20 Nov 2021 | 2 min Read
Medically reviewed by
Author | Articles
ಮಕ್ಕಳಿಗೆ ತಿನ್ನಿಸುತಿದ್ದರೆ ತಾಯಿಗೆ ಒಂದು ಹರಸಾಹಸವೇ ಸರಿ. ಒಂದು ರುಚಿ ಚೆನ್ನಾಗಿದ್ದರೆ ಇನ್ನೊಂದು ರುಚಿ ಚೆನ್ನಾಗಿಲ್ಲ ಎಂದು ದೂರುತ್ತಾರೆ, ಮನೆಯ ಸುತ್ತ ಓಡಾಡುವುದು, ಊಟ ಮಾಡಿ ಮಾಡುವಾಗ ಒಂದೆರಡು ಚಮಚ ಮಾತ್ರ ಊಟ ಮಾಡುವುದು. ಮಕ್ಕಳಿಗೆ ಪೋಷಕಾಂಶದ ಕೊರತೆ ಎದುರಾಗಬಹುದೆಂಬ ಆತಂಕ ಪ್ರತಿ ಪೋಷಕರಿಗೆ ಇರುತ್ತದೆ. ಕಿರು ಒಂದು ಬದಲಾವಣೆಗಳನ್ನು ನಾವು ಮಕ್ಕಳಿಗೆ ಕೊಡುವ ಖಾದ್ಯದಲ್ಲಿ ತಂದರೆ ಮಕ್ಕಳು ಖಂಡಿತವಾಗಿ ಇದನ್ನು ಇಷ್ಟಪಡುತ್ತಾರೆ.
ಬೇಕಾಗುವ ಸಾಮಾಗ್ರಿಗಳು
ಈ ಮೇಲಿನ ಸಾಮಾಗ್ರಿಗಳನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಹುರಿದು ಪ್ರತ್ಯೇಕವಾಗಿ ಇಡಬೇಕು. ಇದನ್ನು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ.
ಬಾಣಲೆಯಲ್ಲಿ ರುಚಿಗೆ ತಕ್ಕಷ್ಟು ಬೆಲ್ಲ ತೆಗೆದುಕೊಂಡು ಪಾಕ ಮಾಡಿಕೊಳ್ಳಿ. ಪಾಕಕ್ಕೆ ಒಂದು ಚಮಚ ಏಲಕ್ಕಿ ಪುಡಿ ಬೆರೆಸಿ ಅದಕ್ಕೆ ಹುರಿದು ಪುಡಿಮಡಿದ ಸಾಮಾಗ್ರಿಗಳನ್ನು ಬೆರೆಸಿ ಕಲಸಬೇಕು. ಬೆಲ್ಲದ ಪಾಕ ಸರಿಯಾಗಿ ಹಿಡಿಯುವಂತೆ ಪಾಕ ಮಾಡಿ. ಪಾಕ ಗಟ್ಟಿಯಾದ ಬಳಿಕ ಅದನ್ನು ಉಂಡೆ ಮಾಡಿರಿ.
ಬಾಣಲಿಯಲ್ಲಿ ತಯಾರಿಸಿದ ಪಾಕಕ್ಕೆ ಹುರಿದ ಪುಡಿಯನ್ನು ಬೆರೆಸಿ. ಅದಕ್ಕೆ ಸ್ವಲ್ಪ ಒಂದು ಚಮಚದಷ್ಟು ಏಲಕ್ಕಿ ಪುಡಿ ಬೆರೆಸಿ. ನಂತರ ತೆಂಗಿನ ತುರಿ ಬೆರೆಸಿ. ಹುರಿದು ಭಾಗ ಮಾಡಿದ ಕಡಲೆ ಬೀಜವನ್ನು ತಯಾರಿಸಿದ ಪಾಕಕ್ಕೆ ಹಾಕಿ ಈಗ ಲಡ್ಡು ತಯಾರಿಸಿ.
