• Home  /  
 • Learn  /  
 • ಈ ಎಲ್ಲ ಪರೀಕ್ಷೆಗಳು ಗರ್ಭವಾಸ್ಥೆಯಲ್ಲಿ ಮುಖ್ಯವೇ ?
ಈ ಎಲ್ಲ ಪರೀಕ್ಷೆಗಳು ಗರ್ಭವಾಸ್ಥೆಯಲ್ಲಿ ಮುಖ್ಯವೇ ?

ಈ ಎಲ್ಲ ಪರೀಕ್ಷೆಗಳು ಗರ್ಭವಾಸ್ಥೆಯಲ್ಲಿ ಮುಖ್ಯವೇ ?

17 Nov 2021 | 1 min Read

 

“ಗರ್ಭಾವಸ್ಥೆಯಲ್ಲಿ ನಡೆಯುವ ಪ್ರತಿ ಪರೀಕ್ಷೆಯು ತಾಯಿ ಮತ್ತು ಮಗುವಿನ ಸಂಪೂರ್ಣ ಆರೋಗ್ಯವನ್ನು ಕಾಪಾಡುತ್ತದೆ.”

ಮುಟ್ಟು ನಿಂತು ಆರಂಭದ ದಿನಗಳಲ್ಲಿ ಪ್ರತಿಯೊಂದು ಮಹಿಳೆಯರಿಗೆ ಬಹಳಷ್ಟು ಕನ್ಫ್ಯೂಷನ್ ಗಳು ಇರುತ್ತವೆ. ಯಾವ ಯಾವ ಪರೀಕ್ಷೆಗಳು ಯಾವ ಯಾವ ಸಮಯದಲ್ಲಿ ಮಾಡಬೇಕೆಂಬ ಮಾಹಿತಿ ಬಹಳಷ್ಟು ಮಹಿಳೆಯರಲ್ಲಿ ಇರುವುದಿಲ್ಲ.‌ ಗರ್ಭಾವಸ್ಥೆಯ ಅವಧಿಯಲ್ಲಿ ನೀವು ಮಾಡಬೇಕಾದ ಬಹು ಮುಖ್ಯ ಪರೀಕ್ಷೆಗಳು ಮತ್ತು ಅವುಗಳ ಪ್ರಯೋಜನಗಳು ಮತ್ತು ಅವುಗಳ ತಿಳುವಳಿಕೆಗಳನ್ನು ಬೇಬಿ ಚಕ್ರ ನಿಮಗಾಗಿ ನೀಡುತ್ತದೆ.

ಗರ್ಭಾವಸ್ಥೆಯ ಪರೀಕ್ಷೆ ಎಂದರೇನು

ಮೊದಲ ಬಾರಿಗೆ ಮುಟ್ಟು ನಿಂತು ಒಂದು ವಾರ ಕಳೆದ ಮೇಲೆ, ಕೆಲವೊಂದು ಲಕ್ಷಣಗಳು ನಿಮ್ಮನ್ನು ಆವರಿಸಿದರೆ ನೀವು ಗರ್ಭವತಿ ಇಲ್ಲವೇ ಎಂದು ಪರಿಶೀಲಿಸಲು ಗರ್ಭಿಣಿಯರ ಪರೀಕ್ಷೆ ನಡೆಯುತ್ತದೆ. ಅರ್ಥಾತ್ ಈ ಪರೀಕ್ಷೆಯ ಮೂಲಕವೇ ಗರ್ಭ ನಿಂತಿರುವುದು ತಿಳಿಯುತ್ತದೆ.  ಮೂತ್ರದ ಅಥವಾ ರಕ್ತ ಪರೀಕ್ಷೆಯ ಮೂಲಕ ಕಂಡುಹಿಡಿಯಲಾಗುತ್ತದೆ. ಮಹಿಳೆಯ ದೇಹದಲ್ಲಿ ಹೆಚ್ ಸಿ ಜಿ ಪರೀಕ್ಷೆಯ ಮೂಲಕ ಇದನ್ನು ತಿಳಿಯಲಾಗುವುದು. ಇದು ಹಾರ್ಮೋನ್ ಆಗಿದ್ದು ಪ್ಲೆಸೆಂಟಾ ಎಲ್ಲಿ ಕಂಡುಬರುತ್ತದೆ. ಗರ್ಭಧಾರಣೆ ಯಾಗಿ ಹತ್ತು ದಿವಸಕ್ಕೆ ಹೆಚ್ ಸಿ ಜಿ ಯು ಮಟ್ಟವನ್ನು ಅಳೆಯ ಲಾಗುವುದು. ಮೊದಲ 60 ದಿನಗಳಲ್ಲಿ ಎರಡು ದಿನಕ್ಕೊಮ್ಮೆ ಅದರ ಮಟ್ಟ ದುಪ್ಪಟ್ಟಾಗುತ್ತದೆ. ನುರಿತ ತಜ್ಞರಿಂದ, ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆಯನ್ನು ಮಾಡಲಾಗುತ್ತದೆ. 

