ಭ್ರೂಣದ  ಲಿಂಗ ಪತ್ತೆ ಅಪರಾಧ

ಭ್ರೂಣದ ಲಿಂಗ ಪತ್ತೆ ಅಪರಾಧ

19 Nov 2021 | 1 min Read

ಭ್ರೂಣದ  ಲಿಂಗ ಪತ್ತೆ ಅಪರಾಧ 

 

ಭಾರತದ ಜನಸಂಖ್ಯೆಗೆ ಅನುಗುಣವಾಗಿ ಸರಕಾರ ಜನಸಂಖ್ಯಾ ನಿಯಂತ್ರಣಕ್ಕೆ ಹಲವಾರು ಕಾನೂನು ಮತ್ತು ಕಾಯ್ದೆಗಳನ್ನು ಜಾರಿಗೆ ತಂದಿದೆ. ಜನರಲ್ಲಿ ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಮತ್ತು ಗಂಡು ಮಗುವಿನ ಮೇಲಿರುವ ವ್ಯಾಮೋಹದಿಂದ ಬಹಳಷ್ಟು ಹೆಣ್ಣು ಮಗುವಿನ ಭ್ರೂಣಹತ್ಯೆ ಆಗುತ್ತಿತ್ತು. ಈ ನಿಟ್ಟಿನಲ್ಲಿ 1994ರಲ್ಲಿ ಪಾರ್ಲಿಮೆಂಟಲ್ಲಿ ದೂರದ ಲಿಂಗ ಪತ್ತೆಯ ನಿಷೇಧದ ಕಾನೂನನ್ನು ಅನುಮೋದಿಸಲಾಯಿತು. ಇದರಿಂದ ಹೆಣ್ಣು ಭ್ರೂಣಹತ್ಯೆ ಬಹಳಷ್ಟು ಕಡಿಮೆಯಾಗತೊಡಗಿತು. ಆದರೂ ಗಂಡು ಮಕ್ಕಳ ಸಂಖ್ಯೆಗೆ ಹೋಲಿಸಿದರೆ ಹೆಣ್ಣುಮಕ್ಕಳ ಸಂಖ್ಯೆಯೂ ಸರಾಸರಿಯಲ್ಲಿ ಕಡಿಮೆ ಇದೆ. ಇದಕ್ಕೆ ಕಾರಣ ಹೆಣ್ಣು ಭ್ರೂಣಹತ್ಯೆ. ಈ ನಿಟ್ಟಿನಲ್ಲಿ ಇಂದಿಗೆ ಜಾರಿನಲ್ಲಿ ಜಾರಿಯಲ್ಲಿರುವ ಲಿಂಗಪತ್ತೆ ಯು ಕಾನೂನು ಅಪರಾಧ ಎಂದು ಕಾನೂನಾತ್ಮಕವಾಗಿ ಅನುಮೋದಿಸಿದ ನಂತರವೂ ಹೆಣ್ಣಿನ ಸಂಖ್ಯೆಯಲ್ಲಿ ಕಡಿಮೆಯಾಗಿರುವುದು ವಿಷಾದನೀಯ. 

 

ಭ್ರೂಣಹತ್ಯೆ ಅಪರಾಧಕ್ಕಿರುವ ಕಾನೂನುಗಳು

  • ಅಲ್ಟ್ರಾಸೌಂಡ್ ಮತ್ತು ಅಮ್ನಿಯೋಸೆಂಟೆಸಿಸ್  ವಿಧಾನದಲ್ಲಿ ಮಗುವಿನ ಲಿಂಗವನ್ನು ಪತ್ತೆಹಚ್ಚುವುದು ನಿರ್ಬಂಧಿಸಲಾಗಿದೆ

 

  • ಭ್ರೂಣದ ಬೆಳವಣಿಗೆಯ ಸಂದರ್ಭ ಅಲ್ಟ್ರಾಸೌಂಡ್ ಮಾಡುವಾಗ ಯಾವುದೇ ರೀತಿಯಲ್ಲಿ ವೈದ್ಯರು ಮತ್ತು ಮಗುವಿನ  ಪೋಷಕರು ಲಿಂಗವನ್ನು ಕೇಳಬಾರದು.

 

  • ಅಲ್ಟ್ರಾಸೌಂಡ್ ಮಾಡಲು ನುರಿತ ತಂತ್ರಜ್ಞರ ಬಳಿಗೆ ಮಾತ್ರ ಹೋಗ ತಕ್ಕದ್ದು

 

  • ಯಾವುದೇ ಪ್ರಯೋಗಾಲಯ ಇಂಥ ಪರೀಕ್ಷೆಯನ್ನು ಕೈಗೊಳ್ಳುವಾಗ ಕಾನೂನಾತ್ಮಕವಾಗಿ ರಿಜಿಸ್ಟ್ರೇಷನ್ ನೆರವೇರಿಸಿ ಮಾಡತಕ್ಕದ್ದು.

