ಮಲಬದ್ಧತೆಗೆ 15 ಬಗೆಯ ಮನೆಮದ್ದು

ಮಲಬದ್ಧತೆಗೆ 15 ಬಗೆಯ ಮನೆಮದ್ದು

16 Nov 2021 | 1 min Read

Medically reviewed by

Author | Articles

 

“ಕಾಡುವ ಮಲಬದ್ಧತೆಗೆ ನಾವು ಮನೆಮದ್ದಿನಿಂದಲೇ ಪರಿಹಾರವನ್ನು ಕಂಡುಕೊಳ್ಳಬಹುದು. 15 ಸುಲಭ ಮನೆಮದ್ದು ನೊಂದಿಗೆ ಬೇಬಿ ಚಕ್ರ ನಿಮಗೆ ಮಾಹಿತಿ ನೀಡುತ್ತದೆ.”

ಪ್ರತಿಯೊಬ್ಬರಲ್ಲಿ ಮಲಬದ್ಧತೆಯ ಸಮಸ್ಯೆ ಒಂದು ಬಾರಿಯಾದರೂ ಕಾಡಿರುತ್ತದೆ. ಗರ್ಭಾವಸ್ಥೆಯಲ್ಲಿ ಅಂತೂ ಮಲಬದ್ಧತೆಯ ಸಮಸ್ಯೆ ವಿಪರೀತವಾಗಿರುತ್ತದೆ. ಇದಕ್ಕೆ ಆಹಾರದಲ್ಲಿರುವ ಪೋಷಕಾಂಶಗಳು ಒಂದು ಕಾರಣ. ಮತ್ತೊಂದು ಮೂಲಕಾರಣ ಹಿಗ್ಗುವ ಗರ್ಭಕೋಶದ ದಿಂದಾಗಿ, ಅದರ ಒತ್ತಡ ನಮ್ಮ ಹೊಟ್ಟೆಗೆ ಸಂಬಂಧಪಟ್ಟ ಅಂಗಗಳ ಮೇಲೆ ಬೀಳುತ್ತದೆ. ಒತ್ತಡ ಹೆಚ್ಚಾದಂತೆಲ್ಲ ಜೀರ್ಣಾಂಗ ವ್ಯವಸ್ಥೆಗೆ ತೊಡಕಾಗುತ್ತದೆ. ಇದು ಮಲಬದ್ಧತೆಗೆ ಎಡೆಮಾಡಿಕೊಡುತ್ತದೆ. ಮಲಬದ್ಧತೆಯ ಸಮಸ್ಯೆ ಮಗುವಿನಿಂದ ಹಿಡಿದು

 ಹಿರಿಯ ನಾಗರಿಕರವರೆಗೂ ನಾವು ಕಾಣಬಹುದು. ಕೆಲವರಲ್ಲಿ ದೀರ್ಘಕಾಲದವರೆಗೆ ಮಲಬದ್ಧತೆ ಸಮಸ್ಯೆ ಕಾಡಬಹುದು. ಇನ್ನು ಕೆಲವರಲ್ಲಿ ತಾತ್ಕಾಲಿಕವಾಗಿ ಕಾಡಬಹುದು. ತಾತ್ಕಾಲಿಕವಾಗಿ ಕಾಡುವ ಮಲಬದ್ಧತೆಯು ಪ್ರಯಾಣದಿಂದಾಗಿ ಇರಬಹುದು, ಹೀಟ್ ಪದಾರ್ಥ ಸೇವಿಸಿದಾಗ, ದೇಹದಲ್ಲಿ ನೀರಿನಂಶ ತುಂಬಾ ಕಡಿಮೆ ಇದ್ದಾಗ ಈ ರೀತಿ ಸಮಸ್ಯೆ ಎದುರಾಗುತ್ತದೆ.

