ನಿಮಗಾಗಿ  ಡ್ರೈ ಫ್ರೂಟ್ಸ್  ಖಾದ್ಯಗಳು

ನಿಮಗಾಗಿ ಡ್ರೈ ಫ್ರೂಟ್ಸ್ ಖಾದ್ಯಗಳು

20 Nov 2021 | 2 min Read

Medically reviewed by

Author | Articles

ಪ್ರತಿಯೊಂದು ಹೆಣ್ಣಿಗೆ ಗರ್ಭಾವಸ್ಥೆಯಲ್ಲಿ ವಿವಿಧ ರೀತಿಯ ಆಸೆ ಆಕಾಂಕ್ಷೆಗಳಿರುತ್ತವೆ. ತಮ್ಮ ಆರೋಗ್ಯದ ಜೊತೆಗೆ ಮಗುವಿನ ಆರೋಗ್ಯ ಕೂಡ ಜಾಗೃತೆ ವಹಿಸಬೇಕಾಗುತ್ತದೆ. ತನ್ನ ಮಗು ಸುಂದರ, ಪುಷ್ಟಿದಾಯಕ, ಆರೋಗ್ಯವಂತ, ಬುದ್ಧಿವಂತ ಮಗುವಾಗಿ ಜನಿಸಬೇಕೆಂದು ಪ್ರತಿಯೊಬ್ಬರಿಗೆ ಆಸೆ ಇರುತ್ತದೆ. ಬೇಬಿ ಚಕ್ರ ನಿಮಗಾಗಿ ಡ್ರೈಫ್ರೂಟ್ಸ್ ಹಾಲಿನ ಪುಡಿಯನ್ನು ಪರಿಚಯಿಸುತ್ತದೆ.

 

ಫ್ರೂಟ್ಸ್ ಹಾಲಿನ ಪುಡಿ :-

ಬೇಕಾಗುವ ಸಾಮಾಗ್ರಿಗಳು: 

     

  • ಬಾದಾಮಿ       –         50 ಗ್ರಾಂ
  • ವಾಲ್ನಟ್        –         50 ಗ್ರಾಂ
  • ಗೋಡಂಬಿ     –         50 ಗ್ರಾಂ
  • ಪಿಸ್ತ             –         25 ಗ್ರಾಂ
  • ಏಲಕ್ಕಿ          –          2-3
  • ಕಲ್ಲಂಗಡಿ ಬೀಜ –       25ಗ್ರಾಂ

 

ಬೇಕಿದ್ದರೆ ಕೇಸರಿ 1 ಎಳೆ ಉಪಯೋಗಿಸಬಹುದು. ಇದರ ಜೊತೆಗೆ ಅರಸಿನ ಕಾಲು ಚಮಚ ಬೆರೆಸಬೇಕು.

 

ಮಾಡುವ ವಿಧಾನ:

 

ಸ್ಟೌವಿನ ಮೇಲೆ ಒಂದು ಪಾತ್ರೆಯನ್ನಿಟ್ಟು, ಸಣ್ಣ ಉರಿಯಲ್ಲಿ ಮೊದಲು ಡ್ರೈಫ್ರೂಟ್ಸ್ ಅನ್ನು ಹುರಿಯಬೇಕು. 

ಮೊದಲು ಬಾದಾಮಿಯನ್ನು ಹಾಕಿ ಬಿಸಿ ಮಾಡಿ ಕೊಳ್ಳಬೇಕು. ಬಿಸಿಮಾಡುವ ಉದ್ದೇಶವಿಷ್ಟೇ ಹುರಿದ  ಡ್ರೈಫ್ರೂಟ್ಸ್ ಪುಡಿ ಒಂದು ತಿಂಗಳಾದರೂ ಹಾಳಾಗುವುದಿಲ್ಲ. 

 

  • ಬಾದಾಮಿ ಗರ್ಭಾವಸ್ಥೆಯಲ್ಲಿ ಕಾಡುವ ಮಧುಮೇಹ, ಬಿಪಿ ಮತ್ತು ಮಗುವಿನ ಬೆಳವಣಿಗೆಗೆ ಕೂಡ ಸಹಕಾರಿ. ಬಿಸಿಮಾಡಿದ ಬಾದಾಮಿಯನ್ನು ತೆಗೆದಿಟ್ಟುಕೊಳ್ಳಿ

 

  •  ಅಕ್ರೂಟ್ ಅನ್ನು ಬಿಸಿ ಮಾಡಲು ಇಡಬೇಕು. ಅಕ್ರೂಟ್ ಮೆಮರಿ ಬೂಸ್ಟರ್. ಮಿದುಳಿನ ಬೆಳವಣಿಗೆಗೆ ಸಹಕಾರಿ.

