ಪೇರೆಂಟಿಂಗ್ ಮಿಸ್ಟೇಕ್ಸ್

cover-image
ಪೇರೆಂಟಿಂಗ್ ಮಿಸ್ಟೇಕ್ಸ್

ಬಹಳಷ್ಟು ಪೋಷಕರು ತಮ್ಮ ಮಕ್ಕಳ ಭಾವಿ ಭವಿಷ್ಯದ ಬಗ್ಗೆ ಬಹಳಷ್ಟು ಕನಸುಗಳನ್ನು ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಅವಿರತ ಪ್ರಯತ್ನಗಳನ್ನು ಮಾಡುತ್ತಾರೆ. ತನ್ನ ಮಗು ಚೆನ್ನಾಗಿ ಓದಬೇಕು, ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು, ಮಗುವಿಗೆ ಉತ್ತಮ ಶಿಸ್ತು ಆಚಾರ-ವಿಚಾರಗಳನ್ನು ಮೈಗೂಡಿಸಬೇಕು. ಹೀಗೆ ಮಗುವಿನ ಬಗ್ಗೆ ಬಹಳಷ್ಟು ಕನಸುಗಳನ್ನು ಕಂಡಿರುತ್ತೀರಿ. ಮಗುವಿನ ಮನೋವಿಕಾಸವನ್ನು ಕೂಡ ಕೆಲವು ಪೋಷಕರು ಪರಿಗಣನೆಗೆ ತೆಗೆದುಕೊಳ್ಳದೆ ಹಲವಾರು ರೀತಿಯ ಹೇರಿಕೆಯನ್ನು ಮಗುವಿನ ಮೇಲೆ ಒಡ್ಡುತ್ತಾರೆ. ಒಂದು ರೀತಿಯಲ್ಲಿ ಮಕ್ಕಳ ಬೆಳವಣಿಗೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ತಂದೆ-ತಾಯಿಯರು ಪ್ರಮುಖ ಪಾತ್ರವಹಿಸುತ್ತಾರೆ. ಪೋಷಕರ ತಪ್ಪುಗಳು ಬಹುಮುಖ್ಯ ಅಥವಾ ಗಂಭೀರವಾದ ಸಮಸ್ಯೆ ಎಂದು ಮೇಲ್ನೋಟಕ್ಕೆ ಕಾಣದಿರಬಹುದು. ಆದರೆ ಅದು ಎಂತಹ ಗಾಢ ಪರಿಣಾಮವನ್ನು ಮಗುವಿನ ಮೇಲೆ ಮೂಡುತ್ತದೆ ಎಂಬುದನ್ನು ವಿವರವಾಗಿ ಬೇಬಿಚಕ್ರ ನಿಮಗೆ ತಿಳಿಸಿಕೊಡುತ್ತದೆ.

 

ಮಗುವಿಗೆ ವಿಪರೀತವಾದ ಶಿಸ್ತು ಕಲಿಸುವುದು.

