ಮಗುವಿನ ಹೆಸರಿನ ಆಯ್ಕೆ

ಮಗುವಿನ ಹೆಸರಿನ ಆಯ್ಕೆ

15 Nov 2021 | 1 min Read

ಮಗುವಿನ ಹೆಸರು ನಿಮ್ಮ ಮನಸಿಗೆ ಖುಷಿ ಆನಿಸುವ ಹಾಗಿರಬೇಕು. ಅದಕ್ಕಾಗಿ ಸಂಗಾತಿಗಳಿಬ್ಬರು ಒಂದು ಹೋಂವರ್ಕ್ ಮಾಡಿ

ಮಗುವಿನ ಹೆಸರು ಆಯ್ಕೆ ಮಾಡುವುದು ಒಂದು ರೀತಿಯಲ್ಲಿ ಮನೆಯವರಿಗೆಲ್ಲಾ ಸಂಭ್ರಮದ ವಿಷಯ. ಹಲವು ಬಗೆಯ ಹೆಸರನ್ನು ಬಂದು ಮಿತ್ರರು ಸೂಚಿಸುತ್ತಾರೆ. ಮಗುವಿನ ತಂದೆ ತಾಯಿ ಗೊಂದಲದಲ್ಲಿ ಬೀಳುತ್ತಾರೆ. ಹೆಸರು ಹಳೆಯದು, ಹೆಸರು ಕಷ್ಟಕರವಾದುದು, ಹೆಸರು ಹೊಸ ಟ್ರೆಂಡ್ ಪ್ರಕಾರ ಇಲ್ಲ. ಹೀಗೆ ನಾನಾವಿಧವಾದ ಕಸಿವಿಸಿ ಆರಂಭವಾಗುತ್ತದೆ. ನಿಮ್ಮ ಗೊಂದಲ ನಿವಾರಣೆಗೆ ಬೇಬಿಚಕ್ರ ಕೆಲವು ಟಿಪ್ಸ್ ನೀಡುತ್ತದೆ.

ಮಗುವಿನ ಹೆಸರಿನ ಆಯ್ಕೆಗಾಗಿ ಟಿಪ್ಸ್

 1. ಕರೆಯುವ ಹೆಸರು ಹಿತವಾಗಿರಬೇಕು
 2. ಈಗಿನ ಟ್ರೆಂಡ್ ಪ್ರಕಾರ ಹೆಸರಿನ ಆಯ್ಕೆಯನ್ನು ಮಾಡದಿರಿ
 3. ವಿಶಿಷ್ಟ ಬಗೆಯ ಹೆಸರನ್ನು ಆಯ್ಕೆ ಮಾಡಿ. ಆದರೆ ತುಂಬಾ ಆಲೋಚನೆಯಲ್ಲಿ ತೊಡಗಬೇಡಿ.
 4. ಮಗುವಿನ ಲಿಂಗದ ಅನ್ವಯ ಹೆಸರನ್ನು ಆಯ್ಕೆ ಮಾಡಿ.
 5. ಹೆಸರು ಅರ್ಥಗೆಡದಂತೆ ನೋಡಿಕೊಳ್ಳಿ
 6. ನಿಮ್ಮ ಆಚಾರ ಮತ್ತು ಸಂಸ್ಕೃತಿಯನ್ನು ಗೌರವಿಸಿ
 7. ನಿಕ್ ನೇಮ್ ಗೆ ಹೆಚ್ಚಿನ ಗಮನ ಹರಿಸಿ ಮತ್ತು ಇನಿಶಿಯಲ್ ಬಗ್ಗೆ ಧ್ಯಾನವಿಡಿ.
 8. ಹೆಸರು ತುಂಡಾಗಿ ಮತ್ತು ಸಂಕೀರ್ಣತೆ ಇಲ್ಲದೇ ಇದ್ದಷ್ಟು ಒಳ್ಳೆಯದು

 

 • ಕರೆಯುವ ಹೆಸರು ಹಿತವಾಗಿರಬೇಕು

ಹೆಸರನ್ನು ಕರೆಯುವಾಗ ಕಿವಿಗೆ ಹಿತವಾಗಿರಬೇಕು. ಹೆಸರು ತುಂಬಾ ಗಡುಸಾಗಿ, ಕರ್ಕಶವಾಗಿ ಇರಬಾರದು. ಹೆಸರು ಆವರ್ತವಾಗಿದ್ದರೆ ಕೇಳುವ ಕಿವಿಗಳಿಗೆ ಹಿತವಾಗಿರದು. ಕೆಲವರು ಹೆಸರನ್ನು ಪೂರ್ತಿಯಾಗಿಇ ಕರಿಯದೆ ಅರ್ಧ ನುಂಗಿ ಕರಿಯುತ್ತಾರೆ. ಹೆಸರು ಹಾಗಾದರೆ ಅನ್ವರ್ಥ ಮತ್ತು ಅರ್ಥಗೆಡುತ್ತದೆ.

 • ಈಗಿನ ಟ್ರೆಂಡ್ ಪ್ರಕಾರ ಹೆಸರಿನ ಆಯ್ಕೆಯನ್ನು ಮಾಡದಿರಿ

ಟ್ರೆಂಡಿಗೆ ತಕ್ಕಂತೆ ಹೆಸರು ಇಡಬೇಡಿ. ಅದು ಇವತ್ತು ಇರಬಹುದು ಮತ್ತೆ ಹೋಗಬಹುದು. ಸಾಮಾನ್ಯವಾಗಿ ಬೇರೆಯವರನ್ನು ನೋಡಿ ಹೆಸರನ್ನು ಇಡುವುದು ಟ್ರೆಂಡ್ ಹೆಸರಾಗಿದೆ. ಇದು ಒಂದು ರೀತಿಯಲ್ಲಿ ಸ್ಪರ್ಧಾ ಮನೋಭಾವನೆಯಂತೆ. ಅವರು ಮಗುವಿಗೆ ಟ್ರೆಂಡ್ ಹೆಸರು ಇಟ್ಟಿದ್ದಾರೆ ನಾವೇನು ಕಡಿಮೆ ಎಂದು ತಮ್ಮ ಮಗುವಿಗೂ ಟ್ರೆಂಡ್ ಹೆಸರಿನ ಆಯ್ಕೆ ಮಾಡಬೇಡಿ.

 • ವಿಶಿಷ್ಟ ಬಗೆಯ ಹೆಸರನ್ನು ಆಯ್ಕೆ ಮಾಡಿ. ಆದರೆ ತುಂಬಾ ಆಲೋಚನೆಯಲ್ಲಿ ತೊಡಗಬೇಡಿ.

ರೇರ್ ಮತ್ತು ವಿಶಿಷ್ಟ ಬಗೆಯ ಹೆಸರಿನ ಆಯ್ಕೆ ಮಾಡಿರಿ. ಒಂದೇ ತರಗತಿಯಲ್ಲಿ ಒಂದೇ ಹೆಸರಿನ ಹತ್ತು ಮಕ್ಕಳಿದ್ದರೆ ಅದು ನಿಮಗೆ ಸರಿಕಾಣುತ್ತದೆಯೇ? ಎಲ್ಲರಿಗಿಂತಲೂ ಭಿನ್ನವಾಗಿರುವ ಹೆಸರನ್ನು ಆಯ್ಕೆ ಮಾಡಿರಿ.

 • ಮಗುವಿನ ಲಿಂಗದ ಅನ್ವಯ ಹೆಸರನ್ನು ಆಯ್ಕೆ ಮಾಡಿ.

ಗಂಡುಮಗುವಿಗೆ ಹೆಸರಿನ ಆಯ್ಕೆ ಮಾಡುತ್ತಿದ್ದರೆ, ಗಂಡು ಮಗುವಿನ ಹೆಸರನ್ನು ಆಯ್ಕೆ ಮಾಡಿ. ಮಗುವಾಗಿದ್ದಾಗ ಹೆಣ್ಣು ಮಗುವಿನ ಹೆಸರು ಅಥವಾ ಗಂಡು ಮಗುವಿನ ಹೆಸರು ಕೇಳಲು ಇಂಪಾಗಿರುತ್ತದೆ ಅಷ್ಟೇ , ಆದರೆ ಶಾಲೆ ಮತ್ತು ಮಗು ದೊಡ್ಡಗಾಗಿ ಬೆಳೆದಾಗ ಮಗುವನ್ನು ಇತರ ಮಕ್ಕಳು ಹಂಗಿಸಲು ಆರಂಭಿಸಬಹುದು. ಇದು ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅದೂ ಅಲ್ಲದೆ ಮಗುವಿಗೆ ಅದು ಮುಜುಗರ ತರುವ ವಿಷಯವಾಗುತ್ತದೆ.

