ಬೆಂಗಳೂರಿನ ಟಾಪ್ 7 ಕ್ರೀಡಾ ಶಾಲೆ

ಬೆಂಗಳೂರಿನ ಟಾಪ್ 7 ಕ್ರೀಡಾ ಶಾಲೆ

9 Dec 2021 | 1 min Read

Medically reviewed by

Author | Articles

ಬಹಳಷ್ಟು ಪೋಷಕರಿಗೆ ತಮ್ಮ ಮಗು ವಿದ್ಯಾಭ್ಯಾಸ ಅಲ್ಲದೆ ಕ್ರೀಡೆಯಲ್ಲೂ ಮುಂದುವರಿಯಬೇಕು ಎಂಬ ಆಸಕ್ತಿ ಇರುತ್ತದೆ. ಇತ್ತೀಚಿಗೆ ಕ್ರೀಡೆಗೆ ಬಹಳ ಪ್ರಾಶಸ್ತ್ಯವಿದೆ. ಇದನ್ನು ಅರಿತ ಬಹಳಷ್ಟು ಶಾಲೆಗಳಲ್ಲಿ ಶೈಕ್ಷಣಿಕ ಕಲಿಕೆಯ ಭಾಗವಾಗಿ ಕ್ರೀಡೆಯನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪಠ್ಯಕ್ರಮವನ್ನು ರೂಪಿಸಿಕೊಂಡಿದೆ. ಬೆಂಗಳೂರಿನಲ್ಲಿರುವ ಟಾಪ್ 7 ಕ್ರೀಡಾ ಸೌಲಭ್ಯ ಇರುವ ಶಾಲೆಯ ಮಾಹಿತಿಯನ್ನು ಬೇಬಿ ಚಕ್ರ ನಿಮಗಾಗಿ ನೀಡುತ್ತಿದೆ.

1. ಇನ್ವೆಂಚರ್ ಅಕಾಡೆಮಿ.

  • ಇನ್ವೆಂಜರ್ ಅಕಾಡೆಮಿ ಯ ದೃಷ್ಟಿಕೋನ ಕ್ರೀಡೆಯ ಬಗ್ಗೆ ಹೇಳುತ್ತದೆ. ಜೀವನಕ್ಕಾಗಿ ದೃಢಕಾಯರಾಗಿ ರಿ ಎಂಬ ಮಂತ್ರದೊಂದಿಗೆ ಈ ಶಾಲೆಯು ಏಕೀಕೃತ ಭಾಗವಾಗಿ ವಿದ್ಯಾರ್ಥಿಗಳ ಜೀವನವನ್ನು ರೂಪಿಸುತ್ತದೆ. ಇಲ್ಲಿ ಎಲ್ಲಾ ವಯೋಮಾನದ ಮಕ್ಕಳಿಗಾಗಿ ಕ್ರೀಡೆಯನ್ನು ಅಳವಡಿಸಲಾಗಿದೆ.
  • ಕಿಂಡರ್ ಗಾರ್ಡನ್ ನಾಲ್ಕನೇ ತರಗತಿವರೆಗೆ- ಎಲ್ಲ ರೀತಿಯ ಕ್ರೀಡೆಯ ಮೂಲ ಕೌಶಲ್ಯತೆ ಮತ್ತು ನಿಯಮಗಳನ್ನು ವೈಯುಕ್ತಿಕ ಮತ್ತು ತಂಡದಲ್ಲಿ ಕಲಿಸಲಾಗುವುದು.
  • ಮಧ್ಯಮ ಶಾಲೆ- ಈ ಹಂತದಲ್ಲಿ ಕ್ರೀಡೆಯನ್ನು ಹೇಗೆ ಆಟ ಆಡಬೇಕು ಎಂದು ಕಲಿಸಲಾಗುತ್ತದೆ
  • ಪ್ರೌಢಶಾಲೆ- ಶೈಕ್ಷಣಿಕ ಕಲಿಕೆಯ ಜೊತೆಗೆ ಎರಡು ವಿಶೇಷ ತರಬೇತಿಯನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು.
  • ಅಥ್ಲೆಟಿಕ್ಸ್, ಬಾಸ್ಕೆಟ್ ಬಾಲ್, ಫ್ರಿಸ್ಬಿ, ಕ್ರಿಕೆಟ್, ಟೇಬಲ್ ಟೆನ್ನಿಸ್, ಸ್ವಿಮ್ಮಿಂಗ್, ಟೆನ್ನಿಸ್ ಮತ್ತು ಫುಟ್ಬಾಲ್ ಇವೇ ಮುಂತಾದ ಕ್ರೀಡೆಗಳನ್ನು ವಿದ್ಯಾರ್ಥಿಗಳು ಆಯ್ಕೆಮಾಡಿಕೊಳ್ಳಬಹುದು. ಈ ಶಾಲೆಯು ವೈಟ್ಫೀಲ್ಡ್ ಸರ್ಜಾಪುರ ರಸ್ತೆಯಲ್ಲಿ ಅಸ್ತಿತ್ವದಲ್ಲಿದೆ.

