• Home  /  
  • Learn  /  
  • ನಿಮ್ಮ ಮಗು ಇನ್ನೂ ಹಾಸಿಗೆ ಒದ್ದೆ ಮಾಡುತ್ತಿದೆಯೇ
ನಿಮ್ಮ ಮಗು ಇನ್ನೂ ಹಾಸಿಗೆ ಒದ್ದೆ ಮಾಡುತ್ತಿದೆಯೇ

ನಿಮ್ಮ ಮಗು ಇನ್ನೂ ಹಾಸಿಗೆ ಒದ್ದೆ ಮಾಡುತ್ತಿದೆಯೇ

16 Nov 2021 | 1 min Read

Medically reviewed by

Author | Articles

ಹಾಸಿಗೆ ಒದ್ದೆ ಅಥವಾ ಬೆಡ್ ವೆಟ್ಟಿಂಗ್ ಇದನ್ನು ವೈದ್ಯಕೀಯ ಭಾಷೆಯಲ್ಲಿ ಎನ್ಯೂರೆಸಿಸ್ ಎಂದು ಕರೆಯುತ್ತಾರೆ. 

 

 

ನಿಮ್ಮ ಮಗು ಗೊತ್ತಿಲ್ಲವೇ ಹಾಸಿಗೆ ಒದ್ದೆ  ಮಾಡಿದರೆ ನಿಮಗೆ ನಿಜವಾಗಲೂ ಬೇಸರವಾಗುತ್ತದೆ. ಮಗುವಿಗೆ ನೀವು ಮಲಗುವ ಮುನ್ನ ಮೂತ್ರ ವಿಸರ್ಜನೆ ಮಾಡಿಸಿ ಮಲಗಿಸಿದರೂ ಮಗು ಮತ್ತೆ ಹಾಸಿಗೆಯನ್ನು ಒದ್ದೆ ಮಾಡುತ್ತದೆ. ಇದು ನಿಮಗೆ ಸಹಿಸಲಾಗುವುದಿಲ್ಲ ಅಲ್ಲವೇ. ಮಕ್ಕಳ ಈ ಹವ್ಯಾಸವನ್ನು ನಿಲ್ಲಿಸಲು ಬೇಬಿ ಚಕ್ರ ಮಾಹಿತಿಯನ್ನು ನಿಮ್ಮ ಮುಂದಿಡುತ್ತದೆ. 

 

ಮಕ್ಕಳಿಗೆ ಅರಿವಿಲ್ಲದೆ ಹಾಸಿಗೆ, ಬಟ್ಟೆ ಅಥವಾ ಇನ್ನಿತರ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಒಂದು ಸಮಸ್ಯೆ. ಪ್ರತಿಯೊಬ್ಬ ವ್ಯಕ್ತಿಯೂ ಹಗಲಿನ ವೇಳೆ ಮೂತ್ರವಿಸರ್ಜನೆ ಮಾಡುವುದಕ್ಕಿಂತ ರಾತ್ರಿಯಲ್ಲಿ ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತಾರೆ. ಇದಕ್ಕೆ ಹಲವಾರು ಕಾರಣಗಳಿವೆ. ರಾತ್ರಿಯ ವೇಳೆ ಮೂತ್ರ ವಿಸರ್ಜನೆ ಮಾಡುವ ಲಕ್ಷಣವನ್ನು ನೊಕ್ಟುಮಲ್ ಎನ್ಯೂರೆಸಿಸ್  ಅಥವಾ ಡಿಯುಮಲ್ ವೆಟ್ಟಿಂಗ್ ಎಂದು ಕರೆಯುತ್ತಾರೆ . 

