• Home  /  
  • Learn  /  
  • ಜಾಗ್ರತೆಯಾಗಿರಿ: ನಿಮ್ಮ ಮಗು ನಿಮ್ಮನ್ನು ಅನುಕರಿಸುತ್ತದೆ
ಜಾಗ್ರತೆಯಾಗಿರಿ: ನಿಮ್ಮ ಮಗು ನಿಮ್ಮನ್ನು ಅನುಕರಿಸುತ್ತದೆ

ಜಾಗ್ರತೆಯಾಗಿರಿ: ನಿಮ್ಮ ಮಗು ನಿಮ್ಮನ್ನು ಅನುಕರಿಸುತ್ತದೆ

22 Nov 2021 | 1 min Read

Medically reviewed by

Author | Articles

ಮನೆಯಲ್ಲಿ ಆಡುವ ಮಕ್ಕಳು ಇದ್ದರೆ ಅಥವಾ ಮಕ್ಕಳಿದ್ದರೆ ತಂದೆ ತಾಯಿಯರು ಮತ್ತು ಹಿರಿಯರು ತುಂಬಾ ಜಾಗೃತೆಯನ್ನು ವಹಿಸಬೇಕಾಗುತ್ತದೆ. ನಮ್ಮ ಕೆಲವು ಹವ್ಯಾಸಗಳು ಅಥವಾ ಅಭ್ಯಾಸಗಳು ಮಕ್ಕಳಿಗೆ ಮುಳ್ಳಾಗಬಹುದು ಎಚ್ಚರದಿಂದಿರಿ. ಆಡುವ ಮಕ್ಕಳಿಗೆ ಪ್ರತಿಯೊಂದು ವಿಷಯದಲ್ಲೂ ಪ್ರಯೋಗ ಮಾಡಬೇಕೆನಿಸುತ್ತದೆ. ತುಂಬಾ ಉತ್ಸಾಹ ಕೌತುಕ ಅವರ ಮನಸ್ಸಲ್ಲಿ ಮನೆಮಾಡಿರುತ್ತದೆ. ಈ ದಿಸೆಯಲ್ಲಿ ಮಕ್ಕಳು ತಂದೆತಾಯಿಯರು ತಮ್ಮ ಆದರ್ಶಪ್ರಾಯರೆಂದು ನಂಬಿರುವಾಗ ಅವರ ಹವ್ಯಾಸಗಳು ಅವರ ಅಭ್ಯಾಸಗಳನ್ನು ಅನುಕರಿಸಲು ಶುರುಮಾಡುತ್ತದೆ.

ನಿಮ್ಮ ಅಭ್ಯಾಸ ಮತ್ತು ಅಭ್ಯಾಸ ಮಕ್ಕಳಿಗೆ ಹೇಗೆ ಮುಳುವಾಗಬಹುದು ಅಪಾಯಕಾರಿ ಎಂಬುದನ್ನು ಬೇಬಿ ಚಕ್ರ ನಿಮಗಾಗಿ ನೀಡುತ್ತಿದೆ

ಮೇಕಪ್ ಮಾಡುವ ಹವ್ಯಾಸ ನಿಮಗಿದೆಯೇ?

