30 Nov 2021 | 1 min Read
Medically reviewed by
Author | Articles
ಜಂಜಾಟದ ಜೀವನದಲ್ಲಿ, ಅದರಲ್ಲೂ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋದಾಗ ಮಗುವಿನ ಕಾಳಜಿವಹಿಸಲು ತುಂಬಾ ಕಷ್ಟಪಡುತ್ತಾರೆ. ಬಹಳಷ್ಟು ತಂದೆ-ತಾಯಿಯರು ಮಕ್ಕಳನ್ನು ಡೇ ಕೇರ್, ಬೇಬಿ ಸಿಟ್ಟಿಂಗ್, ಪ್ರೀಸ್ ಕೂಲಿಂಗ್ ಬೆಳಿಗ್ಗೆ ಮಕ್ಕಳನ್ನು ಸೇರಿಸುತ್ತಾರೆ. ಮಗುವಿನ ಬೆಳವಣಿಗೆ ಒಂದು ರೀತಿಯಲ್ಲಿ ಪೂರಕ ವಾತಾವರಣವನ್ನು ಶ್ರೀ ಸ್ಕೂಲುಗಳು ಒದಗಿಸುತ್ತದೆ. ಈ ನಿಟ್ಟಿನಲ್ಲಿ ಬಹಳಷ್ಟು ಪೋಷಕರು ಮಗುವಿನ ಅಭಿವೃದ್ಧಿ ಮತ್ತು ಭವಿ ಭವಿಷ್ಯ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಈ ನಿಟ್ಟಿನಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇರುವ ಉನ್ನತಮಟ್ಟದ ಶ್ರೇಯಾಂಕದ ಕಿಂಡರ್ಗಾರ್ಟನ್ ವಿವರಣೆ ಹೀಗಿದೆ.
1. ಕಾಂಗರೂ ಕಿಡ್ಸ್
ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಾಂಗರೂ ಕಿಡ್ಸ್, ದೇಶದಾದ್ಯಂತ ಹಲವಾರು ಕಡೆ ತನ್ನ ಉಪ ಶಾಖೆಯನ್ನು ಹೊಂದಿದೆ. ಮಕ್ಕಳ ಮೇಲಿನ ಕಾಳಜಿ, ಸುರಕ್ಷತೆ, ರಕ್ಷಣೆಯ ಜೊತೆಗೆ ಕಲಿಕೆಯ ಪರಿಸರವನ್ನು ಸೂಕ್ತ ರೀತಿಯಲ್ಲಿ ಅನುವು ಮಾಡಿಕೊಟ್ಟಿದೆ. ಅವರ ಮೂಲ ಧ್ಯೇಯ
ಹೆಚ್ಚಿನ ಮಾಹಿತಿಗೆ ಬ್ಲಾಗ್ ವೀಕ್ಷಣೆ ಮಾಡಬಹುದು ಅಥವಾ ವೆಬ್ಸೈಟ್ www.kangarookids.in ವೀಕ್ಷಿಸಬಹುದು.
