1 Dec 2021 | 1 min Read
Medically reviewed by
Author | Articles
ಪ್ರತಿಯೊಂದು ದಂಪತಿಗಳಿಗೆ ತಮ್ಮ ಭವಿಷ್ಯದ ಕನಸು ಮಕ್ಕಳಾಗಿರುತ್ತಾರೆ. ಮಕ್ಕಳಿಲ್ಲದ ದಂಪತಿಗಳು ಹಲವಾರು ಆಸ್ಪತ್ರೆಯನ್ನು ಅಲೆದರೂ ಮಕ್ಕಳಾಗುವ ಭಾಗ್ಯವನ್ನು ಕಳೆದುಕೊಂಡಿರುತ್ತಾರೆ. ಈ ನಿಟ್ಟಿನಲ್ಲಿ ನಾವು ನಡೆಸಿದ ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ ಇರುವ ಅತಿ ಉತ್ತಮ ಮಕ್ಕಳ ಆಸ್ಪತ್ರೆಯ ಮಾಹಿತಿಯನ್ನು ಬೇಬಿ ಚಕ್ರ ನಿಮಗಾಗಿ ನೀಡುತ್ತಿದೆ.
1) ಕ್ಲೌಡ್ ನೈನ್ , ಜಯನಗರ
ಬಹಳಷ್ಟು ಪ್ರಖ್ಯಾತವಾಗಿರುವ ಕ್ಲೌಡ್ ನೈನ್ ಆಸ್ಪತ್ರೆ ತಾಯಿ ಮತ್ತು ಮಗುವಿನ ಸುರಕ್ಷತೆಯ ಮೊದಲ ಆದ್ಯತೆಯನ್ನು ನೀಡುತ್ತದೆ. ಮಕ್ಕಳಿಲ್ಲದ ದಂಪತಿಗಳಿಗೆ ಅಂಡಾಣುವಿನ ಸಂಗ್ರಹಣೆಯ ಪ್ರಯೋಗಾಲಯದಿಂದ ಹಿಡಿದು, ಐವಿಎಫ್ ತಂತ್ರಜ್ಞಾನದ ಬಳಕೆಯನ್ನು ಹೊಂದಿದೆ. ನವಜಾತ ಶಿಶುವಿನ ತೀವ್ರ ನಿಗಾ ಘಟಕದಲ್ಲಿ ಕರಣವನ್ನು ಒಳಗೊಂಡಂತೆ, ನವಜಾತ ಶಿಶುವಿನ ಆರೈಕೆ, ಸಂತಾನೋತ್ಪತ್ತಿ, ಮಕ್ಕಳ ಆರೋಗ್ಯ ತಪಾಸಣೆ, ಮಹಿಳೆಯರಿಗಾಗಿ ಗರ್ಭಿಣಿಯರ ತಪಾಸಣೆ, ಸ್ತ್ರೀರೋಗತಜ್ಞ ವೈದ್ಯರು, ರೇಡಿಯಾಲಜಿ, ಫಿಜಿಯೋಥೆರಪಿ, ಪೋಷಕಾಂಶ ಮತ್ತು ಡಯಟಿಂಗ್ ಮಾಹಿತಿ, ಸ್ಟೆಮ್-ಸೆಲ್ ಬ್ಯಾಂಕಿಂಗ್ ವ್ಯವಸ್ಥೆ, ಸ್ತನ್ಯಪಾನದ ಬೆಂಬಲ, ಇನ್ನಿತರ ಆಧುನಿಕ ವ್ಯವಸ್ಥೆಯನ್ನು ಹೊಂದಿರುತ್ತದೆ. ಹೋಂ ಸರ್ವಿಸ್ ವಿಭಾಗದಲ್ಲಿ ಮನೆಯಿಂದಲೇ ವಿಡಿಯೋ ಕನ್ಸಲ್ಟೇಶನ್, ಆನ್ಲೈನಿನಲ್ಲಿ ನ್ಯೂಟ್ರಿಷನ್ ಮಾಹಿತಿ, ಹೋಂ ವ್ಯಾಕ್ಸಿನೇಷನ್, ಅಪ್ತಸಮಲೋಚನೆ, ಸ್ಪೀಚ್ ತೆರಪಿ, ಲ್ಯಾಪ್ ಟೆಸ್ಟ್, ದಾದಿಯರ ಬೆಂಬಲ ಸೌಲಭ್ಯವನ್ನು ಹೊಂದಿದೆ. ಹೆಚ್ಚಿನ ಮಾಹಿತಿಗೆ ಕೆಳಗೆ ನೀಡಲಾದ ಲಿಂಕ್ ಅನ್ನು ಉಪಯೋಗಿಸಿ https://www.google.com/search .
2. ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಸರ್ಜಾಪುರ ರಸ್ತೆ
ಕೊಲಂಬಿಯಾ ಏಷ್ಯಾ ಒಂದು ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯಾಗಿದ್ದು, 2005ರಲ್ಲಿ ತನ್ನ ಮೊದಲ ಆಸ್ಪತ್ರೆಯನ್ನು ಹೊಂದಿದ್ದು, ವಿವಿಧ ನಗರಗಳಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಮುರಿತ ವೈದ್ಯಕೀಯ ಸಿಬ್ಬಂದಿ, ದಾದಿಯರು ಮತ್ತು ವೈದ್ಯರೊಂದಿಗೆ ಮಕ್ಕಳ ಆರೈಕೆಯನ್ನು ನುರಿತ ರೀತಿಯಲ್ಲಿ ಮಾಡುತ್ತಿದೆ.
3. ಡಾಕ್ಟರ್ ಮಾಲತಿ ಮಣಿಪಾಲ್ ಆಸ್ಪತ್ರೆ , ಜಯನಗರ
ಡಾಕ್ಟರ್ ಮಾರುತಿ ಮಣಿಪಾಲ್ ಆಸ್ಪತ್ರೆಯ ತಾಯಿ ಮತ್ತು ಮಗುವಿನ ಆರೋಗ್ಯದ ಸಮಸ್ಯೆಯ ಬಗ್ಗೆ ಹೆಚ್ಚು ಕೇಂದ್ರೀಕರಿಸುತ್ತದೆ. ಉನ್ನತ ಪರಿಣತಿ ಹೊಂದಿರುವ ಮಕ್ಕಳ ವೈದ್ಯರು ಮತ್ತು ನವಜಾತ ಶಿಶುವಿನ ವೈದ್ಯರು ಯಾವುದೇ ರೀತಿಯ ಕ್ಲಿಷ್ಟಕರ ಸನ್ನಿವೇಶವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಕ್ಕಳ ಜೊತೆಯಲ್ಲಿ ಮಕ್ಕಳ ವೈದ್ಯರು ತುಂಬಾ ಸ್ನೇಹಭಾವದಿಂದ ವರ್ತಿಸುತ್ತಾರೆ. ಮಕ್ಕಳನ್ನು ಚಿಕಿತ್ಸೆಗೆ ಒಳಪಡಬೇಕಾದ ರೆ ಮಕ್ಕಳ ವೈದ್ಯರು ಸ್ನೇಹದಿಂದ ನಗುಮೊಗದಿಂದ ಇದ್ದರೆ ಮಾತ್ರ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಒದಗಿಸಲು ಸಾಧ್ಯ ಎಂಬ ಧ್ಯೇಯವನ್ನು ಆಸ್ಪತ್ರೆ ನಂಬಿದೆ.
4. ರೈನ್ಬೋ ಚಿಲ್ಡ್ರನ್ಸ್ ಹಾಸ್ಪಿಟಲ್, ಮಾರತಹಳ್ಳಿ
5. ಮದರ್ ಹುಡ್ ಆಸ್ಪತ್ರೆ, ಇಂದ್ರಾನಗರ
ಆಧುನಿಕ ಸುಸಜ್ಜಿತ ಆಸ್ಪತ್ರೆ ಮದರ್ ಹುಡ್ ಆಸ್ಪತ್ರೆ. ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಂತೆ ಸುಸಜ್ಜಿತ ಲ್ಯಾಬೋರೇಟರಿ, ಶಸ್ತ್ರಚಿಕಿತ್ಸೆ ಕೊಠಡಿ, ತೀವ್ರ ನಿಗಾ ಘಟಕ, ಪ್ರಸೂತಿ ವೈದ್ಯಕೀಯ ನಿರ್ವಹಣೆ, ಮಕ್ಕಳ ಆರೈಕೆ ದೇಶದ ಅತ್ಯುನ್ನತ ವೈದ್ಯರು ಮತ್ತು ಚಿಕಿತ್ಸಾ ವೈದ್ಯರನ್ನು ಒಳಗೊಂಡ ವಿಭಾಗ ಮತ್ತು ತಾಯಿಯ ನಿರ್ವಹಣೆಯಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ಹೆಚ್ಚಿನ ಮಾಹಿತಿಗೆ ಆಯಾ ವೆಬ್ಸೈಟ್ ಅಡ್ರೆಸ್ ಮತ್ತು ಲೊಕೇಶನ್ ಅನ್ನು ಉಪಯೋಗಿಸಿ.
A