 • ಹೆಸರು ಅರ್ಥಗೆಡದಂತೆ ನೋಡಿಕೊಳ್ಳಿ

ಒಂದು ಹೆಸರಿನ ಗಾಢ ಅರ್ಥ ಎಲ್ಲರಿಗೂ ಇಷ್ಟವಾಗುತ್ತದೆ. ಹೆಸರು ಸರಳವಾಗಿಯೂ, ತುಂಬಾ ಒಳ್ಳೆಯ ಸಂದೇಶ ಕೊಡುವಂತಿದ್ದರೆ ಹೆಸರು ಗೌರವದಾಯಕವಾಗಿರುತ್ತದೆ. ಸಾಮಾನ್ಯವಾಗಿ ಪ್ರತೀಯೊಬ್ಬರು ಪುರಾಣ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಬಳಸುತ್ತಾರೆ.

 • ನಿಮ್ಮ ಆಚಾರ ಮತ್ತು ಸಂಸ್ಕೃತಿಯನ್ನು ಗೌರವಿಸಿ

ನಮ್ಮ ಸಂಸ್ಕೃತಿ ಮತ್ತು ಆಚಾರಕ್ಕೆ ಅನುಗುಣವಾಗಿ ಹೆಸರಿಡುವುದು ಒಂದು ಆಯ್ಕೆ. ನಮ್ಮದೇ ಕುಟುಂಬದ ಹಿರಿಯರ ಹೆಸರನ್ನು ಇಡಬಹುದು. ಇದು ನಿಮ್ಮ ಆಚಾರ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ.

ನಿಕ್ ನೇಮ್ ಗೆ ಹೆಚ್ಚಿನ ಗಮನ ಹರಿಸಿ ಮತ್ತು ಇನಿಶಿಯಲ್ ಬಗ್ಗೆ ಧ್ಯಾನವಿಡಿ.

ಹೆಸರಿಗೆ ತಕ್ಕಂತೆ ಒಂದು ನಿಕ್ ನೇಮ್ ಇಡುವುದು ಸಾಮಾನ್ಯ ವಾಡಿಕೆ. ಅದು ತಪ್ಪಲ್ಲ. ಇರುವ ಹೆಸರನ್ನು ಮೊಟಕುಗೊಳಿಸಿ ಮೂಲ ಹೆಸರಿಗೆ ಅರ್ಥ ಇರುವಂತೆ ಮತ್ತು ಚ್ಯುತಿ ಬಾರದಂತೆ ಹೆಸರು ಇಟ್ಟರೆ ಸೂಕ್ತ. ಅದೇ ರೀತಿ ಹೆಸರಿನ ಮುಂದಿರುವ

ಇನಿಶಿಯಲ್ ಕೂಡ ಬಳಸಬಹುದು.

ಹೆಸರು ತುಂಡಾಗಿ ಮತ್ತು ಸಂಕೀರ್ಣತೆ ಇಲ್ಲದೇ ಇದ್ದಷ್ಟು ಒಳ್ಳೆಯದು

ಮಗುವಿನ ಹೆಸರು ಮೊಟಕಾಗಿ ಇದ್ದಷ್ಟು ಒಳ್ಳೆಯದು. ತುಂಬಾ ದೊಡ್ಡ ಹೆಸರು ಕರಿಯಲು ಕಷ್ಟ ಮತ್ತು ಅಕ್ಷರ ತಪ್ಪಾಗುವ ಸಂಭವ ಹೆಚ್ಚು. ಯಾವುದೇ ಅರ್ಜಿ ಭರ್ತಿ ಮಾಡುವಾಗ ಉದ್ದದ ಹೆಸರಿಗೆ ಸ್ಥಳ ಇಲ್ಲದೇ ಹೋದರು ಕಷ್ಟವಾಗುತ್ತದೆ. ಅನಾವಶ್ಯಕ ಪೇಚಿಗೆ ಸಿಕ್ಕಿ ಹಾಕುವ ಘಟನೆ ಎದುರಾಗಬಹುದು.

