಪೂರ್ಣ ಜ್ಞಾನ ಶಿಕ್ಷಕರಿಗೆ ಇರುತ್ತದೆ.
ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವುದು ಕೇವಲ ತಮ್ಮ ಪರೀಕ್ಷೆಯಲ್ಲಿ ಗಳಿಸಿದ ಅಂಕದಿಂದ ಮಾತ್ರ ಎಂದು ತಿಳಿಯಬೇಡಿ. ಮಕ್ಕಳು ಯಾರೊಡನೆ ಬೇರೆಯದೇ ಸಾಮಾನ್ಯವಾಗಿ ಅಂತರ್ಮುಖಿಗಳಾಗಿರಬಹುದು. ಶಾಲೆಯ ಆಟದ ಚಟುವಟಿಕೆಯಲ್ಲಿ ಪಾಲ್ಗೊಳ್ಳದೇ ಇರುವುದು, ಹೆಚ್ಚು ಮಾತನಾಡದೇ ಇರುವುದು ಕೂಡ ಲಕ್ಷಣಗಳು.
ಮಕ್ಕಳ ಅಶಕ್ತತೆ ಮತ್ತು ದೌರ್ಭಲ್ಯ ನಮಗೆ ಮನದಟ್ಟಾಗಬೇಕೆಂದರೆ, ಮಗುವಿನ ಚಟುವಟಿಕೆಯತ್ತ ಗಮನ ಹರಿಸಿರಿ. ಮಗು ನಿಮ್ಮ ಜೊತೆ ಬೆರೆವಾಗ ಹೆಚ್ಚು ನಿಗಾವಹಿಸಿ. ಈ ಲೇಖನ ಓದುವಿಕೆಗೆ ನಿಮಗೆ ಖುಷಿಕೊಟ್ಟಿದ್ದರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡುವುದರ ಮೂಲಕ ಬೆಂಬಲ ಸೂಚಿಸಿ.
#earlydevelopment #boostingchilddevelopment #specialneeds #parentinggyaan
A