ಇತ್ತೀಚಿನ ದಿನಗಳಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಗಳು ಮನೆಯಲ್ಲಿ ನಡೆಯುತ್ತವೆ. ಗರ್ಭನಿಂತು ಒಂದು ವಾರದ ಬಳಿಕ ಮೆಡಿಕಲ್ ಶಾಪ್ ನಲ್ಲಿ ಸಿಗುವ ಪ್ರೆಗ್ನೆನ್ಸಿ ಟೆಸ್ಟ್ ಗಳನ್ನು ತಂದು ಮನೆಯಲ್ಲಿ ಮಾಡಲಾಗುವುದು. ಟೆಸ್ಟ್ ಮಾಡುವ ವಿಧಾನವು ಅದರಲ್ಲಿ ಹೇಳಿರುತ್ತಾರೆ. ಇದು ಬಹಳಷ್ಟು ಪರಿಣಾಮಕಾರಿಯಾಗಿ ಫಲಿತಾಂಶವನ್ನು ನೀಡುತ್ತದೆ. 

ಗರ್ಭಧಾರಣೆಯ ಅವಧಿಯಲ್ಲಿ ಕೆಲವು ಸಾಮಾನ್ಯ ಪರೀಕ್ಷೆಗಳು ನಡೆಯುತ್ತವೆ.

ಆರಂಭಿಕ ಪರೀಕ್ಷೆ

 • ನೀವು ಗರ್ಭಧರಿಸಿದ್ದಾರೆ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆ
 • ಗರ್ಭಿಣಿಯರ ಆರೋಗ್ಯದ ಸ್ಥಿತಿ ತಿಳಿಯಲು ರಕ್ತದ ಮಾದರಿ ಪರೀಕ್ಷೆ
 • ಯಾವುದಾದರೂ ದೀರ್ಘಾವಧಿ ಮತ್ತು ಅಲ್ಪಾವಧಿ ಕಾಯಿಲೆಯ ಮಾಹಿತಿ ಪಡೆಯಲು ಪರೀಕ್ಷೆ
 • ತೀವ್ರ ನಿಗಾ ಗರ್ಭಧಾರಣೆಯನ್ನು ತಿಳಿಯಲು ಪರೀಕ್ಷೆ ನಡೆಸಲಾಗುವುದು

