ಸ್ತನ್ಯಪಾನ Vs ಫಾರ್ಮುಲಾ ಹಾಲು

ಸ್ತನ್ಯಪಾನ Vs ಫಾರ್ಮುಲಾ ಹಾಲು

19 Nov 2021 | 1 min Read

Medically reviewed by

Author | Articles

ಪ್ರಸವದ ನಂತರ ಎದೆಹಾಲಿನ ಉತ್ಪಾದನೆ ಆಗಬೇಕು. ತಾಯಿಯ ಎದೆ ಹಾಲು ಮಗು ಜನಿಸಿದ ಅರ್ಧಗಂಟೆಯಲ್ಲಿ ಬಂದರೆ ಅದು ಮಗುವಿಗೆ ಕುಡಿಸಬಹುದು. ಈ ಹಾಲು ಅಧಿಕ ಶಕ್ತಿಯನ್ನು ಹೊಂದಿರುತ್ತದೆ. ಒಂದು ವೇಳೆ ತಾಯಿಯ ಎದೆ ಹಾಲಲ್ಲಿ ಸ್ವಲ್ಪ ವಿಳಂಬವಾದರೂ ತೊಂದರೆ ಇಲ್ಲ ಮಗುವಿಗೆ ಹಾಲು ಕುಡಿಯಲು ಬಿಡಬೇಕು. ಮಗು ಸ್ತನದ ತೊಟ್ಟನ್ನು ಚೀಪಿದಾಗ ತನ್ನಿಂದತಾನೆ ಹಾಲು ಉತ್ಪಾದನೆಯಾಗುತ್ತದೆ. 

   “ತಾಯಿಯ ಎದೆಹಾಲು ಶಿಶುವಿಗೆ ಅಮೃತವಿದ್ದಂತೆ. ತಾಯಿಯ ಎದೆ ಹಾಲಿಗೆ ಸಮನಾದ ಬೇರೊಂದು ಪೋಷಕಾಂಶ ಇಲ್ಲ”

ಒಂದು ವೇಳೆ ತಾಯಿಯ ಎದೆ ಹಾಲು ಉತ್ಪಾದನೆಯಲ್ಲಿ ವಿಳಂಬವಾದರೆ ಕೆಲವಷ್ಟು ವಿಧಾನಗಳನ್ನು ಅನುಸರಿಸಬಹುದು. ನವಜಾತ ಶಿಶುವಿನ ತಾಯಿಯದಿರಿಗೆ, ತಮ್ಮ ಎದೆಹಾಲು ಕಡಿಮೆಯಾದಾಗ ಮಗುವಿಗೆ ಹಾಲುಣಿಸುವುದರ ಬಗ್ಗೆ ಹಲವಾರು ರೀತಿಯಲ್ಲಿ ಆರಂಭವಾಗುತ್ತದೆ. ಹಾಲಿನ ಉತ್ಪನ್ನದಲ್ಲಿ ವಿಳಂಬವಾದಾಗ ಅನುಮತಿಯ ಮೇರೆಗೆ ನವಜಾತ ಶಿಶುವಿಗೆ ಫಾರ್ಮುಲಾ ಹಾಲನ್ನು ತಾಯಿಯರು ನೀಡುತ್ತಾರೆ.  ತಾಯಿಯ ಎದೆಹಾಲು ಶಿಶುವಿಗೆ ಅಮೃತವಿದ್ದಂತೆ. ತಾಯಿಯ ಎದೆ ಹಾಲಿಗೆ ಸಮನಾದ ಬೇರೊಂದು ಪೋಷಕಾಂಶ ಇಲ್ಲ. ಮಗುವಿಗೆ ತಾಯಿಯ ಎದೆ ಹಾಲು ಸಾಕಾಗದ ಆಗ ಬೇರೆ ದಾರಿ ಕಾಣದೆ ಫಾರ್ಮುಲಾ ಹಾಲನ್ನು ಕೊಡುವುದು ವೈದ್ಯರು ಸೂಚಿಸುತ್ತಾರೆ. ಆದರೆ ಕೆಲವು ತಾಯಂದಿರು ಮಗುವಿಗೆ ತಮ್ಮ ಎದೆಹಾಲು ಇದ್ದರೂ ಕೊಡದೆ ಫಾರ್ಮ್ಯುಲಾ ಹಾಲನ್ನು ಅವಲಂಬಿಸಿರುತ್ತಾರೆ. ಫಾರ್ಮುಲಾ ಹಾಲು ಮತ್ತು ತಾಯಿ ಎದೆ ಹಾಲಿಗೆ ಇರುವ ವ್ಯತ್ಯಾಸವನ್ನು ಬೇಬಿ ಚಕ್ರ ನಿಮಗಾಗಿ ನೀಡುತ್ತಿದೆ.

