ಪ್ರಸವದ ದಿನದ  ಲೆಕ್ಕ

ಪ್ರಸವದ ದಿನದ ಲೆಕ್ಕ

12 Nov 2021 | 1 min Read

Medically reviewed by

Author | Articles

ಮಗುವನ್ನು ಪಡೆಯುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಕೆಲವು ದಂಪತಿಗಳಲ್ಲಿ ಮಗುವನ್ನು ಪಡೆಯುವ ಪ್ರಕ್ರಿಯೆ ಸ್ವಲ್ಪ ವರ್ಷ ಮುಂದೂಡಲಾಗುತ್ತದೆ. ಮದುವೆಯಾದ ಹೊಸದರಲ್ಲಿ ತಮ್ಮ ಯೋಜನೆಯನ್ನು 3-4 ವರ್ಷದವರೆಗೆ ಮುಂದೂಡುತ್ತಾರೆ. ಕೆಲವು ದಂಪತಿಗಳು ಯಾವುದೇ ಯೋಜನೆಯಿಲ್ಲದೆ ಮದುವೆಯಾಗಿ ಒಂದು ವರ್ಷದ ಒಳಗಡೆ ಮಗುವನ್ನು ಪಡೆಯುತ್ತಾರೆ. ವ್ಯಕ್ತಿಗತ ಆಲೋಚನೆಗೆ ಮತ್ತು ಚಿಂತನೆಗೆ ಬಹಳಷ್ಟು ವ್ಯತ್ಯಾಸವಿದೆ. ನಿರ್ಧಾರಗಳು ಬದಲಾಗುತ್ತವೆ. ಇದಕ್ಕೆ ಹಲವಾರು ಕಾರಣಗಳಿವೆ. ಕೌಟುಂಬಿಕ ಹಿನ್ನೆಲೆ, ಆರ್ಥಿಕ ಸಮಸ್ಯೆ, ವೈಯಕ್ತಿಕ ಸಮಸ್ಯೆ ಎಲ್ಲವೂ ಕೂಡ ಕೆಲವು ನಿರ್ಧಾರಗಳು ಮೇಲೆ ಪ್ರಭಾವವನ್ನು ಬೀರುತ್ತವೆ. ಅಂತ ನಿರ್ಧಾರಗಳ ಸಾಲಿಗೆ ಮದುವೆಯಾದ ನಂತರ ಮಗುವನ್ನು ಪಡೆಯುವ ಬಗ್ಗೆಯೂ ಚಿಂತನೆ ಆಗುತ್ತದೆ. ದೇಹದ ಪ್ರಕೃತಿಗೆ ಅನುಗುಣವಾಗಿ ಕೆಲವರು ತಮ್ಮ ನಿರ್ಧಾರವನ್ನು ಸೂಕ್ತರೀತಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಉದಾಹರಣೆಗೆ ಹೇಳಬೇಕೆಂದರೆ, ವೈದ್ಯಲೋಕದಲ್ಲಿ ಹೆಣ್ಣಿಗೆ ಒಂದು ಮಗುವನ್ನು ನೈಸರ್ಗಿಕವಾದ ಪ್ರಸಾರದ ಮೂಲಕ ನಡೆಯುವ ವಯಸ್ಸಾಗಿ 23ರಿಂದ 29 ಎಂದು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಮಗುವನ್ನು ನೈಸರ್ಗಿಕ ವಿಧಾನದ ಪ್ರಸವದ ಮೂಲಕ ಮಗುವನ್ನು ಪಡೆಯಲು ಯಾವುದೇ ತೊಡಕಾಗುವುದಿಲ್ಲ. ಒಂದು ವೇಳೆ 29ರ ವಯಸ್ಸಿನ ಮೇಲೆ ಮಕ್ಕಳನ್ನು ಪಡೆಯುವುದು ದೈಹಿಕ ಪ್ರಕ್ರಿಯೆಗೆ ಅಸಮತೋಲನವನ್ನು ಒಡ್ಡುತ್ತದೆ. ಹಾಗೆಂದ ಮಾತ್ರಕ್ಕೆ 29ರ ನಂತರ ನೈಸರ್ಗಿಕ ರೀತಿಯಲ್ಲಿ ಪ್ರಸಾರವಾಗುವುದಿಲ್ಲ ಎಂದೇನಿಲ್ಲ. ಬಹಳಷ್ಟು ಪ್ರಕರಣಗಳಲ್ಲಿ ನೈಸರ್ಗಿಕ ವಿಧಾನದ ಹೊರತಾಗಿ ಸಿ-ಸೆಕ್ಷನ್ ಮೂಲಕ ಮಗುವನ್ನು ಪಡೆಯುವುದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಾಣುತ್ತಿದೆ. ಅದು ಅಲ್ಲದೆ ಗರ್ಭಕೋಶದಲ್ಲಿ ಫಲವತ್ತತೆಯ ದಿನಗಳು ಮತ್ತು ಉತ್ತಮ ಅಂಡೋತ್ಪತ್ತಿಯ ದಿನಗಳು 29 ವಯಸ್ಸಿನ ಒಳಗೆ ಹೆಚ್ಚು ಆರೋಗ್ಯವಾಗಿದೆ. ಆರೋಗ್ಯಕರ ಅಂಡಾಣು ಉತ್ಪತ್ತಿ ಅವಧಿಯಲ್ಲಿ ಸಾಧ್ಯ ಎಂಬುದು ವೈದ್ಯರ ಅಭಿಮತ. ನೈಸರ್ಗಿಕವಾಗಿ ಗರ್ಭ ನಿಲ್ಲುವುದು, ಸುಲಭ ಗರ್ಭಧಾರಣೆಗೆ ವೈದ್ಯರು ಮತ್ತು ತಜ್ಞರು ಸೂಚಿಸುವ ಹೆಣ್ಣಿನ ವಯಸ್ಸಿನ ನಿರ್ಣಯ 21ರಿಂದ 29 ವರ್ಷಗಳು. ಗರ್ಭಧಾರಣೆಯ ಅವಧಿಯನ್ನು ಮುಂದೂಡುವ ಪ್ರತಿ ಸಂಗಾತಿಗಳು ಅಂಡೋತ್ಪತ್ತಿಯ ಫಲವತ್ತತೆಯ ದಿನಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಮಾಸಿಕ ಋತುಸ್ರಾವ ಮತ್ತು ಫಲವತ್ತತೆಯ ದಿನದ ಬಗ್ಗೆ ಇಬ್ಬರಿಗೂ ಜ್ಞಾನವಿದ್ದರೆ ಒಳ್ಳೆಯದು.