ಮಕ್ಕಳಿಗೆ ಶಿಸ್ತು ಕಲಿಸುವುದು ಉತ್ತಮ ಸಂಪ್ರದಾಯ. ಆಯಾ ಸಮಾಜದ, ಧಾರ್ಮಿಕ ನೀತಿಯ, ವಲಯದ ಅನುಗುಣವಾಗಿ ಮತ್ತು ಕುಟುಂಬದ ಆಗುಹೋಗುಗಳ ವಿವರಾತ್ಮಕ ವಿಚಾರವನ್ನು ಮಗುವಿನ ಮೇಲೆ ಹೇರಿ, ಸಾಮಾಜಿಕ ಜೀವನದಲ್ಲಿ ಹೇಗಿರಬೇಕು ಎಂಬ ಪಾಠವನ್ನು ಹೇಳಿಕೊಡುವುದೇ ಶಿಸ್ತು. ಆರಂಭದಲ್ಲಿ ಮಗುವೂ ಇದನ್ನು ಸೂಕ್ತ ರೀತಿಯಲ್ಲಿ ಕಲಿಯುತ್ತದೆ. ನಿಮ್ಮ ಕುಟುಂಬದ ಸಮಾರಂಭಕ್ಕೆ ಹೋದಾಗ, ನಿಮ್ಮ ಮನೆಗೆ ಬಂಧುಮಿತ್ರರ ಆಗಮನ ವಾದಾಗ, ಹಿರಿಯರ ಮುಂದೆ, ಶಾಲೆಗೆ ಸೇರಿಸುವ ಮುನ್ನ, ಎಲ್ಲಾ ಕಡೆಯಲ್ಲಿ ಮಕ್ಕಳಿಗೆ ಶಿಸ್ತನ್ನು ಕಲಿಸುತ್ತೀರಿ. ಒಂದು ರೀತಿಯಲ್ಲಿ ಹೇಳಬೇಕೆಂದರೆ, ಮಗುವಿಗೆ ಒಂದು ಕಟ್ಟಳೆಯನ್ನು ವಿಧಿಸುತ್ತೀರಿ. ಬೆಳೆಯುವ ಮಗುವಿನ ಮನಸ್ಸು ಹೂವಿನಂತೆ. ಮಗುವಿಗೆ ಏನು ಮಾಡಬೇಕು ಏನು ಮಾಡಬಾರದು ಎಂಬುದು ತಿಳಿದಿರುವುದಿಲ್ಲ. ಕೆಲವೊಂದು ನಿಯಮಗಳನ್ನು ಹೇರಿದಾಗ ಮಗು ಶಿಸ್ತುಬದ್ಧ ಜೀವನವನ್ನು ರೂಪಿಸಿಕೊಳ್ಳುತ್ತದೆ ನಿಜ. ಆದರೆ ಅದೇ ಶಿಸ್ತು ವಿಪರೀತವಾದಾಗ ಮಗುವಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗುತ್ತದೆ. ಮನಸ್ಸಿನಲ್ಲಿ ಅವ್ಯಕ್ತ ಭಾವನೆ ಮೊಳಕೆ ಒಡೆಯುತ್ತದೆ. ತಾನು ನಡೆದರೂ ತಪ್ಪು, ತಾನು ಕೂತರೂ ತಪ್ಪು ಎಂಬ ಧೋರಣೆ ತನ್ನ ಪೋಷಕರದು ಎಂದು ಭಾವಿಸುತ್ತದೆ. ಈ ಬದಲಾಗುವ ಮನೋಪ್ರವೃತ್ತಿಗೆ ಪೋಷಕರೇ ಕಾರಣ. ಮಕ್ಕಳನ್ನು ಯಾವಾಗಲೂ ಸ್ವತಂತ್ರ ಹಕ್ಕಿಯಂತೆ ಬಿಡಬೇಕು. ಸ್ವತಂತ್ರವಾಗಿ ಬಿಟ್ಟು ನಿಯಮ ಕಟ್ಟಳೆಯ ವಿಷಯವನ್ನು ಸೂಕ್ಷ್ಮವಾಗಿ ತಿಳಿಹೇಳಬೇಕು. ಆಗ ಮಕ್ಕಳು ಸರಿದಾರಿಗೆ ತಲುಪುತ್ತಾರೆ.