 

ತಾಯಿಯ ಎದೆ ಹಾಲಿನ ಮಹತ್ವ

 

ತಾಯಿ ತನ್ನ ಮಗುವಿಗೆ ಎದೆ ಹಾಲು ಕೊಡುವುದು ಒಂದು ಹೊಸ ರೀತಿಯ ಅನುಭವ. ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ತಾಯಿಯ ಎದೆಹಾಲು ತಾಯಿ ಮತ್ತು ಮಗುವಿನ ಅವಿನಾಭಾವ ಸಂಬಂಧವನ್ನು ನೆರವೇರಿಸುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ತಾಯಿ ತನ್ನ ಗಟ್ಟಿ ಹೇಳುವುದೇ ಮಗುವಿಗೆ ಎದೆಹಾಲು ಉಣಿಸಿ ದಾಗ. 

 

ಸೋಂಕಿನ ವಿರುದ್ಧ ಹೋರಾಡುವ ಶಕ್ತಿ:- ನವಜಾತ ಶಿಶುವಿಗೆ ಸೋಂಕು ತಗುಲುವ ಅಪಾಯ ಹೆಚ್ಚಾಗಿರುತ್ತದೆ. ತಾಯಿಯ ಎದೆ ಹಾಲಿನಲ್ಲಿ ಅದೆಷ್ಟು ಶಕ್ತಿ ಇದೆ ಎಂದರೆ, ಯಾವುದೇ ರೀತಿಯ ಸೋಂಕು ಮಗುವನ್ನು ಆವರಿಸಿದಂತೆ ತಾಯಿಯ ಎದೆಹಾಲು ರಕ್ಷಾಕವಚದಂತೆ ವರ್ತಿಸುತ್ತದೆ. ಬಹಳಷ್ಟು ಸನ್ನಿವೇಶದಲ್ಲಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗುವುದೇ ಬೇಡ. ಏಕೆಂದರೆ ತಾಯಿಯ ಎದೆಹಾಲು ಎಲ್ಲದಕ್ಕೂ ದಿವ್ಯ ಔಷಧವಾಗಿ ಮಗುವಿಗೆ ನಿಲ್ಲುತ್ತದೆ. 

  • ಕಿವಿಯ ಸೋಂಕು
  • ಡಯೇರಿಯಾ
  • ಉಸಿರಾಟದ ಸೋಂಕು
  • ಕಣ್ಣಿನ ಸೋಂಕು
  • ಅಲರ್ಜಿ
  • ಅಸ್ತಮಾ
  • ಮಧುಮೇಹ
  • ಸ್ಥೂಲಕಾಯ

 ಅಷ್ಟೇ ಅಲ್ಲದೆ ಮಗುವನ್ನು ಇನ್ನಿತರ ಸಮಸ್ಯೆಗಳಿಂದ ಕಾಪಾಡುತ್ತದೆ.

ಪೋಷಕಾಂಶ  ಮತ್ತು ಜೀರ್ಣಾಂಗ ವನ್ನು ಸುಗಮಗೊಳಿಸುತ್ತದೆ:–  ನವಜಾತ ಶಿಶುವಿನಲ್ಲಿ ಲ್ಯಾಕ್ಟೋಸ್, ಪ್ರೋಟೀನ್ ಮತ್ತು ಕೊಬ್ಬಿನಂಶವನ್ನು ಸುಲಭವಾಗಿ ಜೀರ್ಣಿಸುವ  ಶಕ್ತಿಯನ್ನು ತಾಯಿಯ ಎದೆ ಹಾಲು ಕೊಡುತ್ತದೆ. 

