22 Nov 2021 | 1 min Read
Medically reviewed by
Author | Articles
ಪ್ರತಿಯೊಬ್ಬ ತಾಯಿಗೆ ತನ್ನ ಮಗುವಿನೊಂದಿಗೆ ದೂರ ಪ್ರಯಾಣಿಸುವುದು ಎಂದರೆ ಬಹಳ ಕಷ್ಟಕರ ಸಂಗತಿ. ಹೋಗುವ ಸ್ಥಳದ ವಾತಾವರಣ, ಸ್ಥಳಕ್ಕೆ ಅನುಗುಣವಾಗಿ ಮಗುವಿನ ಬಟ್ಟೆ ,ಸಾಮಾಗ್ರಿ, ಆಹಾರ ಇದಕ್ಕೆ ಹೊಂದಾಣಿಕೆಯಾಗುವಂತೆ ಎಲ್ಲಾ ಸಿದ್ಧತೆಯನ್ನು ತಾಯಿ ಮತ್ತು ತಂದೆ ಮಾಡಿಕೊಳ್ಳಬೇಕು. ಬಹಳಷ್ಟು ಕಡೆ ತಂದೆ ಯಾವುದೇ ವಿಷಯದಲ್ಲಿ ತಲೆಕೆಡಿಸಿಕೊಳ್ಳದಿದ್ದರೂ ತಾಯಿ ಎಲ್ಲವನ್ನು ನಿಭಾಯಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬೇಬಿ ಚಕ್ರ ಮಗುವಿನ ತಾಯಿಂದಿರಿಗೆ ಕೆಲವೊಂದು ಟಿಪ್ಸ್ ನೀಡುತ್ತದೆ.
ಪ್ರಯಾಣಕ್ಕೆ ಮುಂದೆ ಅನುಸರಿಸಬೇಕಾದ ಕೆಲವು ಸಲಹೆಗಳಿವೆ. ಇದರಿಂದ ಪ್ರಯಾಣದ ವೇಳೆಯಲ್ಲಿ ನೀವು ಯಾವುದೇ ಸಮಸ್ಯೆ ಇದ್ದರೂ ಸುಲಭವಾಗಿ ನಿಭಾಯಿಸಬಹುದು.
1. ಪ್ರಯಾಣಿಸುವ ವಾಹನ ಸೌಕರ್ಯ
ಆಗಿರಬಹುದು ಅಥವಾ ಕಾರು ಆಗಿರಬಹದು. ಇದರ ಬಗ್ಗೆ ಮೊದಲೇ ನಿಮ್ಮ ಸಂಗಾತಿಯೊಡನೆ ಚರ್ಚಿಸಿ ಆಯ್ಕೆಯನ್ನು ಮಾಡಿಕೊಳ್ಳುವುದು ಒಳ್ಳೆಯದು. ಸರಿಯಾದ ವಾಹನ ಸೌಕರ್ಯ ಆಯ್ಕೆ ಮಾಡಿಕೊಂಡಲ್ಲಿ ಸಮಯ ನಿಗದಿಪಡಿಸಿಕೊಂಡಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾಗದು. ಬಸ್ಸಿನಲ್ಲಿ ಪ್ರಯಾಣಿಸುವುದಾದರೆ ಮೊದಲೇ ಹಾಸನದ ರಿಸರ್ವೇಷನ್ ಮಾಡಿಸಬೇಕು. ರಿಸರ್ವ್ ಮಾಡುವ ಮುನ್ನ, ಮಗುವಿಗೂ ಮತ್ತು ನಿಮಗೂ ಸರಿಹೊಂದುವ ಆಸನವನ್ನು ಕೇಳಿ ಪಡೆಯಿರಿ.
2. ಪ್ರಯಾಣಕ್ಕೆ ಬೇಕಾಗುವ ವಸ್ತುಗಳನ್ನು ಸಂಗತಿಗಳು ನೀವಿಬ್ಬರು ಸೇರಿ ವ್ಯವಸ್ಥೆ ಮಾಡಿಕೊಳ್ಳಿ.
ಪ್ರಯಾಣಕ್ಕೆ ಹೋಗುವಾಗ ಮಗುವಿಗೆ ಸಂಬಂಧಪಟ್ಟ ವಸ್ತುಗಳು ಮತ್ತು ನಿಮಗೆ ಮತ್ತು ನಿಮ್ಮ ಸಂಗಾತಿಗೆ ಬೇಕಾಗುವ ಸಾಮಾಗ್ರಿಗಳು ಇರುತ್ತವೆ. ಹಾಗಾಗಿ ಇಬ್ಬರು ಸೇರಿ ಮಾತನಾಡಿಕೊಂಡು ಅವರವರ ಸಾಮಗ್ರಿಗಳನ್ನು ಜೋಡಿಸಿಕೊಂಡರೆ ಉತ್ತಮ. ಮಗುವಿನ ಸಾಮಗ್ರಿಗಳಾದ ಬಟ್ಟೆ, ಡೈಪರ್, ವೈಪರ್ಸ್, ಬೇಬಿ ಪೌಡರ್, ತುರ್ತು ವೈದ್ಯಕೀಯ ಕಿಟ್ಟು, ಆಟಿಕೆ , ಹಾಲಿನ ಪುಡಿ ಮತ್ತು ಆಹಾರ ಇದಕ್ಕೆಂದೇ ಪ್ರತ್ಯೇಕವಾದ ಬ್ಯಾಗನ್ನು ಸಿದ್ಧಪಡಿಸಿಕೊಳ್ಳಿ. ಮಗುವಿಗೆ ಯಾವುದೇ ರೀತಿಯಲ್ಲಿ ಯಾವುದೇ ಸಾಮಾಗ್ರಿ ಕಡಿಮೆಯಾಗಬಾರದು.