 

2. ಸ್ಟೋನ್ ಹಿಲ್ ಇಂಟರ್ನ್ಯಾಷನಲ್ ಸ್ಕೂಲ್

ನೀವು ಯಾವುದಾದರೂ ಒಂದು ಕ್ರೀಡಾ ಶಾಲೆಯನ್ನು ಹುಡುಕುತ್ತಿದ್ದರೆ, ಅದರಲ್ಲಿ ಉತ್ತಮವಾದ ಮತ್ತೊಂದು ಶಾಲೆ ಸ್ಟೋನ್ ಹಿಲ್ ಇಂಟರ್ನ್ಯಾಷನಲ್ ಸ್ಕೂಲ್. ವಿದ್ಯಾರ್ಥಿಗಳ ವಿಶೇಷವಾದ ಬೆಳವಣಿಗೆ ಮತ್ತು ರೂಪುರೇಷೆಯನ್ನು ಕ್ರೀಡಾ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಧುನಿಕ ಸಲಕರಣೆಯನ್ನು ಕ್ರೀಡಾ ವಿಭಾಗದಲ್ಲಿ ಒಳಗೊಂಡಿದೆ. ದೈಹಿಕ ಚಟುವಟಿಕೆಯ. ನಿರೂಪಿಸಿದ ಪಠ್ಯಕ್ರಮ ವೈಯುಕ್ತಿಕ ಪ್ರಗತಿಯನ್ನು ಕಾಯ್ದಿರಿಸಿಕೊಂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ವಿಭಾಗದಲ್ಲಿ ಗುರುತಿಸಿಕೊಂಡ ಬೆಂಗಳೂರಿನ ಶಾಲೆಯೆಂದರೆ ಸ್ಟೋನ್ ಹಿಲ್ ಇಂಟರ್ನ್ಯಾಷನಲ್ ಸ್ಕೂಲ್. 34 ಎಕರೆ ವ್ಯಾಪ್ತಿಯ ಪ್ರದೇಶದಲ್ಲಿ ವಿವಿಧ ಸೌಲಭ್ಯಗಳಿಗೆ ಶಾಲೆಯನ್ನು ಕಟ್ಟಲಾಗಿದೆ. ಸಿಮ್ಮಿಂಗ್, ಕ್ರಿಕೆಟ್ ಮೈದಾನ, ಫುಟ್ಬಾಲ್, ಟೆನ್ನಿಸ್, ಮತ್ತು ಒಳಾಂಗಣ ಕ್ರೀಡೆಗಳು ಇಲ್ಲಿ ಲಭ್ಯವಿದೆ.

ದೂರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಬೋರ್ಡಿಂಗ್ ಫೇಸಿಲಿಟೀಸ್ ಇನ್ ಕೂಡ ಇದೆ. ಹೆಚ್ಚಿನಬಾ ಮಾಹಿತಿಗೆ ಸಂಪರ್ಕಿಸಿ

 

3. ಸ್ಪೋರ್ಟ್ಸ್ ಸ್ಕೂಲ್

ಕನಕಪುರ ರಸ್ತೆಯಲ್ಲಿರುವ ಸ್ಪೋರ್ಟ್ಸ್ ಶಾಲೆಯು ಕರ್ನಾಟಕದಲ್ಲಿ ಉತ್ತಮವಾದ ಕ್ರೀಡಾ ಶಾಲೆಯಾಗಿದೆ. ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯ ಕ್ರೀಡಾ ಕಲಿಕೆ ಇಲ್ಲಿ ಲಭ್ಯವಿದೆ. ನುರಿತ ಕ್ರೀಡಾ ಕೋಚರ್ ಗಳಿಂದ, ಆಹಾರ ತಜ್ಞರಿಂದ ಮತ್ತು ಮನೋಜ್ ವೈದ್ಯರಿಂದ ಸೂಕ್ತವಾಗಿ ನಿರ್ದೇಶನ ಮತ್ತು ಆಪ್ತ ಸಮಾಲೋಚನೆಯನ್ನು ನಡೆಸಲಾಗುವುದು. ಇಲ್ಲಿಯ ಕ್ರೀಡೆಯ ವಿಭಾಗವನ್ನು ನಾಲ್ಕು ರೀತಿಯಲ್ಲಿ ಮಾಡಲಾಗಿದೆ

