ಡೌನ್ ಸಿಂಡ್ರೋಮ್ ಇದನ್ನು ಟ್ರೈ ಸೋಮಿ 21 ಎಂದು ಕರೆಯುತ್ತಾರೆ.
ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬಗ್ಗೆ ಹಲವಾರು ಕನಸುಗಳನ್ನು ತಾಯಿ-ತಂದೆ ಕಟ್ಟಿಕೊಂಡಿರುತ್ತಾರೆ. ಪ್ರತಿ ನಿಮಿಷ ಮಗುವಿನ ಚಲನವಲನ ಚಟುವಟಿಕೆಯನ್ನು ತಾಯಿಯಾದವಳು ಗಮನಿಸುತ್ತಿರುತ್ತಾರೆ. ಹಿಂದೆ ಎಲ್ಲಾ ಕೇವಲ ವಿದೇಶಿಗ ರಲ್ಲಿ ಮಾತ್ರ ಡೌನ್ ಸಿಂಡ್ರೋಮ್ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭಾರತೀಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಲ್ಲಿ ಜನನದ ನಂತರ ಕಂಡುಬರುತ್ತಿದೆ. ಇದಕ್ಕೆ ಕಾರಣ ವರ್ಣತಂತುವಿನ ವಿಲಕ್ಷಣ.
ಡೌನ್ ಸಿಂಡ್ರೋಮ್ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಬೇಬಿ ಚಕ್ರ ನಿಮಗೆ ನೀಡುತ್ತಿದೆ.
ವರ್ಣತಂತು 21ರ ಮೂರನೇ ಅಥವಾ ಭಾಗದ ವಿಲಕ್ಷಣವಾಗಿ ಕೆಯಿಂದ ಅನುವಂಶೀಯ ಕಾಯಿಲೆ ಕಂಡುಬರುತ್ತದೆ. ಇದನ್ನು ಡೌನ್ ಸಿಂಡ್ರೋಮ್ ಎಂದು ವೈದ್ಯಕೀಯ ಭಾಷೆಯಲ್ಲಿ ಗುರುತಿಸಲಾಗುತ್ತದೆ. ಇದು ಅನುವಂಶೀಯವಾಗಿ ಬರುವಂಥ ಕಾಯಿಲೆಯಾಗಿದೆ. ಇಂಥ ನ್ಯೂನ್ಯತೆಯಿಂದ ಹುಟ್ಟಿದ ಮಕ್ಕಳಿಗೆ ದೈಹಿಕ ಬೆಳವಣಿಗೆ ತುಂಬಾ ವಿಳಂಬ. ಮಕ್ಕಳ ಬೌದ್ಧಿಕ ಅಂಗವಿಕಲತೆ ಎದ್ದು ಕಾಣುತ್ತದೆ. ಮುಖದ ಭಾಗದಲ್ಲಿ ಈ ಕಾಯಿಲೆಗೆ ವಿಲಕ್ಷಣತೆ ಎದ್ದುಕಾಣುತ್ತದೆ. ಇಂಥ ಮಕ್ಕಳು ಸೌಮ್ಯ ರೂಪದಲ್ಲಿ ಇರುತ್ತಾರೆ. ಸಾಮಾನ್ಯ ಮಕ್ಕಳಿಗೆ ಹೋಲಿಸಿದರೆ, ಡೌನ್ ಸಿಂಡ್ರೋಮ್ ಹೊಂದಿರುವ ಮಕ್ಕಳ ಬುದ್ಧಿಮತ್ತೆಯ ಬೆಳವಣಿಗೆ ಶೇಕಡ 50ರಷ್ಟು ಇರುತ್ತದೆ. ಅಂದರೆ 20 ವರ್ಷದ ಮಗುವಿನ ಬೆಳವಣಿಗೆಯಲ್ಲಿ ಹತ್ತು ವರ್ಷದ ಮಗುವಿನ ಮಾನಸಿಕ ಬೆಳವಣಿಗೆಯನ್ನು ನಾವು ಕಾಣಬಹುದು. ಅನುವಂಶೀಯ ಕಾರಣ ತಾಯಿ ಹಿಂದ್ ಆಗಬಹುದು ಅಥವಾ ತಂದೆಯಿಂದ ಆದರೂ ಆಗಬಹುದು. 20 ವರ್ಷದ ತಾಯಿ ಎಲ್ಲಿ ಶೇಕಡಾ 0.1 ರಷ್ಟು ಸಾಧ್ಯತೆಗಳು ಇದ್ದರೆ ಅದೇ 45 ವರ್ಷದ ತಾಯಿಯಲ್ಲಿ ಶೇಕಡಾ ಐದರಷ್ಟು ನ್ಯೂನ್ಯತೆಗಳು . ಈ ನ್ಯೂನ್ಯತೆ ಹೆಚ್ಚಾಗಿ ವಯಸ್ಸಾದ ತಾಯಂದಿರು ಗರ್ಭಧರಿಸಿದಾಗ ಉಂಟಾಗುತ್ತದೆ.