ಅಕಸ್ಮಾತ್ ಹೊರಗಡೆ ಕಾರ್ಯಕ್ರಮಕ್ಕೆ ಅಥವಾ ಎಲ್ಲಿಗಾದರೂ ಹೋಗಲು ನೀವು ಮೇಕಪ್ ಮಾಡಿಕೊಳ್ಳಲು ಹೋಗುತ್ತಿರುವ ಅಭ್ಯಾಸವಿದ್ದರೆ ಸ್ವಲ್ಪ ಇತ್ತ ಕಡೆ ಗಮನಹರಿಸಿ. ನ್ಯೂ ಬಳಸುವ ರಾಸಾಯನಿಕ ಕಾಸ್ಮೆಟಿಕ್ ಗಳು ಮಗುವಿನ ಕೈಗೆ ಸಿಗುವಂತಿದ್ದರೆ ನೀವು ಬಳಸಿ ರಾಸಾಯನಿಕಗಳನ್ನು ಮಕ್ಕಳು ಹಚ್ಚಿಕೊಳ್ಳುತ್ತಾರೆ. ಮಕ್ಕಳ ಚರ್ಮ ತುಂಬಾ ಸೂಕ್ಷ್ಮ ಮತ್ತು ಮೃದುವಾಗಿರುತ್ತದೆ. ಅವರ ಚರ್ಮ ರಾಸಾಯನಿಕಕ್ಕೆ ಯಾವುದೇ ಸಂವೇದನಶೀಲತೆ ಇರುವುದಿಲ್ಲ. ಹಾಗಾಗಿ ಬಹುಸುಲಭವಾಗಿ ಮಕ್ಕಳಿಗೆ ಅಲರ್ಜಿ, ಚರ್ಮದ ತುರಿಕೆ, ಇನ್ನಿತರೆ ಸಮಸ್ಯೆಗಳು ಎದುರಾಗಬಹುದು. ಅದೇ ರೀತಿಯು ಬಳಸುವ ಪೆನ್ಸಿಲ್ ಕರ್ಜುನ್ ಮಕ್ಕಳಿಗೆ ಹಾನಿಕಾರಕ. ನೀವು ಬಳಸಿದ ಪೆನ್ಸಿಲ್ ಕಾಜಲ್ ಅನ್ನು ಮಕ್ಕಳು ತಮ್ಮ ಕಣ್ಣಿಗೆ ಹಾಕುವಾಗ ಗಡಿಬಿಡಿಯಲ್ಲಿ ಯೂ ಮಕ್ಕಳು ಕಣ್ಣಿಗೆ ಚುಚ್ಚಿ ಕೊಳ್ಳುತ್ತಾರೆ. ಇದು ಕೇವಲ ಪೆನ್ಸಿಲ್ ಕಾರ್ಜುನ ವಿಷಯವಲ್ಲ ಪೆನ್ನು ಪೆನ್ಸಿಲು ಇಂಥ ವಸ್ತುಗಳು ಕೂಡ ಕಾಜಲ ಎಂದು ತಿಳಿದುಕೊಂಡು ಕಣ್ಣಿಗೆ ಚುಚ್ಚಿಕೊಳ್ಳುವುದು ಅಥವಾ ಇನ್ನೊಂದು ಮಗುವಿಗೆ ಹಚ್ಚುವ ಪ್ರಯತ್ನ ಪಡುವುದು ಮಾಡುತ್ತದೆ. ನ್ಯೂ ಬಳಸುವ ಯಾವುದೇ ಕಾಸ್ಮೆಟಿಕ್ ಸಾಮಗ್ರಿಗಳನ್ನು ಮಗುವಿನ ಕೈಗೆ ಸಿಗದಂತೆ ಮೇಲೆ ಎತ್ತಿಡಿ.

ಔಷಧಿಯನ್ನು ಕುಡಿಯುವುದು..

ಯಾವುದೇ ಸಮಸ್ಯೆಗೆ ನೀವು ಟಾನಿಕ್ ಅಥವಾ ಮಾತ್ರೆಯನ್ನು ಕುಡಿದು ಟೇಬಲ್ ಮೇಲೆ ಅಥವಾ ಮಗುವಿನ ಕೈಗೆ ಸಿಗುವಂತಿದ್ದರೆ ಮಗು ಬಂದು ಅಂತ ಔಷಧಿಯನ್ನು ಸೇವಿಸಿದಾಗ ಮುಂದಿನ ಅನಾಹುತ ಹೇಳುವುದೇ ಬೇಡ. ಅದೇ ರೀತಿ ಸೊಳ್ಳೆಗೆ ಬಳಸುವ ಕಾಯಿ ಲ್, ಸಲ್ಯೂಷನ್, ಕೀಟನಾಶಕಗಳು ಎಲ್ಲಿಯೂ ಮಗುಗೆ ಕೈಗೆಟಕುವಂತೆ ನೆಲದ ಮೇಲೆ ಇಡಬೇಡಿ.