 

ಮಗುವನ್ನು ಇತರ ಮಗುವಿನೊಂದಿಗೆ ಹೋಲಿಕೆ ಮಾಡಬೇಡಿ

ನಿಮ್ಮ ಕುಟುಂಬದ ಆಚರಣೆ ಮತ್ತು ಮಗುವಿನ ಜೀವನ ವ್ಯವಸ್ಥೆಗೆ ಹೋಲಿಕೆ ಇರುತ್ತದೆ ನಿಜ, ಆದರೆ ಬೇರೆ ಮನೆಯವರ ಆಚಾರ-ವಿಚಾರ ಮಗುವಿನ ವರ್ತನೆಯಲ್ಲಿ ವ್ಯತ್ಯಾಸ ಇರುತ್ತದೆ ಅಲ್ಲವೇ? ಮಕ್ಕಳಿಂದ ಮಕ್ಕಳಿಗೆ, ವ್ಯಕ್ತಿಯಿಂದ ವ್ಯಕ್ತಿಗೆ ಆಲೋಚನೆ ಶಕ್ತಿ, ಜ್ಞಾನ ಶಕ್ತಿ ,ಬೌದ್ಧಿಕ ಶಕ್ತಿ ಎಲ್ಲವೂ ವ್ಯತ್ಯಾಸವಿರುತ್ತದೆ. ಒಂದು ನೀವು ಅರಿತುಕೊಳ್ಳಬೇಕಾದ ಅಂಶವೆಂದರೆ, ಮಗುವಿನ ಮನೋವಿಕಾಸದ ಸಮಯದಲ್ಲಿ ಕೆಲವು ಮಕ್ಕಳು ನಿಧಾನಗತಿಯಲ್ಲಿಯು, ಕೆಲವು ಮಕ್ಕಳು ಶೀಘ್ರಗತಿಯಲ್ಲಿ ತಮ್ಮ ಚಟುವಟಿಕೆಗಳನ್ನು ವ್ಯಕ್ತಪಡಿಸಬಹುದು. ಮಕ್ಕಳು ಅಭಿವ್ಯಕ್ತಿಸುವ ಅವರ ವ್ಯಕ್ತಿತ್ವವನ್ನು ಮೊದಲೇ ನೀವು ತನ್ನ ಮಗು ನಿಧಾನಗತಿಯಲ್ಲಿದೆ ಅಥವಾ ತನ್ನ ಮಗು ತುಂಬಾ ವೇಗಗತಿಯಲ್ಲಿ ಎಂಬುದನ್ನು ನಿರ್ಧರಿಸಬೇಡಿ. ಮಗು ಇತರ ಮಕ್ಕಳೊಂದಿಗೆ ಬರೆಯುವಾಗ ತನ್ನಿಂದತಾನೇ ಕಲಿಕೆಯನ್ನು ಆರಂಭಿಸುತ್ತದೆ. ಅದು ನಿಧಾನಗತಿಯಲ್ಲಿ ಸಾಗಿದರೂ ಚಿಂತೆ ಪಡಬೇಕಾಗಿಲ್ಲ. ನಗುವಿನ ಕಲಿಕೆಯು ಮತ್ತು ಮಗುವಿನ ಬೆಳವಣಿಗೆಯು ಒಂದೇ ಸಮದಲ್ಲಿ ನಡೆಯುವುದರಿಂದ ಹೆಚ್ಚು ಕಡಿಮೆ ಆಗುವುದು ಸಹಜ. ಹೀಗಿರುವಾಗ ನೀವು ಮುಂದಿರುವ ಇತರ ಮಕ್ಕಳಿಗೆ ನಿಮ್ಮ ಮಗುವನ್ನು ಹೋಲಿಕೆ ಮಾಡಿ ನಿಮ್ಮ ಮಗುವಿನ ಆತ್ಮಸ್ಥೈರ್ಯವನ್ನು ಕಡಿಮೆ ಹೀಗೆ ನೀವು ಮಾಡಿದ್ದೆ ಆದರೆ ಮಗು ತನ್ನ ಆತ್ಮವಿಶ್ವಾಸವನ್ನು ಬೆಳವಣಿಗೆ ಹಂತದಲ್ಲಿರುವ ಮಗುವಿನ ಮನಸ್ಸು ಘಾಸಿಗೊಳ್ಳುತ್ತದೆ. ತಂದೆತಯಿಯನ್ನು ಅವಲಂಬಿಸಿ ಬೆಳೆಯುತ್ತಿರುವ ಮಗುವಿಗೆ ಅವರಿಂದಲೇ ಮನಸ್ಸಿಗೆ ಘಾಸಿಯಾದರೆ ಮಗು ಯಾರನ್ನು ಅವಲಂಬಿಸಬೇಕು ಹೇಳಿ? ಮಗುವಿನ ವ್ಯಕ್ತಿತ್ವ ವಿಕಸನ, ಮಿದುಳಿನ ಬೆಳವಣಿಗೆ, ಜ್ಞಾನವಿಕಸ ಇವೆಲ್ಲ ದಿಕ್ಕು ನಿಮ್ಮ ಮನೆಯ ಪರಿಸರ ದಿಂದ ಹಿಡಿದು ಉಳಿದ ಪರಿಸರವು ಪರಿಣಾಮಕಾರಿಯಾದುದು. ಆದ್ದರಿಂದ ಹೋಲಿಕೆ ಮಾಡುವಾಗ ಆಲೋಚಿಸಿ ಮಾಡಿರಿ. ಹಾಗೊಂದು ವೇಳೆ ನಿಮಗೆ ಹೋಲಿಕೆ ಮಾಡಿ ಮಗುವಿಗೆ ತಿಳಿಹೇಳಬೇಕು ಎಂದರೆ, ಪ್ರಸಿದ್ಧ ವ್ಯಕ್ತಿಗಳ ಜೀವನ ಚಿತ್ರಣ, ಅವರ ಬಯೋಗ್ರಫಿ ಯನ್ನು ಮಗುವಿಗೆ ಚಿತ್ರದ ಮೂಲಕ ತೋರಿಸಿ. ಕೆಲವು ಸಾಧನೆಗಳನ್ನು ತೋರಿಸಿಕೊಡಿ. ಮಗುವಿಗೆ ಮನಸ್ಸಿಗೆ ಮುಟ್ಟುವಂತೆ ಸಂಗಾತಿಯೊಡನೆ ಸಾಧನೆಯ ವಿಷಯವಾಗಿ ಚರ್ಚಿಸಿ. ನಿಮ್ಮಿಬ್ಬರ ಸಂಭಾಷಣೆಯನ್ನು ಕೇಳಿ ಮಗು ಅರ್ಥೈಸಿಕೊಳ್ಳುತ್ತದೆ.