  • ಆರಂಭಿಕ ಹಂತ- ಆರರಿಂದ ಹತ್ತು ವಯಸ್ಸಿನ ಮಕ್ಕಳಿಗೆ.
  • ಇಂಟರ್ಮೀಡಿಯೆಟ್ ಹಂತ- ಹತ್ತರಿಂದ ಹನ್ನೆರಡು ವಯಸ್ಸಿನ ಮಕ್ಕಳಿಗೆ
  • ಅಡ್ವಾನ್ಸ್ ಲೆವೆಲ್- 12 ರಿಂದ ಮೇಲ್ಪಟ್ಟ ಮಕ್ಕಳು
  • ಪ್ರಫೆಷನಲ್ ಲೆವೆಲ್- ಪೂರ್ಣಾವಧಿಯ ಕ್ರೀಡಾ ಅಥ್ಲೆಟಿಕ್

ದೂರದಿಂದ ಬಂದು ವ್ಯಾಸಂಗ ಮಾಡುವ ಮಕ್ಕಳಿಗೆ ಹಾಸ್ಟೆಲ್ ಫೆಸಿಲಿಟಿ ಯೊಂದಿಗೆ ಸಿಬಿಎಸ್ಸಿ ಶೈಕ್ಷಣಿಕ ವ್ಯವಸ್ಥೆಯನ್ನು ಒಂದರಿಂದ ಹತ್ತನೇ ತರಗತಿ, ಪಿಯುಸಿ ಮತ್ತು ಡಿಗ್ರಿ ತರಗತಿಯವರೆಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

4. ಗ್ರೀನ್ವೂಡ್ ಹೈ ಇಂಟರ್ನ್ಯಾಷನಲ್ ಸ್ಕೂಲ್

ಗ್ರೀನ್ವೂಡ್ ಹೈ ಇಂಟರ್ನ್ಯಾಷನಲ್ ಸ್ಕೂಲ್ ಸರ್ಜಾಪುರದಲ್ಲಿದೆ. ಅಂತರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಪಠ್ಯ ಚಟುವಟಿಕೆ ಮತ್ತು ಕ್ರೀಡೆಯ ಚಟುವಟಿಕೆ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಇಲ್ಲಿ ನೀಡಲಾಗುವುದು. ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ಬೆಳವಣಿಗೆಯನ್ನು ನೀಡಲು ಉತ್ತಮ ವೇದಿಕೆಯನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಈಜುಕೊಳ, ಹಾಕಿಗೆ ಹುಲ್ಲಿನ ಮೈದಾನ, ಫುಟ್ಬಾಲ್ ಮೈದಾನ, ಬಾಸ್ಕೆಟ್ ಬಾಲ್ ಕೋರ್ಟ್, ಚೆಸ್ ಕೊಠಡಿ, ಟೆನ್ನಿಸ್ ಕೋರ್ಟ್ ಮತ್ತು ಪರಿಣತ ಸಿಬ್ಬಂದಿ ವರ್ಗ ಕೋಚರ್ ಗಳನ್ನು ಆಯ್ಕೆ ಮಾಡಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

