15 Nov 2021 | 1 min Read
Medically reviewed by
Author | Articles
ಪ್ರತಿ ತಂದೆ-ತಾಯಿ ತಮ್ಮ ಮಕ್ಕಳಬಗ್ಗೆ ಬಹಳಷ್ಟು ಕನಸುಗಳನ್ನು ಹೊತ್ತಿರುತ್ತಾರೆ. ಅವರ ಜೀವನದ ಅನುಭವ ಮತ್ತು ನೋವನ್ನು ನೆನೆದು ಮಕ್ಕಳು ತಮ್ಮಂತೆ ಆಗಬಾರದೆಂದು ಮಕ್ಕಳಬಗ್ಗೆ ಬಹಳಷ್ಟು ಜಾಗ್ರತೆ ವಹಿಸುತ್ತಾರೆ. ಹೀಗಿರುವಾಗ, ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಶಿಸ್ತು ಮತ್ತು ಸಂಯಮ ಗುಣಗಳನ್ನು ರೂಢಿಸಿಕೊಂಡು ಬೆಳೆಸಬೇಕೆಂದು ಬಯಸುತ್ತಾರೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ತುಂಬಾ ಮಹತ್ವದ್ದು. ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಗಳು ಏನು ಕಲಿಸಿರುತ್ತಾರೆ ಅದನ್ನೇ ಮಕ್ಕಳು ಅನುಸರಿಸುತ್ತಾರೆ.
ಈ ನಿಟ್ಟಿನಲ್ಲಿ ಬೇಬಿ ಚಕ್ರ ಪೋಷಕರಿಗೆ ಅವರ ಪೋಷಕತ್ವ ದ ಬಗ್ಗೆ ಮತ್ತು ಮಕ್ಕಳ ಅಭಿವೃದ್ಧಿ ಹೇಗಿರಬೇಕೆಂದು ಟಿಪ್ಸ್ ನೀಡುತ್ತದೆ.
ಮಕ್ಕಳೊಂದಿಗೆ ಸ್ನೇಹಿತರಾಗಿರುವುದು;
ಮಕ್ಕಳು ಆಟವಾಡುವಾಗ, ಅವರ ಭಾವನೆಯನ್ನು ಹಂಚಿಕೊಳ್ಳುವಾಗ ತಂದೆತಯಿಯನ್ನು ತುಂಬಾ ಹತ್ತಿರದವರಂತೆ ನಂಬುತ್ತದೆ. ಅವರಿಗೆ ತಂದೆ-ತಾಯಿಯರೇ ಬಲು ಅಚ್ಚುಮೆಚ್ಚು. ಹಾಗಾಗಿ ಏನು ಮಾಡಿದೆ ಏನಾಗಿದೆ ಎಂಬುದನ್ನು ತಂದೆ ತಾಯಿಯ ಹತ್ತಿರ ಹಂಚಿಕೊಳ್ಳೋಕೆ ತುಂಬಾ ಇಷ್ಟಪಡುತ್ತಾರೆ. ನೀವು ಕೂಡ ಮಕ್ಕಳು ಮುಕ್ತವಾಗಿ ಮಾತನಾಡುವಾಗ ಅವರಿಗೆ ಸಮಯ ಕೊಟ್ಟು ಅವರ ಮಾತನ್ನು ಆಲಿಸಿರಿ. ಮಕ್ಕಳ ಹೇಳಿಕೆಯನ್ನು ನೀವು ಕೇಳುವಾಗ ಧ್ಯಾನ ಅವರ ಕಡೆಗಿದ್ದರೆ ಮಕ್ಕಳು ನಿಮ್ಮನ್ನು ಸ್ನೇಹಿತರಂತೆ ಭಾವಿಸುತ್ತದೆ. ಅಷ್ಟು ಸುಲಭವಾಗಿ ನಿಮ್ಮನ್ನು ಹೊರತಾಗಿ ಬೇರೆ ಯಾರನ್ನೂ ನಂಬುವುದಿಲ್ಲ. ಮಕ್ಕಳು ಸರಿಯಾದ ಮಾರ್ಗದಲ್ಲಿ ನಡೆಯಬೇಕೆಂದರೆ ಸ್ನೇಹಿತರಂತೆ ವರ್ತಿಸಬೇಕಾಗುತ್ತದೆ.