 

ಮಕ್ಕಳಿಗೆ ಬೈಯುವಾಗ ಅವಾಚ್ಯ ಶಬ್ದಗಳ ಬಳಕೆ

ಕೆಲವು ಕಡೆ ಮಕ್ಕಳು ವಿಪರೀತ ತುಂಟತನ ಪ್ರವೇಶಿಸಿದಾಗ, ಗೋಳು ಹತ್ತಿ ಕೊಂಡಾಗ ಕೆಲವು ಪೋಷಕರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಗಮನದಲ್ಲಿಡಿ ಮಗು ನಿಮ್ಮ ಮನೆ ಮಾತ್ರವಲ್ಲ ಸಾಮಾಜಿಕ ಜೀವನದಲ್ಲಿ ತನ್ನ ಬೆಳವಣಿಗೆಯ ಪಾಲುದಾರಿಕೆಯನ್ನು ಪಡೆಯುತ್ತದೆ. ಹಾಗೊಂದುವೇಳೆ ಶಾಲೆಯಲ್ಲಿ ಅಥವಾ ಸಭೆ-ಸಮಾರಂಭಗಳಲ್ಲಿ ಇತರ ಮಕ್ಕಳೊಡನೆ ಬೆರೆಯುವಾಗ, ನೀವು ಬಳಸಿದ ಶಬ್ದಗಳನ್ನು ಮಗು ಉಚ್ಚರಿಸಬಹುದು. ಇದರ ಬಗ್ಗೆ ಜಾಗ್ರತೆ ವಹಿಸಿ.