  • ನೀರು ಹೆಚ್ಚಾಗಿ ಕುಡಿಯಬೇಕು

 

ಮಲಬದ್ಧತೆಗೆ ಮೂಲ ಕಾರಣ ದೇಹದಲ್ಲಿ ನೀರಿನಂಶ ಇಲ್ಲದಿರುವುದು ಅಥವಾ ಕಡಿಮೆಯಾಗುವುದು. ದಿನಪೂರ್ತಿ ದಣಿದು ಕೆಲಸ ಮಾಡಿ, ಊಟ ಮುಗಿಸಿ ಒಂದು ಲೋಟ ನೀರು ಕುಡಿದು ಉಳಿದ ಸಮಯದಲ್ಲಿ ನೀರನ್ನು ಸೇವಿಸದಿದ್ದರೆ, ನಿಗದಿತ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಮಲಬದ್ಧತೆಯ ಸಮಸ್ಯೆ ಕಾಡುತ್ತದೆ. ನಾವು ಸೇವಿಸುವ ಆಹಾರ ಶೇಕಡ 50 ಇರಬೇಕು. ಶೇಕಡ 25ರಷ್ಟು ನೀರು  ಇರಬೇಕು. ಇನ್ನುಳಿದ ಶೇಕಡ 25 ಹೊಟ್ಟೆ ಖಾಲಿ ಇರಬೇಕು. ಹೀಗಿದ್ದರೆ ಮಾತ್ರ ದೇಹದ ಜೀರ್ಣಾಂಗ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತದೆ.  

 

 

  • ನೀರು ಸೇವಿಸಲು ನಿಯಮ

 

 

  • ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿಯಬೇಕು
  • ಊಟವಾದ ಬಳಿಕ ಹತ್ತು ನಿಮಿಷದ ನಂತರ ನೀರನ್ನು ಸೇವಿಸಬೇಕು.
  • ಏನಾದರೂ ತಿನ್ನಲು ಬಯಕೆಯಾದರೆ ನೀರನ್ನು ಕುಡಿಯಿರಿ.
  • ಒಂದು ಬಾಟಲಿಯಲ್ಲಿ ಕುದಿಸಿ ಆರಿಸಿದ ನೀರನ್ನು ಇಟ್ಟುಕೊಂಡು ಹೊರಗಡೆ ಹೋದಾಗ, ಕಚೇರಿಗೆ ಹೋದಾಗ ಕುಡಿಯುವುದನ್ನು ರೂಢಿಸಿಕೊಳ್ಳಿ.

 

 

  • ಊಟದಲ್ಲಿ ಹೆಚ್ಚು ನಾರಿನಂಶ ಇರುವಂತೆ ನೋಡಿಕೊಳ್ಳಿ.

 

 

ಸಾಮಾನ್ಯವಾಗಿ ಊಟ ಮಾಡುವ ಧಾವಂತದಲ್ಲಿ, ನಾಲಗೆಯ ಚಪಲಕ್ಕೆ, ಕಚೇರಿಗೆ ತೆರಳಬೇಕು ಅಥವಾ ಅವಸರದಲ್ಲಿ ತಿನ್ನಬೇಕು ಎಂಬ ಉದ್ದೇಶದಿಂದ ಊಟದ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಇದು ನಾವು ಸೇವಿಸುವ ಆಹಾರದಲ್ಲಿ ತಪ್ಪಾದ ಕ್ರಮ. ನಾವು ಸೇವಿಸುವ ಆಹಾರ ಹೇಗಿರಬೇಕು ಎಂದರೆ ಎಲ್ಲಾ ರೀತಿಯ ಪೋಷಕಾಂಶಗಳು ಸಮಪ್ರಮಾಣದಲ್ಲಿ ಅದರಲ್ಲಿ ಸೇರಿರಬೇಕು. ಕೇವಲ ಕಾರ್ಬೋಹೈಡ್ರೇಟ್ಸ್ ಮಾತ್ರ ಸೇವಿಸುವುದು, ಪ್ರೋಟಿನ್ ಅಂಶವನ್ನು ಸೇವಿಸುವುದು ಹೀಗಾಗಬಾರದು. ಕರ್ನಾಟಕದವರು ಆದರೆ ಹೆಚ್ಚು ಅಕ್ಕಿ ಅಂಶವನ್ನು ಉಪಯೋಗಿಸುತ್ತಾರೆ. ಅಕ್ಕಿಯಿಂದ ನಮಗೆ ಪ್ರೋಟೀನ್ ಸಿಗುತ್ತದೆ ನಿಜ ಆದರೆ ಉಳಿದ ಖನಿಜಾಂಶ ಗಳಿಗೆ ನಾವು ಬೇರೆ ಆಹಾರವನ್ನು ಅವಲಂಬಿಸಬೇಕಲ್ಲವೇ? ಅದಕ್ಕಾಗಿ ನೀವು ಹೆಚ್ಚು ಸತ್ವಭರಿತ ಆಹಾರವನ್ನು ದಿನವೂ ರೂಢಿಸಿಕೊಳ್ಳಬೇಕು.

