ಮಕ್ಕಳ ದಿನಾಚರಣೆಯ ಶುಭಾಶಯಗಳು

ಮಕ್ಕಳ ದಿನಾಚರಣೆಯ ಶುಭಾಶಯಗಳು

14 Nov 2021 | 1 min Read

Medically reviewed by

Author | Articles

ಪ್ರತೀ ವರ್ಷ ಮಕ್ಕಳಿಗಾಗಿ ಬರುವ ಮಕ್ಕಳ ಹಬ್ಬ ಮಕ್ಕಳ ದಿನಾಚರಣೆ. ಪ್ರಧಾನಿ ಜವಾಹರಲಾಲ್ ನೆಹರೂರವರ ನೆನಪಿಗಾಗಿ ಅವರ ಹುಟ್ಟು ದಿನದ ಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಜವಹರಲಾಲ್ ನೆಹರುರವರು ಮಕ್ಕಳ ಮೇಲೆ ತುಂಬಾ ಪ್ರೀತಿಯನ್ನು ಇಟ್ಟುಕೊಂಡಿದ್ದರು. ಅವರ ಜ್ಞಾಪಕಾರ್ಥವಾಗಿ ಪ್ರತಿವರ್ಷ ಆಚರಣೆಯನ್ನು ಮಾಡಲಾಗುತ್ತಿದೆ.

ಮಕ್ಕಳ ದಿನಾಚರಣೆಯ ಹಿನ್ನೆಲೆ

ವಿ ಎನ್ ಕುಲಕರ್ಣಿ ಎಂಬುವವರು ವಿಶ್ವಸಂಸ್ಥೆಯ ಒಂದು ಯೋಜನೆಯಲ್ಲಿ ಮಕ್ಕಳ ಕಲ್ಯಾಣಕ್ಕಾಗಿ 1951 ರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿಯ ದೇಶದ ಕಾನೂನಿನಲ್ಲಿ ಮಕ್ಕಳ ಅಭಿವೃದ್ಧಿಗೋಸ್ಕರ ರಾಣಿ ಎಲಿಜಬೆತ್-೨ ಅವರ ಹುಟ್ಟುಹಬ್ಬದ ದಿನದಂದು ನಿಧಿ ಸಂಗ್ರಹ ಮಾಡಲಾಗುತ್ತಿತ್ತು. ಅಲ್ಲಿಯ ಈ ಸ್ಥಿತಿಯನ್ನು ಗಮನಿಸಿದ ಕುಲಕರ್ಣಿಯವರು ಭಾರತದ ಮಕ್ಕಳ ಅಭಿವೃದ್ಧಿ ಏಳಿಗೆಗೋಸ್ಕರ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ನಿರ್ಧರಿಸಿದರು.‌ ತಮ್ಮ ಮನೋಭಿಲಾಷೆಯನ್ನು ವಿಶ್ವಸಂಸ್ಥೆಯ ಎದುರಿಟ್ಟಾಗ , ಇದಕ್ಕೆ ಅನುಮೋದಿಸಲಾಯಿತು.
ಇದೇ ವಿಷಯವನ್ನು ಅಂದಿನ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರೂರವರು ತುಂಬಾ ಸಂತೋಷದಿಂದ ಒಪ್ಪಿಕೊಂಡರು. ಅವರಿಗೆ ಮಕ್ಕಳ ಮೇಲಿದ್ದ ಪ್ರೀತಿ, ಮಕ್ಕಳ ಮೇಲಿನ ಮಮಕಾರದಿಂದ ಮಕ್ಕಳ ದಿನಾಚರಣೆಯನ್ನು ತಮ್ಮ ಜನ್ಮದಿನದಂದು ಆಚರಿಸಲು ಒಪ್ಪಿಕೊಂಡರು. 1951, ನವೆಬರ್ 14 ರಂದು ಅನುಮೋದನೆಗೊಂಡ ಮಕ್ಕಳ ದಿನಾಚರಣೆಯ ಸಂಭ್ರಮವೂ ಅಂದಿನಿಂದ ಇಂದಿನವರೆಗೆ ನವಂಬರ್ 14 ಪ್ರತಿವರ್ಷ ಮಕ್ಕಳ ದಿನಾಚರಣೆಯನ್ನು ಆರಂಭಿಸಲಾಗುತ್ತಿದೆ. ಕೇವಲ ನಂಬರ್ 14 ಮಾತ್ರ ಮಕ್ಕಳ ದಿನ ಎಂದು ಭಾವಿಸಬೇಡಿ. ಮಕ್ಕಳ ಮನೋವಿಕಾಸ, ಬೆಳವಣಿಗೆಗೆ ಸಂಬಂಧಿಸಿದಂತೆ 365 ದಿನಗಳು ಕೂಡ ಮುಖ್ಯವೇ.