 

ಮಕ್ಕಳನ್ನು ವಿಪರೀತವಾಗಿ ಹೆದರಿಸದಿರಿ

ಮಗು ಊಟ ಮಾಡದಿದ್ದರೆ, ಹೇಳಿದ ಮಾತು ಕೇಳದಿದ್ದರೆ, ಮಲಗದಿದ್ದರೆ, ಕುಳಿತುಕೊಳ್ಳದಿದ್ದರೆ ಹೀಗೆ ಮಗು ಯಾವ ಯಾವ ಚಟುವಟಿಕೆಯಲ್ಲಿ ನಿಮ್ಮ ಮಾತು ಕೇಳದೆ ಇದ್ದಾಗ, ಮಗುವನ್ನು ಭಯಾನಕ ದೃಶ್ಯವನ್ನು ಅಥವಾ ಭಯಾನಕ ವ್ಯಕ್ತಿಯನ್ನು ನೆನಪಿಸಿ ಮಗುವನ್ನು ಹೆದರಿಸುವ ಕಾರ್ಯವನ್ನು ಮಾಡಬೇಡಿ. ಮಗುವಿನ ಮುಗ್ಧ ಮನಸ್ಸಿಗೆ ಭಯ ಆವರಿಸಿ ಬಿಟ್ಟರೆ ಮುಂದಕ್ಕೆ ಫೋಬಿಯಾ ದತ ಕಾಯಿಲೆಗಳು ಆರಂಭವಾಗಬಹುದು. ಕೆಲವು ಸಲ ಲರ್ನಿಂಗ್ ಡಿಫೆಕ್ಟ್ ಕಾಣಿಸಬಹುದು. ಇದೆಲ್ಲದರ ಬಗ್ಗೆ ಜಾಗ್ರತೆ ವಹಿಸಿ.ಮಗುವನ್ನು ಅಡ್ಡಹೆಸರಿನಿಂದ ಕರೆಯಬೇಡಿ

ನಿಮ್ಮ ಮಗು ನಿಮ್ಮ ವ್ಯಕ್ತಿತ್ವ ಮತ್ತು ವಂಶಿಯ ಗುಣವನ್ನು ಹಂಚಿಕೊಂಡು ಬೆಳೆಯುತ್ತಿರುತ್ತದೆ. ಮಗುವಿನ ಚರ್ಮದ ಬಣ್ಣಕ್ಕಾಗಿ ಕರಿಯ, ಬಿಳಿಯ, ಹೀಗೆಲ್ಲಾ ಅಡ್ಡಹೆಸರು ಹಾಕಿ ಕರೆಯಬೇಡಿ. ಮಗುವಿಗೆ ನಿಮಗಿಷ್ಟವಾದ ಮುದ್ದಾದ ಹೆಸರನ್ನು ಕರೆದರೆ ಮಗು ಮತ್ತು ನಿಮ್ಮ ನಡುವಿನ ಬಾಂಧವ್ಯ ಗಟ್ಟಿಯಾಗಿರುತ್ತದೆ. ಒಂದು ಮುಖ್ಯವಾದ ಅಂಶವೆಂದರೆ ಮಗುವಿಗೆ ನೀವು ನಿಷ್ಕಲ್ಮಶ ಪ್ರೀತಿಯನ್ನು ಕೊಟ್ಟಾಗ ಮಾತ್ರವೇ ಮಗು ನಿಮಗೆ ನಿಷ್ಕಲ್ಮಶವಾಗಿ ಮುಕ್ತವಾಗಿ ಬೆರೆಯಲು ಪ್ರೀತಿಸಲು ಮನಸು ಮಾಡುತ್ತದೆ.