 

  • ಯಾವುದೇ ಪ್ರಯೋಗಾಲಯಗಳು ಪರವಾನಗಿಯನ್ನು ತಮ್ಮ ಪ್ರಯೋಗಾಲಯದ ಮುಂದೆ ವೀಕ್ಷಣೆಗೆ ಇಡತಕ್ಕದ್ದು.

 

  • ರೋಗಿ ಮತ್ತು ವೈದ್ಯರು ಪ್ರಯೋಗಾಲಯ ನಡೆಸುವ ಮುನ್ನ ಪರಿವೀಕ್ಷಣಾ ವರದಿಗೆ ಸಹಿಯನ್ನು ಹಾಕತಕ್ಕದ್ದು

 

  • ಪ್ರತಿಯೊಂದು ಆಸ್ಪತ್ರೆಯ ಮತ್ತು ಪ್ರಯೋಗಾಲಯದ ಮುಂದೆ ಲಿಂಗಪತ್ತೆ ಕಾನೂನು ಅಪರಾಧ ಎಂಬ ನೋಟಿಸನ್ನು ಎಲ್ಲರಿಗೆ ಕಾಣುವಂತೆ ಗೋಡೆಯಲ್ಲಿ ಅಂಟಿಸ ಬೇಕಾಗಿರುತ್ತದೆ.

 

  • ಒಂದು ವೇಳೆ ಕಾನೂನಾತ್ಮಕವಾದ ಶಾಸನವನ್ನು ಮೀರಿ ನಡೆದುಕೊಂಡರೆ ಅಂತಹ ವ್ಯಕ್ತಿ ಮತ್ತು ಪ್ರಯೋಗಾಲಯದ ಮೇಲೆ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುವುದು.

 

ನಮ್ಮ ದೇಶದಲ್ಲಿ ಲಿಂಗ ಪತ್ತೆ ಅಪರಾಧವೇಕೆ?

2011 ಜನಸಂಖ್ಯಾ ಸಮೀಕ್ಷೆಯ ಆಧಾರದ ಮೇಲೆ ಪ್ರತಿ 1000 ಗಂಡಿಗೆ 940 ಹೆಣ್ಣಿನ ಸಂಖ್ಯೆ ಇರುವುದು ಕಂಡುಬಂದಿದೆ. ಮುಖ್ಯವಾಗಿ ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಈ ಸಮಸ್ಯೆ ಎದ್ದುಕಾಣುತ್ತಿದೆ. ಗಂಡು ಪ್ರಾಧ್ಯಾನತೆ ಇರುವ ಸಮಾಜ, ವರದಕ್ಷಿಣೆ ಸಮಸ್ಯೆ, ಅನಕ್ಷರಸ್ಥ ಜನರ ಸಮಸ್ಯೆ ಇಂದ ಗಂಡು ಮಗುವಿನ ವ್ಯಾಮೋಹ ಅಧಿಕವಾಗಿದೆ. ಹೀಗಾಗಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಈ ಕಾರಣಕ್ಕಾಗಿ ಹೆಣ್ಣು ಭ್ರೂಣ ಹತ್ಯೆ ನಡೆದ ಸಂದರ್ಭದಲ್ಲಿ ಈ ಕೃತ್ಯಕ್ಕೆ ಭಾಗಿಯಾದ ಯಾರೇ ಆಗಲಿ ಅವರನ್ನು ತೀವ್ರ ಕ್ರಮ ಕೈಗೊಂಡು ಮರುಕಳಿಸುವ ಪ್ರಕ್ರಿಯೆ ನಮ್ಮ ದೇಶದಲ್ಲಿ ಇಂದಿಗೂ ಜಾರಿಯಲ್ಲಿದೆ. 

 