 

 

  • ನಾವು ಸೇವಿಸುವ ಆಹಾರ ಹೇಗಿರಬೇಕು.

 

 

  • ಆಹಾರದಲ್ಲಿ ಎಲ್ಲಾ ಖನಿಜಾಂಶಗಳು ಸಮತೋಲನದಲ್ಲಿ ಇರಬೇಕು.
  • ಮಲಬದ್ಧತೆ ಸಮಸ್ಯೆಗೆ ಮೂಲಕಾರಣ ಆಹಾರದಲ್ಲಿ ನಾರಿನಂಶ ಕಡಿಮೆಯಾಗಿರುವುದು.
  • ನಾರಿನಂಶ ಹೆಚ್ಚಾಗಿರುವ ಆಹಾರಗಳನ್ನು ಸೊಪ್ಪು-ತರಕಾರಿ, ಮೆಂತೆ, ಬ್ರೌನ್ ಬ್ರೆಡ್, ಬಾಳೆಹಣ್ಣು, ಬಸಳೆ ಸೊಪ್ಪು, ಒಣ ಖರ್ಜೂರವನ್ನು ಸೇವಿಸಿ.

 

 

  • ಅಂಜೂರವನ್ನು ಸೇವಿಸಿ

 

 

ಮಲಬದ್ಧತೆಗೆ ಹೆಚ್ಚು ಸಮರ್ಪಕವಾದ ಕಣ್ಣಿಂದ ಅಂಜರದ ಹಣ್ಣು. ಇದು ಹಸಿಯಾಗಿದ್ದಾಗಲೂ ತಿನ್ನಬಹುದು ಮತ್ತು ಒಣಗಿದ ಹಣ್ಣನ್ನು ಕೂಡ ತಿನ್ನಬಹುದು. ಅಂಜೂರದ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ಆ ನೀರು ಕುಡಿಯುವುದರಿಂದಲೂ ಹೆಚ್ಚಿನ ಉಪಯೋಗವನ್ನು ಪಡೆಯಬಹುದು.

 

 

  • ಹಾಲು ಮತ್ತು ತುಪ್ಪದ ಸೇವನೆ

 

 

ಮಲಬದ್ಧತೆಗೆ ಮತ್ತೊಂದು ರೀತಿಯ ಸರಳ ಮನೆಮದ್ದು ಹಾಲು ಮತ್ತು ತುಪ್ಪದ ಸೇವನೆ. ನಿತ್ಯ ಹಾಲಿನ ಸೇವನೆಯಿಂದ ಮತ್ತು ಊಟದಲ್ಲಿ ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಬಹುದು.