ಮಕ್ಕಳ ದಿನಾಚರಣೆಯ ಮಹತ್ವ

ಮಕ್ಕಳ ದಿನಾಚರಣೆ ಕೇವಲ ಒಂದು ಆಚರಣೆಯಲ್ಲ. ಈ ದಿನದ ಹಿಂದೆ ಬಹುದೊಡ್ಡ ಕೈಂಕರ್ಯದ ಆಲೋಚನೆಯಲ್ಲಿ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಈ ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಇದು ನೂರಕ್ಕೆ ನೂರರಷ್ಟು ಸತ್ಯದ ಮಾತು. ದೇಶದ ಭಾವಿ ಭವಿಷ್ಯವನ್ನು ರೂಪಿಸುವ ಸೂತ್ರಧಾರಿಗಳು ಇಂದಿನ ಮಕ್ಕಳು. ಹಾಗಾಗಿ ಈ ನಿಟ್ಟಿನಲ್ಲಿ ಜಾರಿಯಾದ ಮಕ್ಕಳ ದಿನಾಚರಣೆಯ, ಮಕ್ಕಳ ಶಿಕ್ಷಣ, ಅವರ ಹಕ್ಕುಗಳು, ಕಾಳಜಿ ಬಗ್ಗೆ ಹೇಳುತ್ತದೆ. ಮಕ್ಕಳ ಬೆಳವಣಿಗೆಯ ಹಕ್ಕುಬಾಧ್ಯತೆ ಯನ್ನು ನೆರವೇರಿಸುವ ದೃಷ್ಟಿಯಲ್ಲಿ ಜವಾಹರ್ಲಾಲ್ ನೆಹರುರವರ ಜ್ಞಾಪಕಾರ್ಥಕವಾಗಿ ಆರಂಭವಾದ ಈ ಮಕ್ಕಳ ದಿನಾಚರಣೆಯ ಮಕ್ಕಳಾದ ಮಕ್ಕಳ ಕಲ್ಯಾಣದ ರೂಪುರೇಷೆಯನ್ನು ನಿರ್ದೇಶಿಸುತ್ತದೆ. ಮಕ್ಕಳ ಹಕ್ಕು ಬಾಧ್ಯತೆಗಳನ್ನು ಸರಕಾರ ನೋಡಿಕೊಳ್ಳುತ್ತದೆ.

ಮಕ್ಕಳಿಗೆ ಎಲ್ಲರಿಗೂ ನಮ್ಮ ಬೇಬಿ ಚಕ್ರದಿಂದ ಹೃದಯತುಂಬಿದ ಶುಭಾಶಯಗಳು. ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ, ಮಕ್ಕಳಿಗಾಗಿ ಬೇಬಿ ಚಕ್ರದಿಂದ ಆಚರಣೆಯ ಕೆಲವು ಟಿಪ್ಸ್ ಗಳು ಹೀಗಿವೆ.