ದೊಡ್ಡವರಾದಾಗ ಮಗುವಿನ ಹೆಸರು ಗೌರಪೂರ್ಣವಾಗಿರಬೇಕು

ಮಗುವಿಗೆ ಸರಿ ಹೊಂದುತ್ತದೆ ಎಂದು ಸಣ್ಣ ಮಗುವನ್ನು ಕರೆಯುವ ಹಾಗೆ ಹೆಸರನ್ನಿಟ್ಟು ದೊಡ್ಡವನಾದ ಮೇಲೆ ಮಗು ಮುಜುಗರ ಪಡುವ ಹಾಗೇ ಮಾಡಬೇಡಿ. ಹೆಸರು ಯಾವಾಗಲೂ ಎಲ್ಲಾ ವಯೋಮಾನಕ್ಕೆ ಹೊಂದಾಣಿಕೆ ಆಗುವಂತಿರಬೇಕು.

ಪೋಷಕರಾಗಿ ನಿಮಗೆ ಹೆಸರು ಒಪ್ಪಿಗೆ ಇದೆಯೇ

ಮಗುವಿನ ಹೆಸರನ್ನು ತಂದೆ-ತಾಯಿ ಇಬ್ಬರೂ ಸೇರಿ ಆಯ್ಕೆ ಮಾಡುವಾಗ ಬೇರೆಯವರ ಮಾತಿಗೆ ಮತ್ತು ಹಿರಿಯರ ಬಲವಂತಕ್ಕೆ ಮಗುವಿನ ಹೆಸರನ್ನು ಆಯ್ಕೆ ಮಾಡಿ ಮನಸ್ಸಲ್ಲಿ ಗೊಂದಲ ಸೃಷ್ಟಿ ಮಾಡಿಕೊಳ್ಳಬೇಡಿ. ಮಗುವಿನ ಹೆಸರಿನ ಆಯ್ಕೆ ನೀವೇ ಮಾಡಿ . ಏಕೆಂದರೆ ಇದು ಭಾವನಾತ್ಮಕ ಸಂಬಂಧ. ಮಗುವನ್ನು ದಿನವೂ ನೀವೇ ಹೆಸರಿಡಿದು ಕರಿಯಬೇಕು. ಅದು ಜೀವನಪೂರ್ತಿ.

ನಕ್ಷತ್ರದ ಹೆಸರನ್ನು ಆಯ್ಕೆ ಮಾಡುವುದು

ನೀವು ಜ್ಯೋತಿಷ್ಯ ಶಾಸ್ತ್ರದ ಅನುಗುಣವಾಗಿ ಹೆಸರಿನ ಆಯ್ಕೆಗೆ ಜ್ಯೋತಿಷ್ಯರ ಬಳಿ ಕೇಳಿದರೆ, ಅವರು ಗ್ರಹಗತಿ ಮತ್ತು ತಾರೆಯ ಸಮಾಗಮ ನೋಡಿ, ಆಯಾ ನಕ್ಷತ್ರ ಮತ್ತು ರಾಶಿಗೆ ತಕ್ಕಂತೆ ಹೆಸರಿನ ಮೊದಲ ಅಕ್ಷರ ಸೂಚಿಸುತ್ತಾರೆ. ಇದು ಕೆಲವರಲ್ಲಿ ನಂಬಿಕೆ ಇದೆಯಾದರೂ ಕೆಲವರು ತಮಗೆ ಇಷ್ಟದ ಹೆಸರಿಡಲು ಬಯಸುತ್ತಾರೆ. ನಕ್ಷತ್ರದ ಹೆಸರಿನ ಆಯ್ಕೆ ತುಂಬಾ ಸುಲಭ ವಿಧಾನ .