ಮೊದಲ ತ್ರೈಮಾಸಿಕದ ಪರೀಕ್ಷೆ

 • ಸ್ಕ್ಯಾನಿಂಗ್ ಮೂಲಕ ಭ್ರೂಣದ ಬೆಳವಣಿಗೆಯನ್ನು ಕಂಡು ಹಿಡಿಯಲಾಗುವುದು. ಇದರಿಂದ ಭ್ರೂಣದ ಬೆಳವಣಿಗೆ, ಏನಾದ ಲೋಪದೋಷಗಳು ಇದ್ದರೆ ತಿಳಿಯುತ್ತದೆ. ಇದನ್ನೇ ಸ್ಕ್ರೀನಿಂಗ್ ಟೆಸ್ಟ್ ಎಂದು ಕರೆಯುತ್ತಾರೆ. 
 • ರಕ್ತದ ಮಾದರಿಯ ಪರೀಕ್ಷೆ. ರಕ್ತದ ಮಟ್ಟವನ್ನು ಅಳೆಯಲಾಗುವುದು
 • ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಇವುಗಳ ಮೊತ್ತವನ್ನು ಕಂಡುಹಿಡಿಯಲಾಗುವುದು.
 • ಆರ್ ಬಿಸಿಯ ಮೊತ್ತಕ್ಕೆ ಅನುಗುಣವಾಗಿ ನೀವು ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ, ರಕ್ತದಲ್ಲಿ ಕಬ್ಬಿನ, ವಿಟಮಿನ್ b12, ಇನ್ನಿತರೆ ಸಮಸ್ಯೆಯನ್ನು ಕಂಡುಹಿಡಿಯಲಾಗುವುದು
 • ಡಬ್ಲ್ಯೂ ಬಿ ಸಿ ಸಂಖ್ಯೆಯ ಅನುಗುಣವಾಗಿ ದೇಹದ ರೋಗ ನಿರೋಧಕ ಶಕ್ತಿ ಸಾಮರ್ಥ್ಯವನ್ನು ತಿಳಿಯಲಾಗುವುದು.
 • ರಕ್ತಕಣಗಳ ಸಂಖ್ಯೆಗೆ ಅನುಗುಣವಾಗಿ ನಿಮ್ಮ ರಕ್ತದ ಹೆಪ್ಪುಗಟ್ಟುವಿಕೆಯ ಸಮರ್ಥ್ಯವನ್ನು ಕಂಡು ಹಿಡಿಯಲಾಗುವುದು
 • ರಕ್ತದ ಮಾದರಿಯಿಂದ ನಿಮ್ಮ ರಕ್ತದ ಗುಂಪನ್ನು ಕಂಡುಹಿಡಿಯುವುದು
 • ನಿಮ್ಮ ರಕ್ತದ ಮಾದರಿಯನ್ನು ತೆಗೆದುಕೊಂಡು ನಿಮ್ಮ ರಕ್ತದ ಗುಂಪನ್ನು ಕಂಡುಹಿಡಿಯುವುದು ಗರ್ಭಧಾರಣೆಯ ಅವಧಿಯಲ್ಲಿ ತುಂಬಾ ಮುಖ್ಯ. ಏಕೆಂದರೆ, ಮಗುವಿನ ಆರೋಗ್ಯವು ಮತ್ತು ನಿಮ್ಮ ಆರೋಗ್ಯವು ತೀವ್ರವಾಗಿ ತುರ್ತು ಸಂದರ್ಭಕ್ಕೆ ತುತ್ತಾಗದಂತೆ ಇದು ಕಾಪಾಡುತ್ತದೆ.
 • Rh  ಫ್ಯಾಕ್ಟರ್ ನೆಗೆಟಿವ್ ಆಗಿದ್ದರೆ, ಮಗುವಿನ Rh ಫ್ಯಾಕ್ಟರ್ ಪಾಸಿಟಿವ್ ಆಗಿದ್ದರೆ ನಿಮ್ಮ ದೇಹವು Rh ಫ್ಯಾಕ್ಟರ್ ನ  ಮೇಲೆ ಇರುವುದಕ್ಕೆ ಶಕ್ತಿಯಾಗಿ ವರ್ತಿಸುತ್ತದೆ. ಇದು ಭ್ರೂಣದ ಆರ್ ಬಿಐ ಸಿ  ಅಂಶವನ್ನು ಡ್ಯಾಮೇಜ್ ಮಾಡಬಹುದು. ಮೊದಲನೆಯ ಗರ್ಭಧಾರಣೆಯ ಅವಧಿಯಲ್ಲಿ ಇದು ಸಮಸ್ಯೆ ಅನಿಸುವುದಿಲ್ಲ. ಆದರೆ ಮುಂದಿನ ಗರ್ಭಧಾರಣೆಯಲ್ಲಿ ಇದು ಸಮಸ್ಯೆಯಾಗಿ ಕಾಡುತ್ತದೆ. ಹಾಗಾಗಿ Rh ಫ್ಯಾಕ್ಟರ್ ಗೆ ಒಂದು ಇಂಜೆಕ್ಷನ್ ಅನ್ನು ಕೊಡುತ್ತಾರೆ. 
 • ಲೈಂಗಿಕ ಸಂಪರ್ಕದಿಂದ ಸೋಂಕು ತಗಲಿರುವ ಸಾಧ್ಯತೆಯನ್ನು ತಿಳಿಯುವುದು. ಹೆಚ್ಐವಿ, ಏಡ್ಸ್, ಇವೇ ಮುಂತಾದ ಸೋಂಕುಗಳನ್ನು ಹರಿಯುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬಹುದು. ಒಂದು ವೇಳೆ ತಾಯಿಗೆ ಸೋಂಕು ತಗಲಿದರೆ, ಅದು ಮಗುವಿಗೆ ಸೋಂಕು ತಗುಲದಂತೆ ತಡೆಗಟ್ಟುವ ವಿಧಾನವನ್ನು ಅನುಸರಿಸಲಾಗುತ್ತದೆ.