2. ಯುರೋ ಕಿಡ್ಸ್
ಯುರೋ ಕಿಡ್ಸ್ ನ ಪ್ರಕಾರ ಮಗುವಿನ ಮೆದುಳಿನ ಬೆಳವಣಿಗೆ ಆರು ವರ್ಷದ ಕೆಳಗೆ 90 ಶೇಕಡಾ ನಡೆಯುತ್ತದೆ. ಈ ಅವಧಿಯಲ್ಲಿ ಮಕ್ಕಳ ಮೆದುಳಿನ ಬೆಳವಣಿಗೆಗೆ ಪೂರಕವಾದ ಚಟುವಟಿಕೆಯನ್ನು ನಾವು ಕೊಡಬೇಕು. ಈ ನಿಟ್ಟಿನಲ್ಲಿ ಯುರೋ ಕಿಡ್ಸ್ ತನ್ನದೇ ಆದ ಪಠ್ಯಕ್ರಮವನ್ನು ರೂಪಿಸಿಕೊಂಡಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಸೇವೆಯಲ್ಲಿರುವ ಯುರೋ ಕಿಡ್ಸ್, ಮಗುವು ಆರು ವರ್ಷದ ಒಳಗೆ ಕೆಲವು ಪಠ್ಯಕ್ರಮಕ್ಕೆ ಒಳಪಡದೆ ಇದ್ದಾಗ ಏನು ಕಳೆದುಕೊಳ್ಳುತ್ತದೆ ಎಂಬುದನ್ನು ಪಟ್ಟಿ ಮಾಡಿದೆ. ಅದರಲ್ಲಿ ಮುಖ್ಯವಾಗಿ
ಇಷ್ಟೇ ಅಲ್ಲದೆ ತಮ್ಮಲ್ಲಿ ನೊಂದಾಯಿತ ವದ್ಯಾರ್ಥಿಗಳಿಗೆ ಆನ್ಲೈನ್ ತರಗತಿಯನ್ನು ತೆತೆಗೆದುಕೊಳ್ಳುತ್ತಿದೆ. ಮೂರು ಮುಖ್ಯ ದೇಶಗಳಲ್ಲಿ ತನ್ನ ಶಾಖೆಯನ್ನು ಹೊಂದಿರುವ ಯುರೋ ಕಿಡ್ಸ್ ಹಲವಾರು ಶಾಖೆಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿಗೆ eurokidsindia.com ವೀಕ್ಷಿಸಿ.
3. ಕೇ ಲೇ
2021ರ ಉತ್ತಮ ಭಾರತೀಯ edtech ಗೌರವ ಪಡೆದುಕೊಂಡಿದೆ.
ಹೆಚ್ಚಿನ ಮಾಹಿತಿಗೆ kplayschool.com ವೆಬ್ಸೈಟನ್ನು ವೀಕ್ಷಿಸಿ.
4. ಕಿಡ್ಸ್ ಕ್ಯಾಸ್ಟಲ್.
ಕಿಡ್ಸ್ ಕ್ಯಾಸ್ಟಲ್ ಉನ್ನತಮಟ್ಟದ ಶಿಕ್ಷಣದೊಂದಿಗೆ ಡೇ ಕೇರನ್ನು ತುಂಬಾ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ. ಮಗುವಿನ ಸೂಕ್ಷ್ಮ ಮನಸ್ಸಿಗೆ ನಾಟುವ ವ್ಯವಸ್ಥಿತ ಪರಿಸರವನ್ನು ಹಿತವಾಗಿ ರೂಪಿಸಿದೆ. ಪ್ರಸ್ತುತ ಹಲವಾರು ಆಸಕ್ತಿದಾಯಕ ಮತ್ತು ಪ್ರಭಾವಿತ ಚಟುವಟಿಕೆಗಳನ್ನು ಮಕ್ಕಳ ಮಾನಸಿಕ ಬೆಳವಣಿಗೆ ಮೆದುಳಿನ ಬೆಳವಣಿಗೆಗೆ ಮತ್ತು ಕ್ರಿಯಾಶೀಲತೆಯ ಅಭಿವೃದ್ಧಿಗೆ ರೂಪಿಸಲಾಗಿದೆ. ನಾವು ಮಕ್ಕಳ ಕಲಿಕೆಯನ್ನು ಪ್ರೀತಿಯಿಂದ ನಿರ್ವಹಿಸುತ್ತಿದ್ದೇವೆ. ಇದರಿಂದ ಮಕ್ಕಳ ಕಲಿಕೆಯ ಪ್ರೀತಿಯೊಡನೆ ಸಾಗಿದಾಗ ಮಕ್ಕಳು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂಬ ಉದ್ದೇಶ ನಮ್ಮದು. ನಮ್ಮ ಮುಖ್ಯಗುರಿ ಹೀಗಿವೆ
ಕಲಿಕೆಗೆ ರೂಪಿಸಿದ ಪಠ್ಯಕ್ರಮ
ಈ ಎಲ್ಲಾ ಅಂಶಗಳನ್ನು ಒಳಗೊಂಡು ಕಿಡ್ಸ್ ಕ್ಯಾಸ್ಟಲ್ ತನ್ನ ಕಲಿಕೆಯ ಬಗ್ಗೆ ಕ್ರಮವನ್ನು ಮಕ್ಕಳಿಗಾಗಿ ರೂಪಿಸಿದೆ. ಹೆಚ್ಚಿನ ಮಾಹಿತಿಗೆ www.kidscastlepreschool.com ವೀಕ್ಷಿಸಿ.
