17 Nov 2021 | 1 min Read
Medically reviewed by
Author | Articles
“ಗರ್ಭಾವಸ್ಥೆಯಲ್ಲಿ ನಡೆಯುವ ಪ್ರತಿ ಪರೀಕ್ಷೆಯು ತಾಯಿ ಮತ್ತು ಮಗುವಿನ ಸಂಪೂರ್ಣ ಆರೋಗ್ಯವನ್ನು ಕಾಪಾಡುತ್ತದೆ.”
ಮುಟ್ಟು ನಿಂತು ಆರಂಭದ ದಿನಗಳಲ್ಲಿ ಪ್ರತಿಯೊಂದು ಮಹಿಳೆಯರಿಗೆ ಬಹಳಷ್ಟು ಕನ್ಫ್ಯೂಷನ್ ಗಳು ಇರುತ್ತವೆ. ಯಾವ ಯಾವ ಪರೀಕ್ಷೆಗಳು ಯಾವ ಯಾವ ಸಮಯದಲ್ಲಿ ಮಾಡಬೇಕೆಂಬ ಮಾಹಿತಿ ಬಹಳಷ್ಟು ಮಹಿಳೆಯರಲ್ಲಿ ಇರುವುದಿಲ್ಲ. ಗರ್ಭಾವಸ್ಥೆಯ ಅವಧಿಯಲ್ಲಿ ನೀವು ಮಾಡಬೇಕಾದ ಬಹು ಮುಖ್ಯ ಪರೀಕ್ಷೆಗಳು ಮತ್ತು ಅವುಗಳ ಪ್ರಯೋಜನಗಳು ಮತ್ತು ಅವುಗಳ ತಿಳುವಳಿಕೆಗಳನ್ನು ಬೇಬಿ ಚಕ್ರ ನಿಮಗಾಗಿ ನೀಡುತ್ತದೆ.
ಗರ್ಭಾವಸ್ಥೆಯ ಪರೀಕ್ಷೆ ಎಂದರೇನು
ಮೊದಲ ಬಾರಿಗೆ ಮುಟ್ಟು ನಿಂತು ಒಂದು ವಾರ ಕಳೆದ ಮೇಲೆ, ಕೆಲವೊಂದು ಲಕ್ಷಣಗಳು ನಿಮ್ಮನ್ನು ಆವರಿಸಿದರೆ ನೀವು ಗರ್ಭವತಿ ಇಲ್ಲವೇ ಎಂದು ಪರಿಶೀಲಿಸಲು ಗರ್ಭಿಣಿಯರ ಪರೀಕ್ಷೆ ನಡೆಯುತ್ತದೆ. ಅರ್ಥಾತ್ ಈ ಪರೀಕ್ಷೆಯ ಮೂಲಕವೇ ಗರ್ಭ ನಿಂತಿರುವುದು ತಿಳಿಯುತ್ತದೆ. ಮೂತ್ರದ ಅಥವಾ ರಕ್ತ ಪರೀಕ್ಷೆಯ ಮೂಲಕ ಕಂಡುಹಿಡಿಯಲಾಗುತ್ತದೆ. ಮಹಿಳೆಯ ದೇಹದಲ್ಲಿ ಹೆಚ್ ಸಿ ಜಿ ಪರೀಕ್ಷೆಯ ಮೂಲಕ ಇದನ್ನು ತಿಳಿಯಲಾಗುವುದು. ಇದು ಹಾರ್ಮೋನ್ ಆಗಿದ್ದು ಪ್ಲೆಸೆಂಟಾ ಎಲ್ಲಿ ಕಂಡುಬರುತ್ತದೆ. ಗರ್ಭಧಾರಣೆ ಯಾಗಿ ಹತ್ತು ದಿವಸಕ್ಕೆ ಹೆಚ್ ಸಿ ಜಿ ಯು ಮಟ್ಟವನ್ನು ಅಳೆಯ ಲಾಗುವುದು. ಮೊದಲ 