 

 

ಎನ್ ಟಿ ಟೆಸ್ಟ್

ನಾಚಲ್ ಟ್ರಾನ್ಸ್ ಲೂಯೆನ್ಸಿ ಸ್ಕ್ರೀನಿಂಗ್ ಈ ಪರೀಕ್ಷೆಯನ್ನು ಮಗುವಿನ ಕತ್ತಿನ ಹಿಂಭಾಗದಲ್ಲಿ ಸಂಗ್ರಹಗೊಂಡಿರುವ ದ್ರವದ ಅಥವಾ ಸಾಂದ್ರತೆಯನ್ನು ಕಂಡುಹಿಡಿಯಲು ಬಳಸುತ್ತಾರೆ.

 

ಡ್ಯುವೆಲ್ ಮಾರ್ಕರ್ ಟೆಸ್ಟ್ 

ಪ್ಲಾಸ್ಮ ಪ್ರೋಟೀನ್ ಗರ್ಭಧಾರಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೆ (ಪಿಎಪಿಪಿ-ಎ):- ಪ್ಲಾಸೆಂಟಾ ದಿಂದ ಸೇವಿಸಲ್ಪಡುವ ಪ್ರೊಟೀನ್ ಅಂಶ ಗರ್ಭಧಾರಣೆಗೂ ಮೊದಲು ಅಸ್ತಿತ್ವದಲ್ಲಿರುತ್ತದೆ. ಪ್ರೋಟೀನ್ ಪ್ರಮಾಣ ಹೆಚ್ಚಾಗಿದ್ದರೆ ವರ್ಣತಂತುಗಳ ಸಮಸ್ಯೆ ಎದುರಾಗುತ್ತದೆ. 

 

ಹೆಚ್ ಸಿ ಜಿ ಪರೀಕ್ಷೆ

ಪ್ಲಾಸೆಂಟಾ ದಿಂದ ಸೇವಿಸಲ್ಪಟ್ಟ ಹಾರ್ಮೋನ್ ಹೆಚ್ ಸಿ ಜಿ. ಪ್ರಮಾಣ ಹೆಚ್ಚಾಗಿ ಸ್ರವಿಕೆ ಯಾದಾಗ ವರ್ಣತಂತುವಿನ ತೊಡಕು ಎದುರಾಗುತ್ತದೆ. ಇದರ ಪ್ರಮಾಣದಿಂದ ಭ್ರೂಣದ ಬೆಳವಣಿಗೆ ಸಮರ್ಪಕವಾಗಿ ಆಗುತ್ತಿದೆಯೇ ಅಥವಾ ಡೌನ್ ಸಿಂದ್ರೋಮೆ ತುತ್ತಾಗಿದೆ ಯೇ‌ ಅಥವಾ ಅನುವಂಶೀಯ ಕಾಯಿಲೆಗಳಿಗೆ ತುತ್ತಾಗಿ ಎಂಬುದು ತಿಳಿಯುತ್ತದೆ.