 

  • ನಿಂಬೆಹಣ್ಣಿನ ಶರಬತ್ತು

 

 

ಬೆಳಗ್ಗೆ ಖಾಲಿ ಹೊಟ್ಟೆಗೆ ನಿಂಬೆಹಣ್ಣಿನ ಶರಬತ್ತು ಮಾಡಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಯಲ್ಲಿ ಕಲ್ಮಶವ ಹೊರಬರುತ್ತದೆ. ದೇಹದ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ನಿಂಬೆ ಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ವು ಜೀರ್ಣಾಂಗ ವ್ಯವಸ್ಥೆ ವ್ಯವಸ್ಥೆಯನ್ನು 6 ಬಲಗೊಳಿಸುತ್ತದೆ. ಇದು ಒಂದು ನೈಸರ್ಗಿಕವಾದ ಮಲಬದ್ಧತೆಗೆ ಔಷಧಿಯಾಗಿದೆ. 

 

ಉಗುರು ಬೆಚ್ಚಗಿನ ನೀರಿಗೆ ನಿಂಬೆಹಣ್ಣಿನ ರಸವನ್ನು ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ಹೆಚ್ಚು ಉಪಕಾರವಾಗುತ್ತದೆ. ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೂಡ ಇದು ಸಿದ್ಧೌಷಧಿ ಇದ್ದಹಾಗೆ.

 

 

  • ಶುಂಠಿಯ ಟೀ

 

 

ಭಾರತೀಯ  ಸಂಬಾರ ಪದಾರ್ಥದಲ್ಲಿ ಅತಿಮುಖ್ಯ ಪಾತ್ರವನ್ನು ವಹಿಸಿರುವ ಶುಂಠಿಯ ಉಪಯೋಗ ಬಹಳವಿದೆ. ಕಫ ಮತ್ತು ಪಿತ್ತವನ್ನು ಸಮತೋಲನದಲ್ಲಿಡುವ ಗುಣಹೊಂದಿರುವ ಶುಂಠಿಯನ್ನು ಆಹಾರದಲ್ಲಿ ಹೆಚ್ಚು ಸೇವಿಸಿದರೆ ಉತ್ತಮ. ಕೆಲವರಿಗೆ ವಿಪರೀತವಾಗಿ ಟೀ ಕುಡಿಯುವ ಚಟ ಇರುತ್ತದೆ. ಕೆಲವೊಮ್ಮೆ ಕಾಫಿಯನ್ನು ಸಹ ಬಹಳಷ್ಟು ಜನರು ಕುಡಿಯುತ್ತಾರೆ. ಸುಮ್ಮನೆ ಕುಳಿತಾಗ ನೀರು ಕುಡಿಯಲು ಸಾಧ್ಯವಿಲ್ಲ ಎನ್ನುವವರು ಬಿಸಿನೀರಲ್ಲಿ ಶುಂಠಿಯನ್ನು ಹಾಕಿ ಸಕ್ಕರೆ ಬೆರೆಸಿ ಶುಂಠಿ ಟೀ ತಯಾರಿಸಿ ಕುಡಿಯಬಹುದು. ಬಿಸಿನೀರಿಗೆ ಶುಂಠಿಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸಮತೋಲನ ಮಾಡುವುದಲ್ಲದೆ ಮಲಬದ್ಧತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಬೆಳಗಿನ ಹೊತ್ತಲ್ಲಿ ಖಾಲಿ ಹೊಟ್ಟೆಗೆ ಕುಡಿದಷ್ಟು ತುಂಬಾ ಒಳ್ಳೆಯದು. 

 

 

  • ಹರಳೆಣ್ಣೆಯ ಉಪಯೋಗ

 

 