 

ಫಲವತ್ತತೆಯ ದಿನವನ್ನು ಗುರುತಿಸುವುದು..

ಪ್ರತಿ ಹೆಣ್ಣಿನ ಮಾಸಿಕ ಋತುಸ್ರಾವದ ದಿನಗಳು ಒಂದರಿಂದ ಏಳು ಅಥವಾ ಒಂದರಿಂದ ಐದು ದಿನಗಳು ಇರುತ್ತವೆ. 28 ದಿನಗಳ ಮಾಸಿಕ ಚಕ್ರ ವಾದರೆ, ಅಂಡಾಣು ಬಿಡುಗಡೆಯ ದಿನ ಹತ್ತರಿಂದ 19ನೇ ದಿನದವರೆಗೂ ನಡೆಯಬಹುದು. ಕೆಲವು ಮಹಿಳೆಯರಲ್ಲಿ ವ್ಯತ್ಯಾಸವಿರುತ್ತದೆ. ಭಾರತೀಯ ಪ್ರಾಕೃತಿಕ ಗುಣಕ್ಕೆ ಅನುಗುಣವಾಗಿ, ಭಾರತೀಯ ಮಹಿಳೆಯರ ದೈಹಿಕ ಪ್ರಕೃತಿಗೆ ಸಂಬಂಧಿಸಿದಂತೆ ಹೆಚ್ಚು ಫಲವತ್ತತೆಯ ದಿನಗಳು ಋತುಸ್ರಾವದ 13 ರಿಂದ 15ನೇ ದಿವಸ ಎಂದು ಹೇಳಲಾಗುತ್ತದೆ.

 

ಇದನ್ನು ಹೇಗೆ ತಿಳಿಯುವುದು..

ಪ್ರಶ್ನೆ ಮಹಿಳೆಯರ ಋತುಸ್ರಾವವು 3 ರಿಂದ 7 ದಿನ ಗಳವರೆಗೆ ಇರುತ್ತದೆ. ಇದಾದ ಮೂಲಕ ದಪ್ಪವಾದ ಲೋಳೆಯ ಹಾಗೆ ಬಿಳಿದ್ರವ ಯೋನಿಯ ಮೂಲಕ ಹೊರಬರುತ್ತದೆ. ದಪ್ಪವಾದ ಬಿಳಿಸ್ರಾವ ಅಥವಾ ಥಿಕ್ ಲೈನಿಂಗ್ ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ಫಲವತ್ತಾದ ಅಂಡಾಣು ಬಿಡುಗಡೆಯಾಗುತ್ತದೆ ಎಂದು ಅರ್ಥೈಸಲಾಗುವುದು. ಗರ್ಭ ನಿಲ್ಲಬೇಕೆಂದರೆ ಈ ಅವಧಿಯಲ್ಲಿ ಅಂಡಾಣು ಮತ್ತು ವೀರ್ಯಾಣು ಸಂಯೋಜನೆಗೊಂಡ ಮಾತ್ರ ಸಾಧ್ಯ.