 

ಕಾರಣಗಳು

 

  • ದೈಹಿಕ ಬೆಳವಣಿಗೆಯ ನಿಧಾನಗತಿ

               ಮಕ್ಕಳಲ್ಲಿ ಶಾರೀರಿಕ ಬೆಳವಣಿಗೆ ಕುಂಠಿತವಾದಾಗ ಅಥವಾ ನಿಧಾನವಾದಾಗ ಅವರ ದೈವಿಕ ರಚನೆಗೆ

               ಮೂತ್ರ ಕೋಶದ ಸಾಮರ್ಥ್ಯ ಕಡಿಮೆಗೊಳ್ಳುತ್ತದೆ. ದೀರ್ಘಕಾಲದ ನಿದ್ರೆಯ ಮಧ್ಯದಲ್ಲಿ ತನ್ನಿಂದ

             ತಾನೇ ಅರಿವಿಲ್ಲದೆ ಮೂತ್ರ ವಿಸರ್ಜನೆಯಾಗುತ್ತದೆ. ಮೂತ್ರವಸರ್ಜನೆಗೆ ಮೊದಲು ದೇಹಕ್ಕೆ ಸೂಚನೆ ಕೊಡುವ ಸಂವೇದನಶೀಲತೆ ನಿದ್ರೆಯ ಸಮಯದಲ್ಲಿ ಇರುವುದಿಲ್ಲ. ರಾತ್ರಿ ಮಲಗುವ ಮುನ್ನ ತುಂಬಾ ಹೊತ್ತು ನೀರು ಕುಡಿಯದೆ ಕೆಲವು               ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ಈ ಸಮಸ್ಯೆಯಿಂದ ಹೊರಬರಬಹುದು. ಮಕ್ಕಳ್ ಆಗಿದ್ದಲ್ಲಿ 8 ಗಂಟೆಯ ನಂತರ ನೀರನ್ನು ಕುಡಿಸಬೇಡಿ. 

 

  • ಮಗುವಿಗೆ ರಾತ್ರಿ ಮಲಗುವ ಮುನ್ನ ಶುಭ್ರವಾಗಿ ಸ್ನಾನ ಮಾಡಿಸಿ, ಸಡಿಲವಾದ ಬಟ್ಟೆಯನ್ನು ಹಾಕಿಸಿ, ಮಲಗಲು ಪ್ರೇರೇಪಿಸಿ.

 

  • ಮಗುವಿಗೆ ಕಥೆ ಹೇಳುವ ಮೂಲಕ ಮಗುವಿನ ಮನಸ್ಸನ್ನು ಸಕರಾತ್ಮಕವಾಗಿ ನಿದ್ರೆ ಬರುವಂತೆ ಮಾಡಿರಿ.

 

  • ದೇವರ ಕಥೆ, ಪೌರಾಣಿಕ ಕಥೆ, ನೀತಿ ಪಾಠಗಳು ಇವೇ ಮುಂತಾದ ಕಥೆಗಳನ್ನು ಹೇಳಿರಿ. ದೆವ್ವ-ಭೂತ ಅಮಾನುಷ ಶಕ್ತಿಯ ಕಥೆಗಳನ್ನು ಹೇಳಿ ಮಗುವಿಗೆ ಭಯ ಮೂಡಿಸ ಬೇಡಿ. ಇದರಿಂದ ಮಗು ಹಾಸಿಗೆಯಲ್ಲಿ ಒದ್ದೆ ಮಾಡುವುದನ್ನು ಹೆಚ್ಚಿಸಿಕೊಳ್ಳುತ್ತದೆ.