 

  • ಗೋಡಂಬಿಯನ್ನು ಬಿಸಿಮಾಡಲು ಬಾಣಲೆಗೆ ಹಾಕಿ. ಗೋಡಂಬಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೂದಲು ಮತ್ತು ಚರ್ಮದ ಕಾಂತಿಗೆ ತುಂಬಾ ಉಪಕಾರಿ.

 

  • ಕಲ್ಲಂಗಡಿ ಬೀಜವನ್ನು ಹುರಿದುಕೊಳ್ಳಬೇಕು. ಕಲ್ಲಂಗಡಿಯಲ್ಲಿ ಇರುವ ಅಂಶ ನಮ್ಮ ಮೂಳೆಗೆ ತುಂಬಾ ಪುಷ್ಟಿಯನ್ನು ನೀಡುತ್ತದೆ.

 

  • ಕೆಲವು ಸಲ ಹುರಿದ ಪಿಷ್ಟಗಳು ಸಿಗುವುದರಿಂದ ಪುಸ್ತವನ್ನು ಮತ್ತೆ ಹುರಿದು ಸೇರಿಸುವ ಅಗತ್ಯವಿಲ್ಲ. ಪಿಸ್ತಾವು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹೃದಯಕ್ಕೆ ತುಂಬಾ ಒಳ್ಳೆಯದು.

 

ಹುರಿದ ಎಲ್ಲಾ ಡ್ರೈಫ್ರೂಟ್ಸ್ ಅನ್ನು ಆರಲು ಬಿಡಬೇಕು. ಎಲ್ಲ ಬಿಸಿ ಆರಿದ ನಂತರ ಪ್ರತ್ಯೇಕವಾಗಿ ಒಂದೊಂದೇ ಹುರಿದ ಡ್ರೈಫ್ರೂಟ್ಸ್ ಅನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ಮೊದಲಿಗೆ ಬಾದಾಮಿಯನ್ನು ತೆಗೆದುಕೊಳ್ಳಿ. ಬಾದಾಮಿಯ ಜೊತೆಗೆ ಏಲಕ್ಕಿ ಮತ್ತು ಕೇಸರಿ, ಅರಶಿನ ಪುಡಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು.‌ ನಂತರ ಎಲ್ಲಾ ಪುಡಿ ಮಾಡಿದ ಮೇಲೆ ಒಟ್ಟಿಗೆ ಮಿಶ್ರಣ ಮಾಡಬೇಕು. ಏರ್ಟೈಟ್ ಬಾಕ್ಸ್ ನಲ್ಲಿ ಒಂದು ತಿಂಗಳವರೆಗೆ ಇದನ್ನು ಸಂಗ್ರಹಿಸಿಡಬಹುದು. ಸಕ್ಕರೆ ಬೇಕಾದವರು ಸಕ್ಕರೆಯನ್ನು ಬೆರೆಸಿ ಹಾಲಿನೊಂದಿಗೆ ಕುದಿಸಿ ಕುಡಿಯಬಹುದು. ಹಾಗೆ ಹಾಲಿಗೆ ಪುಡಿಯನ್ನು ಬೆರೆಸಿ ಕುದಿಸಿ ಸಕ್ಕರೆ ಬೇಡ ಎಂದವರು ಕೂಡ ಅದೇ ರೀತಿ ಕುಡಿಯಬಹುದು. 

 

ಡ್ರೈಫ್ರೂಟ್ಸ್ ಅಂಟಿನ ಉಂಡೆ:

ಸಾಮಾನ್ಯವಾಗಿ ಎಲ್ಲ ವಯೋಮಾನದವರು ಕೂಡ ಸೇವಿಸಬಹುದಾದ ಡ್ರೈಫ್ರೂಟ್ಸ್ ನ ಉತ್ತಮ ಖಾದ್ಯ. ಗರ್ಭಿಣಿಯರಿಂದ ಹಿಡಿದು ಬಾಣಂತಿಯರವರೆಗೆ ಮತ್ತು ಸಣ್ಣ ಮಕ್ಕಳಿಗೂ ಕೂಡ ಡ್ರೈಫ್ರೂಟ್ಸ್ ಉಂಡೆ ತುಂಬಾ ಉಪಕಾರಿ. ಅತಿ ಹೆಚ್ಚು ಪ್ರೊಟೀನ್ ಅಂಶ ಹೊಂದಿರುವ ಈ ಡ್ರೈ ಫ್ರೂಟ್ಸ್ ಎಲ್ಲಾ ರೀತಿಯ ಡ್ರೈಫ್ರೂಟ್ಸ್ ನ ಪೋಷಕಾಂಶವನ್ನು ಹೊಂದಿದೆ. 