ಮಕ್ಕಳೊಂದಿಗೆ ಶಿಕ್ಷಕರಾಗಿ :
ಮಕ್ಕಳ ಪಾಲಿಗೆ ನೀವು ಒಬ್ಬ ಉತ್ತಮ ಶಿಕ್ಷಕ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ತಿದ್ದಿ, ಅವರನ್ನು ಸರಿದಾರಿಗೆ ತರಬೇಕಾದದ್ದು ನಿಮ್ಮ ಕರ್ತವ್ಯ. ಅವರೊಡನೆ ಸದಾ ಸಂವಹನದಲ್ಲಿ ರಿ. ಏನು ಚಟುವಟಿಕೆ ಮಾಡಿದೆ, ತಾಯಿಯೊಂದಿಗೆ ನಿಮ್ಮ ಸಂಬಂಧವೇನು, ಸ್ನೇಹಿತರೊಂದಿಗೆ ಹೇಗೆ ವರ್ತಿಸಿದೆ ಎಂಬುದನ್ನು ವಿಚಾರಿಸುತ್ತಿರಿ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಸದಾ ಮಾನಿಟರ್ ಮಾಡುತ್ತಿರಬೇಕು. ಮಕ್ಕಳಿಗೆ ಶಾಲೆಯಲ್ಲಿ ಕೊಡುವ ಪ್ರಾಜೆಕ್ಟ್, ಅವರ ಹೋಂವರ್ಕ್, ಅವರ ವ್ಯಕ್ತಿತ್ವ ವಿಕಸನದಲ್ಲಿ ಒಂದು ಕಣ್ಣಿಟ್ಟಿರಬೇಕು.
ಮಕ್ಕಳನ್ನು ಮುನ್ನಡೆಸುವ ಮುಖಂಡರಾಗಿ;
ಮಕ್ಕಳು ಊಟದಿಂದ ಹಿಡಿದು ಆಟ ಪಾಠ ಶಾಲೆ ಮನೆ ಇದೆಲ್ಲದರ ಬಗ್ಗೆ ಅವರಿಗೆ ಆಳವಾದ ಮಾಹಿತಿ ನೀಡಿ. ಮಗುವಿಗೆ ಸದಾ ಮುನ್ನಡೆಸುವ ಮುಖಂಡರಾಗಿ. ನಿಮ್ಮ ಮುಂದಾಳತ್ವವನ್ನು ಮಗು ಇಷ್ಟಪಡುತ್ತದೆ. ಅದೇ ರೀತಿ ಮಗುವಿನಲ್ಲಿ ಸ್ವತಂತ್ರ ಮನೋಭಾವ ಬೆಳೆಯಲು ಅವಕಾಶ ಮಾಡಿಕೊಡಿ. ಮಗುವಿಗೆ ತನ್ನ ಅಸ್ತಿತ್ವ ಮತ್ತು ತನ್ನ ನಿಲುವು ಎಲ್ಲವೂ ಅರ್ಥ ಆಗುವಂತೆ ಆಟದ ಮೂಲಕ ತೋರಿಸಿ ಕೊಡಿ. ಸದಾ ಮೋಟಿವೇಷನಲ್ ಮುಖಂಡರಾಗಿ ರಿ.
ಮಕ್ಕಳೊಂದಿಗೆ ತರಬೇತುದಾರನಾಗಿ;
ರಜೆ ಸಮಯದಲ್ಲಿ ಮಕ್ಕಳನ್ನು ಈಜು ಕಲಿಯಲು, ಸೈಕಲ್ ಓಡಿಸಲು, ಚೆಸ್ ಆಟಗಳು ಮುಂತಾದ ಆಟಗಳನ್ನು ಮಕ್ಕಳಿಗೆ ಹೇಳಿಕೊಡುವಾಗ ನೀವು ತರಬೇತುದಾರನಾಗಿ. ಮಕ್ಕಳಿಗೆ ನೀವು ಸಮಯ ಕೊಟ್ಟು ಎಲ್ಲಾ ರೀತಿಯ ಹವ್ಯಾಸಗಳನ್ನು ರೂಢಿಸಿಕೊಳ್ಳುವ ರಿಂದ ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವ ಬೆಳೆಯುತ್ತದೆ.
ಮಕ್ಕಳು ಅನುಸರಿಸ ಬೇಕಾದ ನಿಯಮಗಳು
ಮಕ್ಕಳಿಗೆ ಸಮಯದ ಪರಿಪಾಲನೆ
ತಮ್ಮ ವಸ್ತುಗಳನ್ನು ಎತ್ತಿಡುವುದು
ಊಟದ ಸಮಯ
ಊಟ ಮಾಡುವಾಗ ಇರಬೇಕಾದ ಶಿಸ್ತು
ಹೆಚ್ಚಿನ ಆಹಾರವನ್ನು ವ್ಯರ್ಥ ಮಾಡದಂತೆ ತಿಳುವಳಿಕೆ
ಬೆಳಗ್ಗೆ ಎದ್ದು ಹಲ್ಲುಜ್ಜುವುದು
ಸ್ನಾನಾದಿಗಳನ್ನು ಮಾಡುವುದು
ತಮ್ಮ ಪುಸ್ತಕವನ್ನು ಓದುವುದು
ಟಿವಿ ವೀಕ್ಷಣೆಯ ಸಮಯ
ಹಠಸ್ವಭಾವ ಮಾಡದಂತೆ ತಿಳುವಳಿಕೆ
ಇದೆಲ್ಲದರ ಮಾಹಿತಿಯನ್ನು ಮಕ್ಕಳಲ್ಲಿ ತಿಳುವಳಿಕೆ ಕೊಡಬೇಕು.