60 ದಿನಗಳಲ್ಲಿ ಎರಡು ದಿನಕ್ಕೊಮ್ಮೆ ಅದರ ಮಟ್ಟ ದುಪ್ಪಟ್ಟಾಗುತ್ತದೆ. ನುರಿತ ತಜ್ಞರಿಂದ, ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆಯನ್ನು ಮಾಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಗಳು ಮನೆಯಲ್ಲಿ ನಡೆಯುತ್ತವೆ. ಗರ್ಭನಿಂತು ಒಂದು ವಾರದ ಬಳಿಕ ಮೆಡಿಕಲ್ ಶಾಪ್ ನಲ್ಲಿ ಸಿಗುವ ಪ್ರೆಗ್ನೆನ್ಸಿ ಟೆಸ್ಟ್ ಗಳನ್ನು ತಂದು ಮನೆಯಲ್ಲಿ ಮಾಡಲಾಗುವುದು. ಟೆಸ್ಟ್ ಮಾಡುವ ವಿಧಾನವು ಅದರಲ್ಲಿ ಹೇಳಿರುತ್ತಾರೆ. ಇದು ಬಹಳಷ್ಟು ಪರಿಣಾಮಕಾರಿಯಾಗಿ ಫಲಿತಾಂಶವನ್ನು ನೀಡುತ್ತದೆ.
ಗರ್ಭಧಾರಣೆಯ ಅವಧಿಯಲ್ಲಿ ಕೆಲವು ಸಾಮಾನ್ಯ ಪರೀಕ್ಷೆಗಳು ನಡೆಯುತ್ತವೆ.
ಆರಂಭಿಕ ಪರೀಕ್ಷೆ
ಮೊದಲ ತ್ರೈಮಾಸಿಕದ ಪರೀಕ್ಷೆ
ಎನ್ ಟಿ ಟೆಸ್ಟ್
ನಾಚಲ್ ಟ್ರಾನ್ಸ್ ಲೂಯೆನ್ಸಿ ಸ್ಕ್ರೀನಿಂಗ್ ಈ ಪರೀಕ್ಷೆಯನ್ನು ಮಗುವಿನ ಕತ್ತಿನ ಹಿಂಭಾಗದಲ್ಲಿ ಸಂಗ್ರಹಗೊಂಡಿರುವ ದ್ರವದ ಅಥವಾ ಸಾಂದ್ರತೆಯನ್ನು ಕಂಡುಹಿಡಿಯಲು ಬಳಸುತ್ತಾರೆ.
ಡ್ಯುವೆಲ್ ಮಾರ್ಕರ್ ಟೆಸ್ಟ್
ಪ್ಲಾಸ್ಮ ಪ್ರೋಟೀನ್ ಗರ್ಭಧಾರಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೆ (ಪಿಎಪಿಪಿ-ಎ):- ಪ್ಲಾಸೆಂಟಾ ದಿಂದ ಸೇವಿಸಲ್ಪಡುವ ಪ್ರೊಟೀನ್ ಅಂಶ ಗರ್ಭಧಾರಣೆಗೂ ಮೊದಲು ಅಸ್ತಿತ್ವದಲ್ಲಿರುತ್ತದೆ. ಪ್ರೋಟೀನ್ ಪ್ರಮಾಣ ಹೆಚ್ಚಾಗಿದ್ದರೆ ವರ್ಣತಂತುಗಳ ಸಮಸ್ಯೆ ಎದುರಾಗುತ್ತದೆ.