ರೋಗದ ಲಕ್ಷಣ.
- ಡೌನ್ ಸಿಂಡ್ರೋಮ್ ಹೊಂದಿರುವ ಮಗುವು ಯಾವಾಗಲೂ ದೈಹಿಕ ಮತ್ತು ಬೌದ್ಧಿಕ ನ್ಯೂನ್ಯತೆಯನ್ನು ಹೊಂದಿರುತ್ತದೆ.
- ವಯಸ್ಸಿನವರಾದ ರೂ ಅವರ ಮಾನಸಿಕ ಬೆಳವಣಿಗೆ ಹತ್ತು ವರ್ಷದ ಮಕ್ಕಳಿಗೆ ಇರುವ ಹಾಗೆ ಇರುತ್ತದೆ
- ಇಂಥ ಮಕ್ಕಳು ಜನ್ಮಜಾತವಾಗಿ ಹೃದಯದ ದೋಷ
,
- ಅಪಸ್ಮಾರ, ರಕ್ತದ ಕ್ಯಾನ್ಸರ್, ಥೈರಾಯಿಡ್ ಕಾಯಿಲೆಗಳು ಮತ್ತು ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುತ್ತಾರೆ.
ದೇಹದ ನ್ಯೂನ್ಯತೆ
- ಸಣ್ಣ ಗಲ್ಲ,
- ಓರೆಯಾದ ಕಣ್ಣುಗಳು
- ಚಪ್ಪಟೆ ಮೂಗು
- ಕಣ್ಣು ಸಣ್ಣ ಇರುವುದು
- ನಾಲಿಗೆ ಹೊರ ಚಾಚಿ ಕೊಂಡಿರುವುದು
- ವಿಪರೀತ ಶೀತ
- ಉಸಿರಾಟದ ತೊಂದರೆ
- ರಾತ್ರಿಯ ವೇಳೆ ಉಸಿರುಗಟ್ಟುವಿಕೆ
- ಅಗಲವಾದ ಮತ್ತು ಚಪ್ಪಟೆಯಾದ ಮುಖ
- ಸಣ್ಣ ಕುತ್ತಿಗೆ
- ಸಣ್ಣ ಸಣ್ಣ ಬೆರಳುಗಳು
- ಅಥವಾ ದೊಡ್ಡ ದೊಡ್ಡ ಬೆರಳುಗಳು
- ದೊಡ್ಡ ದೊಡ್ಡ ಹಲ್ಲುಗಳು
- ಅಸ್ಪಷ್ಟ ಮಾತು
- ಬೆಳವಣಿಗೆಯಲ್ಲಿ ಕುಂಠಿತವಾಗುವುದು
- ಇಂಥ ನ್ಯೂನ್ಯತೆ ಇರುವ ಮಕ್ಕಳಿಗೆ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ
- ವಯಸ್ಸಾದಂತೆ ಇಂಥ ಮಕ್ಕಳಲ್ಲಿ ಬೊಜ್ಜು ಬರುವ ಸಾಧ್ಯತೆ ಇರುತ್ತದೆ
- ನಡೆಯುವಾಗ ಕಾಲುಗಳು ದೂರ ದೂರವಿಟ್ಟು ನಡೆಯುತ್ತಾರೆ.
- ಕೈಗಳನ್ನು ಮಡಚಿ ಶಕ್ತಿ ಇಲ್ಲದಂತೆ ನಡೆಯುತ್ತಾರೆ
- ಡೌನ್ ಸಿಂಡ್ರೋಮ್ ಹೊಂದಿರುವ ಮಕ್ಕಳು ಬೆಳೆದು ಮಾತನಾಡುವಾಗ ತೊದಲಿದರು ಭಾಷಾ ತಿಳುವಳಿಕೆಯನ್ನು ಚೆನ್ನಾಗಿ ಹೊಂದಿರುತ್ತಾರೆ
- ಡೌನ್ ಸಿಂಡ್ರೋಮ್ ಹೊಂದಿರುವ ಮಕ್ಕಳಲ್ಲಿ ಮಾನಸಿಕ ಅಸ್ವಸ್ಥತೆಯ ಶೇಕಡಾ 30ರಷ್ಟು ಇರುತ್ತದೆ.
- ಡೌನ್ ಸಿಂಡ್ರೋಮ್ ಇರುವ ಮಕ್ಕಳು ವಿಪರೀತವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಕೆಲವೊಮ್ಮೆ ಅಳುತ್ತಾ ಕೂತ್ತಿದ್ದರೆ, ಕೆಲವೊಮ್ಮೆ ಮುದುಡಿ ಮಲಗಿ ಕೊಂಡಿರುತ್ತಾರೆ.