ಹರಳೆಣ್ಣೆಯಿಂದ ತಕ್ಷಣ ಇದನ್ನು ಸೇವಿಸುವುದು ಎಂದು ಮೂಗು ಮುರಿಯಬೇಡಿ. ಏಕೆಂದರೆ ಬಹುಪಯೋಗಿ ಹರಳೆಣ್ಣೆ ನಿಮ್ಮ ದೀರ್ಘಕಾಲದ ಮಲಬದ್ಧತೆಯನ್ನು ಹತೋಟಿಗೆ ತಂದು ಸಮಸ್ಯೆಯನ್ನು ದೂರ ಮಾಡಬಲ್ಲ ಶಕ್ತಿ ಹರಳೆಣ್ಣೆಗೆ ಇದೆ. ಇದಕ್ಕಾಗಿ ನೀವು ಶುದ್ಧ ಹರಳೆಣ್ಣೆಯನ್ನು ತೆಗೆದುಕೊಳ್ಳಿ. ಹಿಂದೆ ಹಳ್ಳಿಗಳಲ್ಲಿ ಹರಳೆಣ್ಣೆ ತಯಾರಿಸುವಾಗ ಬಿಸಿಬಿಸಿ ಹರಳೆಣ್ಣೆಯ 2-3 ಚಮಚವನ್ನು ಸಣ್ಣ ಮಕ್ಕಳಿಗೆ ಕುಡಿಸುತ್ತಿದ್ದರು. ಕುಡಿದ ತಕ್ಷಣ ಮಕ್ಕಳು ಬೇದಿ ಮಾಡಿಕೊಳ್ಳುತ್ತಿದ್ದರು. ಹೊಟ್ಟೆಯಲ್ಲಿರುವ ಕಲ್ಮಶ ಎಲ್ಲವೂ ಹರಳೆಣ್ಣೆಯ ಉಪಯೋಗದಿಂದ ಹೊರಬರುತ್ತದೆ. ಕೆಲವರಿಗೆ ಸೀಳು, ಮಲ ವಿಸರ್ಜನೆ ಮಾಡುವಾಗ ನೋವು ಕಾಣಿಸಿಕೊಳ್ಳುತ್ತದೆ. ಅಂಥವರು ಹರಳೆಣ್ಣೆಯನ್ನು ರಾತ್ರಿ ಮಲಗುವ ಮುನ್ನ ಮಲದ್ವಾರದ ಸುತ್ತ ಹಚ್ಚಿ ಮಲಗಿರಿ. ಇದರಿಂದ ಮಲವಿಸರ್ಜನೆ ಸುಲಭವಾಗಿ ನೋವು ರಹಿತವಾಗಿ ಆಗುವುದು. 

 

 

  • ದಾಲಿಯಾ

 

 

ಇದು ನಮ್ಮ ಕರ್ನಾಟಕದ ಭಾಗದಲ್ಲಿ ಬಳಸುವಿಕೆ ವಿರಳವಾದರೂ ಉತ್ತರ ಭಾರತದ ಕಡೆಗೆ ಅತಿ ಹೆಚ್ಚು ಜನರು ಬಳಸುತ್ತಾರೆ. ಪ್ರೋಟೀನ್ ನ ಮೂಲ ಸತ್ವವನ್ನು ಹೊಂದಿರುವ ದಾಲಿ ಯಾವು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಗೋಧಿಯನ್ನು ಗಟ್ಟಿಯಾಗಿ ತರಿತರಿಯಾಗಿ ಪುಡಿ ಮಾಡಿ ಪ್ಯಾಕೆಟ್ಟುಗಳು ಈಗ ಅಂಗಡಿಯಲ್ಲಿ ಲಭ್ಯವಿದೆ. ಇದು ಹೆಚ್ಚು ಮೆಗ್ನೀಷಿಯಂ ಖನಿಜಾಂಶವನ್ನು ಹೊಂದಿದೆ. ಮೆಗ್ನೀಷಿಯಂ ಅಂಶವನ್ನು ನಿಮ್ಮ ದಿನದ ಆಹಾರದಲ್ಲಿ ಸೇರಿಸಿಕೊಂಡರೆ ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಹಿರಿಯ ನಾಗರಿಕರಿಗೆ ತುಂಬಾ ಮುಖ್ಯವಾಗಿ ಬೇಕಾಗಿರುವ ಬಲಿಯಾದ ಆಹಾರ ಅವರಿಗೂ ಸಹಾಯಕ. ಅದೇ ರೀತಿ ಗರ್ಭಿಣಿಯರಿಗೆ ತುಂಬಾ ಒಳ್ಳೆಯದು.