ಮುಕ್ತತೆ:- ತಾಯಿಯ ಎದೆಹಾಲು ನೈಸರ್ಗಿಕವಾಗಿ ಸಿಗುವುದರಿಂದ ಯಾವುದೇ ರೀತಿಯ ಪರಿಮಳ, ಬಣ್ಣ, ಇನ್ನಿತರೆ ರಾಸಾಯನಿಕಗಳು ಇರುವುದಿಲ್ಲ. ಆದ್ದರಿಂದ ಇದು ರಾಸಾಯನಿಕ ಮುಕ್ತವಾಗಿದೆ.

ರುಚಿ :- ಹಾಲುಣಿಸುವ ತಾಯಿಗೆ ದಿನಕ್ಕೆ 300ರಿಂದ 500 ಹೆಚ್ಚಿನ ಕ್ಯಾಲರಿ ಬೇಕಾಗುತ್ತದೆ.  ಇದನ್ನು ಆಹಾರದ ಮೂಲಕವೇ ಸೇವನೆ ಮಾಡಬೇಕಾಗುತ್ತದೆ. ತಾಯಿ ಏನು ಸೇವಿಸಿರುತ್ತಾಳೆ ಮಗುವಿನ ಹಾಲಿನಲ್ಲಿ ಬರುತ್ತದೆ. ಇದರಿಂದ ಮಗು ವಿವಿಧ ರೀತಿಯ ರುಚಿಯನ್ನು ಅನುಭವಿಸಬಹುದು. 

ತಾಯಿಯ ಸ್ಪರ್ಶ:- ಮಗು ತಾಯಿಯ ದೇಹವನ್ನು ಸ್ಪರ್ಶಿಸುತ್ತಾ ಹಾಲು ಕುಡಿಯುವುದರಿಂದ ತಾಯಿಯ ಅವಿನಾಭಾವ ಸ್ಪರ್ಶ ಮಗುವಿಗೆ ಸಂಪೂರ್ಣ ಸಿಗುತ್ತದೆ. ತಾಯಿ ಮತ್ತು ಮಗುವಿನ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತದೆ. ತಾಯಿಯ ಸ್ಪರ್ಶವನ್ನು 24ಗಂಟೆಯೂ ಅನುಭವಿಸುವ ಸಂತೋಷದಿಂದ ಸಕರಾತ್ಮಕವಾಗಿ ಬೆಳವಣಿಗೆಯಲ್ಲಿ ರೂಪುಗೊಳ್ಳುತ್ತದೆ. 

 

ಫಾರ್ಮುಲಾ ಹಾಲು

 

ಬಹಳಷ್ಟು ಮಹಿಳೆಯರು ಎದೆಹಾಲಿನ ಕೊರತೆಯಿಂದಾಗಿ, ಕೆಲವು ಬಾರಿ ವೈಯಕ್ತಿಕ ನಿರ್ಧಾರಗಳಿಂದಾಗಿ ಮಗುವಿಗೆ ಎದೆಹಾಲನ್ನು ಕೊಡಲು ಹಿಂಜರಿಯುತ್ತಾರೆ. ಎದೆಹಾಲಿನ ಪೂರೈಕೆ ಕಡಿಮೆ ಪ್ರಮಾಣದಲ್ಲಿದ್ದು ಮಗುವಿಗೆ ಅದು ಸಾಧ್ಯವಾಗದೆ ಇದ್ದಾಗ, ತಾಯಿಯ ಎದೆಹಾಲಿನಂತೆ ಪೋಷಕತ್ವ ತುಂಬಿರುವ ಹಾಲು ಮಗುವಿಗೆ ಕೊಡಬೇಕಾಗುತ್ತದೆ. ಹಾಗಾಗಿ ಇದಕ್ಕೆ ಸಮನಾಗಿ ಫಾರ್ಮುಲಾ ಹಾಲನ್ನು ಕೊಡಬಹುದು. 