 

ಅಂಡಾಣು ಬಿಡುಗಡೆಗೆ ಕಾರಣ

ಲ್ಯೂಟೈನೈಸಿಂಗ್ ಹಾರ್ಮೋನ್: ಲ್ಯೂಟೈನೈಸಿಂಗ್ ಹಾರ್ಮೋನಿನ ಮಟ್ಟ ಹೆಚ್ಚಾದಾಗ ಅಂಡಾಣು ಬಿಡುಗಡೆಯಾಗುತ್ತದೆ. ಇದು ಅತಿ ಕಡಿಮೆ ಅವಧಿಯ ವರೆಗೆ ಮಾತ್ರ ಜೀವಂತವಾಗಿರುತ್ತದೆ. 16-32 ಗಂಟೆಗಳ ಕಾಲ ಜೀವಂತವಾಗಿರುತ್ತದೆ ಎಂದು ಹೇಳಬಹುದು. ಈ ಅವಧಿಯಲ್ಲಿ ಅಂಡಾಣು ವೀರ್ಯಾಣು ಸಂಯೋಜನೆಗೊಂಡಾಗ ಭ್ರೂಣದ ಬೆಳವಣಗೆ ಆಗುತ್ತದೆ.

 

ಗರ್ಭ ನಿಲ್ಲುವಿಕೆ

ಮಗುವನ್ನು ಪಡೆಯುವ ಅವಧಿಯನ್ನು ವಿಸ್ತರಿಸುವ ಪ್ರತಿ ಸಂಗಾತಿಗಳು ಈ ವಿಷಯದ ಸಂಪೂರ್ಣ ಜ್ಞಾನ ತಿಳಿದುಕೊಂಡಿರಬೇಕು. ಮಹಿಳೆಯರ ಮಾಸಿಕ ಋತುಸ್ರಾವ ವಾಗಿ ರಕ್ತಸ್ರಾವ ನಿಂತ ಬಳಿಕ 6-7 ದಿನಗಳು ಮತ್ತು ಮಾಸಿಕ ಋತುಚಕ್ರ ಆರಂಭವಾಗುವ ಮೊದಲ 6-7 ದಿನಗಳ ಮಧ್ಯಭಾಗ ಹೆಚ್ಚು ಫಲವತ್ತತೆಯ ದಿನಗಳಾಗಿರುತ್ತವೆ. ಗರ್ಭ ನಿಂತಾಗ ನಿಮ್ಮ ಕಡೆಯ ಮಾಸಿಕ ಚಕ್ರದ ದಿನಾಂಕವನ್ನು ನೀವು ವೈದ್ಯರ ಬಳಿ ಹೇಳಬೇಕಾಗುತ್ತದೆ.

 

ಪ್ರಸವದ ದಿನಾಂಕದ ಲೆಕ್ಕಾಚಾರ

ಮಾಸಿಕ ಚಕ್ರದ ಆಧಾರದ ಮೇಲೆ, ಹೆಜ್ಜೆ ಫಲವತ್ತತೆಯ ದಿನವನ್ನು ಲೆಕ್ಕ ಹಾಕಿದಾಗ, ಗರ್ಭ ನಿಂತಾಗ ಕಡೆಯ ಮಾಸಿಕ ಚಕ್ರದ ದಿನವನ್ನು ಒಂಬತ್ತು ತಿಂಗಳು ಒಂಬತ್ತು ದಿನ ಸೇರಿಸಿ ಲೆಕ್ಕ ಹಾಕಲಾಗುವುದು. ಇದಕ್ಕಾಗಿ ಪ್ರತಿ ಮೂರು ನಾಲ್ಕು ತಿಂಗಳು ನಿಮ್ಮ ಮಾಸಿಕ ಚಕ್ರವನ್ನು ಗಮನಿಸಬೇಕಾಗುತ್ತದೆ.
ಒಂದು ಋತುಸ್ರಾವದ ಅವಧಿ 28, 21 ಅಥವಾ 35 ದಿನಗಳವರೆಗೆ ಇರಬಹುದು. ಈ ಸಂಖ್ಯೆಯಲ್ಲಿ ನಿಮ್ಮ ಋತುಸ್ರಾವದ ಅವಧಿಯನ್ನು ಗಮನದಲ್ಲಿಟ್ಟುಕೊಳ್ಳಿ. ಮಾಸಿಕ ಚಕ್ರ ಅನಿನಿಯಮತವಾಗಿದ್ದರೆ ವೈದ್ಯರಲ್ಲಿ ತಪ್ಪದೇ ತಪಾಸಣೆಗೆ ಹೋಗಿ ಗರ್ಭಧಾರಣೆಯ ಅವಧಿಯನ್ನು ನೋಡಿಕೊಳ್ಳಬೇಕಾಗುತ್ತದೆ. ಮಾಸಿಕ ಚಕ್ರ 28 ಆಗಿದ್ದರೆ, 14 ನೇ ದಿನದಂದು ಅಂಡೋತ್ಪತ್ತಿ ಸಂಭವಿಸುತ್ತದೆ. 12ನೇ, ಹದಿಮೂರನೇ ದಿನವೂ ಕೂಡ ಹೆಚ್ಚು ಫಲವತ್ತತೆಯ ದಿನಗಳೆಂದು ನಂಬಲಾಗಿದೆ.

