13 Dec 2021 | 1 min Read
Medically reviewed by
Author | Articles
ಡಾಕ್ಟರ್ ಪಾಣಿ ಮಾದರಿ
ಎಂಬಿಬಿಎಸ್, ಎಂಎಸ್- ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ.
ಜೀ ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು, ಜಯನಗರ ವ್ಯಾಪ್ತಿಯಲ್ಲಿ ಇವರು ಸಿಗುತ್ತಾರೆ. ಇವರು ತಮ್ಮ ಸ್ತ್ರೀ ರೋಗ ಮತ್ತು ಪ್ರಸೂತಿ ಪರಿಣಿತಿಯನ್ನು ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಮಾಡಿದ್ದಾರೆ. ತಮ್ಮ ಮುಂದಿನ ವ್ಯಾಸಂಗವನ್ನು ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ನ್ಯೂ ಡೆಲ್ಲಿ ಇಲ್ಲಿ ತೀವ್ರನಿಗಾ ಇರುವ ಗರ್ಭಧಾರಣೆಯಲ್ಲಿ ಪ್ರಸ್ತುತಿ ಮಾಡುವ ಬಗ್ಗೆ ವ್ಯಾಸಂಗವನ್ನು ಮಾಡಿದ್ದಾರೆ. ಸಂತಾನೋತ್ಪತ್ತಿಯ ಬಗ್ಗೆ ವಿಶೇಷ ಪರಿಣತಿಯನ್ನು ಹೊಂದಿದ್ದು ಜನನಕ್ಕೆ ಸಂಬಂಧಪಟ್ಟ ಔಷದೋಪಚಾರವನ್ನು ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ ಸೈನ್ಸ್ ಇಲ್ಲಿ ಕಲಿತಿರುತ್ತಾರೆ. ಆನ್ಲೈನ್ ನಲ್ಲಿ 95 % ಜನಮನ್ನಣೆಯನ್ನು ಪಡೆದಿರುತ್ತಾರೆ.
ಡಾಕ್ಟರ್ ರಾಧಾ ಎಸ್ ರಾವ್
ತಕ್ಕದಾದ ಎಸ್ ರಾವ್ ರವರು ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಬೆಂಗಳೂರು ಇಲ್ಲಿ ತಮ್ಮ ಎಂಬಿಬಿಎಸ್ ಶಿಕ್ಷಣವನ್ನು ಪಡೆದಿರುತ್ತಾರೆ. ಉನ್ನತ ವಿದ್ಯಾಭ್ಯಾಸವನ್ನು ವಾಣಿವಿಲಾಸ್ ಹಾಸ್ಪಿಟಲ್ ಮತ್ತು ಬೌರಿಂಗ್ ಮತ್ತು ಕನಸನ್ನು ಆಸ್ಪತ್ರೆಯಲ್ಲಿ ಮಾಡಿರುತ್ತಾರೆ. ಎಂ ಎಸ್ ಅನ್ನು ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ವಿಭಾಗದಲ್ಲಿ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಇಲ್ಲಿಂದ ಪಡೆದಿರುತ್ತಾರೆ. ಯುಕೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುವಾಗ ಗೈನಕಾಲಜಿ ಶಸ್ತ್ರಚಿಕಿತ್ಸೆ, ಗೈನೆ ಒಂಕಾಲಜಿ, ಇಂಟರ್ನಲ್ ಮೆಡಿಸಿನ್ ಯುರೋ ಗೈನಕಾಲಜಿ ಈ ವಿಭಾಗದಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದಿರುತ್ತಾರೆ. ಸ್ತ್ರೀಯರ ಮಾಸಿಕ ಋತುಸ್ರಾವದಲ್ಲಿ ಮಾಸಿಕ ಕಪ್ ಬಳಸುವ ಬಗ್ಗೆ ಮತ್ತು ಮರು ಉಪಯೋಗಿಸುವ ಪ್ರಾಣಿಗಳ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಪಿಸಿಒಡಿ, ಮೆನೊಪಾಸ್ ಆರೈಕೆ , ಯುರೋ ಗೈನಕಾಲಜಿ, ಕ್ಯಾನ್ಸರ್ ಮತ್ತು ಬ್ರೂಣ ಔಷದೋಪಚಾರ ಈ ಎಲ್ಲದರ ಬಗ್ಗೆ ವಿಶೇಷ ಕಾಳಜಿಯನ್ನು ಔಷಧಪಚಾರವನ್ನು ಮಾಡುತ್ತಾರೆ. ಕ್ಲೌಡ್ ನೈನ್ ಆಸ್ಪತ್ರೆ ಜಯನಗರದಲ್ಲಿ ಕಳೆದ ಆರು ವರ್ಷಗಳಿಂದ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ. ಅಪೋಲೋ ಕ್ರೇಡಲ್ ಹಾಸ್ಪಿಟಲ್ ಜಯನಗರ ಇಲ್ಲಿ ಕಳೆದ ಕೆಲವು ವರ್ಷಗಳಿಂದ ಸೀನಿಯರ್ ಕನ್ಸಲ್ಟೆಂಟ್ ಆಗಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆನ್ಲೈನ್ ವಿಭಾಗದಲ್ಲಿ 98% ರೇಟಿಂಗ್ ಪಡೆದಿದ್ದಾರೆ.
ಡಾಕ್ಟರ್ ತ್ರಿವೇಣಿ ಎಂಪಿ
ಎಂಬಿಬಿಎಸ್ , ಡಿಜಿಒ
ಕಳೆದ ಇಪ್ಪತ್ತು ವರ್ಷಗಳಿಂದ ಇದೇ ಕ್ಷೇತ್ರದಲ್ಲಿ ಶ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಬೇಗೂರು ನಲ್ಲಿ ತಮ್ಮದೇ ಸ್ವಂತ ಕ್ಲಿನಿಕ್ ಅನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಹುಳಿಮಾವು ಎಂಬಲ್ಲಿ ನ್ಯಾನೋ ಆಸ್ಪತ್ರೆ , ಬೆಂಗಳೂರು ಮತ್ತು ತಾಯಿ ಶಾರದಾ ಡೆಂಟಲ್ ಮೆಡಿಕಲ್ ಹೆಲ್ತ್ ಕೇರ್ ಸೆಂಟರ್ ಅರಿಕೆರೆ, ವುಮನ್ ಕೇರ್ ಅಂಡ್ ಇನ್ಫೆರ್ತಿಲ್ಟಿ ಕ್ಲಿನಿಕ್ ಬನ್ನೇರುಘಟ್ಟ
ಇಲ್ಲಿ ಸಂದರ್ಶನಕ್ಕೆ ಲಭ್ಯವಿರುತ್ತಾರೆ. ಆನ್ಲೈನ್ನಲ್ಲಿ ಇವರಿಗೆ 95% ಪ್ರತಿಕ್ರಿಯೆ ಸಿಕ್ಕಿದೆ.