5. ಜೈನ್ ಹೆರಿಟೇಜ್ ಸ್ಕೂಲ್

ಟಾಪ್ ಸಿಬಿಎಸ್ಸಿ ಶಾಲೆಗಳಲ್ಲಿ ಜೈನ್ ಹೆರಿಟೇಜ್ ಶಾಲೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ವಿವಿಧ ರೀತಿಯ ಕ್ರೀಡೆಯ ವಿನ್ಯಾಸಗಳನ್ನು. 8 ಗೆರೆಯ ಈಜುಕೊಳ, ಬಾಸ್ಕೆಟ್ ಬಾಲ್ ಮೈದಾನ, ಟೆನ್ನಿಸ್ ಮೈದಾನ, ಕ್ರಿಕೆಟ್ಗೆ ಉತ್ತಮ ಪ್ರದೇಶ, ಬಿಲಿಯರ್ಡ್ಸ್ ಮತ್ತು ಸ್ನೂಕರ್, ಫಿಟ್ನೆಸ್ ಸೆಂಟರ್ ಒಳಗೊಂಡಂತೆ ವಿವಿಧ ಸೌಲಭ್ಯದ ಆವರಣ ಒಳಗೊಂಡಿದೆ. ಇಲ್ಲಿ 6 ರಿಂದ 14 ವರದ ವಯಸ್ಸಿನ ಮಕ್ಕಳಿಗೆ
, ಪ್ರೊಫೆಷನಲ್ ಪ್ರೀತಿಯ ತರಬೇತಿಯನ್ನು ನೀಡಲಾಗುವುದು. ಈಜುವಿಕೆ ಧ್ಯಾನ ಮತ್ತು ಯೋಗ ಶೈಕ್ಷಣಿಕ ಪಠ್ಯದ ಒಂದು ಅಂಗವಾಗಿದೆ. ಇಲ್ಲಿಯ ಕ್ರೀಡೆಯ ಪಠ್ಯಕ್ರಮವನ್ನು ವಿವಿಧ ಹಂತದಲ್ಲಿ ರೂಪಿಸಲಾಗಿದೆ.

ಪ್ರೀ ಫಂಡಮೆಂಟಲ್- ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಮಕ್ಕಳು ಆಟದಲ್ಲಿ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂತೋಷದಿಂದ ಭಾಗವಹಿಸುವ ಉದ್ದೇಶದಿಂದ ಪಠ್ಯಕ್ರಮ ಯೋಜಿಸಲಾಗಿದೆ . ಇದರಲ್ಲಿ ಮುಖ್ಯವಾಗಿ ಒಂದು ಭಾಗವಾಗಿದೆ.

ಬೇಸಿಕ್ ಫಂಡಮೆಂಟಲ್- ತರಬೇತಿ ಪಡೆದ ತರಬೇತುದಾರರು ಕ್ರೀಡೆಯ ತರಬೇತಿಯನ್ನು ವಿವಿಧ ಕ್ರೀಡೆಗಳು ನೀಡುತ್ತಾರೆ. ಕ್ರಿಕೆಟ್ ಫುಟ್ಬಾಲ್ ಟೆನಿಸ್ ಮತ್ತು ಬಾಸ್ಕೆಟ್ಬಲ್ ಗೆ ಸಂಬಂಧಿಸಿದಂತೆ ಮೂಲ ತಂತ್ರಗಳನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ.

ಅಡ್ವಾನ್ಸ್ ಫಂಡಮೆಂಟಲ್- ವಿವಿಧ ಕ್ರೀಡೆಗಳಿಗೆ ನುರಿತ ತಜ್ಞರಿಂದ ಕ್ರೀಡೆಯನ್ನು ಕಲಿಹಿಸಲಾಗುವುದು. ವಿದ್ಯಾರ್ಥಿಗಳು ಪ್ರತಿಯೊಂದು ವಿಭಾಗಕ್ಕೆ ಪ್ರತ್ಯೇಕ ವನ್ನು ನೀಡಲಾಗಿದೆ ಒಂದೊಂದು ಹಂತವಾಗಿ ಪ್ರತಿಕ್ರಿಯೆಯನ್ನು ಹಾಡಲು ಅವರಿಗೆ ಹೇಳಲಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

6. ಟಿಮೀಸ್

ಟಿವಿಎಸ್ ಶಾಲೆಯು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಥಾಪಿತವಾಗಿದೆ. ಮಕ್ಕಳಿಗೆ ಹೆಚ್ಚುವರಿ ಪಠ್ಯಕ್ರಮದ ಚಟುವಟಿಕೆಗಾಗಿ ಕ್ರೀಡೆಯನ್ನು ಒಳಗೊಂಡಿದೆ. ಪ್ರತಿಯೊಂದು ಆಟದಲ್ಲಿರುವ ತಂತ್ರವಲ್ಲ ವಿದ್ಯಾರ್ಥಿಗಳು ವಿವಿಧ ಆಯಾಮದಲ್ಲಿ ಪಠ್ಯಕ್ರಮ ವಾಗಿಯೂ ಪ್ರಾಯೋಗಿಕವಾಗಿಯೂ ಕಲಿಯುತ್ತಾರೆ. ಬಾಸ್ಕೆಟ್ ಬಾಲ್ ಅಥ್ಲೆಟಿಕ್ಸ್ ಸ್ವಿಮ್ಮಿಂಗ್ ಸಾಸರ್ಗಳನ್ನು ಹೆಚ್ಚುವರಿ ತರಬೇಕಾಗಿ ಇಲ್ಲ ನೀಡಲಾಗುವುದು.