ಸಮಾಜದಲ್ಲಿ ಆಚರಣೆ

ಬಹಳಷ್ಟು ಸಮುದಾಯದಲ್ಲಿ ಗಂಡು ಮಗು ತಮ್ಮ ಕೊನೆಯ ಕಾಲದವರೆಗೆ ತಮ್ಮ ಜೊತೆಯಲ್ಲಿರುತ್ತಾನೆ, ಹೆಣ್ಣುಮಕ್ಕಳು ಮದುವೆ ನಂತರ ತಮ್ಮ ಬಳಿ ಇರುವುದಿಲ್ಲ ಎಂಬ ಭಾವನೆ ಬೇರೂರಿದೆ.  ಅದು ಅಲ್ಲದೆ ಗಂಡು ಮಕ್ಕಳನ್ನು ಸಾಕುವುದು ಖರ್ಚು ಕಡಿಮೆ ಹೆಣ್ಣುಮಕ್ಕಳಿಗೆ ಓದಿಸಿ ಮದುವೆ ಖರ್ಚು ನಿಭಾಯಿಸುವುದು ಕಷ್ಟ ಎಂಬ ಧೋರಣೆ ಎಲ್ಲರಲ್ಲೂ ಇದೆ. ಹಾಗಾಗಿ ಭ್ರೂಣಹತ್ಯೆಯನ್ನು ತಾಯಿಯ ಗರ್ಭದಲ್ಲಿ ಮಗು ಮೊಳಕೆಯೊಡೆಯುವ ಮುನ್ನವೇ ನಾಶ ಮಾಡಲಾಗುವುದು. ಇದಕ್ಕಾಗಿ ಆಸ್ಪತ್ರೆ ಅಥವಾ ಪ್ರಯೋಗಾಲಯದ ಸಹಾಯ, ಅಥವಾ ಮಾತ್ರೆಯನ್ನು ತೆಗೆದುಕೊಂಡು ಕೃತ್ಯ ಜರುಗಿಸಲಾಗುವುದು. ಇದು ತಾಯಿಯ ಭಾವನೆಗೆ ವಿರುದ್ಧವಾಗಿ ಜರುಗುವ ಕ್ರಿಯೆಯಾಗಿದೆ. ಈ ಎಲ್ಲಾ ಆಯಾಮಗಳನ್ನು ಮನದಲ್ಲಿಟ್ಟುಕೊಂಡು, ದೇಶದ ಅಭಿವೃದ್ಧಿಯಲ್ಲಿ ಹೆಣ್ಣುಮಕ್ಕಳ ಪಾತ್ರ ಮತ್ತು ಜನಸಂಖ್ಯೆ ನಿಯಂತ್ರಣದ ದೃಷ್ಟಿಯಲ್ಲಿ ದೇಶಕ್ಕೆ ಏಕೈಕ ಕಾನೂನು ಜರುಗಿಸಲಾಗಿದೆ. ಈ ಕಾನೂನಿನ ಅಡಿಯಲ್ಲಿ ಪ್ರತಿ ರಾಜ್ಯ ಮತ್ತು ಜಿಲ್ಲೆ ಹಳ್ಳಿ ಒಳಪಡುತ್ತದೆ. ಪ್ರತಿಯೊಂದು ಆಸ್ಪತ್ರೆ ಮತ್ತು ಪ್ರಯೋಗಾಲಯದಲ್ಲಿ ಇಂದಿಗೂ ಕೂಡ ನಾವು ಬ್ರೂಣ ಪತಿ ಮಹಾಪರಾಧ ಎಂಬ ನಾಮ ಫಲಕವನ್ನು ಕಾಣಬಹುದು. ಹೆಣ್ಣೊಂದು ಉಳಿದರೆ ಮನೆಯೊಂದು ಬೆಳಗಿದಂತೆ. ದೇಶಕ್ಕೆ ಹೆಣ್ಣು ಒಬ್ಬ ದಿ ಶಕ್ತಿಯಾಗಿ ರೂಪುಗೊಳ್ಳುತ್ತಾರೆ. ಹೆಣ್ಣು ಸಂಸಾರದ ಕಣ್ಣು ಹೇಗೋ ದೇಶಕ್ಕೂ ಕೂಡ ಕಣ್ಣು ಇದ್ದಂತೆ. ಹಾಗಾಗಿ ಹೆಣ್ಣು ಭ್ರೂಣ ಹತ್ಯೆಯನ್ನು ನಾವೆಲ್ಲರೂ ತಡೆಗಟ್ಟಬೇಕಾಗಿದೆ.

 

ಹೆಣ್ಣು ಭ್ರೂಣ ಹತ್ಯೆ ಕುರಿತಾದ  , ಭ್ರೂಣದ ಲಿಂಗ ಪಟ್ಟಿಯ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಬಟನ್ ಒತ್ತಿ, ಕಾಮೆಂಟ್ ಮಾಡಿ , ಮತ್ತು ಶೇರ್ ಮಾಡುವುದರ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು ನೀಡಿರಿ. 

(ಕೃಪೆ : ಅಂತರ್ಜಾಲ)

#allaboutpregnancy

like

7

Like

bookmark

4

Saves

whatsapp-logo

2

Shares

A

gallery
send-btn

Related Topics for you

ovulation calculator
home iconHomecommunity iconCOMMUNITY
stories iconStoriesshop icon Shop