ಮಕ್ಕಳನ್ನು ದಿನಾಚರಣೆಯ ಸಂದರ್ಭ ಇತರ ಮಕ್ಕಳೊಂದಿಗೆ ಬೆರೆಯಲು ಬಿಡಿ
ಮಕ್ಕಳಿಗೆ ಹೊಸಬಗೆಯ ಉಡಪುಗಳು ಧರಿಸಿ ಆಚರಣೆಯಲ್ಲಿ ಹೆಚ್ಚು ಸಂಭ್ರಮಪಡುವಂತೆ ಮಾಡಿ.
ನಿಮಗೆ ತಿಳಿದ ಯಾವುದಾದರೂ ಮಕ್ಕಳ ಅನಾಥಲಯಕ್ಕೆ ಹೋಗಿ ನಿಮ್ಮ ಮಗುವನ್ನು ಮಕ್ಕಳೊಂದಿಗೆ ಸಂಭ್ರಮಿಸಲು ಬಿಡಿ. ಇದರಿಂದ ನೀವು ಅನಾಥ ಮಕ್ಕಳಿಗೆ ಸಂಭ್ರಮಾಚರಣೆಯನ್ನು ತೋರಿಸುವುದರ ಮೂಲಕ ಅವರ ಮುಖದಲ್ಲಿ ಸಂತೋಷವನ್ನು ತರುತ್ತೀರಿ. ನಿಮ್ಮ ಮಗು ಕೂಡ ತಾರತಮ್ಯ ದ ಮನೋಭಾವ ಇಲ್ಲದೆ ಬೆಳೆಯುತ್ತದೆ.
ಮಗು ಬೆಳವಣಿಗೆ ಹಂತದಲ್ಲಿ ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಳ್ಳುತ್ತದೆ.
ಮಕ್ಕಳ ದಿನಾಚರಣೆಯಲ್ಲಿ ನೀವು ಕೆಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಮಕ್ಕಳಿಗೆ ಹೇಳಿಕೊಂಡರೆ ಅದು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ.
ನಿಮ್ಮ ಶಕ್ತಿಯಾನುಸಾರ ನಿಮ್ಮ ಮಗುವಿನ ನೆನಪಲ್ಲಿ ಶಿಕ್ಷಣ ವಂಚಿತವಾಗಿರುವ ಒಂದು ಮಗುವನ್ನು ಶಾಲೆಗೆ ಸೇರಿಸುವ ಮೂಲಕ ಮಕ್ಕಳ ದಿನಾಚರಣೆಯ ಅರ್ಥಪೂರ್ಣ ವನ್ನು ಸಂಭ್ರಮಾಚರಣೆಯನ್ನು ಮಗುವಿಗೆ ಮಾಡಿದಂತಾಗುತ್ತದೆ.
ಮಕ್ಕಳ ಹಿತಕ್ಕಾಗಿ ಸರಕಾರ ರೂಪಿಸಿದ ಯೋಜನೆ
0-6 ವರ್ಷದ ಮಕ್ಕಳ ಆರೋಗ್ಯ, ಪೌಷ್ಠಿಕ ಮಟ್ಟವನ್ನು ವೃದ್ಧಿಸುವುದು.
ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು.
ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಠಿಕತೆ ಮತ್ತು ಶಾಲಾ ಬಿಡುವಿಕೆಯನ್ನು ಕಡಿಮೆಗೊಳಿಸುವುದು.
ಶಿಶು ಅಭಿವೃದ್ಧಿ ಕಾರ್ಯಕ್ರಮವನ್ನು ಉತ್ತಮಗೊಳಿಸುವ ಕಾರ್ಯನೀತಿ ಮತ್ತು ಅನುಷ್ಠಾನಗೊಳಿಸುವ ದಿಸೆಯಲ್ಲಿ ಪರಿಣಾಮಕಾರಿಯಾದ ಸಮನ್ವಯತೆಯನ್ನು ಸಾಧಿಸುವುದು.
ಆರೋಗ್ಯ ಮತ್ತು ಪೌಷ್ಠಿಕತೆಯ ಶಿಕ್ಷಣವನ್ನು ನೀಡುವುದರ ಮೂಲಕ ತಾಯಂದಿರಲ್ಲಿ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆಯ ಅಗತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸುವುದು

ಸೇವೆಗಳು
ಫಲಾನುಭವಿಗಳು
ಯಾರ ಮುಖಾಂತರ ಅಂಗನವಾಡಿಗಳಲ್ಲಿ ಸೇವೆ ಲಭ್ಯವಾಗಿದೆ
ಪೂರಕ ಪೌಷ್ಠಿಕ ಆಹಾರ
6 ವರ್ಷ ಒಳಗಿನ ಮಕ್ಕಳು; ಗರ್ಭಿಣಿ, ಬಾಣಂತಿ, ಕಿಶೋರಿಯರು
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು
ಚುಚ್ಚುಮದ್ದು
6 ವರ್ಷದ ಒಳಗಿನ ಮಕ್ಕಳು; ಗರ್ಭಿಣಿಯರು
ಕಿರಿಯ ಆರೋಗ್ಯ ಸಹಾಯಕಿ
ಆರೋಗ್ಯ ತಪಾಸಣೆ
6 ವರ್ಷದ ಒಳಗಿನ ಮಕ್ಕಳು; ಗರ್ಭಿಣಿ, ಬಾಣಂತಿಯರು
ವೈದ್ಯಾಧಿಕಾರಿಗಳು/ ಕಿರಿಯ ಆರೋಗ್ಯ ಸಹಾಯಕಿ/ ಅಂಗನವಾಡಿ ಕಾರ್ಯಕರ್ತೆ
ಮಾಹಿತಿ ಸೇವೆ
6 ವರ್ಷದ ಒಳಗಿನ ಮಕ್ಕಳು; ಗರ್ಭಿಣಿ, ಬಾಣಂತಿ, ಕಿಶೋರಿಯರು
ವೈದ್ಯಾಧಿಕಾರಿಗಳು/ ಕಿರಿಯ ಆರೋಗ್ಯ ಸಹಾಯಕಿ/ ಅಂಗನವಾಡಿ ಕಾರ್ಯಕರ್ತೆ
ಶಾಲಾಪೂರ್ವ ಶಿಕ್ಷಣ
3-6 ವರ್ಷದ ಮಕ್ಕಳು
ಅಂಗನವಾಡಿ ಕಾರ್ಯಕರ್ತೆ
ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ
15-45 ವಯಸ್ಸಿನ ಮಹಿಳೆಯರು, ಕಿಶೋರಿಯರು
ಅಂಗನವಾಡಿ ಕಾರ್ಯಕರ್ತೆ/ ಕಿರಿಯ ಆರೋಗ್ಯ ಸಹಾಯಕಿ/ ಎ.ಎನ್.ಎಂ / ಆಹಾರ ಮತ್ತು ಪೌಷ್ಠಿಕತೆ ಮಂಡಳಿಯ ಸಿಬ್ಬಂದಿ

“ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ನಮ್ಮಲ್ಲೆರ ಜವಾಬ್ಧಾರಿ. ಮಗುವಿನ ಏಳಿಗೆಯನ್ನು ನಾವು ರೂಪಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳ ಹಕ್ಕು ಬಾಧ್ಯತೆಗೆ ರಚಿಸಿದ ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ, ನಿಮ್ಮ ಸ್ನೇಹಿತರೊಂದಿಗೆ ಹಂಚಿರಿ ಮತ್ತು ನಿಮ್ಮ ಸ್ನೇಹಿತರ ವಲಯದಲ್ಲಿ ಓದಲು ಕೊಡಿ. ನಿಮ್ಮ ಪ್ರತಿಕ್ರಿಯೆ ನಮಗೆ ತುಂಬಾ ಅಮೂಲ್ಯವಾದುದು.”

#activityfortoddler #celebration #celebrationideas

A

gallery
send-btn