ಆದರ್ಶ ವ್ಯಕ್ತಿಗಳ ಹೆಸರಿನಿಂದ ಪ್ರಭಾವಶಾಲಿಗಳಾಗಿ

ಪ್ರಖ್ಯಾದ ಆದರ್ಶ ವ್ಯಕ್ತಿಗಳ ಹೆಸರಿನಿಂದ ಪ್ರಭಾವಿತರಾಗಿ ಕೆಲವು ಹೆಸರುಗಳನ್ನು ಆಯ್ಕೆ ಮಾಡಲಾಗುವುದು. ಅವರು ನಮ್ಮ ಜೀವನಕ್ಕೆ ಮಾದರಿಯಾಗಿರಬಹುದು. ಅವರ ಹೆಸರಿನ ಆಯ್ಕೆ ನಿಮಗೆ ಸೂಕ್ತ ಎನಿಸಬಹುದು. ಅದು ನಿಮ್ಮದೇ ದೇಶ, ಅಥವಾ ಬೇರೆ ದೇಶದದವರೂ ಕೂಡ ಇರಬಹುದು.ಆದರೆ ಆಯ್ಕೆ ಮಾಡುವಾಗ ನೋಡಿಕೊಂಡು ಮಾಡಿರಿ . ಏಕೆಂದರೆ ಮಗುವಿಗೆ ನಾಳೆ ವಿದೇಶಿಗರ ಹೆಸರಿನಿಂದ ಕರೆಯಲು ಸಾಧ್ಯವಿಲ್ಲ ಅಲ್ಲವೇ. ನಮ್ಮ ಸಮಾಜಕ್ಕೆ ಮತ್ತು ಇಲ್ಲಿನ ಸಾಮಾಜಿಕ ಜೀವನಕ್ಕೆ ಹೊಂದುವ ಹೆಸರು ಮುಖ್ಯ.

ಮಗುವಿನ ಹೆಸರುಗಳು ಎಲ್ಲಿ ಕಂಡುಹಿಡಿಯಬೇಕು

 

 • ಮಗುವಿನ ಹೆಸರಿನ ಪುಸ್ತಕ ಕೈಪಿಡಿ
 • ಆನ್ಲೈನ್ ಗಳಲ್ಲಿ ಲಭ್ಯವಿರುತ್ತದೆ
 • ಕುಟುಂಬ ಹೆಸರುಗಳು
 • ಪ್ರಖ್ಯಾತ ನಾಮರ ಹೆಸರುಗಳು
 • ಐತಿಹಾಸಿಕ ವ್ಯಕ್ತಿಗಳು

ಮಗುವಿನ ಹೆಸರಿನ ಆಯ್ಕೆಯ ಸವಾಲುಗಳು

 • ಮೊದಲಕ್ಷರಗಳು: ಈಗಿನ ಜ್ಯೋತಿಷ್ಯ ವಿಭಾಗಳಲ್ಲಿ ಮಗುವಿನ ಜನ್ಮ ನಕ್ಷತ್ರ ಮತ್ತು ರಾಶಿಗೆ ಅನುಗುಣವಾಗಿ ಬಹಳಷ್ಟು ಪೋಷಕರು ಹೆಸರಿನ ಆಯ್ಕೆ ಮಾಡುತ್ತಾರೆ.
 • ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನ ಪಡೆದು ಹೆಸರಿನ ಆಯ್ಕೆ ನಡೆಯಲಿ
 • ಮಗುವಿನ ಏಳಿಗೆಗೆ ಸೂಕ್ತವಾದ ಹೆಸರು ಕೆಲವು ಕಡೆ ಜನಜನಿತವಾಗಿದೆ. ಅಂಥದ್ದೇ ಹೆಸರನ್ನು ಆಯ್ಕೆ ಮಾಡಿ.
 • ಅಡ್ಡಹೆಸರು ನಿಮ್ಮ ಮನೆಯೊಳಗೆ ಇರಲಿ. ಮನೆಯಿಂದಾಚೆ ಮಗುವನ್ನು ನೈಜ ಹೆಸರಿನಿಂದ ಜನರು ಗುರುತಿಸಲಿ
 • ಮಗುವನ್ನು ಐತಿಹಾಸಿಕ ಹೆಸರಿನಿಂದ ಗುರುತಿಸಬೇಡಿ.
 • ಹೆಸರಿನ ಅರ್ಥ ತಿಳಿದು ಹೆಸರಿಡಿ. ಅನ್ವರ್ಥ ಆಗಬಾರದು.
 • ಮಗುವಿನ ಹೆಸರು ಲವಲವಿಕೆ, ಸಂತೋಷ, ಉತ್ಸಾಹ, ಸಕಾರಾತ್ಮಕವಾಗಿ ಇರಬೇಕು.