ಎರಡನೆಯ ತ್ರೈಮಾಸಿಕ ಪರೀಕ್ಷೆಗಳು

 • ಗ್ಲುಕೋಸ್ ಟಾಲರೆನ್ಸ್ ಟೆಸ್ಟ್ ಮಾಡಲಾಗುವುದು. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಅಳೆಯಲಾಗುವುದು. 
 • ಮೂತ್ರದ ಸೋಂಕಿನ ಪರೀಕ್ಷೆ ಮಾಡಲಾಗುವುದು. 
 • ಆಲ್ಫಾ ಫೋಟೋ ಪ್ರೋಟೀನ್ ಸ್ಕ್ರೀನಿಂಗ್ (ಎ ಎಫ್ ಪಿ)
 • ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ರಕ್ತದಲ್ಲಿರುವ ಆಲ್ಫಾ ಫೋಟೋ ಪ್ರೋಟಿನ್ ಅಂಶವನ್ನು ಅಳೆಯಲಾಗುವುದು. ಈ ಪರೀಕ್ಷೆಯನ್ನು ಭ್ರೂಣದ ಯಕೃತ್ತಿನಿಂದ ಮಾಡಲಾದ ಪ್ರೋಟೀನ್ ಅಂಶದಿಂದ ಕಂಡುಹಿಡಿಯಲಾಗುತ್ತದೆ. ಭ್ರೂಣದ ಸುತ್ತ ಇರುವ ಅಮ್ನಿಯಾಟಿಕ್ ದ್ರವವು ಪ್ಲಾಸೆಂಟಾದಿಂದ ರಕ್ತವನ್ನು ಸೇರುತ್ತದೆ. 
 •  ಎ ಎಫ್ ಪಿ ಅಸಮಾನ್ಯ ಮಟ್ಟವನ್ನು ತಿಳಿಯುತ್ತದೆ.
 • ನ್ಯೂರಲ್ ಟ್ಯೂಬ್ ನಲ್ಲಿ ತೊಡಕು ( ಒ ಎನ್ ಟಿ ಡಿ )
 • ಡೌನ್ ಸಿಂಡ್ರೋಮ್
 • ವರ್ಣತಂತುವಿನ ಸಮಸ್ಯೆ
 • ಭ್ರೂಣದ ಹೊಟ್ಟೆಯ ಭಾಗದ ತೊಂದರೆ
 • ಅವಳಿ ಗಳಲ್ಲಿ, ಒಂದು ಭ್ರೂಣವು ಹೆಚ್ಚು ಪ್ರೋಟೀನ್ ಅನ್ನು ಹೊಂದಿದ್ದರೆ
 • ಅಸಮರ್ಪಕ ಪ್ರಸವದ ದಿನಾಂಕ. ಎ ಎಫ್ ಪಿ ಯ ಮಟ್ಟ ಗರ್ಭಾವಸ್ಥೆಯ ಅವಧಿಯಲ್ಲಿ ಬದಲಾಗುತ್ತಾ ಇರುತ್ತದೆ.

ಇತರೆ ಮಾರ್ಕರ್ ಪರೀಕ್ಷೆ

                     ಹೆಚ್ ಸಿ ಜಿ –  ಪ್ಲಾಸೆಂಟಾ ದಲ್ಲಿರುವ ಹಾರ್ಮೋನ್

                     ಎಸ್ಟ್ರಿಯೋಲ್ – ಇದೊಂದು ಹಾರ್ಮೋನ್ ಆಗಿದ್ದು. ಪ್ಲಾಸೆಂಟಾ ದಿಂದಾಗಿದೆ. 