ರವೆ 1 ಕಪ್
ಬೆಲ್ಲ 1 ಕಪ್
ಗೋಡಂಬಿ 7-8
ದ್ರಾಕ್ಷಿ 5-6
ತುಪ್ಪ 5-6 ಚಮಚ
ಕೇಸರಿ ದಳ 2-3
ಏಲಕ್ಕಿ ಪುಡಿ 1/2 ಚಮಚ
ತಯಾರಿಸುವ ವಿಧಾನ:
ದಿಡೀರ್ ಮಾಡುವ ಮಕ್ಕಳು ಇಷ್ಟಪಡುವ ಬೆಲ್ಲದ ಕೇಸರಿಬಾತ್.
ಹೆಸರು ಕಾಳಿನ ಉಸುಲಿ
ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ತಯಾರಿಸುವ ಹೆಸರು ಕಾಳಿನ ಉಸುಲಿ
ಬೇಕಾಗುವ ಸಾಮಾಗ್ರಿ
ಎಣ್ಣೆ 3 ಚಮಚ
ಹೆಸರು ಕಾಳು 1 ಕಪ್
ನೀರು 2 ಕಪ್
ಸಾಸಿವೆ ಅರ್ಧ ಚಮಚ
ಇಂಗು ಚಿಟಿಕೆ ಯಷ್ಟು
ಅರಸಿನ ಪುಡಿ -ಚಿಟಿಕೆಯಷ್ಟು
ಕರಿಬೇವಿನ ಸೊಪ್ಪು
ಹಸಿಮೆಣಸಿನಕಾಯಿ
ಒಂದು ಕುಕ್ಕರಿನಲ್ಲಿ ಒಂದು ಕಪ್ ಹೆಸರುಕಾಳು ತೆಗೆದುಕೊಂಡು ಅದಕ್ಕೆ 2 ಕಪ್ ನೀರನ್ನು ಬೆರೆಸಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿ. ಬೆಂದ ನಂತರ ಅದನ್ನು ಇಳಿಸಿ ಬಾಣಲೆಯನ್ನು ಸ್ಟೌವಿನ ಮೇಲೆ ಇಡಿ. ಒಗ್ಗರಣೆಗೆ ಬಾಣಲಿಗೆ ಎಣ್ಣೆ ಹಾಕಿ ಸಾಸಿವೆಯನ್ನು ಹಾಕಿ, ಚಿಟಿಕೆ ಇಂಗು, ಚಿಟಿಕೆ ಅರಿಶಿನಪುಡಿ, ಹೆಚ್ಚಿದ ಹಸಿಮೆಣಸು, ಕರಿಬೇವಿನ ಸೊಪ್ಪು ಹಾಕಿ ಸ್ವಲ್ಪ ಕಾಯಿಸಿರಿ. ನಂತರ ಬಾಣಲಿಗೆ ಬೇಯಿಸಿಟ್ಟ ಹೆಸರುಕಾಳನ್ನು ಮಿಶ್ರ ಮಾಡಿ ಸ್ವಲ್ಪ ಹೊತ್ತು ಎಣ್ಣೆಯಲ್ಲಿ ಮಿಶ್ರಮಾಡಿ
ನೀರಿನಂಶ ಹೋದಮೇಲೆ ಅದಕ್ಕೆ ಬೇಕಿದ್ದರೆ ಸಕ್ಕರೆ 1 ಚಮಚ ಬೆರೆಸಿ. ಕಾಯಿತುರಿ 1ಕಪ್ ಅನ್ನು ಬೆರೆಸಿ ಮಿಶ್ರ ಮಾಡಿದ ಮೇಲೆ ಅರ್ಧ ಚಮಚ ನಿಂಬೆ ಹಣ್ಣಿನ ರಸ ಮಿಶ್ರ ಮಾಡಿರಿ.
ಆರೋಗ್ಯಕ್ಕೆ ಉತ್ತಮವಾದ ಮಕ್ಕಳು ಇಷ್ಟ ಪಡುವ ಈ ಸ್ನಾಕ್ಸ್ ಇಷ್ಟವಾದರೆ ಲೈಕ್ ಮಾಡಿ, ಷೇರ್ ಮತ್ತು ಕಾಮೆಂಟ್ ಮಾಡಿ
A