 

ಲೆಕ್ಕಾಚಾರ ಹೀಗೆ ಮಾಡಿ

ನಿಮ್ಮ ಮಾಸಿಕ ಚಕ್ರದ ಕಡೆಯ ದಿನದಿಂದ 280 ದಿನಗಳು ಅಥವಾ 40 ವಾರಗಳು ಪೂರ್ಣಾವಧಿಯ ದಿನಗಳು ಎಂದು ಹೇಳಲಾಗುತ್ತದೆ. ಅಂದಾಜಿನ ದಿನಾಂಕವನ್ನು ಈ ಕೆಳಗೆ ತೋರಿಸಿದಂತೆ ಹೇಳಲಾಗುತ್ತದೆ

 

ಹಂತ 1

  • ಕೊನೆಯಾ ಮಾಸಿಕ ಚಕ್ರದ ಮೊದಲ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಿ.
  • ಅದಕ್ಕಿಂತಲೂ ಹಿಂದಿನ ಮೂರು ತಿಂಗಳ ದಿನಾಂಕವನ್ನು ಲೆಕ್ಕಹಾಕಿ.
  • ಆ ದಿನಾಂಕಕ್ಕೆ ಒಂದು ವರ್ಷ 7 ದಿನಗಳು ಕೂಡಿಸಿ ಲೆಕ್ಕಹಾಕಿ.

 

ಉದಾಹರಣೆಗೆ ನಿಮ್ಮ ಋತುಸ್ರಾವ ಸೆಪ್ತೆಂಬರ್ 9, 2010ಕ್ಕೆ ಕೊನೆಯಾಗಿದೆ ಎಂದರೆ ಅದಕ್ಕೆ ಮೂರು ತಿಂಗಳು ಹಿಂದೆ ಲೆಕ್ಕ ಹಾಕಿದಾಗ ಜೂನ್ 9, 2010 ಬರುತ್ತದೆ. ಅದಕ್ಕೆ ಮತ್ತೆ ಒಂದು ವರ್ಷ 7 ದಿನಗಳನ್ನು ಕೂಡಿಸಿ. ಆಗ ಜೂನ್ 16, 2011 ಇದು ನಿಮ್ಮ ಪ್ರಸವದ ಸರಾಸರಿ ದಿನಾಂಕ.

ಪ್ರಸವದ ದಿನವನ್ನು ಹಲವಾರು ವಿಧದಲ್ಲಿ ಲೆಕ್ಕ ಹಾಕಲಾಗುವುದು. ಚೈನೀಸ್ ಕ್ಯಾಲೆಂಡರ್, ಭಾರತೀಯ ಸಾಂಪ್ರದಾಯಿಕ ವಿಧಾನದಲ್ಲೂ ಕೂಡ ಲೆಕ್ಕ ಹಾಕಲಾಗುವುದು. ಇಲ್ಲಿ ಸಾಮಾನ್ಯವಾಗಿ ವೈದ್ಯಕೀಯ ಪದ್ದತಿಯಲ್ಲಿ ಲೆಕ್ಕಾಚಾರ ಹಾಕುವ ವಿಧಾನವನ್ನು ತಿಳಿಸಲಾಗಿದೆ. ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ , ಶೇರ್, ಕಾಮೆಂಟ್ ಮಾಡುವುದರ ಮೂಲಕ ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಯನ್ನು ನೀಡಿ. ನಿಮ್ಮ ಪ್ರತಿಕ್ರಿಯೆ ನಮಗೆ ಅಮೂಲ್ಯವಾದುದು.

#delivery #pregnancymilestones

A

gallery
send-btn

Related Topics for you