 

 

  • ಆರೋಗ್ಯಕರ ಜಿಡ್ಡಿನ ಅಂಶ ಬಳಕೆ

 

 

ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಎಣ್ಣೆಗಳು ಲಭ್ಯವಿದೆ. ನಮ್ಮ ಮನೆಯವರ ಆರೋಗ್ಯಕ್ಕೆ ಯಾವುದು ಹೆಚ್ಚು ಸೂಕ್ತ ಎಂಬುದನ್ನು ನಾವು ತಿಳಿದುಕೊಳ್ಳುತ್ತಿರಬೇಕು .  ನಿಸರ್ಗದತ್ತ ಜಿಡ್ಡಿನ ಪದಾರ್ಥ ನಾವು ಸೇವಿಸಿದಷ್ಟು ಒಳ್ಳೆಯದು. ನೈಸರ್ಗಿಕ ದತ್ತ ಎಣ್ಣೆಯ ಪದಾರ್ಥಗಳು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಉತ್ತಮ. ಇದು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಕಡಲೆಬೀಜ, ಆಲಿವ್ ಆಯಿಲ್, ಬೆಣ್ಣೆ ಹಣ್ಣು, ಇವೇ ಮುಂತಾದವುಗಳು ನೈಸರ್ಗಿಕ ದತ್ತ ಆರೋಗ್ಯಕರ ಜಿಡ್ಡಿನಂಶವನ್ನು ಒಳಗೊಂಡಿದೆ. ಇದನ್ನು ಉಪಯೋಗಿಸಿ.

 

 

  • ಎಳ್ಳು

 

 

ಕಪ್ಪುಎಳ್ಳು, ಬಿಳಿ ಎಳ್ಳು ಗಳು ನಮಗೆ ಸಿಗುತ್ತ ವಾದರೂ, ಮಲಬದ್ಧತೆಯ ಸಮಸ್ಯೆಗೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ಎರಡು ರೀತಿಯ ಎಳ್ಳು ತುಂಬಾ ಉತ್ತಮ. ಜೀರ್ಣಾಂಗ ವ್ಯವಸ್ಥೆಯನ್ನು ಮಾಯಿಶ್ಚರ್ ಮಾಡುವಲ್ಲಿ ಎಳ್ಳು ಉತ್ತಮ ಕಾರ್ಯ ನಿಭಾಯಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿ ಎಳ್ಳನ್ನು ಉಪಯೋಗಿಸಿದರೆ ಒಳ್ಳೆಯದು. ಬೆಳಗ್ಗೆ ಬಿಸಿ ನೀರಿಗೆ ಎರಡು ಡ್ರಾಪ್ ಎಳ್ಳು ಎಣ್ಣೆ ಬೆರೆಸಿ ತುಂಬಾ ಉತ್ತಮ. 

 

 

  • ಬಜೆ ಬೇರು

 

 

ಬಜೆ ಬೇರು ಒಂದು ನೈಸರ್ಗಿಕ ದತ್ತ ಔಷಧಿ. ಬಜೆ ಬೇರಿನ ಪುಡಿ ಅಥವಾ ತೇದು ಅದನ್ನು ಬಿಸಿನೀರಿಗೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. 

 

 

  • ಒಣದ್ರಾಕ್ಷಿ

 

 

ಒಣದ್ರಾಕ್ಷಿಯಲ್ಲಿ ಕೇರಳ ಪ್ರಮಾಣದ ನೈಸರ್ಗಿಕ ದತ್ತ ನಾರಿನಂಶ ಇದೆ. ಇದರಲ್ಲಿರುವ ಔಷಧೀಯ ಗುಣದಿಂದ ಮಲಬದ್ಧತೆ ಸಮಸ್ಯೆ ಬಹುಬೇಗನೆ ಗುಣವಾಗುತ್ತದೆ. ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಗೆ ನೀರು ಸಮೇತ ದ್ರಾಕ್ಷಿಯನ್ನು ಸೇವಿಸಬೇಕು. 