ಡಾಕ್ಟರ್ ದಿಶಾ ಶ್ರೀಧರ್
ಎಂಬಿಬಿಎಸ್ ಎಂ ಡಿ-ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ
ಕಳೆದ 15 ವರ್ಷಗಳಿಂದ ಇದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತಾರೆ. ಬಹಳ ರಿಸ್ಕ್ ಇರುವ ಗರ್ಭಧಾರಣೆಯನ್ನು ತುಂಬಾ ಸುಲಭವಾಗಿ ನಿಭಾಯಿಸಿರುತ್ತಾರೆ. ಲ್ಯಾಪ್ರೋಸ್ಕೋಪಿ, ಸಂತನೂತ್ಪತಿ ತಜ್ಞೆಯಾಗಿ ಬಹಳಷ್ಟು ರೋಗಿಗಳ ಪಾಲಿಗೆ ಆಶಾಕಿರಣವನ್ನು ಕೊಟ್ಟಿದ್ದಾರೆ. ಹಾರ್ಮೋನಿನ ಅಸಮತೋಲನ, ರೋಗದ ಕಾರಣ, ಶ್ರೀ ರೋಗದ ಕಾರಣಗಳಾದ ಪಿಸಿಓಎಸ್, ಫೈಬ್ರಾಯ್ಡ್, ಎಂಡೋಮೆಟ್ರಿಯಾಸಿಸ್, ಥೈರಾಯಿಡ್ ಕಾಯಿಲೆಗಳಿಗೆ, ಮಧುಮೇಹ ಮತ್ತು ನೈಸರ್ಗಿಕ ಗರ್ಭದಾರಿಯಲ್ಲಿ ಬಹಳಷ್ಟು ಯಶಸ್ಸನ್ನು ಕಂಡಿದ್ದಾರೆ. ಬೆಂಗಳೂರಿನ ಪ್ರಮುಖ ಆಸ್ಪತ್ರೆ ಗಳಾದ ಮದರ್ಹೋಡ್ ಆಸ್ಪತ್ರೆ, ರೈನ್ಬೋ ಹಾಸ್ಪಿಟಲ್, ಕ್ಲೌಡ್ ನೈನ್ ಹಾಸ್ಪಿಟಲ್ ನಲ್ಲಿ ಸಂದರ್ಶಕ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಸಿಕ ಚಕ್ರದಲ್ಲಿ ಏರುಪೇರು, ಪಿ ಸಿ ಓ ಎಸ್, ಅನುವಂಶೀಯ ಕಾರಣಗಳು, ಸಂತಾನಹೀನತೆ, ಕಿನ್ನತೆ, ದೇಹದಾನ ಶಕ್ತಿ ಇವೆಲ್ಲ ಕಾರಣಗಳಿಗೆ ಚಿಕಿತ್ಸೆ ಮಾತ್ರ ಪ್ರಯೋಜನವಾಗದು ಸೀಲಿಂಗ್ ಮುಖಾಂತರವೂ ಮಹಿಳೆಯರಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಬೇಕು ಎಂದು ಅವರು ಅಭಿಪ್ರಾಯಪಡುತ್ತಾರೆ. ಅವರು ಅನೇಕ ರೀತಿಯ ಬ್ಲಾಗನ್ನು ಕೂಡ ಬರೆದಿದ್ದಾರೆ. ಪ್ರಖ್ಯಾತ ಪ್ರಸೂತಿ ತಜ್ಞೆ ಡಾಕ್ಟರ್ ಕಾಮಿಡಿ ರಾವ್ ಅವರಿಂದ ತರಬೇತಿಯನ್ನು ಪಡೆದಿದ್ದಾರೆ.
ಡಾಕ್ಟರ್ ಸ್ನೇಹ ರಾಜಿವ್
ಡಾಕ್ಟರ್ ಸ್ನೇಹ ರಾಜೀವ್ ಅವರು ಎಂಬಿಬಿಎಸ್ ಎಂಎಸ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಯಾಗಿ ಕಳೆದ 11 ವರ್ಷಗಳಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. 2000ಕ್ಕೂ ಹೆಚ್ಚು ಸಾಮಾನ್ಯ ಹೆರಿಗೆಯನ್ನು ಮಾಡಿರುವುದು ಅಲ್ಲದೆ ಸಿ-ಸೆಕ್ಷನ್ ಕೂಡಾ ಪ್ರಸವ ಮಾಡಿದ್ದಾರೆ. ಆನ್ಲೈನ್ನಲ್ಲಿ 98% ಪ್ರತಿಕ್ರಿಯೆಯನ್ನು ಹೊಂದಿದ್ದಾರೆ.
A