 

ಬೇಕಾಗುವ ಸಾಮಾಗ್ರಿಗಳು:

 

ಬೀಜ ಇಲ್ಲದೆ ಇರುವ ಕರ್ಜೂರ        -20

ಒಣದ್ರಾಕ್ಷಿ                               -25ಗ್ರಾಂ

ಬಾದಾಮಿ                               -20

ಪಿಸ್ತ                                      – 15

ಗೋಡಂಬಿ                              -15

ಏಲಕ್ಕಿ ಪುಡಿ                             -1/2ಚಮಚ

ತುಪ್ಪ                                    – 1/2 ಚಮಚ

ಗಸಗಸೆ                                 – 1 ಚಮಚ

 

ಮಾಡುವ ವಿಧಾನ

 

  • ಎಲ್ಲಾ ಡ್ರೈಫ್ರೂಟ್ಸ್ ಅನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಇಲ್ಲದಿದ್ದರೆ ಪುಡಿ ಮಾಡಿಕೊಳ್ಳಬಹುದು.
  • ಸ್ಟೌವಿನ ಮೇಲೆ ಬಾಣಲೆಯನ್ನಿಟ್ಟು 3 -4 ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ. 
  • ತುಪ್ಪ ಕಾದು ನಂತರ ಪಿಸ್ತಾ ಬಾದಾಮಿ ಗೋಡಂಬಿ ಯನ್ನು ಮಿಶ್ರ ಮಾಡಿ 2 ನಿಮಿಷ ಬಿಸಿ ಮಾಡಬೇಕು.
  • ಬಿಸಿಮಾಡಿದ ಪದಾರ್ಥವನ್ನು ತೆಗೆದಿಡಬೇಕು
  • ಈಗ ದ್ರಾಕ್ಷಿ ಅಕ್ರೋಟ್ ಮತ್ತು ಗಸಗಸೆಯನ್ನು ಬೆರೆಸಿ ಎರಡು ನಿಮಿಷ ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು
  •  ಬಾಣಲಿಯಲ್ಲಿ ಉಳಿದ ತುಪ್ಪಕ್ಕೆ ಮತ್ತೆ ಬೀಜವಿಲ್ಲದ ಖರ್ಜೂರವನ್ನು ಹಾಕಿ ಹುರಿಯಬೇಕು. ಕರ್ಜೂರ ಉಂಟಾಗಿರುವುದರಿಂದ ಬಾಣಲೆಯಲ್ಲಿ ಹುರಿದ ತಕ್ಷಣ ಮೃದುವಾಗುತ್ತದೆ ಮತ್ತು ಅಂಟಿಕೊಳ್ಳುತ್ತದೆ. 

 

ಈಗ ಉರಿದ ಎಲ್ಲ ಡ್ರೈಫ್ರೂಟ್ಸ್ ಅನ್ನು ಮಿಶ್ರಣ ಮಾಡಿಕೊಂಡು  ಈಗ ಉಂಡೆಯನ್ನು ತಯಾರಿಸಿ  ಡಬ್ಬಿಯಲ್ಲಿ ಗಾಳಿಯಾಡದಂತೆ ತುಂಬಿಡಿ. ಇದನ್ನು ನೀವು ಯಾವಾಗ ಬೇಕಾದರೂ ತಿನ್ನಬಹುದು. ಯಾವುದೇ ರೀತಿ ಕಷ್ಟವಿಲ್ಲದೆ ತುಂಬಾ ಹೊತ್ತು ಒಲೆಯ ಮುಂದೆ ನಿಲ್ಲದೆ ತಯಾರಿಸುವ ತುಂಬಿರುವ ಆಹಾರ. ಡ್ರೈಫ್ರೂಟ್ಸ್ ಗರ್ಭಿಣಿಯರಿಗೆ ಮತ್ತು ಗರ್ಭದಲ್ಲಿರುವ ಮಗುವಿಗೆ ತುಂಬಾ ಒಳ್ಳೆಯದು.

 

ರುಚಿಕರವಾದ ಡ್ರೈಫ್ರೂಟ್ಸ್ ಮಿಲ್ಕ್ ಮತ್ತು ದಿಡೀರನೆ ತಯಾರಿಸುವ ಡ್ರೈಫ್ರೂಟ್ಸ್ ಉಂಡೆ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿದರೆ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು.

#1stpregnancy

A

gallery
send-btn

Related Topics for you