ಸ್ತನದ ನೋವು: ಕೆಲವು ಮಹಿಳೆಯರಿಗೆ ಪ್ರಸವದ ಆರಂಭದಲ್ಲಿ  ಸ್ತನದ ನೋವು ಕಾಣಿಸಿಕೊಳ್ಳುತ್ತದೆ. ಸ್ತನದ ತೊಟ್ಟಿನ ಸೀಳು ಮತ್ತು ಹಾಲು ಗಂಟಾಗುವುದು ಸಾಮಾನ್ಯ ಸಂಗತಿ. ಇಂಥ ಸಮಯದಲ್ಲಿ ಮಗುವಿಗೆ ಹಾಲುಣಿಸಲು ತುಂಬಾ ಕಷ್ಟವಾಗುತ್ತದೆ. ಹೀಗಿದ್ದಾಗ ತಾಯಿಯು ಫಾರ್ಮ್ಯುಲಾ ಹಾಲನ್ನು ಕೊಡುವುದು ಅನುಕೂಲಕರ.

ಮಗುವಿಗೆ ಹಾಲು : ಮಗುವಿಗೆ ಪ್ರತಿ ಎರಡು ಗಂಟೆಗೊಮ್ಮೆ ಹಾಲು ಬೇಕಾಗಿರವುದರಿಂದ, ಎದೆ ಹಾಲುಣಿಸುವ ತಾಯಂದಿರು ಪೌಷ್ಟಿಕ ಆಹಾರ ಸೇವಿಸಬೇಕಾಗುತ್ತದೆ.‌ ಆರು ತಿಂಗಳ ನಂತರ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇದು ಸಾಧ್ಯವಾಗುವುದಿಲ್ಲ. ಕೆಲವು ವೇಳೆ ಪಂಪು ಮಾಡಿದ ಹಾಲು ಮಗುವಿಗೆ ಕೊಡಬಹುದಾದರೂ, ಫಾರ್ಮುಲಾ ಹಾಲು ಕೂಡ ಕುಡಿಸಬಹುದು. ಪ್ರಯಾಣದಲ್ಲಿರುವಾಗ ಲು, ಏನಾದರೂ ಒಂದು ತುರ್ತುಪರಿಸ್ಥಿತಿಯಲ್ಲಿ  ಫಾರ್ಮುಲ ಹಾಲು ಉಪಯೋಗಕ್ಕೆ ಬರುತ್ತದೆ. ಆದರೆ ಫಾರ್ಮುಲಾ ಹಾಲು ಹೆಚ್ಚು ಸೂಕ್ತವಲ್ಲ. 

ತಮ್ಮ ಊಟೋಪಚಾರ: ಹಾಲುಣಿಸುವ ತಾಯಂದಿರು ತಮ್ಮ ಊಟದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ಶೀತ ಕಾರ್ಯಾಗಾರವನ್ನು ಸೇವಿಸದೆ ಬಿಸಿ ಆಹಾರ ಸೇವಿಸಬೇಕು. ಸದಾ ತಮ್ಮ ಊಟದಲ್ಲಿ ನಿಗಾ ಇಡಬೇಕು. 

 ಸಾಂಕ್ರಾಮಿಕ ರೋಗ, ಶಸ್ತ್ರಚಿಕಿತ್ಸೆ, ಔಷಧಿ ತೆಗೆದುಕೊಳ್ಳುತ್ತಿದ್ದರೆ:-  ಸಾಂಕ್ರಾಮಿಕ ರೋಗ, ಮಾರಕ ರೋಗ ಉದಾಹರಣೆಗೆ ಏಡ್ಸ್ ಕಾಯಿಲೆಗಳಿಗೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ಯಾವುದೇ ಮಾರಕ ರೋಗದ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಕಿಮೊತೆರಪಿ ಮಾಡಿಸಿಕೊಳ್ಳುತ್ತಿದ್ದರೆ ಸಿಂಹ ಸಂದರ್ಭಗಳಲ್ಲಿ ಎದೆ ಹಾಲು ಉಣಿಸುವುದು ಸುರಕ್ಷಿತವಲ್ಲ. ವೈದ್ಯರೇ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೇಳಿ ಮಗುವಿಗೆ ಹಾಲುಣಿಸದಿರಲು  ಹೇಳುತ್ತಾರೆ. 