 

  •      ಉದ್ವೇಗಕ್ಕೆ ಒಳಗಾದರೆ

 

          ಹಗಲಿನಲ್ಲಿ ಮಕ್ಕಳು ಕೆಲವು ಉದ್ವೇಗದ ಘಟನೆಗಳಲ್ಲಿ ಪಾಲ್ಗೊಂಡಿದ್ದರೆ, ಮಕ್ಕಳು ಅಂತ ಸಿನಿಮಾ ವೀಕ್ಷಣೆ, ದೆವ್ವ ಭೂತದ ಕಥೆಗಳು, ಹಗಲು ನೋಡಿದ್ದರೆ, ಭಯಭೀತರಾಗಿದ್ದರೆ, ರಾತ್ರಿಯ ವೇಳೆ ಅದು ಮರುಕಳಿಸುವ ಸಾಧ್ಯತೆಯಿದೆ. ಇದರ            ಪರಿಣಾಮ ನಿದ್ರೆಯಲ್ಲಿ ಉದ್ವೇಗಕ್ಕೆ ಒಳಗಾಗುತ್ತಾರೆ. 

 

  • ಪ್ರೀತಿಯ ಕೊರತೆ

 

          ತಂದೆ-ತಾಯಿಯರ ಪ್ರೀತಿಯಲ್ಲಿ ಕೊರತೆಯಿಂದ ಮಕ್ಕಳು ಇನ್ಸೆಕ್ಯೂರ್ ಫೀಲ್ ಗೆ ಒಳಗಾಗುತ್ತಾರೆ. ತಂದೆ ತಾಯಿಗಳಿಬ್ಬರೂ ಕೆಲಸಕ್ಕೆ ಹೋದಾಗ, ಮಗುವಿನ ಭಾವನೆಯನ್ನು ಹಂಚಿಕೊಳ್ಳಲು, ಅದರ ಬೇಕು ಬೇಡಿಕೆಗಳನ್ನು ಮುಕ್ತವಾಗಿ         ಮಾತನಾಡಲು ಪೋಷಕರ ಕೊರತೆಯೆಂದು ಕಂಡುಬಂದಾಗ , ಮಗುವು ತನಗೆ ಯಾರೂ ಇಲ್ಲ ಎಂದು ಭಾವಿಸುತ್ತದೆ. ಇಂಥ ಮಕ್ಕಳಲ್ಲಿ ಹಾಸಿಗೆ ಒದ್ದೆ ಮಾಡುವುದು ಸಾಮಾನ್ಯ ಸಂಗತಿಯಾಗಿರುತ್ತದೆ. ಮನೋವಿಜ್ಞಾನಿಗಳ ಪ್ರಕಾರ ಇದು ಪೋಷಕರ ತಿರಸ್ಕೃತ ಮಕ್ಕಳಿಗೆ ಹೆಚ್ಚಾಗಿ ಕಂಡು ಬರುವ ಸಮಸ್ಯೆಯಾಗಿದೆ.

 

ಪರಿಹಾರ

 

  • ಮಗು ಹಾಸಿಗೆ ಒದ್ದೆ ಮಾಡುತ್ತಿದ್ದರೆ ಮಗುವಿನ ವರ್ತನೆಯ ಬದಲಾವಣೆಯನ್ನು ನಾವು ಮಾಡಬೇಕಾಗುತ್ತದೆ. ಇದು  ಮನೋವೈಜ್ಞಾನಿಕ ಚಿಕಿತ್ಸೆಯಾಗಿದ್ದು, ಮಕ್ಕಳನ್ನು ಮುಕ್ತವಾಗಿ ಮಾತನಾಡಿಕೊಂಡು, ಅವರೊಡನೆ  ಸ್ನೇಹಿತರಾಗಿ ಇರುವುದು, ಪ್ರೀತಿಯಿಂದ ನೋಡಿಕೊಳ್ಳುವುದು ಸೇರಿದೆ. 

 

  • ಕೆಲವು ದಿವಸ ರಾತ್ರಿಯ ವೇಳೆ ಮಗುವಿಗೆ ನೀರು, ಹಾಲು, ದ್ರವರೂಪದ ಪದಾರ್ಥವನ್ನು ಸಂಜೆ ಏಳರ ಬಳಿಕ ಕೊಡದಂತೆ ನಿಷೇಧಿಸುವುದು

 

  • ಮಗುವನ್ನು ನಿದ್ರೆಯ ಮಧ್ಯದಲ್ಲಿ ಎಬ್ಬಿಸಿ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಮೂತ್ರವಿಸರ್ಜನೆ ಮಾಡಿಸುವುದು.