ಧೂಮಪಾನ ಮಾಡುವುದು..

ಮಕ್ಕಳು ಸಣ್ಣವರು ಅವರಿಗೇನು ತಿಳಿಯುವುದಿಲ್ಲವೆಂದು ಸಂಗಾತಿಗಳಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರು ಸೇರಿ ಪಾರ್ಟಿ ಮಾಡುವ ಮನಸ್ಸಿನಿಂದ ಧೂಮಪಾನ ಅಥವಾ ಮಾಡಿದಾಗ ಮಕ್ಕಳು ಎದುರಿಗಿದ್ದರೆ ಮುಂದಿನ ಭವಿಷ್ಯವನ್ನು ನೀವು ಆಲೋಚಿಸಬೇಕಾಗುತ್ತದೆ. ಪ್ರಯೋಗಾತ್ಮಕ ಮನೋಭಾವ ಮತ್ತು ಕೌತುಕದ ಮನೋಭಾವವಿರುವ ಮಕ್ಕಳಿಗೆ ನೀವು ಮಾಡುವ ಪ್ರತಿ ವಿಷಯ ನೀವು ಸೇವಿಸುವ ಆಹಾರ ವಾಗಲಿ ಹೆಚ್ಚು ಆಶ್ಚರ್ಯ ಮತ್ತು ಕೌತುಕದಿಂದ ಕೂಡಿರುತ್ತದೆ. ನೀವು ತೆಗೆದಿ ತಹರ ಮತ್ತು ಔಷಧಿ ಅಥವಾ ಧೂಮಪಾನ ಮದ್ಯಪಾನವನ್ನು ರುಚಿಸಬೇಕೆಂದು ಬಯಸುತ್ತಾರೆ. ಹಾಗಾಗಿ ಯಾವುದೇ ಹವ್ಯಾಸಗಳನ್ನು ನಿಮ್ಮ ಮಕ್ಕಳೆದುರು ಮಾಡದಿರಿ.

ಮಕ್ಕಳ ಎದುರು ಶಿಷ್ಟಾಚಾರವಾಗಿರಿ..

ಮಕ್ಕಳ ಇದು ನೀವು ಸಂಗಾತಿಗಳಿಬ್ಬರು ಮಾತನಾಡುವಾಗ ಅಥವಾ ನಿಮ್ಮ ಹಿರಿಯರನ್ನು ಬಯ್ಯುವಾಗ ಕೆಲವೊಂದು ಗಡಿಯನ್ನು ಸೀಮಾರೇಖೆ ಹಾಕಿಕೊಳ್ಳಿ. ಮಕ್ಕಳನ್ನು ಎದುರು ಇತರರನ್ನು ಅವಾಚ್ಯ ಶಬ್ದದಿಂದ ನಿಂದಿಸದಿರಿ. ಇತರರನ್ನು ಅವಮಾನ ಮಾಡುವುದು, ಅಗೌರವದಿಂದ ಕಾಣುವುದು ಮಾಡದಿರಿ. ಏಕೆಂದರೆ ಬೆಳೆಯುವ ಮನಸ್ಸಿಗೆ ಹೋದ ಮನಸಿಗೆ ಎಲ್ಲವೂ ಸರಿ ಸಮವಾಗಿರುತ್ತದೆ. ಅಮುದ ಮನಸ್ಸಿನಲ್ಲಿ ಬೇದಬಾವ ಮೇಲು-ಕೀಳು ಎಂಬ ಭಾವನೆ ಇರುವುದಿಲ್ಲ. ಕೆಲವೊಂದು ಸಾಮಾಜಿಕ ಕಟ್ಟುಪಾಡುಗಳು ನಿಮ್ಮನ್ನು ಅಂತ ಕೆಲಸಕ್ಕೆ ನೋಡಬಹುದು. ಮಕ್ಕಳು ಎದುರಿಗಿದ್ದಾಗ ಇತರರೊಡನೆ ಸೌಜನ್ಯದಿಂದ ಸಂತೋಷದಿಂದ ಸಕರಾತ್ಮಕವಾಗಿ ಮಾತನಾಡಿರಿ ಇದರಿಂದ ಮಗು ಸಕರಾತ್ಮಕವಾಗಿ ಸಂತೋಷದಿಂದ ಬೆಳೆಯುತ್ತದೆ ಮುಗ್ದ ಮನಸ್ಸು ತುಂಬಾ ಶಾಂತವಾಗಿರುತ್ತದೆ.