 

ಮಗುವಿಗೆ ಮುಕ್ತವಾಗಿ ಸ್ವತಂತ್ರ ಹಕ್ಕಿಯಾಗಿ ಇರಲು ಬಿಡಿ

ಮಗುವಿನ ಭಾವನೆ, ಮಗುವಿನ ಚಟುವಟಿಕೆಯ ಮಧ್ಯೆ ನೀವು ಭಾಗವಹಿಸಿದರೂ ಎಷ್ಟು ಸಮಯ ಬೇಕು ಅಷ್ಟು ಮಾತ್ರ ಭಾಗವಹಿಸಿರಿ. ಮಗು ತನ್ನ ವ್ಯಕ್ತಿತ್ವವನ್ನು ಆರಂಭದಿಂದಲೇ ರೂಢಿಸಿಕೊಳ್ಳುವಾಗ ವಿಪರೀತವಾಗಿ ನಿಮ್ಮನ್ನು ಅವಲಂಬಿಸಿಯೇ ತನ್ನ ಚಟುವಟಿಕೆಯನ್ನು ಮಾಡುವುದು ಬೇಡ. ನಗು ತಾನು ಸ್ವತಂತ್ರವಾಗಿ ಕಲಿಯಲು ಸಾಧ್ಯ, ಚಟುವಟಿಕೆ ಮಾಡಲು ಸಾಧ್ಯ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಗುವಿಗೆ ನೀವು ಒಂದು ಸ್ವತಂತ್ರ ವಲಯ ಕಲ್ಪಿಸಿಕೊಡಬೇಕು.

 

ಮಗುವಿನ ಮುಂದೆ ಸಂಗಾತಿಗಳಿಬ್ಬರೂ ಜಗಳವಾಡಬೇಡಿ

ಕೆಲವು ಸಂಗತಿಗಳು ತುಂಬಾ ದೊಡ್ಡ ತಪ್ಪುಗಳನ್ನು ಮಾಡುತ್ತಾರೆ. ಮಗುವಿನ ಮುಂದೆ ಒಬ್ಬರಿಗೊಬ್ಬರು ಬೈದಾಡುತ್ತಾ, ಏರು ದನಿಯಲ್ಲಿ ಜಗಳವಾಡುತ್ತಾರೆ. ಮಗು ಇದನ್ನು ನೋಡಿ ಹೆದರಿಕೊಂಡು ಮುದುಡಿಕೊಳ್ಳುತ್ತದೆ. ಅಕ್ಷರಶಃ ಮಗುವಿನ ಮನಸ್ಸು ಮುದುಡಿಕೊಳ್ಳುತ್ತದೆ. ಇದು ಮುಂದೆ ಬೃಹದಾಕಾರವಾಗಿ ಬೆಳೆದು ಖಿನ್ನತೆ ಬರಬಹುದು.

 

“ಮಗುವಿನ ಬೆಳವಣಿಗೆಯಲ್ಲಿ ತಂದೆ ತಾಯಿಗಳ ಪಾತ್ರ ಈಗಾಗಲೇ ತಿಳಿಸಿದಂತೆ ಬಹುದೊಡ್ಡದು. ಒಂದು ಜವಾಬ್ದಾರಿಯುತ ಸ್ಥಾನವೂ ಹೌದು. ಮಗುವಿನ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಾವು ಸೃಷ್ಟಿಸಬೇಕು. ಆರೋಗ್ಯವಂತ ಮಗುವಿನ ಬೆಳವಣಿಗೆ ನಮ್ಮೆಲ್ಲರ ಹೊಣೆ. ಮಗುವಿನ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ದ ಬಗ್ಗೆ ಮಾಹಿತಿ ನೀಡಿದ ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ನಿಮ್ಮ ಪ್ರತಿಕ್ರಿಯೆಯನ್ನು ಹಂಚಿರಿ. ನಿಮ್ಮ ಪ್ರತಿಕ್ರಿಯೆ ನಮಗೆ ತುಂಬಾ ಅಮೂಲ್ಯವಾದದ್ದು ”

#parentinggyaan #childbehaviour
logo

Select Language

down - arrow
Personalizing BabyChakra just for you!
This may take a moment!