ಮಗುವಿನ ಹೆಸರಿಗೆ ಮನೆಯಲ್ಲಿ ವಾಗ್ವಾದ.

ಕೆಲವು ಮನೆಗಳಲ್ಲಿ ಮಗುವಿನ ಹೆಸರಿಗಾಗಿ ವಾಗ್ವಾದಗಳು ಜರುಗುತ್ತವೆ. ಇಬ್ಬರು ಸಮಭಾಗಿಯಾಗಿ ಮಗುವಿನ ಹೆಸರಿನ ಆಯ್ಕೆಯನ್ನು ಮಾಡಿರಿ. ಅದಕ್ಕಾಗಿ ಮುನಿಸು ಮಾಡಬೇಡಿ. ಗಂಡಸು ತನ್ನ ಮಗು ತನಗೆ ಸ್ವಂತ ಎಂದು ಮಗುವಿನ ಹೆಸರಿನ ಆಯ್ಕೆ ಹೆಂಡತಿಗೂ ಬಿಡದೇ ತನ್ನ ಹಾಗೂ ತನ್ನ ಬಂಧುಮಿತ್ರರ ಅಭಿಪ್ರಾಯವನ್ನು ಕೇಳಬೇಡಿ. ನಿಮ್ಮ ಮಗು ನಿಮ್ಮ ಹೆಂಡತಿಗೂ ಸ್ವಂತ. ಹಾಗಾಗಿ ಅವರಿಗೂ ಮಗುವಿನ ಹೆಸರಿನ ಮೇಲೆ ಸಂಪೂರ್ಣ ಹಕ್ಕಿದೆ.

ಜನನ ಪ್ರಮಾಣಪತ್ರಗಳು ಮತ್ತು ಬೇಬಿ ಹೆಸರುಗಳೊಂದಿಗೆ ಕಾನೂನು ಸಮಸ್ಯೆಗಳು

ಮಗುವಿನ ಹೆಸರು ಸರಿಯಾಗಿ ಇದ್ದು, ಜನನ ಪ್ರಮಾಣ ಪಾತ್ರದಲ್ಲಿ ತಪ್ಪಾಗಿ ಅಚ್ಚಾದರೇ , ಮುಂದೆ ಶಾಲೆಗೇ ಸೇರುವಾಗ ತುಂಬಾ ಸಮಸ್ಯೆ ಎದುರಾಗುತ್ತದೆ. ಯಾವಾಗಲೂ ದಾಖಲಾತಿಗಳಲ್ಲಿ ಒಂದೇ ತರದ ಹೆಸರು ಇರಬೇಕು. ಈ ಬಗ್ಗೆ ಜಾಗ್ರತೆ ವಹಿಸಿರಿ.
ಮಗುವಿನ ಹೆಸರಿನ ಬಗೆಗಿನ ಹಲವಾರು ಗೊಂದಲಗಳು ನಿಮಗೆ ಪರಿಹಾರವಾಗಿರಬಹುದು. ಈ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಕಾಮೆಂಟ್ ಮಾಡಿ ನಿಮ್ಮ ಪ್ರತಿಕ್ರಿಯೆ ನೀಡಿ.

#babyname #happymotherhood

like

3

Like

bookmark

1

Saves

whatsapp-logo

0

Shares

A

gallery
send-btn

Related Topics for you

ovulation calculator
home iconHomecommunity iconCOMMUNITY
stories iconStoriesshop icon Shop