ಅಶ್ಲೀಲ ಚಿತ್ರ ವೀಕ್ಷಣೆ

ಜಾಗ್ರತೆಯಿಂದಿರಿ ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಟಿವಿಯಲ್ಲಿ ಅಥವಾ ಇಂಟರ್ನೆಟ್ ಕನೆಕ್ಷನ್ ನಲ್ಲಿ ಬೇಕಾದಷ್ಟು ಅಶ್ಲೀಲ ವಿಡಯೋಗಳು ಫೋಟೋ ಗಳು ಸಿಗುತ್ತವೆ. ಮಕ್ಕಳಿದ್ದರೂ ಇವುಗಳನ್ನು ನೋಡಿದಾಗ ಮಕ್ಕಳ ಜಾಗೃತ ಮನಸ್ಸು ಮುಗ್ದ ಮನಸ್ಸು ವಿಚಿತ್ರವಾಗಿ ಬದಲಾಗುತ್ತದೆ. ಮಕ್ಕಳನ್ನು ಅಡ್ಡದಾರಿ ಹಿರಿಯರು ಇವೆಲ್ಲ ಪ್ರೇರೇಪಿಸುತ್ತದೆ.

ವಿದ್ಯುತ್ ಉಪಯೋಗಿಸುವಾಗ ಚಾರ್ಜರ್ ಬಳಸುವಾಗ ಜಾಗ್ರತೆಯಿಂದಿರಿ

ಇಸ್ತ್ರಿ ಮಾಡಲೆಂದು ಇಸ್ತ್ರಿ ಪೆಟ್ಟಿಗೆಯನ್ನು ಆನ್ ಮಾಡಿಕೊಂಡು ಅಥವಾ ಮೊಬೈಲ್ ಚಾರ್ಜರ್ ಅನ್ನು ಆನ್ ಮಾಡಿ ಅದನ್ನು ಮೊಬೈಲ್ ಮೊಬೈಲ್ ಮಾಡಿದರೆ ಮಾಡಿದರೆ ಮಕ್ಕಳಿಗೆ ಹಾಕುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅದು ಅಲ್ಲದೆ ಹಾಕಿಟ್ಟು ಗುಂಡಿಗೆ ಹೋಗಿ ಕೈಹಾಕಿ ಪರೀಕ್ಷೆಯು ಮಾಡುತ್ತಾರೆ. ಇಂಥ ಸಾಹಿತಿಗಳು ಇದ್ದಾಗ ಅದಕ್ಕೆ ಟೇಪ್ ನಿಂದ ಮುಚ್ಚಿಬಿಡಿ. ಮೊಬೈಲ್ ಚಾರ್ಜರ್, ಇಸ್ತ್ರಿ ಪೆಟ್ಟಿಗೆ, ಗ್ಯಾಸ್ ಸ್ಟವ್, ಬೆಂಕಿಪೆಟ್ಟಿಗೆ, ಇನ್ನಿತರ ಅಪಾಯಕಾರಿ ವಸ್ತುಗಳನ್ನು ಗಳಿಂದ ಮಕ್ಕಳನ್ನು ದೂರವಿಡಿ. ಮಕ್ಕಳ ಕೈಗೆ ಅಪಾಯಕಾರಿ ವಸ್ತುಗಳು ಸಿಗದಂತೆ ನೋಡಿಕೊಳ್ಳಿ.

ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ, ಷೇರ್ ಮಾಡಿ, ನಿಮ್ಮ ಪ್ರತಿಕ್ರಿಯೆ ನೀಡಿ.

#parentinggyaan #toddlerbehaviour

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.