                     ಇನ್ ಹಿಬಿನ್ :- ಇದು ಕೂಡ ಒಂದು ಹಾರ್ಮೋನ್. ಪ್ಲಾಸೆಂಟಾ ದಿಂದಾಗಿದೇ. 

                     ಸ್ಕ್ರೀನಿಂಗ್ ನಲ್ಲಿ ಇದೆಲ್ಲ ಹಾರ್ಮೋನಿನ ಮಟ್ಟವನ್ನು ಕಂಡುಹಿಡಿಯಲಾಗುವುದು. 

ಅಮ್ನಿಯೋಸೆಂಟ್ರಿಸಿಸ್ 

                   ಇದು ಭ್ರೂಣದ ಸುತ್ತ ಇರುವ ಅಮ್ನಿಯಾಟಿಕ ದ್ರವದ  ಮಾದರಿಯನ್ನು ತೆಗೆದು  ವರ್ಣತಂತು ಮತ್ತು ಇತರ ಅನುವಂಶೀಯ ಸಮಸ್ಯೆಗಳನ್ನು ಕಂಡುಹಿಡಿಯಲಾಗುವುದು. 

ಸಿ ವಿ ಎಸ್ 

                  ಪ್ಲಾಸೆಂಟಾ ದ ಟಿಶ್ಯೂ ವಿಗೆ ಮಾಡುವ ಪರೀಕ್ಷೆ ಇದಾಗಿದೆ. ಮಗುವಿನ ಅನುವಂಶೀಯತೆ ಗುಣವನ್ನು ಅರಿಯಲಾಗುವುದು. ಕುಟುಂಬದ ಇತಿಹಾಸವನ್ನು ಕಲೆ ಹಾಕಿ ಆನಂತರ ಈ ಪರೀಕ್ಷೆ ಮಾಡಲಾಗುವುದು. 

ಮೂರನೇ ತ್ರೈಮಾಸಿಕದಲ್ಲಿ ಮಾಡುವ ಪರೀಕ್ಷೆಗಳು

 •        ಜಿಬಿಎಸ್ ಪರೀಕ್ಷೆ
 • ಸ್ಕ್ಯಾನಿಂಗ್
 • ಹೆಚ್ ಬಿ ಸಿ  ಕೌಂಟ್ 
 • ಪ್ರಸವದ ದಿನವನ್ನು ಲೆಕ್ಕ ಹಾಕಲು
 • ಪ್ಲಾಸೆಂಟಾ ದಲ್ಲಿರುವ ಭ್ರೂಣದ ಸಂಖ್ಯೆ ಯನ್ನೂ ಕಂಡುಹಿಡಿಯಲು
 • ಗರ್ಭಪಾತದ ಪರೀಕ್ಷೆ 
 • ಗರ್ಭ ಮತ್ತು ಪೆಲ್ವಿಕ್ ಅನ್ನು ಪರೀಕ್ಷಿಸಲು
 • ಭ್ರೂಣದ ಬೆಳವಣಿಗೆ 
 • ಭ್ರೂಣದ ಚಟುವಟಿಕೆ ತಿಳಿಯಲು
 • ಸೆರ್ವಿಕ್ಸ್ ಉದ್ದವನ್ನು ಅಳೆಯಲು 

 

ಈ ಎಲ್ಲಾ ಪರೀಕ್ಷೆಯನ್ನು ಅರಿಯಲು ಗರ್ಭಾವಸ್ಥೆಯಲ್ಲಿ ಎಲ್ಲಾ ಬಗೆಯ ಪರೀಕ್ಷೆಯನ್ನು ಮಾಡಲಾಗುತ್ತದೆ. ಹಾಗಾಗಿ ಗರ್ಭಧಾರಣೆಯ ಅವಧಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಲು ಎಲ್ಲಾ ಪರೀಕ್ಷೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಲೇಖನ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ. 

#1stpregnancy

like

9

Like

bookmark

19

Saves

whatsapp-logo

3

Shares

A

gallery
send-btn

Related Topics for you

ovulation calculator
home iconHomecommunity iconCOMMUNITY
stories iconStoriesshop icon Shop