ಅನುಕೂಲಕರವಾಗಿದೆ:- ಕೆಲವು ವೇಳೆ ಪ್ರಸವದ ವೇಳೆ ತಾಯಿ ದುರ್ಮರಣಕ್ಕೀಡಾದಾಗ ಅಂಥ ಸಂದರ್ಭದಲ್ಲಿ ತಂದೆ ಅಥವಾ ಮಗುವಿನ ಜವಾಬ್ದಾರಿಯನ್ನು ಹೊತ್ತಿರುವವರು ಫಾರ್ಮುಲಾ ಹಾಲನ್ನು ಮಗುವಿಗೆ ಕೊಡಬಹುದು. ಮಗುವಿನ ತಾಯಿಗೆ ಎದ್ದು ಕುಳಿತುಕೊಳ್ಳಲು ಸಾಧ್ಯವಾಗದಾಗ ಅಥವಾ ಅನುಕೂಲಕರ ಸನ್ನಿವೇಶ ಇಲ್ಲದಿದ್ದಾಗ ಫಾರ್ಮುಲಾ ಹಾಲನ್ನು ಕೊಡಲು ಅನುಕೂಲಕರ.

 

ಫಾರ್ಮಿನ ಹಾಲಲ್ಲಿ ಇರುವಂತ ಸವಾಲುಗಳು

 

ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ:- ತಾಯಿಯ ಎದೆ ಹಾಲಿನಲ್ಲಿ ಫಾರ್ಮುಲಾ ಹಾಲು ಮಗುವಿಗೆ ರೋಗ ನಿರೋಧಕ ಶಕ್ತಿಯನ್ನು ಕೊಡುವುದಿಲ್ಲ. ಕೆಲವು ಪೋಷಕಾಂಶದ ಕೊರತೆಯನ್ನು ನೀಗಿಸುತ್ತದೆ. ಆದರೆ ಮಗುವಿನ ಕಾಯಿಲೆಯ ಸಂದರ್ಭದಲ್ಲಿ ಸವಾಲಾಗಿ ನಿಂತುಕೊಳ್ಳುತ್ತದೆ.

ಬೆಲೆ ದುಬಾರಿ:– ಕೆಲವೊಂದು ಫಾರ್ಮು ಹಾಲುಗಳು ದುಬಾರಿಯಾಗಿವೆ. ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ಪೋಷಕರಿಗೆ ಫಾರ್ಮುಲಾ ಹಾಲು ಕೊಡಲು ಸಾಧ್ಯವಾಗದಿರಬಹುದು. 

ಈ ಎಲ್ಲಾ ಮೇಲಿನ ಅಂಶವನ್ನು ಗಮನದಲ್ಲಿಟ್ಟುಕೊಂಡು ತಾಯಿಂದಿರು ಆದಷ್ಟು ತಮ್ಮ ಮಕ್ಕಳಿಗೆ ಎದೆ ಹಾಲನ್ನು ಕುಡಿದರೆ ಉತ್ತಮ. ಕೆಲವು ಸಂದರ್ಭದಲ್ಲಿ ವೈದ್ಯರ ಸೂಚನೆಯ ಮೇರೆಗೆ ಮಗುವಿಗೆ ಫಾರ್ಮುಲಾ ಹಾಲನ್ನು ಕೊಡಬಹುದು. ಇದಕ್ಕಾಗಿ ನುರಿತ ವೈದ್ಯರ ಸಲಹೆಯನ್ನು ಪಡೆಯಿರಿ.

ಈ ಲೇಖನದ ಓದುವಿಕೆ ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಬಟನನ್ನು ಒತ್ತಿ, ಶೇರ್ ಮಾಡಿ ಕಮೆಂಟ್ ಮಾಡಿ.

#bfmother #beingmother

A

gallery
send-btn

Related Topics for you