3. ತುಂಬಾ ಸಾಮಗ್ರಿಗಳ ಬ್ಯಾಗ್ ಜೋಡಿಸಬೇಡಿ.
ಹೆಚ್ಚು ಬ್ಯಾಗ್ಗಳನ್ನು ಪ್ರಯಾಣದ ವೇಳೆ ತಗೊಂಡು ಹೋಗುವುದು ಬೇಡ. ಎರಡಕ್ಕಿಂತ ಹೆಚ್ಚು ಬ್ಯಾಗ್ ಗಳನ್ನು ಹೊರ ಬೇಕಾದರೆ ನಿಮಗೆ ಕಿರಿಕಿರಿಯಾಗುತ್ತದೆ. ಅನಗತ್ಯ ಸಾಮಾನುಗಳು, ಅನಗತ್ಯ ವಸ್ತುಗಳನ್ನು ತೆಗೆದುಕೊಳ್ಳಬೇಡಿ. ಇದರಿಂದ ನಿಮ್ಮ ಬ್ಯಾಗ್ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಮಗುವಿನ ಭಾರದ ಜೊತೆಗೆ ಇತರ ವಸ್ತುಗಳನ್ನು ಹೊರವುದು ನಿಮಗೆ ಹೆಚ್ಚು ಭಾರ ಇದ್ದಂತೆ ಮತ್ತು ಪ್ರಯಾಣವನ್ನು ಆನಂದಿಸಲು ಸಾಧ್ಯವಿಲ್ಲ.
4. ಬೇಬಿ ಕ್ಯಾರಿಯರ್ ಧರಿಸುವುದು
ದೂರ ಪ್ರಯಾಣದ ವೇಳೆ ಹೊರಗೆ ಓಡಾಡುವಾಗ , ಶಾಪಿಂಗ್ ಮಾಡುವಾಗ ಮಗುವನ್ನು ತೆಗೆದುಕೊಂಡು ಹೋಗುವುದು ಉತ್ತಮ. ಇದರಿಂದ ನಿಮಗೂ ಕೂಡ ಆರಾಮದಾಯಕವಾಗಿರುತ್ತದೆ. ಮಗುವನ್ನು ಸದಾ ಎತ್ತಿಕೊಂಡು ಓಡಾಡುವ ಅಗತ್ಯವಿರುವುದಿಲ್ಲ.
5. ಮಗುವಿನ ವಿಶ್ರಾಂತಿ
ದೂರ ಪ್ರಯಾಣದ ವೇಳೆ ಮಗುವನ್ನು ಆಟಿಕೆ ಕೊಟ್ಟು ಆಟ ಆಡಿಸುತ್ತಾ ಮಲಗಿಸುವುದು ಒಳ್ಳೆಯದು. ಮಗು ಮಲಗಿದಾಗ ನಿಮಗೂ ಮನಶಾಂತಿ ಸಿಗುತ್ತದೆ. ಪ್ರಯಾಣದ ಸಮಯದಲ್ಲಿ ಅನುಭವಿಸುವ ಎಲ್ಲಾ ಕಿರಿಕಿರಿ ಪ್ರಚೋದನೆಯು ಭಾವನಾತ್ಮಕ ಪರಿಣಾಮ ಬೀರಬಹುದು. ಹಾಗಾಗಿ ಮಗುವನ್ನು ಆದಷ್ಟು ವಿಶ್ರಾಂತಿ ಪಡೆಯುವಂತೆ ನೋಡಿಕೊಳ್ಳಿ.
6. ಮಗು ಅಳುವಿಕೆ
ಪ್ರಯಾಣದ ವೇಳೆ ಪರಿಸರ ಬದಲಾದಾಗ, ಜನರ ಗುಂಪು, ಕರ್ಕಶ ವಾಹನದ ಶಬ್ದ ಕೇಳಿದಾಗ ಮಗು ಸಹಜವಾಗಿ ಅಳುತ್ತದೆ. ಹಾಗಾಗಿ ಮಗುವನ್ನು ನಿಮ್ಮ ಬೆನ್ನು ಮೇಲೆ ಹಾಕಿಕೊಂಡು ಮಗುವಿನ ಬೆನ್ನನ್ನು ನಿಧಾನಕ್ಕೆ ನೇವರಿಸಿದರೆ ಮಗು ಅಳುವುದು ನಿಲ್ಲುತ್ತದೆ.
ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ, ಷೇರ್ ಮಾಡಿ, ನಿಮ್ಮ ಪ್ರತಿಕ್ರಿಯೆ ನೀಡಿ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.