- ಈತ ಮಕ್ಕಳಲ್ಲಿ ದೈಹಿಕ ಚಟುವಟಿಕೆಯ ಪ್ರಮಾಣ ಕಡಿಮೆ ಇರುತ್ತದೆ.
ರೋಗವನ್ನು ಕಂಡುಹಿಡಿಯುವುದು
- ಗರ್ಭಾವಸ್ಥೆಯ ಅವಧಿಯಲ್ಲಿ ಸ್ಕ್ರೀನಿಂಗ್ ಪರೀಕ್ಷೆಗಳು ಇಂಥ ರೋಗಲಕ್ಷಣವನ್ನು ಅಪಾಯವನ್ನು ಕಂಡುಹಿಡಿಯಲಾಗುವುದು
- ಅಮ್ನಿಯೋ ಸೆಂಟಿಸಿಸ್ ಮತ್ತು ಕೊರಿಯೊನಿಕ್ ವಿಲ್ಲಸ್ ಸ್ಯಾಂಪ್ಲಿಂಗ್ ಇದು ಹೆಚ್ಚು ವಿಶ್ವಾಸಾರ್ಹ ಪರೀಕ್ಷೆ. ಆದರೆ ಗರ್ಭಪಾತವಾಗುವ ಸಂಭವ ಹೆಚ್ಚಾಗಿರುತ್ತದೆ.
- ಮಾರ್ಕರ್ ಟೆಸ್ಟ್ ಗಳು ಹೆಚ್ಚು ಪ್ರಭಾವಶಾಲಿ ಪರೀಕ್ಷೆ ಗಳಾಗಿವೆ. ಇವುಗಳಲ್ಲಿ ವರ್ಣತಂತುವಿನ ನ್ಯೂನ್ಯತೆಯನ್ನು ಮಗು ಗರ್ಭದಲ್ಲಿರುವಾಗಲೇ ಕಂಡುಹಿಡಿಯಬಹುದು.
- ಮಗು ಜನಿಸಿದ ನಂತರ ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಮಗುವಿನ ದೈಹಿಕ ಲಕ್ಷಣಗಳಿಗೆ ಅನುಗುಣವಾಗಿ ಮಗುವಿನ ಪ್ರಮೋದ್ ಹೂವಿನ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಸ್ಕ್ರೀನಿಂಗ್ ನಲ್ಲಿ ಮುಂಬರುವ ಅಪಾಯವನ್ನು ತಗ್ಗಿಸಬಹುದು.
- ರಕ್ತ ಪರೀಕ್ಷೆಯ ಮೂಲಕ ಕೂಡ ಕಂಡುಹಿಡಿಯುವುದು. ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ರಕ್ತದ ಮಾದರಿಯನ್ನು ತೆಗೆದುಕೊಂಡು ಮಗುವಿನ ನ್ಯೂನ್ಯತೆಯನ್ನು ಸಾಧ್ಯವಾಗುತ್ತದೆ.
ರೋಗದ ಚಿಕಿತ್ಸೆ ಮತ್ತು ನಿರ್ವಹಣೆ
- ತಪಾಸಣೆ
- ಸೂಚಿಸಿದ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ
- ಉತ್ತಮ ವಾತಾವರಣ ಮನೆಯಲ್ಲಿ ತರಬೇತಿ
- ಇಂಥ ಮಕ್ಕಳಿಗೆ ತರಬೇತಿ ಇರುವ ಶಾಲೆಗಳಿಗೆ ಸೇರಿಸುವುದು.
- ಕ್ರಿಯಾಶೀಲ ಮತ್ತು ಚಟುವಟಿಕೆ ಆಧಾರಿತ ಕೆಲಸಗಳನ್ನು ಮಗುವಿಗೆ ಕೊಡುವುದು.
- ಶಿಕ್ಷಣ ಮತ್ತು ಸರಿಯಾದ ಆರೈಕೆ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ
- ಮಕ್ಕಳಿಗೆ ಮನೆಯನ್ನು ಕೂಡ ಶಾಲೆಯಾಗಿ ಪರಿವರ್ತಿಸಿ ಚಟುವಟಿಕೆಯನ್ನು ಸದಾ ನೀಡುತ್ತಿರಬೇಕು. ಅವರನ್ನು ಹೆಚ್ಚು ಸಂವಹನದಲ್ಲಿ ಸೇರಿಸಿಕೊಳ್ಳಬೇಕು.
ಗರ್ಭಣಿಯರಿಗೆ ಉಪಯುಕ್ತ ಮಾಹಿತಿಯನ್ನು ನೀಡಿರುವ ಪ್ರಯತ್ನವನ್ನು ನೀವು ಇಷ್ಟ ಪಟ್ಟಿದ್ದಾರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡುವುದರ ಮೂಲಕ ಪ್ರತಿಕ್ರಿಯೆ ನೀಡಿ.
#angrykids