 

 

  • ಮೂಲಂಗಿ

 

 

ಮಲಬದ್ಧತೆಯನ್ನು ನಿವಾರಿಸುವಲ್ಲಿ ನೈಸರ್ಗಿಕ ದತ್ತ ತರಕಾರಿಗಳು ಕೂಡ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಅವುಗಳಲ್ಲಿ ಮುಖ್ಯವಾಗಿ ಮೂಲಂಗಿಯ ಉಪಯೋಗ ತುಂಬಾ ಒಳ್ಳೆಯದು. ಮಧುಮೇಹದಿಂದ ಬಳಲುತ್ತಿರುವವರು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು, ಮೂಲಂಗಿಯನ್ನು ಆಹಾರದ ರೂಪದಲ್ಲಿ ಸೇವಿಸಿದರೆ ತುಂಬಾ ಉತ್ತಮ. ಇದು ಕೂಡ ನೈಸರ್ಗಿಕವಾಗಿ ಮಲಬದ್ಧತೆ ಹೇಳಿ ಮಾಡಿದ ಔಷಧಿಯಾಗಿದೆ.

  • ಬಾಳೆಹಣ್ಣು

 

 

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಬಾಳೆಹಣ್ಣಿನ ಸೇವನೆ ಮಾಡಿದರೆ ಇದರಿಂದ ಶಮನ ಕಾಣಬಹುದು. ಬಾಳೆಹಣ್ಣು ಅದರಲ್ಲೂ ಮುಖ್ಯವಾಗಿ ಪಚ್ಚೆ ಬಾಳೆಹಣ್ಣು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಬಾಳೆಹಣ್ಣನ್ನು ಯಾವುದೇ ರೂಪದಲ್ಲಿ ನೀವು ಸೇವಿಸಬಹುದು . ಬಾಳೆ ಹಣ್ಣಿನ ಶರಬತ್ತು ಅಥವಾ ಹಣ್ಣಿನ ಸಲಾಡ್ ಮಾಡಿ ತಿನ್ನುವುದರಿಂದಲೂ ತುಂಬಾ ಉತ್ತಮ. ಬಾಳೆಹಣ್ಣು ಕೂಡ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಪಡಿಸುತ್ತದೆ. 

 

ನಿತ್ಯ ವ್ಯಾಯಾಮ

 

ವ್ಯಾಯಾಮದಿಂದ ಕೂಡ ನಿಮ್ಮ ದೇಹದಲ್ಲಿ ರಕ್ತದ ಪರಿಚಲನೆ ಇದರಿಂದ ಮಲಬದ್ಧತೆ ಸಮಸ್ಯೆಯಿಂದ ದೂರ ಉಳಿಯಬಹುದು. ನಿತ್ಯ 30ರಿಂದ 45 ನಿಮಿಷಗಳವರೆಗೆ ವಾಕಿಂಗ್ ಮಾಡಿ. ಯೋಗವನ್ನು ಕೂಡ ರೂಢಿಸಿಕೊಳ್ಳಿ. ತುಂಬಾ ಕಿನ್ನತೆ ಒತ್ತಡದಿಂದ ಅನುಭವಿಸುತ್ತಿರುವವರು ಮಲಬದ್ಧತೆ ಸಮಸ್ಯೆಯಿಂದ ಹೆಚ್ಚಾಗಿ ಬಳಸುತ್ತಾರೆ.  ಹಾಗಾಗಿ ನಿತ್ಯ ವ್ಯಾಯಾಮವನ್ನು ರೂಢಿಸಿಕೊಳ್ಳಿ. 

 

ಮಲಬದ್ಧತೆಯನ್ನು ನಿವಾರಿಸುವಲ್ಲಿ ನಿಮಗೆ ನೀಡಲಾದ ಈ ಮನೆಮದ್ದಿನ ಮಾಹಿತಿ ಇಷ್ಟವಾದರೆ ಲೈಕ್  ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡುವುದರ ಮೂಲಕ ಪ್ರತಿಕ್ರಿಯೆ ನೀಡಿ. 

#afterpregnancy

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.