ಪೋಷಕರ ನಿಲುವು ಹೇಗಿರಬೇಕು
ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿ ಬರಬಾರದು
ಮೊಬೈಲನ್ನು ಮಕ್ಕಳು ಬಳಸಬಾರದು
ಬೇಗನೆ ಮಲಗಿ ಬೇಗನೆ ಎಬ್ಬಿಸುವ ಹವ್ಯಾಸವನ್ನು ನೀವು ರೂಢಿಸಬೇಕು
ಮಕ್ಕಳಿಗೆ ಜಂಪ್ಸೂಡ್ ಅಭ್ಯಾಸ ಮಾಡಬೇಡಿ
ನಿಮ್ಮ ಹವ್ಯಾಸಗಳು ಮಕ್ಕಳಿಗೆ ತಮಾಷೆ ಆಗಿರಬಾರದು
ನೀವು ಸಂಗಾತಿಗಳು ಮಕ್ಕಳೆದುರು ಜಗಳವಾಗದಿರಿ
ಮಕ್ಕಳಿಗೆ ಶಿಸ್ತು ರೂಪಿಸುವಾಗ ನೀವು ಕೂಡ ಶಿಸ್ತನ್ನು ಪಾಲಿಸಬೇಕು.
ಮಕ್ಕಳನ್ನು ನಿಮ್ಮ ಜೊತೆಯಲ್ಲೇ ಊಟ ಮಾಡಲು ಕರೆಯಬೇಕು ಮತ್ತು ನೀವು ಕೂಡ ಮಕ್ಕಳಿಗೆ ಸಮಯ ಕೊಡಬೇಕು
ಮಕ್ಕಳನ್ನು ರಜೆಯ ದಿವಸ ಹೊರಗಡೆ ಕರೆದುಕೊಂಡು ಹೋಗಿ ಸುತ್ತಾಡಿ ಸಬೇಕು
ಸಕಾರಾತ್ಮಕವಾಗಿ ಮಗುವಿನ ಜೊತೆ ಸದಾ ಮಾತನಾಡುತ್ತಿರುವುದು
ಮಕ್ಕಳಲ್ಲಿ ಒಳ್ಳೆಯ ಗುಣ ಲಕ್ಷಣಗಳನ್ನು ತುಂಬುವುದು
ಪ್ರಾಮಾಣಿಕತೆ ಮತ್ತು ಶಿಸ್ತು ಬದ್ಧ ಜೀವನದ ಅರಿವು ಮೂಡಿಸುವುದು
ನೀತಿಪಾಠ ನೀತಿಕಥೆಗಳನ್ನು ಮಕ್ಕಳಿಗೆ ಹೇಳುವುದು
ಒಳ್ಳೆಯ ಹವ್ಯಾಸವನ್ನು ಹೇಗಿರಬೇಕೆಂದು ಮಕ್ಕಳಿಗೆ ತೋರಿಸಿಕೊಡುವುದು.
ಮಕ್ಕಳ ಬೆಳವಣಿಗೆಯಲ್ಲಿ ತಂದೆ-ತಾಯಿಯರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಭಾವಿ ಪ್ರಜೆಗಳ ರೂಪವನ್ನು ತಂದೆ-ತಾಯಿಗಳೇ ತಿದ್ದುತ್ತಾರೆ. ಕುಂಬಾರನು ಮಡಿಕೆಗೆ ಆಕಾರ ಕೊಟ್ಟಂತೆ ತಂದೆ-ತಾಯಿಗಳು ಭಾವಿ ಪ್ರಜೆಗಳ ರೂಪವನ್ನು ಬಾಲ್ಯದಿಂದಲೇ ರೂಪಿಸಬೇಕು. ಈ ಗುರುತರ ಜವಾಬ್ದಾರಿ ಪ್ರತಿ ಪೋಷಕರದ್ದು. ಈ ನಿಟ್ಟಿನಲ್ಲಿ ರಚಿತವಾದ ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ. ನಿಮ್ಮ ಪ್ರತಿಕ್ರಿಯೆ ಅಮೂಲ್ಯವಾದದ್ದು.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.