ಈಜುಕೊಳ, ಟೆನ್ನಿಸ್ ಕೋರ್ಟ್, ಬೇಬಿ ಪೂಲ್, ಬಾಸ್ಕೆಟ್ ಬಾಲ್ ಕೋರ್ಟ್, ಅಥ್ಲೇಟಿಕ್ ಗ್ರೌಂಡ್, ಒಳಾಂಗಣ ಆಟಗಳು, ಬ್ಯಾಡ್ಮಿಂಟನ್ ಕೋರ್ಟ್, ಮತ್ತು ವಿವಿಧ ರೀತಿಯ ಜಿಮ್ ಕ್ರೀಡಾ ಕೇಂದ್ರವನ್ನು ಒಳಗೊಂಡಿದೆ. ಇಲ್ಲಿ ಗಂಡುಮಕ್ಕಳು ಹೆಣ್ಣುಮಕ್ಕಳು ಇಬ್ಬರಿಗೂ ಶಾಲೆಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಸಿಬಿಎಸ್ಸಿ ಶಿಕ್ಷಣಿಕ ಪಠ್ಯಕ್ರಮವನ್ನು ವಿಶಾಲಿ ಒಳಗೊಂಡಿದೆ. ಸಂಗೀತದ ಜೊತೆಗೆ ಕ್ರೀಡೆ ಮತ್ತು ಕಲಾಸಕ್ತಿಯನ್ನು ವಿವಿಧ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

7. ಆಕಾಶ್ ಇಂಟರ್ನ್ಯಾಷನಲ್ ಸ್ಕೂಲ್

ಉತ್ತರ ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಆಕಾಶ ಇಟರ್ನ್ಯಾಷನಲ್ ಸ್ಕೂಲ್ ಕೋ
ಎಜುಕೇಶನ್ ಹೊಂದಿದೆ. ವಿವಿಧ ರೀತಿಯ ಕ್ರೀಡಾ ಸೌಲಭ್ಯಗಳೊಂದಿಗೆ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಟ್ಟು ಹೆಣ್ಣುಮಕ್ಕಳು ಗಂಡುಮಕ್ಕಳು ಇಬ್ಬರಿಗೂ ಶೈಕ್ಷಣಿಕ ವ್ಯವಸ್ಥೆಯನ್ನು ಕಲ್ಪಿಸಿದೆ. ಪರಿಣತ ಹೊಂದಿರುವ ಕೋಶಗಳು ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದುರಿಸಲು ತರಬೇತಿ ನೀಡುತ್ತಿದ್ದಾರೆ. ವಿವಿಧ ಸೌಲಭ್ಯಗಳನ್ನು ಹೊಂದಿರುವ ಜಿಮ್ ಮತ್ತು ಮಾನಸಿಕ ಸ್ಥಿತಿ ಮತ್ತು ದೈಹಿಕ ದೃಢತೆಯನ್ನು ಕಾಪಾಡಲು ಮೂಲ ಧ್ಯೇಯವನ್ನು ಹೊಂದಿದೆ. ಕ್ರಿಕೆಟ್, ಫುಟ್ಬಾಲ್, ಸ್ವಿಮ್ಮಿಂಗ್, ಮಾರ್ಷಿಯಲ್ ಆರ್ಟ್ಸ್, ಬಾಸ್ಕೆಟ್ ಬಾಲ್, ವಾಲಿಬಾಲ್, ಸ್ಕೇಟಿಂಗ್, ಯೋಗ ಮತ್ತು ಧ್ಯಾನ, ಹಾಕಿ ಮತ್ತು ಬಿಲಿಯಡ್ಸ್ ಹಲವು ಕ್ರೀಡೆಗಳು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಮಾಡಿ,ಶೇರ್ ಮಾಡಿ

#boostingchilddevelopment #toddleractivities

A

gallery
send-btn