 

  • ರಾತ್ರಿಯ ನಿದ್ದೆಯಲ್ಲಿ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಮೊದಲು ತಿಳಿಹೇಳಬೇಕು. ಒಗೆದು ಶುದ್ಧ ಮಾಡಲಾದ ಬೆಡ್ಶೀಟ್ ಮತ್ತು ಚಾದರಗಳನ್ನು ಮಗುವಿನ ಹಾಸಿಗೆ ಮೇಲೆ ಹಾಸುವುದು.

 

  • ಮಗು ಹಾಸಿಗೆ ಉದ್ದ ಮಾಡಿದಾಗ ಅದರಿಂದಾಗುವ ಸಮಸ್ಯೆ, ತಿಳುವಳಿಕೆ ಹೇಳಿಕೊಡುವುದು

 

  • ಹಗಲಿನ ವೇಳೆ ಶೌಚಾಲಯಕ್ಕೆ ಹೋಗುವುದನ್ನು ಮಕ್ಕಳಿಗೆ ತರಬೇತಿ ನೀಡುವುದು

 

  • ಕೆಲವು ದಿನಗಳ ಮಟ್ಟಿಗೆ ರಾತ್ರಿಯಲ್ಲಿ ನ್ಯಾಪಿ ಮತ್ತು ಪ್ಯಾಡ್ ಗಳನ್ನು ಉಪಯೋಗಿಸುವುದು.

 

  • ಮಗುವಿಗೆ ಭಯವಾಗುವ ಘಟನೆ, ವ್ಯಕ್ತಿ, ಕಥೆ ಹೇಳಿ ಹೆದರಿಸಿ ಮಲಗಿಸಬಾರದು.

 

  • ಮಂದಬೆಳಕು ಮಗುವಿನ ಕೊಠಡಿಯಲ್ಲಿ ಹರಿಯುತ್ತಿರಲಿ.

 

  • ಮಗು ಹಾಸಿಗೆಯನ್ನು ಒದ್ದೆ ಮಾಡುವ ಕಾರಣವನ್ನು ತಿಳಿಯಿರಿ

 

  • ಮಕ್ಕಳ ಲಕ್ಷಣ ಮತ್ತು ಚಿನ್ಹೆಯನ್ನು ಗುರುತಿಸಿ
  • ಮಕ್ಕಳೊಡನೆ ಅವಾಗವಾಗ ಮುಕ್ತವಾಗಿ ಮಾತನಾಡಿಕೊಂಡು ಆಪ್ತಸಮಾಲೋಚನೆ ಮಾಡಿರಿ.

 

ಮಗುವಿಗೆ ಸಂಬಂಧಿಸಿದಂತೆ, ಮಗು ಬೆಡ್ ವೆಟ್ಟಿಂಗ್ ಮಾಡುತ್ತಿದ್ದರೆ ಈ ಸಮಸ್ಯೆಯಿಂದ ಹೊರಬರಲು ನೀವು ರೂಪಿಸಿಕೊಳ್ಳಬೇಕಾದ ಯೋಜನೆಯನ್ನು ಸಮರ್ಪಕವಾಗಿ ವಿವರಿಸಿದ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ನಿಮ್ಮ ಪ್ರತಿಕ್ರಿಯೆಯನ್ನು ನೀಡಿ. ನಿಮ್ಮ ಪ್ರತಿಕ್ರಿಯೆ ತುಂಬಾ ಅಮೂಲ್ಯವಾದದ್ದು. 

  

(ಕೃಪೆ :- ವೈದ್ಯಕೀಯ ಬ್ಲಾಗ್ ಮಾಹಿತಿ)

#activityfortoddler #toddlar

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.