5. ಅಹಂ ಆತ್ಮ ವಿದ್ಯಾಲಯ
ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಅಹಂ ಆತ್ಮ ವಿದ್ಯಾಲಯ ಮಕ್ಕಳ ಬೆಳವಣಿಗೆಗೆ ಜ್ಞಾನದ ಸಂಪೂರ್ಣ ಕೊಡುಗೆಯನ್ನು ನೀಡುತ್ತಿದೆ. ಒಂದೇ ಕ್ಯಾಂಪಸ್ನಲ್ಲಿ ಕಿಂಡರ್ಗಾರ್ಟನ್ ನಿಂದ ಹಿಡಿದು ಸ್ಕೂಲಿಂಗ್ 10ನೇ ತರಗತಿಯವರೆಗೆ ಒಳಗೊಂಡಿದೆ. ಸಾಂಪ್ರದಾಯಿಕ ಮೌಲ್ಯಗಳನ್ನು ಒಳಗೊಂಡಂತೆ ಭಾರತೀಯ ಶಿಕ್ಷಣ ಪದ್ಧತಿಯ ಅನುಸಾರ ಆಧುನಿಕ ಶಿಕ್ಷಣ ಪದ್ಧತಿಯನ್ನು ಮೈಗೂಡಿಸಿಕೊಂಡಿದೆ. ಜ್ಞಾನ, ಸ್ವಾತಂತ್ರ್ಯ, ಕಲಿಕೆಯ ಕೌಶಲ್ಯತೆ, ಅಭಿವ್ಯಕ್ತಿ ಕೌಶಲ್ಯತೆ, ಸಂಗೀತ ಮತ್ತು ಭಾಷಣ ಇವೆಲ್ಲವನ್ನೂ ಒಳಗೊಂಡ ಶಿಕ್ಷಣ ಪದ್ಧತಿಯು ತತ್ವಜ್ಞಾನದ ಪ್ರಕಾರ ಮುಂದುವರೆದಿದೆ.
ಮಗುವಿನ ವೈಯಕ್ತಿಕ ಕಲಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ವೈಯಕ್ತಿಕವಾಗಿಯೇ ಮಗುವನ್ನು ಕಲಿಕೆಗೆ ಪ್ರೋತ್ಸಾಹ ಉನ್ನತಮಟ್ಟದ ಕಲಿಕೆಯ ನಿಯಮವಾಗಿದೆ. ಸುರಕ್ಷತೆ, ಆರೈಕೆ ಮತ್ತು ಬೆಂಬಲದ ಪರಿಸರವನ್ನು ಒಳಗೊಂಡಂತೆ ಮಗುವು ಶಿಸ್ತುಬದ್ಧವಾಗಿ ಗೌರವಯುತವಾಗಿ ಬೆಳೆಯುತ್ತದೆ. ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಲಾದ ಲಿಂಕ್ ಅನ್ನು ಉಪಯೋಗಿಸಿ.
ಈ ಎಲ್ಲಾ ಕಿಂಡರ್ ಗಾರ್ಟನ್ ಬಗ್ಗೆ ನಿಮಗೆ ಮಾಹಿತಿ ಬೇಕಾದಲ್ಲಿ ಆ ವೆಬ್ ಲಿಂಕ್ ಅನ್ನು ಉಪಯೋಗಿಸಿರಿ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.