ಹೆಚ್ ಸಿ ಜಿ ಪರೀಕ್ಷೆ
ಪ್ಲಾಸೆಂಟಾ ದಿಂದ ಸೇವಿಸಲ್ಪಟ್ಟ ಹಾರ್ಮೋನ್ ಹೆಚ್ ಸಿ ಜಿ. ಪ್ರಮಾಣ ಹೆಚ್ಚಾಗಿ ಸ್ರವಿಕೆ ಯಾದಾಗ ವರ್ಣತಂತುವಿನ ತೊಡಕು ಎದುರಾಗುತ್ತದೆ. ಇದರ ಪ್ರಮಾಣದಿಂದ ಭ್ರೂಣದ ಬೆಳವಣಿಗೆ ಸಮರ್ಪಕವಾಗಿ ಆಗುತ್ತಿದೆಯೇ ಅಥವಾ ಡೌನ್ ಸಿಂದ್ರೋಮೆ ತುತ್ತಾಗಿದೆ ಯೇ ಅಥವಾ ಅನುವಂಶೀಯ ಕಾಯಿಲೆಗಳಿಗೆ ತುತ್ತಾಗಿ ಎಂಬುದು ತಿಳಿಯುತ್ತದೆ.
ಎರಡನೆಯ ತ್ರೈಮಾಸಿಕ ಪರೀಕ್ಷೆಗಳು
ಇತರೆ ಮಾರ್ಕರ್ ಪರೀಕ್ಷೆ
ಹೆಚ್ ಸಿ ಜಿ – ಪ್ಲಾಸೆಂಟಾ ದಲ್ಲಿರುವ ಹಾರ್ಮೋನ್
ಎಸ್ಟ್ರಿಯೋಲ್ – ಇದೊಂದು ಹಾರ್ಮೋನ್ ಆಗಿದ್ದು. ಪ್ಲಾಸೆಂಟಾ ದಿಂದಾಗಿದೆ.
ಇನ್ ಹಿಬಿನ್ :- ಇದು ಕೂಡ ಒಂದು ಹಾರ್ಮೋನ್. ಪ್ಲಾಸೆಂಟಾ ದಿಂದಾಗಿದೇ.
ಸ್ಕ್ರೀನಿಂಗ್ ನಲ್ಲಿ ಇದೆಲ್ಲ ಹಾರ್ಮೋನಿನ ಮಟ್ಟವನ್ನು ಕಂಡುಹಿಡಿಯಲಾಗುವುದು.
ಅಮ್ನಿಯೋಸೆಂಟ್ರಿಸಿಸ್
ಇದು ಭ್ರೂಣದ ಸುತ್ತ ಇರುವ ಅಮ್ನಿಯಾಟಿಕ ದ್ರವದ ಮಾದರಿಯನ್ನು ತೆಗೆದು ವರ್ಣತಂತು ಮತ್ತು ಇತರ ಅನುವಂಶೀಯ ಸಮಸ್ಯೆಗಳನ್ನು ಕಂಡುಹಿಡಿಯಲಾಗುವುದು.
ಸಿ ವಿ ಎಸ್
ಪ್ಲಾಸೆಂಟಾ ದ ಟಿಶ್ಯೂ ವಿಗೆ ಮಾಡುವ ಪರೀಕ್ಷೆ ಇದಾಗಿದೆ. ಮಗುವಿನ ಅನುವಂಶೀಯತೆ ಗುಣವನ್ನು ಅರಿಯಲಾಗುವುದು. ಕುಟುಂಬದ ಇತಿಹಾಸವನ್ನು ಕಲೆ ಹಾಕಿ ಆನಂತರ ಈ ಪರೀಕ್ಷೆ ಮಾಡಲಾಗುವುದು.
ಮೂರನೇ ತ್ರೈಮಾಸಿಕದಲ್ಲಿ ಮಾಡುವ ಪರೀಕ್ಷೆಗಳು
ಈ ಎಲ್ಲಾ ಪರೀಕ್ಷೆಯನ್ನು ಅರಿಯಲು ಗರ್ಭಾವಸ್ಥೆಯಲ್ಲಿ ಎಲ್ಲಾ ಬಗೆಯ ಪರೀಕ್ಷೆಯನ್ನು ಮಾಡಲಾಗುತ್ತದೆ. ಹಾಗಾಗಿ ಗರ್ಭಧಾರಣೆಯ ಅವಧಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಲು ಎಲ್ಲಾ ಪರೀಕ್ಷೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಲೇಖನ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ.
A